LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರಲ್ಲಿ ಮಳೆಯಿಂದ ಅನಾಹುತಗಳು ಜರುಗುವ ಮುನ್ನ ಮುಂಜಾಗ್ರತಾ ಕ್ರಮ ವಹಿಸಿ: ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು : ಮುಂದಿನ ಎರಡು ಮೂರು ದಿನ ನಗರದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಅನಾಹುತಗಳು ಜರುಗುವ ಮುನ್ನ ಮುನ್ನೆಚ್ಚರಿಕೆ ವಹಿಸಿ ಎಂದು ಎಲ್ಲಾ ಅಧಿಕಾರಿಗಳಿಗೂ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

ಐದೂ ಪಾಲಿಕೆ ಆಯುಕ್ತರು ಮುಖ್ಯ ಆಯುಕ್ತರು ಹಾಗೂ ಸಂಬಂಧಿತ ಅಧಿಕಾರಿಗಳ ಜೊತೆ ಬುಧವಾರ ಸಂಜೆ ವರ್ಚುವಲ್ ಸಭೆ ನಡೆಸಿ ಮಾತನಾಡಿದ ಅವರು,”ಬೆಂಗಳೂರಿನ ಪಶ್ಚಿಮ, ಉತ್ತರ, ಪೂರ್ವ ಹಾಗೂ ಕೇಂದ್ರ ವಲಯದಲ್ಲಿ ಮುಂದಿನ ಎರಡು ಮೂರು ದಿನ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಕರ್ನಾಟಕ ರಾಜ್ಯ ವಿಪತ್ತು ನಿವರ್ಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದ್ದು ಅಧಿಕಾರಿಗಳು ಮಳೆಯಿಂದ ಯಾವುದೇ ಅನಾಹುತ ಜರುಗುವ ಮುನ್ನ ಎಚ್ಚರಿಕೆ ವಹಿಸಬೇಕು, ಮುಂಜಾಗ್ರತಾ ಕ್ರಮಗಳನ್ನು ಜರುಗಿಸಬೇಕು ಎಂದು ನಿರ್ದೇಶಿಸಿದರು.

ಪಶ್ಚಿಮ ಮತ್ತು ಉತ್ತರ ಬೆಂಗಳೂರಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರಹರಿ ವಾಹನ ತಂಡ ಸಕ್ರೀಯವಾಗಿ ಕಾರ್ಯನಿರ್ವಹಿಸಬೇಕು, ನಗರದಾದ್ಯಂತ ರೌಂಡ್ಸ್ ಹಾಕಬೇಕು. ಎಲ್ಲೇ ಅಗತ್ಯ ಇದ್ದರೂ ಈ ತಂಡ ತಕ್ಷಣ ಸಹಾಯಕ್ಕೆ ನೆರವಾಗುವಂತಿರಬೇಕು ಎಂದು ತಿಳಿಸಿದರು.

ಕಂಟ್ರೋಲ್ ರೂಂ ಜಾಗೃತವಾಗಿರಲಿ:

