LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾಲಗೆಗೆ ರುಚಿ ನೀಡುವ ಬಿಸಿಬಿಸಿ ಅಮೃತಸರಿ ಪನೀರ್ ಪಕೋಡ: ಮನೆಯಲ್ಲೇ ಹೀಗೆ ತಯಾರಿಸಿ

ಸಂಜೆಯ ಚಹಾ ಜೊತೆಗೆ ಬಿಸಿಬಿಸಿಯಾದ ಮತ್ತು ಗರಿಗರಿಯಾದ ತಿಂಡಿ ಸವಿಯಲು ಇಷ್ಟಪಡುವವರಿಗೆ ಪಂಜಾಬಿ ಶೈಲಿಯ ಅಮೃತಸರಿ ಪನೀರ್ ಪಕೋಡ ಅತ್ಯುತ್ತಮ ಆಯ್ಕೆ. ಮಸಾಲೆಗಳ ಸುವಾಸನೆ ಹಾಗೂ ಪನೀರ್‌ನ ಮೆದುತನದ ಸಂಯೋಜನೆಯಿಂದ ಕೂಡಿರುವ ಈ ಪಕೋಡಾವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.

ಅಗತ್ಯವಿರುವ ಸಾಮಗ್ರಿಗಳು:

  • ಕಡಲೆ ಹಿಟ್ಟು – 2 ದೊಡ್ಡ ಚಮಚ

  • ಅಕ್ಕಿ ಹಿಟ್ಟು – 2 ದೊಡ್ಡ ಚಮಚ

  • ಮೈದಾ ಹಿಟ್ಟು – 2 ದೊಡ್ಡ ಚಮಚ

  • ಹಿಂಗು – ಒಂದು ಚಿಟಿಕೆ

  • ಓಮ ಕಾಳು (ಅಜ್ವೈನ) – 1/2 ಚಮಚ

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ

  • ಅರಿಶಿನ ಪುಡಿ – 1/2 ಚಮಚ

  • ಅಚ್ಚ ಖಾರದ ಪುಡಿ – 1 ಚಮಚ

  • ನಿಂಬೆ ರಸ – ಅರ್ಧ ನಿಂಬೆಹಣ್ಣಿನ ರಸ

  • ಅಮಚೂರ್ ಪೌಡರ್ (ಮಾಂಗೋ ಪೌಡರ್) – 1 ಚಮಚ

  • ಪನೀರ್ – 500 ಗ್ರಾಂ (ತಲಪದ ಆಕಾರದಲ್ಲಿ ಹೆಚ್ಚಿದವು)

  • ರುಚಿಗೆ ತಕ್ಕಷ್ಟು ಉಪ್ಪು

  • ಅಗತ್ಯಕ್ಕೆ ತಕ್ಕಷ್ಟು ನೀರು ಮತ್ತು ಎಣ್ಣೆ (ಕರಿಯಲು)

ತಯಾರಿಸುವ ವಿಧಾನ:

  1. ಹಿಟ್ಟಿನ ಮಿಶ್ರಣ ತಯಾರಿಕೆ: ಒಂದು ದೊಡ್ಡ ಪಾತ್ರೆಯಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಹಿಂಗು, ಓಮ ಕಾಳು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ, ಖಾರದ ಪುಡಿ, ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ನೀರು ಸೇರಿಸಿ ಹದವಾದ ಹಿಟ್ಟು ತಯಾರಿಸಿ ಬದಿಗೆ ಇಡಿ.

  2. ಪನೀರ್ ಸಿದ್ಧತೆ: ಹೆಚ್ಚಿಟ್ಟುಕೊಂಡ ಪನೀರ್ ತುಂಡುಗಳ ಮೇಲೆ ಸ್ವಲ್ಪ ಉಪ್ಪು ಉದುರಿಸಿ ಚೆನ್ನಾಗಿ ಬೆರೆಸಿ.

  3. ಕರಿಯುವುದು: ಪನೀರ್ ತುಂಡುಗಳನ್ನು ತಯಾರಿಸಿಟ್ಟುಕೊಂಡ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ, ಬಿಸಿಯಾದ ಎಣ್ಣೆಯಲ್ಲಿ ಹಾಕಿ ಕರಿಯಿರಿ.

