LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನನಗೆ ಗೌರವ ಡಾಕ್ಟರೇಟ್ ಬಂದಿರುವುದೇ ಗೊತ್ತಿರಲಿಲ್ಲ, ನನ್ನನ್ನು 'ಡಾಕ್ಟರ್' ಅನ್ನಬೇಡಿ: ಸಿದ್ದರಾಮಯ್ಯ ಹಾಸ್ಯ ಚಟಾಕಿ!

ಕೋಲಾರ: "ಆರ್.ಎಲ್. ಜಾಲಪ್ಪ ಡೀಮ್ಡ್ ವಿಶ್ವವಿದ್ಯಾಲಯದವರು ನನಗೆ ಗೌರವ ಡಾಕ್ಟರೇಟ್ ನೀಡಿದ್ದಾರೆ. ಆದರೆ ಇದು ನನಗೆ ಮೊದಲೇ ತಿಳಿದಿರಲಿಲ್ಲ. ನಾನು ಬೇಡ ಎಂದಿದ್ದರೂ ನೀಡಿದ್ದಾರೆ. ದಯವಿಟ್ಟು ನನ್ನನ್ನು ಡಾಕ್ಟರ್ ಸಿದ್ದರಾಮಯ್ಯ ಎಂದು ಕರೆಯಬೇಡಿ, ಸಿದ್ದರಾಮಯ್ಯ ಎಂದೇ ಕರೆಯಿರಿ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೋಲಾರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಆರ್.ಎಲ್. ಜಾಲಪ್ಪ ಆಸ್ಪತ್ರೆಯ ಸಂಸ್ಥಾಪನಾ ದಿನಾಚರಣೆ ಹಾಗೂ ಹಾಸ್ಪಿಟಲ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಭೆಗೆ ಬಾರದಿದ್ದಕ್ಕೆ ಟ್ರಸ್ಟಿ ಸ್ಥಾನದಿಂದಲೇ ತೆಗೆದಿದ್ದರು!

ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ ಹಾಸ್ಯ ಚಟಾಕಿ ಹಾರಿಸಿದ ಅವರು, "ದೇವರಾಜ್ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಮತ್ತು ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ನಾನೂ ಕೂಡ ಆರಂಭದಲ್ಲಿ ಸಂಸ್ಥಾಪಕ ಟ್ರಸ್ಟಿ ಆಗಿದ್ದೆ. ಆದರೆ ನಾನು ಒಮ್ಮೆಯೂ ಟ್ರಸ್ಟ್ ಸಭೆಗೆ ಹಾಜರಾಗಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಜಾಲಪ್ಪನವರು, 'ಮೀಟಿಂಗ್‌ಗೆ ಬರದಿದ್ದರೆ ನಿನ್ನನ್ನು ಟ್ರಸ್ಟಿ ಸ್ಥಾನದಿಂದ ತೆಗೆದುಹಾಕುತ್ತೇನೆ' ಎಂದು ಫೋನ್‌ನಲ್ಲೇ ಎಚ್ಚರಿಕೆ ನೀಡಿ, ಕೊನೆಗೆ ತೆಗೆದೇಬಿಟ್ಟರು. ಸದ್ಯ ನಾನು ಟ್ರಸ್ಟಿ ಅಲ್ಲ, ಈಗ ಜಿ.ಎಚ್. ನಾಗರಾಜ್ ಅವರು ನನ್ನ ಮಗನನ್ನು ಟ್ರಸ್ಟಿ ಮಾಡಿಕೊಂಡಿದ್ದಾರೆ, ಆದರೆ ಆತನೂ ಸಭೆಗೆ ಹೋಗುತ್ತಿಲ್ಲ" ಎಂದು ವೇದಿಕೆಯಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು.

ನಾನು ಡಾಕ್ಟರ್ ಅಲ್ಲ, ಲಾಯರ್ ಅಷ್ಟೇ!

