ಬಲ್ಗೇರಿಯಾ: ಫ್ಲೈದುಬೈ ಘಟನೆ ಮಾಸುವ ಮುನ್ನವೇ ಇಸ್ರೇಲ್‌ನ ಟೆಲ್‌ಅವೀವ್‌ನಿಂದ ಆಸ್ಟ್ರಿಯಾದ ವಿಯೆನ್ನಾಗೆ ತೆರಳುತ್ತಿದ್ದ ಆಸ್ಟ್ರಿಯನ್ ಏರ್‌ಲೈನ್ಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ವಿಮಾನವನ್ನು ಬಲ್ಗೇರಿಯಾದ ರಾಜಧಾನಿ ಸೋಫಿಯಾದಲ್ಲಿ ಯುದ್ಧ ವಿಮಾನದ ಬೆಂಗಾವಲಿನಲ್ಲಿ ತುರ್ತು ಭೂಸ್ಪರ್ಶ ಮಾಡಲಾದ ಘಟನೆ ನಡೆದಿದೆ.
ವಿಮಾನದಲ್ಲಿದ್ದ 51 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ಇತ್ತೀಚೆಗೆ ಫ್ಲೈದುಬೈ ವಿಮಾನದ ಹೈಜಾಕ್ ಯತ್ನದ ಬೆನ್ನಲ್ಲೇ ಇಸ್ರೇಲ್ ಸಂಪರ್ಕಿಸುವ ವಿಮಾನಗಳಿಗೆ ಇಂತಹ ಬೆದರಿಕೆಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಇಸ್ರೇಲ್‌ನಿಂದ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾಗೆ ಹೊರಟ್ಟಿದ್ದ ಆಸ್ಟ್ರಿಯನ್ ಏರ್‌ಲೈನ್ಸ್ ಸಂಸ್ಥೆಯ ವಿಮಾನಕ್ಕೆ ಅ.18ರಂದು ಭಾನುವಾರ(ಸ್ಥಳೀಯ ಕಾಲಮಾನದ ಪ್ರಕಾರ) ಬಾಂಬ್ ಬೆದರಿಕೆ ಕರೆ ಬಂದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಈ ವಿಮಾನವನ್ನು ಬಲ್ಗೇರಿಯಾದ ರಾಜಧಾನಿ ಸೋಫಿಯಾ ನಗರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.
ಈ ಕುರಿತು ಆಸ್ಟ್ರಿಯನ್ ಏರ್‌ಲೈನ್ಸ್ ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದ್ದು, ಇಸ್ರೇಲ್‌ನ ಟೆಲ್‌ಅವೀವ್‌ನಿಂದ ಆಸ್ಟ್ರಿಯಾದ ವಿಯೆನ್ನಾಗೆ ಹೊರಟ್ಟಿದ್ದ ಆಸ್ಟ್ರಿಯನ್ ಏರ್‌ಲೈನ್ಸ್‌ನ ವಿಮಾನ OS82ಗೆ ಹಾರಾಟದ ಸಮಯದಲ್ಲಿ ಬಾಂಬ್ ಬೆದರಿಕೆ ಸಂದೇಶ ರವಾನೆಯಾಗಿದೆ. ಈ ಹಿನ್ನಲೆಯಲ್ಲಿ ವಿಮಾನವನ್ನು ಬಲ್ಗೇರಿಯಾದಲ್ಲಿ ಸೇಫ್ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿಸಲಾಗಿದೆ ಎಂದು ತಿಳಿಸಿದೆ. ಈ ವಿಮಾನದಲ್ಲಿದ್ದ 51 ಪ್ರಯಾಣಿಕರು ಹಾಗೂ 6 ವಿಮಾನದ ಸಿಬ್ಬಂದಿಗಳು ಸೇರಿ ವಿಮಾನದಲ್ಲಿದ್ದ ಒಟ್ಟು 57 ಮಂದಿ ಸುರಕ್ಷಿತವಾಗಿ ವಿಮಾನದಿಂದ ಇಳಿದ್ದಿದ್ದಾರೆ.
ಬಾಂಬ್ ಬೆದರಿಕೆ ಕುರಿತು ಬಲ್ಗೇರಿಯಾದ ಸಾರಿಗೆ ಸಚಿವಾಲಯ ಬಿಡುಗಡೆ ಮಾಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಆಸ್ಟಿಯನ್ ಏರ್‌ಲೈನ್ಸ್‌ನ ವಿಮಾನದಲ್ಲಿ 51 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಸೇರಿದಂತೆ 57 ಜನರಿದ್ದು, ರೋಮೆನಿಯಾದ ಗಡಿಯಲ್ಲಿ ಹಾರಾಟ ನಡೆಸುವ ಸಮಯದಲ್ಲಿ ಸಿಬ್ಬಂದಿ ಬಾಂಬ್ ಬೆದರಿಕೆ ಸಂಕೇತವನ್ನು ವರದಿ ಮಾಡಿದ್ದು, ಈ ವಿಮಾನವನ್ನು ಅಸಾಧಾರಣವಾಗಿ ಸೋಫಿಯಾದಲ್ಲಿ ಇಳಿಯಲು ನಿರ್ಧರಿಸಿದ್ದಾರೆ. ಹೀಗೆ ವಿಮಾನವು ಸೋಫಿಯಾ ನಗರದಲ್ಲಿ ತುರ್ತು ಭೂಸ್ಪರ್ಶ ಮಾಡುವವರೆಗೂ ಬಲ್ಗೇರಿಯಾದ ವಾಯುಪಡೆಯ ಯುದ್ಧವಿಮಾನ MiG-29 ಫೈಟರ್ ಜೆಟ್ ಈ ವಿಮಾನಕ್ಕೆ ಬೆಂಗಾವಲು ನೀಡಿದೆ” ಎಂದು ತಿಳಿಸಿದೆ.
ಈ ಘಟನೆ ಬಳಿಕ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಪರ್ಯಾಯ ವಿಮಾನಗಳ ವ್ಯವಸ್ಥೆ ಮಾಡಿ ಕಳುಹಿಸಿರುವುದಾಗಿ ಆಸ್ಟ್ರಿಯನ್ ಏರ್‌ಲೈನ್ಸ್ ತಿಳಿಸಿದೆ.