LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚಿನ್ನದ ಬೇಟೆಗೆ ಭಾರತ-ಪಾಕ್ ಮುಖಾಮುಖಿ; ಏಷ್ಯನ್ ಗೇಮ್ಸ್ ಫೈನಲ್ ಯಾವಾಗ, ಎಲ್ಲಿ?

ನವದೆಹಲಿ: ಏಷ್ಯನ್ ಗೇಮ್ಸ್ 2026ರ ಪುರುಷರ ಟಿ20 ಕ್ರಿಕೆಟ್‌ನಲ್ಲಿ ಚಿನ್ನದ ಪದಕಕ್ಕಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಬಹುನಿರೀಕ್ಷಿತ ಫೈನಲ್ ಪಂದ್ಯ ಅಕ್ಟೋಬರ್ 3ರಂದು, ಶನಿವಾರ ಜಪಾನ್‌ನ ನಿಶ್ಶಿನ್‌ನಲ್ಲಿರುವ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ.

ಭಾರತ ತಂಡ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ 124 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ಫೈನಲ್‌ಗೆ ಪ್ರವೇಶಿಸಿದೆ. ಮತ್ತೊಂದೆಡೆ, ಪಾಕಿಸ್ತಾನ ತಂಡ ಬಾಂಗ್ಲಾದೇಶವನ್ನು 6 ವಿಕೆಟ್‌ಗಳಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದೆ.

ಭಾರತ-ಪಾಕಿಸ್ತಾನ ಫೈನಲ್ ಯಾವಾಗ?

ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯನ್ ಗೇಮ್ಸ್ ಪುರುಷರ ಟಿ20 ಫೈನಲ್ ಪಂದ್ಯ ಅಕ್ಟೋಬರ್ 3ರಂದು ನಡೆಯಲಿದೆ. ಪಂದ್ಯ ಸ್ಥಳೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ.

ಯಾವ ಚಾನೆಲ್‌ನಲ್ಲಿ ನೇರ ಪ್ರಸಾರ?

ಭಾರತ-ಪಾಕಿಸ್ತಾನ ನಡುವಿನ ಫೈನಲ್ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ವೀಕ್ಷಿಸಬಹುದು.

ಕನ್ನಡ, ತಮಿಳು, ತೆಲುಗು: Sony Sports 4

ಇಂಗ್ಲಿಷ್: Sony Sports 1 ಮತ್ತು Sony Sports 5

ಹಿಂದಿ: Sony Sports 3

ಮೊಬೈಲ್, ಲ್ಯಾಪ್‌ಟಾಪ್ ಅಥವಾ ಸ್ಮಾರ್ಟ್ ಟಿವಿಯಲ್ಲಿ ಪಂದ್ಯ ವೀಕ್ಷಿಸಲು Sony LIV ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಲೈವ್ ಸ್ಟ್ರೀಮಿಂಗ್ ಮಾಡಬಹುದು.

ಗೆದ್ದವರಿಗೆ ಚಿನ್ನ, ಸೋತವರಿಗೆ ಬೆಳ್ಳಿ

ಫೈನಲ್ ತಲುಪಿರುವ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳಿಗೆ ಪದಕ ಖಚಿತವಾಗಿದೆ. ಫೈನಲ್‌ನಲ್ಲಿ ಗೆಲ್ಲುವ ತಂಡ ಚಿನ್ನದ ಪದಕ ಪಡೆಯಲಿದ್ದು, ಸೋಲುವ ತಂಡಕ್ಕೆ ಬೆಳ್ಳಿ ಪದಕ ದೊರೆಯಲಿದೆ.

ಭಾರತ ಟಿ20 ತಂಡ

ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಜಸ್‌ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಯಶ್ ಠಾಕೂರ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವಿಪ್ರಾಜ್ ನಿಗಮ್ ಮತ್ತು ವೈಭವ್ ಸೂರ್ಯವಂಶಿ.

ಪಾಕಿಸ್ತಾನ ಟಿ20 ತಂಡ

ಸಾಹಿಬ್‌ಝಾದ ಫರ್ಹಾನ್ (ನಾಯಕ), ಅಬ್ದುಲ್ ಸಮದ್ (ಉಪನಾಯಕ), ಸೈಮ್ ಅಯೂಬ್, ಹೈದರ್ ಅಲಿ, ಹಸನ್ ನವಾಝ್, ಸಾದ್ ಮಸೂದ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಅರಾಫತ್ ಮಿನ್ಹಾಸ್, ಮಾಝ್ ಸದಾಕತ್, ಅಬ್ರಾರ್ ಅಹ್ಮದ್, ಸುಫ್ಯಾನ್ ಮುಖೀಮ್, ಅಹ್ಮದ್ ದಾನಿಯಾಲ್, ಆಕಿಫ್ ಜಾವೇದ್, ಅಲಿ ರಾಝ ಮತ್ತು ಮೊಹಮ್ಮದ್ ಸಲ್ಮಾನ್ ಮಿರ್ಝ.

ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕಕ್ಕಾಗಿ ನಡೆಯಲಿರುವ ಈ ಭಾರತ-ಪಾಕಿಸ್ತಾನ ಪಂದ್ಯ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಕ್ಕಳು ದಿನವಿಡೀ ‘ಮೊಬೈಲ್’ ನೋಡುತ್ತಿದ್ದಾರಾ ? 28 ಲಕ್ಷ ಮಕ್ಕಳ ಅಧ್ಯಯನದಲ್ಲಿ ಶಾಕಿಂಗ್ ಮಾಹಿತಿ!BREAKING NEWS: ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಅ. 10ರಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಸಾಗರದಲ್ಲಿ ಉಮ್ರಾ ಯಾತ್ರಾರ್ಥಿಗಳ ತರಬೇತಿ ಶಿಬಿರ ಯಶಸ್ವಿ; 83 ಮಂದಿ ಪವಿತ್ರ ಯಾತ್ರೆಗೆ ಸಜ್ಜುಕೆಪಿಎಸ್ ಸಿ ನೇಮಕಾತಿ ಹಗರಣ: SIT ರಚಿಸಿ ಹೊಸದಾಗಿ ತನಿಖೆಗೆ ಆದೇಶಿಸಿದ್ದ ಹೈಕೋರ್ಟ್ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ತಡೆನಡುರಸ್ತೆಯಲ್ಲೇ ಯುವತಿ ಕಿಡ್ನಾಪ್‌ ; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಆಘಾತಕಾರಿ ಕೃತ್ಯ | VideoBSNL ಗ್ರಾಹಕರಿಗೆ ಬಂಪರ್ ಆಫರ್..! ₹1 ಲಕ್ಷ ಅಪಘಾತ ವಿಮೆ, ₹10 ಸಾವಿರ ಸೈಬರ್ ಕವರೇಜ್ ಉಚಿತಹಿರಿಯರ ಮಾರ್ಗದರ್ಶನವೇ ಯಶಸ್ಸಿಗೆ ಭದ್ರ ಬುನಾದಿ: ಸಾಗರದಲ್ಲಿ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಅಭಿಪ್ರಾಯಜನ್ಮದಿನಕ್ಕೆ ರಕ್ತದಾನದ ಕೊಡುಗೆ: ಸಾಗರದಲ್ಲಿ ಸೈಯದ್ ಜಾಕೀರ್ ಕಾರ್ಯಕ್ಕೆ ಸ್ನೇಹಿತರ ಸಾಥ್!BREAKING: ಮತ್ತೆ '40 ತಾಲೂಕು'ಗಳನ್ನು ಬರಪೀಡಿತವೆಂದು ಘೋಷಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶಲಕ್ಷಣಗಳೇ ಇಲ್ಲದೆ ಹೃದಯದ ಸ್ನಾಯುಗಳಲ್ಲಿ ಉರಿಯೂತ: ಏಮ್ಸ್ ವಿಜ್ಞಾನಿಗಳಿಂದ ಭರವಸೆಯ ಹೊಸ ತಂತ್ರಜ್ಞಾನ ಪತ್ತೆ !