ಮಳೆ ಸಂದರ್ಭದಲ್ಲಿ ಕಂಟ್ರೋಲ್ ರೂಂ ದಿನದ 24 ಗಂಟೆಯೂ ಜಾಗೃತವಾಗಿರಬೇಕು. ನಗರದ ಯಾವುದೇ ಭಾಗದಿಂದ ದೂರುಗಳು ಬಂದರೂ ಸಹ ಕೂಡಲೇ ಸ್ಪಂದಿಸಬೇಕು. ಮಳೆಯಿಂದ ಹೆಚ್ಚು ನೀರು ನಿಲ್ಲಬಹುದಾದ ಪ್ರದೇಶಗಳಲ್ಲಿ ನೀರನ್ನು ಹೊರಗೆ ಹರಿಸುವ ಪಂಪಿಂಗ್ ವ್ಯವಸ್ಥೆಗೆ ಮೋಟರ್ ಗಳು ಸಿದ್ದವಾಗಿರಬೇಕು. ಮರಗಳು ಉರುಳಿದರೆ ಅದನ್ನು ಕತ್ತರಿಸಲು ಅಗತ್ಯ ಮಾನವ ಸಂಪನ್ಮೂಲ ಹಾಗೂ ಜೆಸಿಬಿ ಗಳ ಲಭ್ಯತೆ ಬಗ್ಗೆ ಈಗಲೇ ಖಚಿತಪಡಿಸಿಕೊಳ್ಳಿ. ಅಲ್ಲದೆ, ಯಾವುದೇ ಪರಿಸ್ಥಿತಿಯನ್ನು ನಿಬಾಯಿಸಲು ಜಿಬಿಎ ವ್ಯಾಪ್ತಿಯ ಇಂಜಿನಿಯರ್ ಗಳು ಹಾಗೂ ಅಗ್ನಿಶಾಮಕ ದಳ ಸರ್ವ ಸನ್ನದ್ಧರಾಗಿರಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತರಾದ ಡಿ.ಎಸ್ ರಮೇಶ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್, ಜಿ ಜಗದೀಶ್, ಡಾ. ರಾಜೇಂದ್ರ ಕೆ.ವಿ, ಅಪರ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು ಸೇರಿದಂತೆ ಮತ್ತಿತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS: ಫುಟ್‌ಪಾತ್‌ನಲ್ಲಿ ಬೈಕ್ ಓಡಿಸಿದರೆ ₹5,000 ದಂಡ: ಸರ್ಕಾರದಿಂದ ಕಠಿಣ ನಿಯಮ ಜಾರಿಗೆ ಸಿದ್ಧತೆಜೋಗ ಜಲಪಾತ ಇನ್ಮುಂದೆ ಸರ್ವಋತು ಪ್ರವಾಸಿ ತಾಣ: ಅಭಿವೃದ್ಧಿ ಕಾಮಗಾರಿ ಚುರುಕುಗೊಳಿಸಿ:ಅಧಿಕಾರಿಗಳಿಗೆ ಸಚಿವ ಕೆ.ಜೆ.ಜಾರ್ಜ್ ನಿರ್ದೇಶನಬೆಂಗಳೂರಲ್ಲಿ ಮಳೆಯಿಂದ ಅನಾಹುತಗಳು ಜರುಗುವ ಮುನ್ನ ಮುಂಜಾಗ್ರತಾ ಕ್ರಮ ವಹಿಸಿ: ಸಚಿವ ಕೃಷ್ಣ ಬೈರೇಗೌಡಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ: NDA ಅಭ್ಯರ್ಥಿ ಗೆಲುವಿಗೆ JDS ಉಸ್ತುವಾರಿ ಸಮಿತಿ ರಚನೆಅಮೆರಿಕ ಅಧ್ಯಕ್ಷ ಟ್ರಂಪ್ ಜತೆಗೆ ಪ್ರಧಾನಿ ಮೋದಿ ದೂರವಾಣಿ ಸಂಭಾಷಣೆ: ವ್ಯಾಪಾರ, ರಕ್ಷಣೆ, ಜಾಗತಿಕ ಶಾಂತಿ ಪ್ರಯತ್ನಗಳ ಬಗ್ಗೆ ಮಹತ್ವದ ಚರ್ಚೆನಿಮ್ಮ ಪರ ನಾನಿದ್ದೇನೆ, ಅನ್ಯಾಯವಾಗಲು ಬಿಡಲ್ಲ: ಸಾಗರದಲ್ಲಿ ಶಾಹಿ ಗಾರ್ಮೆಂಟ್ಸ್ ನೌಕರರಿಗೆ ಶಾಸಕ ಬೇಳೂರು ಅಭಯ!ಮೀರತ್ ‘ನೀಲಿ ಡ್ರಮ್’ ಹತ್ಯೆ ಪ್ರಕರಣ: ಪತ್ನಿ, ಪ್ರಿಯಕರ ತಪ್ಪಿತಸ್ಥರೆಂದು ಕೋರ್ಟ್ ತೀರ್ಪುಸಣ್ಣ ಉಳಿತಾಯ ಖಾತೆದಾರರಿಗೆ ಮುಖ್ಯ ಮಾಹಿತಿ: ಸ್ಮಾಲ್ ಸೇವಿಂಗ್ಸ್ ಸ್ಕೀಂ ಬಡ್ಡಿ ದರಗಳಲ್ಲಿ ಯಥಾಸ್ಥಿತಿಸಾಗರದಲ್ಲಿ ಹೊಸ PF ನೀತಿಗೆ ವಿರೋಧಿಸಿ ಶಾಹಿ ಗಾರ್ಮೆಂಟ್ಸ್ ನೌಕರರು ಬೃಹತ್ ಪ್ರತಿಭಟನೆ!ಪಠ್ಯದಷ್ಟೇ ಕ್ರೀಡೆಯೂ ಬದುಕಿಗೆ ಮುಖ್ಯ, ಮಕ್ಕಳಲ್ಲಿ ನಾಯಕತ್ವ ಗುಣ ಬೆಳವಣಿಗೆಗೆ ಸಹಕಾರಿ: ಸಾಗರ ತಹಶೀಲ್ದಾರ್ ಡಾ.ಪ್ರತಿಭಾ ಅಭಿಪ್ರಾಯ