LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೈಸೂರು ಅರಮನೆಗೆ ನಟಿ ಕಾಜಲ್ ಅಗರ್ವಾಲ್ ಭೇಟಿ : ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು!

ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಸಾಂಸ್ಕೃತಿಕ ನಗರಿಯ ಮೈಸೂರು ಅರಮನೆಯಲ್ಲಿ ಭರದ ಸಿದ್ಧತೆಗಳು ಸಾಗುತ್ತಿವೆ. ಈ ವೈಭವದ ವಾತಾವರಣದ ನಡುವೆಯೇ ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಅವರು ಮೈಸೂರು ಅರಮನೆಗೆ ದಿಢೀರ್ ಭೇಟಿ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.

ಅರಮನೆ ಆವರಣಕ್ಕೆ ಆಗಮಿಸಿದ ನಟಿ ಕಾಜಲ್ ಅಗರ್ವಾಲ್ ಅವರನ್ನು ಅರಮನೆಯ ಮಂಡಳಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆತ್ಮೀಯವಾಗಿ ಸ್ವಾಗತಿಸಿ, ಗೌರವಪೂರ್ವಕವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಅರಮನೆಯ ಭವ್ಯ ಇತಿಹಾಸ, ವಾಸ್ತುಶಿಲ್ಪ ಹಾಗೂ ದಸರಾ ಮಹೋತ್ಸವದ ಮಹತ್ವದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಅಧಿಕಾರಿಗಳ ಉಪಚಾರ ಹಾಗೂ ವಿವರಣೆಗೆ ನಟಿ ಕಾಜಲ್ ಅಗರ್ವಾಲ್ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

ಅರಮನೆಯ ಭವ್ಯತೆ ಮತ್ತು ರಾಜವೈಭವವನ್ನು ಕಣ್ತುಂಬಿಕೊಂಡ ನಟಿ ತೀವ್ರ ಹರ್ಷ ವ್ಯಕ್ತಪಡಿಸಿದರು. ವಿಷಯ ತಿಳಿಯುತ್ತಿದ್ದಂತೆಯೇ ನಟಿಯನ್ನು ನೋಡಲು ಅರಮನೆ ಆವರಣದಲ್ಲಿದ್ದ ಪ್ರವಾಸಿಗರು ಮತ್ತು ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಮುಗಿಬಿದ್ದರು. ತಮ್ಮ ನೆಚ್ಚಿನ ನಟಿಯೊಂದಿಗೆ ಫೋಟೋ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಕ್ಕರೆ ರಹಿತ ಕೋಲ್ಕತ್ತಾ ಸ್ಟೈಲ್ ‘ಪಾನ್ ಮುಖವಾಸ್’: 2 ತಿಂಗಳು ಹಾಳಾಗದ ಹೆಲ್ದಿ ರೆಸಿಪಿ ಇಲ್ಲಿದೆ!40ರ ಬಳಿಕ ಮಹಿಳೆಯರ ಆರೋಗ್ಯಕ್ಕೆ ಈ ಪೋಷಕಾಂಶಗಳು ಬಹಳ ಮುಖ್ಯ; ಆಹಾರದಲ್ಲಿ ಇರಲಿ ಈ ಪದಾರ್ಥಗಳು‘ದೃಶ್ಯಂ 3’ ನಟಿ ಇಶಿತಾ ಮಗನಿಗೆ ಕಾಜೋಲ್ ನೀಡಿದ್ದ ಪೋಷಕತ್ವದ ಸೀಕ್ರೆಟ್ ಟಿಪ್ಸ್ ಏನು?: ನಟಿಯ ಸ್ವಾರಸ್ಯಕರ ಮಾತು!ಏಷ್ಯನ್ ಗೇಮ್ಸ್ 2026: ಪದಕ ವಿಜೇತರಿಗೆ ಭರ್ಜರಿ ಬಹುಮಾನ; ಸರ್ಕಾರಿ ಉದ್ಯೋಗದ ಕೊಡುಗೆ44 ವರ್ಷಗಳ ನಂತರ ಮುಖಾಮುಖಿ: ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಪಿಂಕ್ ಸಾಕ್ಸ್ ಧರಿಸಿ ಮೈದಾನಕ್ಕಿಳಿಯಲಿದೆ ಉರುಗ್ವೆ!ಕಿಯಾ ಟೆನಿಸ್ ಪ್ರೀಮಿಯರ್ ಲೀಗ್ ಸೀಸನ್ 8 ರಂಗು: ರೋಹನ್ ಬೋಪಣ್ಣ ಸೇರಿದಂತೆ ಜಾಗತಿಕ ತಾರೆಯರ ಎಂಟ್ರಿ!ಚಿನ್ನ ಖರೀದಿಸುವವರಿಗೆ ಗುಡ್‌ನ್ಯೂಸ್:ಚಿನ್ನದ ದರದಲ್ಲಿ ಮತ್ತೆ ₹160 ಇಳಿಕೆBREAKING : ಏಷ್ಯನ್ ಗೇಮ್ಸ್ ನಲ್ಲಿ ಪದಕ ವಿಜೇತರಿಗೆ ಗ್ರೂಪ್ ಬಿ ಹುದ್ದೆಗೆ ನೇರ ನೇಮಕಾತಿ : ಡಿಸಿಎಂ ಪರಮೇಶ್ವರ್ ಘೋಷಣೆ!ರೈಲು ಪ್ರಯಾಣಿಕರ ಗಮನಕ್ಕೆ: ಈ ರೈಲುಗಳ ಮಾರ್ಗ ಬದಲಾವಣೆ, ಸಂಚಾರ ನಿಯಂತ್ರಣದೆಹಲಿಯಲ್ಲಿ ಪತ್ರಕರ್ತೆಯ ಮೇಲೆ ದೌರ್ಜನ್ಯ: ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಖಂಡನೆ