LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಳಿತಪ್ಪಿದ ರೆಹಮಾನ್ ಬಾಬಾ ಎಕ್ಸ್‌ಪ್ರೆಸ್ ರೈಲು: ಐವರು ಪ್ರಯಾಣಿಕರು ಸಾವು

ಇಸ್ಲಾಮಾಬಾದ್: ಪಾಕಿಸ್ತಾನದ ರೆಹಮಾನ್ ಬಾಬಾ ಎಕ್ಸ್ ಪ್ರೆಸ್ ಪ್ಯಾಸೆಂಜರ್ ರೈಲು ಹಳಿತಪ್ಪಿದ ಪರಿಣಾಮ ಐವರು ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಪಾಕಿಸ್ತಾನದ ಮುಲ್ತಾನ್ ಸಮೀಪ ಈ ಘಟನೆ ನಡೆದಿದೆ. ಕರಾಚಿಯಿಂದ ಪೇಶಾವರಕ್ಕೆ ತೆರಳುತ್ತಿದ್ದ ‘ರೆಹಮಾನ್ ಬಾಬಾ ಎಕ್ಸ್‌ಪ್ರೆಸ್’ ಪ್ಯಾಸೆಂಜರ್ ರೈಲಿನ ಎಲ್ಲಾ 14 ಬೋಗಿಗಳು ಶೇರ್ ಶಾ ಸೇತುವೆಯ ಬಳಿ ಹಳಿತಪ್ಪಿ ಬಿದ್ದಿವೆ. ಘಟನೆಯಲ್ಲಿ ಐವರು ಸಾಅವನ್ನಪ್ಪಿದ್ದಾರೆ. ಬೆಳಗ್ಗೆ 5:15 ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ರಕ್ಷಣಾ ತಂಡಗಳು ಗಾಯಾಳುಗಳನ್ನು ಮುಲ್ತಾನ್‌ನ ನಿಶ್ತಾರ್ ಆಸ್ಪತ್ರೆಗೆ ದಾಖಲಿಸಿವೆ.

ಲೋಕೋ ಪೈಲಟ್ ರಿಜ್ವಾನ್ ಅಬ್ಬಾಸ್ ದುರಂತದ ಕ್ಷಣವನ್ನು ವಿವರಿಸಿದ್ದಾರೆ. ಸಿಗ್ನಲ್ ಗ್ರೀನ್ ಇತ್ತು ಮತ್ತು ಸ್ಪಷ್ಟವಾಗಿತ್ತು. ರೈಲು ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿತ್ತು. ಶೇರ್ ಶಾ ನಿಲ್ದಾಣದ ಪ್ರದೇಶವನ್ನು ದಾಟುತ್ತಿದ್ದಂತೆ ರೈಲಿನಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಆಘಾತ ಮತ್ತು ತಳ್ಳುವಿಕೆಯ ಅನುಭವವಾಯಿತು. ನಾನು ತಕ್ಷಣ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದೆ. ಎಂಜಿನ್‌ನಿಂದ ಕೆಳಗಿಳಿದು ನೋಡಿದಾಗ ಹಿಂದಿನ ಎಲ್ಲಾ ಬೋಗಿಗಳು ಹಳಿ ಬಿಟ್ಟು ಬದಿಗೆ ಉರುಳಿ ಬಿದ್ದಿದ್ದವು ಎಂದು ತಿಳಿಸಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ಸಿಬ್ಬಂದಿ ಮತ್ತು ಅರೆವೈದ್ಯಕೀಯ ತಂಡಗಳು ಹಳಿತಪ್ಪಿದ ಬೋಗಿಗಳಿಂದ ಪ್ರಯಾಣಿಕರನ್ನು ಹೊರತೆಗೆದಿದ್ದಾರೆ. 13 ಬೋಗಿಗಳನ್ನು ಸಂಪೂರ್ಣ ತೆರವುಗೊಳಿಸಲಾಗಿದ್ದು, ಕೊನೆಯ ಬೋಗಿಯ ತೆರವು ಕಾರ್ಯ ಮುಂದುವರೆದಿದೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ಮತ್ತು ರಕ್ಷಣಾ ಕಾರ್ಯವನ್ನು ಚುರುಕುಗೊಳಿಸುವಂತೆ ಆದೇಶಿಸಿದ್ದಾರೆ.

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧದ ರಾಹುಲ್ ಗಾಂಧಿ ಸಲ್ಲಿಸಿದ ಅರ್ಜಿಯಲ್ಲಿ 14 ದೋಷಗಳು; 220 ರೂ ಕೋರ್ಟ್ ಶುಲ್ಕ ಬಾಕಿ: ತಪ್ಪು ಸರಿಪಡಿಸಿ ಅರ್ಜಿ ಸಲ್ಲಿಸುವಂತೆ ಸೂಚನೆ

ನವದೆಹಲಿ: ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದ ಇಂಡಿಯಾ ಮೈತ್ರಿಕೂಟ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿರುವ ಜಂಟಿ ಅರ್ಜಿಯಲ್ಲಿ ಹಲವು ದೋಷಗಳು ಪತ್ತೆಯಾಗಿದ್ದು, ತಾಂತ್ರಿಕ ತೊಡಕು ಎದುರಾಗಿದೆ.

ರಾಹುಲ್ ಗಾಂಧಿ ನೇತೃತ್ವದ ಇಂಡಿಯಾ ಮೈತ್ರಿಕೂಟ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯು ಒಟ್ಟು 14 ತಾಂತ್ರಿಕ ದೋಷಗಳನ್ನು ಪಟ್ಟಿ ಮಾಡಿದ್ದು, ಕೋರ್ಟ್ ಶುಲ್ಕದಲ್ಲಿ 220ರೂ. ಶುಲ್ಕ ಬಾಕಿ ಇರುವುದು ಒಳಗೊಂಡಂತೆ ಹಲವು ಪ್ರಮುಖ ಲೋಪಗಳನ್ನು ಎತ್ತಿ ತೋರಿಸಿದೆ. ಈ ದೋಷಗಳನ್ನು ಸರಿಪಡಿಸಿ ಮರು ಅರ್ಜಿ ಸಲ್ಲಿಸುವವರೆಗೂ ಅರ್ಜಿಯು ನ್ಯಾಯಪೀಠದ ಮುಂದೆ ವಿಚಾರಣೆಗೆ ಪಟ್ಟಿಯಾಗುವುದಿಲ್ಲ ಎಂದು ರಿಜಿಸ್ಟ್ರಿ ಸ್ಪಷ್ಟಪಡಿಸಿದೆ.

ಸಲ್ಲಿಕೆಯಾದ ಅರ್ಜಿಯ ಪುಟಗಳು ಹಾಗೂ ಪ್ರಮಾಣಪತ್ರಗಳಿಗೆ ಅನುಗುಣವಾಗಿ ನ್ಯಾಯಾಲಯದ ಶುಲ್ಕದಲ್ಲಿ 220 ರೂ. ಕಡಿಮೆ ಪಾವತಿಸಲಾಗಿದೆ.

ಖರ್ಗೆ ಗುರುತಿನ ಚೀಟಿ ಅಸ್ಪಷ್ಟ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಗುರುತಿನ ಚೀಟಿಯ ಪ್ರತಿ ಕಪ್ಪು-ಬಿಳುಪಾಗಿದ್ದು, ಅಸ್ಪಷ್ಟವಾಗಿದೆ . ಇದಕ್ಕೆ ಸ್ಪಷ್ಟವಾದ ಬಣ್ಣದ ಪ್ರತಿ ಲಗತ್ತಿಸಬೇಕು ಎಂದು ಸೂಚಿಸಲಾಗಿದೆ.

ವಕಾಲತ್ನಾಮಾ ಗೈರು: ಜಂಟಿ ಅರ್ಜಿದಾರರ ಪೈಕಿ 9 ಪ್ರಮುಖ ನಾಯಕರ ಅಧಿಕೃತ ಕಾನೂನು ವಕಾಲತ್ನಾಮಾಗಳು (ವಕೀಲರಿಗೆ ನೀಡುವ ಅಧಿಕಾರ ಪತ್ರ) ಲಗತ್ತಾಗಿಲ್ಲ.

ಫಾಂಟ್ ಮತ್ತು ಪುಟಗಳ ಸಮಸ್ಯೆ: ನ್ಯಾಯಾಲಯದ ನಿಯಮಾವಳಿಗೆ ತಕ್ಕಂತೆ ಸೂಕ್ತ ಅಳತೆಯ ಫಾಂಟ್ ಬಳಸಿಲ್ಲ, ಕೆಲವು ಪುಟಗಳ ಸಂಖ್ಯೆಗಳು ಕ್ರಮಬದ್ಧವಾಗಿಲ್ಲ ಹಾಗೂ ನಿರ್ದಿಷ್ಟ ದಾಖಲೆಗಳ ಬಣ್ಣದ ಪ್ರತಿಗಳು ಕಾಣೆಯಾಗಿವೆ.

ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿರುವ ‘ರಾಹುಲ್ ಗಾಂಧಿ ಮತ್ತು ಇತರರು ವಿರುದ್ಧ ಭಾರತೀಯ ಚುನಾವಣಾ ಆಯೋಗ’ ಅರ್ಜಿಯಲ್ಲಿ ಚುನಾವಣಾ ಆಯೋಗ , ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದ್ದು, ಪ್ರಮುಖ 10 ಪರಿಹಾರಗಳನ್ನು ಕೋರಲಾಗಿದೆ.

ಎಸ್​ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಸಂಪೂರ್ಣ ಮೂಲ ದಾಖಲೆಗಳನ್ನು ಸುಪ್ರೀಂ ಕೋರ್ಟ್‌ಗೆ ಹಾಜರುಪಡಿಸುವುದು.

ಮತದಾರರ ಪಟ್ಟಿ ಪರಿಷ್ಕರಣೆ ಆದೇಶಗಳ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸುವುದು.

ನಿಷ್ಪಕ್ಷಪಾತ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸ್ವತಂತ್ರ ಸಮಿತಿಯಿಂದ ಸಂಪೂರ್ಣ ಆಡಿಟ್ ನಡೆಸುವುದು.

ಮತ ಕಳ್ಳತನ ಹಾಗೂ ಅಕ್ರಮಗಳಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು.

ಇವಿಎಂ ಮತ್ತು ಎಲೆಕ್ಟ್ರಾನಿಕ್ ಅಂಚೆ ಮತಪತ್ರ ಬದಲಿಗೆ ಪಾರದರ್ಶಕ ಕಾಗದದ ಬ್ಯಾಲೆಟ್‌ಗಳಿಗೆ ಮರಳುವುದು.

ಅರ್ಜಿದಾರರ ಪಟ್ಟಿ ಹಾಗೂ ಹಿನ್ನೆಲೆ ಪ್ರಮುಖ ಅರ್ಜಿದಾರರು: ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್ ಯಾದವ್ (SP), ತೇಜಸ್ವಿ ಯಾದವ್ (RJD), ಸೌಗತ ರಾಯ್ (TMC), ಸುಪ್ರಿಯಾ ಸುಳೆ (NCP), ಸಂಜಯ್ ರಾವತ್ (ಶಿವಸೇನೆ-UBT), ಡಿ. ರಾಜಾ (CPI), ಮಹುವಾ ಮಾಝಿ (JMM), ಎಂ.ಎ. ಬೇಬಿ (CPIM) ಮತ್ತು ಇ.ಟಿ. ಮೊಹಮ್ಮದ್ ಬಷೀರ್ (IUML).

ಸಿಜೆಐ ನಿರಾಕರಣೆ ಬೆನ್ನಲ್ಲೇ ಅರ್ಜಿ: ವಿಪಕ್ಷ ಮುಖಂಡರು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಬಯಸಿದ್ದರು. ಆದರೆ ನ್ಯಾಯಾಂಗ ಶಿಷ್ಟಾಚಾರದ ಪ್ರಕಾರ ಸಿಜೆಐ ಖುದ್ದು ಭೇಟಿಗೆ ನಿರಾಕರಿಸಿ, ನ್ಯಾಯಾಲಯದ ರಿಜಿಸ್ಟ್ರಿಯಲ್ಲೇ ಅರ್ಜಿ ದಾಖಲಿಸಲು ಸೂಚಿಸಿದ್ದರು. ಅದರಂತೆ ಬೃಹತ್ ಮೆರವಣಿಗೆಯ ನಡುವೆ ಅರ್ಜಿ ಸಲ್ಲಿಸಲಾಗಿತ್ತು.

ಕಾನೂನು ತಜ್ಞರ ಪ್ರಕಾರ, ರಿಜಿಸ್ಟ್ರಿ ದೋಷಗಳನ್ನು ಪಟ್ಟಿ ಮಾಡುವುದು ಸಾಮಾನ್ಯ ನ್ಯಾಯಾಂಗ ಪ್ರಕ್ರಿಯೆಯಾಗಿದ್ದು, ವಿಪಕ್ಷಗಳ ಕಾನೂನು ತಂಡವು ಈ ಲೋಪಗಳನ್ನು ಸರಿಪಡಿಸಿ ಮತ್ತೆ ಅರ್ಜಿ ದಾಖಲಿಸಿದ ಬಳಿಕವಷ್ಟೇ ತುರ್ತು ವಿಚಾರಣೆಗೆ ಪೀಠ ನಿಗದಿಯಾಗಲಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
LPG Gas Subsidy : ನಿಮ್ಮ ಬ್ಯಾಂಕ್ ಖಾತೆಗೆ ಗ್ಯಾಸ್ ಸಬ್ಸಿಡಿ ಹಣ ಬಂದಿಲ್ವಾ? ಕ್ಷಣಾರ್ಧದಲ್ಲಿ ಹೀಗೆ ಚೆಕ್ ಮಾಡಿ!ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪಿಜಿ ವ್ಯಾಸಂಗಕ್ಕೆ ಸರ್ಕಾರದಿಂದ ₹15 ಕೋಟಿ ನೆರವು: ಸಚಿವ ಯು.ಟಿ ಖಾದರ್ರೈತರ ಬೇಡಿಕೆ ಈಡೇರಿಸದ ಕೇಂದ್ರ: ಸಾಗರದಲ್ಲಿ ಹೆದ್ದಾರಿ ತಡೆದು ರೈತ ಸಂಘ ಆಕ್ರೋಶರಾಹುಲ್ ಗಾಂಧಿ ರಾಜಕೀಯಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ನಿರಂತರವಾಗಿ ಸೋಲುತ್ತಲೇ ಇದೆ: ಅಮಿತ್ ಶಾ ವಾಗ್ದಾಳಿರಾಜ್ಯದ ಕ್ರೀಡಾ ಸಾಧಕರಿಗೆ ಸಿಹಿಸುದ್ದಿ: ಸರ್ಕಾರಿ ನೌಕರಿಯಲ್ಲಿ ಶೇ.2 ಮೀಸಲಾತಿ ಕಲ್ಪಿಸಿ ಸರ್ಕಾರ ಆದೇಶBREAKING: ಸೀರೆಯಲ್ಲಿ ಚಾಕು ಬಚ್ಚಿಟ್ಟು ಮಮತಾ ಬ್ಯಾನರ್ಜಿ ಮೇಲೆ ದಾಳಿಗೆ ಯತ್ನ? ಮಹಿಳೆ ಅರೆಸ್ಟ್!ಸಿನಿಮಾದಲ್ಲಿ ಚಾನ್ಸ್ ಬೇಕಿದ್ದರೆ ‘ನನ್ನ ಜೊತೆ ಮಲಗಬೇಕು’ ಎಂದ ನಿರ್ದೇಶಕ; ನಟಿ ನೀತಿ ಟೇಲರ್ ಸ್ಫೋಟಕ ಆರೋಪ.!ಸಾಗರ ಮಾರಿಕಾಂಬಾ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವ: ಅ.18ರಂದು ದುರ್ಗಾಷ್ಟಮಿ ಪೂಜೆ, ಅನ್ನಸಂತರ್ಪಣೆ'ಸಾಗರ ತಾಲ್ಲೂಕು ಗ್ಯಾರಂಟಿ ಸಮಿತಿ' ಸಭೆ: ಅಧಿಕಾರಿಗಳ ಕಾರ್ಯವೈಖರಿಗೆ 'ಸದಸ್ಯ ನಾಗರಾಜ ಕಲ್ಮನೆ' ಬೇಸರSHOCKING : 16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ರೋಬೋಟ್.! ‘ಹಿಂಭಾಗ ಮುಟ್ಟಿ ಅಸಭ್ಯವಾಗಿ ವರ್ತನೆ’