  4. ಚಿನ್ನದ ಬಣ್ಣ ಬರುವವರೆಗೆ ಬೇಯಿಸಿ: ಪಕೋಡಾಗಳು ಚಿನ್ನದ ಬಣ್ಣಕ್ಕೆ ತಿರುಗಿ ಗರಿಗರಿಯಾಗುವವರೆಗೆ ಹೆಚ್ಚಿನ ಉರಿಯಲ್ಲಿ ಕರಿದು, ಪ್ಲೇಟ್‌ಗೆ ತೆಗೆದಿರಿಸಿ.

  5. ಸೇವನೆಗೆ ಸಿದ್ಧ: ಬಿಸಿಬಿಸಿ ಪಕೋಡಾದ ಮೇಲೆ ಅಮಚೂರ್ ಪೌಡರ್ ಉದುರಿಸಿ ಚಟ್ನಿ ಅಥವಾ ಸಾಸ್ ಜೊತೆ ಸವಿಯಿರಿ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ನಾವು ಎಲ್ಲವನ್ನೂ ಕಳೆದುಕೊಂಡಿದ್ದೆವು’: ಮುಂಬೈನಲ್ಲಿ ಮನೆ ಕೊಳ್ಳುವ ತಂದೆಯ ಕನಸು ನೆನೆದು ಕಣ್ಣೀರಿಟ್ಟ ರೂಪಾಲಿ ಗಂಗೂಲಿ!ಸತತ 3 ದಿನ ಇಳಿದಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ; ಬೆಂಗಳೂರಿನಲ್ಲಿ 10 ಗ್ರಾಂಗೆ ₹1.49 ಲಕ್ಷBREAKING : ಚುನಾವಣಾ ಆಯೋಗದ ವಿರುದ್ಧ INDIA ಬಣದ ಸಮರ; ಅ.2ರಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಘೋಷಣೆLPG ಗ್ರಾಹಕರಿಗೆ ಭರ್ಜರಿ ಗುಡ್‌ನ್ಯೂಸ್; ಹಣ ಇಲ್ಲದಿದ್ದರೂ ಸಿಲಿಂಡರ್ ಪಡೆಯಬಹುದು..! ಹೇಗೆ ಗೊತ್ತಾ?UPI ಬಳಕೆದಾರರಿಗೆ ಬಿಗ್ ಅಲರ್ಟ್ : ಅ. 2ರಂದು ದೇಶಾದ್ಯಂತ ಯುಪಿಐ ಪೇಮೆಂಟ್ ಬಂದ್ .?ಬಳ್ಳಾರಿ ಚಲೋ ಪ್ರೇರಣೆಯಿಂದಲೇ ಕಾಂಗ್ರೆಸ್ ಪಾದಯಾತ್ರೆ: ಬಿವೈ ವಿಜಯೇಂದ್ರBIG NEWS: ಉದ್ಯೋಗ ಖಾತ್ರಿಗೆ 'ನಕಲಿ GPS ಪೋಟೋ' ಅಪ್ ಲೋಡ್ ಮಾಡಿದ್ದವರಿಗೆ ಶಾಕ್: ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶನಾಲಗೆಗೆ ರುಚಿ ನೀಡುವ ಬಿಸಿಬಿಸಿ ಅಮೃತಸರಿ ಪನೀರ್ ಪಕೋಡ: ಮನೆಯಲ್ಲೇ ಹೀಗೆ ತಯಾರಿಸಿ‘ಜೈಲರ್ 2’ ಚಿತ್ರದಿಂದ ಬಿಗ್ ಅಪ್‌ಡೇಟ್: ಇಂದು ಸಂಜೆ ಹೊರಬರಲಿದೆ ನೋರಾ ಫತೇಹಿ ಗ್ಲಾಮರಸ್ ಸಾಂಗ್!ಗುವಾಹಟಿಯಲ್ಲಿ ‘ರೋ-ಕೋ’ ಹವಾ: ವೆಸ್ಟ್ ಇಂಡೀಸ್ ವಿರುದ್ಧ ದಾಖಲೆ ಬರೆಯಲು ಸಜ್ಜಾದ ರೋಹಿತ್-ಕೊಹ್ಲಿ!