ತಮಗೆ ಗೌರವ ಡಾಕ್ಟರೇಟ್ ಸಂದಿರುವ ಕುರಿತು ಮುಂದುವರಿದು ಮಾತನಾಡಿದ ಅವರು, "ನಾನು ರಾಜ್ಯದಲ್ಲಿ 17 ಬಾರಿ ಬಜೆಟ್ ಮಂಡಿಸಿದ್ದೇನೆ. ಜೊತೆಗೆ 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಡಿ. ದೇವರಾಜ ಅರಸು ಅವರ ಸುದೀರ್ಘ ಆಡಳಿತದ ದಾಖಲೆಯನ್ನೂ ಮುರಿದಿದ್ದೇನೆ. ಬಹುಶಃ ಇದೇ ಕಾರಣಕ್ಕೆ ನನಗೆ ಈ ಗೌರವ ಡಾಕ್ಟರೇಟ್ ಕೊಟ್ಟಿರಬಹುದು ಅನಿಸುತ್ತದೆ. ಆದರೆ ನಾನು ವೈದ್ಯನಲ್ಲ (ಡಾಕ್ಟರ್ ಅಲ್ಲ), ವೃತ್ತಿಯಲ್ಲಿ ವಕೀಲ (ಲಾಯರ್). ಜಿ.ಎಚ್. ನಾಗರಾಜ್ ಅವರ ಒತ್ತಾಯಕ್ಕೆ ಮಣಿದು ಈ ಡಾಕ್ಟರೇಟ್ ಬಂದಿದೆ ಅಷ್ಟೇ. ಹಾಗಾಗಿ ಇನ್ಮುಂದೆ ಯಾರೂ ನನ್ನನ್ನು 'ಡಾಕ್ಟರ್ ಸಿದ್ದರಾಮಯ್ಯ' ಎಂದು ಕರೆಯುವುದು ಬೇಡ, ಎಂದಿನಂತೆ 'ಸಿದ್ದರಾಮಯ್ಯ' ಎಂದೇ ಕರೆಯಿರಿ" ಎಂದು ನಗುತ್ತಲೇ ಸ್ಪಷ್ಟಪಡಿಸಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೋರ್ ಇದೆ, ಕರೆಂಟ್ ಇದೆ, ಆದ್ರೂ ನೀರಿಲ್ಲ: ಸಾಗರದ 'ಕಲ್ಮನೆ ಗ್ರಾಮ ಪಂಚಾಯ್ತಿ' ವ್ಯಾಪ್ತಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾರದ ನೀರು!ಪತಿ ನಿಧನದ ಬಳಿಕ ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಬಂದ ನಟಿ ಅರುಣಾ ಇರಾನಿ; ಭಾವುಕ ಸಂದೇಶ ವೈರಲ್ |WATCHಏಷ್ಯನ್ ಪ್ಯಾರಾ ಗೇಮ್ಸ್: ಪುರುಷರ ಜಾವೆಲಿನ್ ಎಸೆತದಲ್ಲಿ ರಿಂಕುಗೆ ಚಿನ್ನ, ಅಜೀತ್ ಸಿಂಗ್ ಗೆ ಬೆಳ್ಳಿಅಂಬಾನಿ ಕುಟುಂಬದ ಜೊತೆ ನವರಾತ್ರಿ ಸಂಭ್ರಮದಲ್ಲಿ ಧೋನಿ! ಪತ್ನಿ ಸಾಕ್ಷಿ ಜೊತೆಗಿನ ತುಂಟಾಟಕ್ಕೆ ಫ್ಯಾನ್ಸ್ ಫಿದಾ | VIDEOBIG NEWS: ಸ್ಟಿಂಗ್ ಆಪರೇಷನ್‌ನ ಅಸಲಿ ಪಿತಾಮಹ ಮಧು ಬಂಗಾರಪ್ಪ, ಮೊದಲು ಬಲಿ ಆಗಿದ್ದೇ ನಾನು: ಮಾಜಿ ಸಚಿವ ಹಾಲಪ್ಪಕೇಂದ್ರ ಸರ್ಕಾರದಿಂದ ಪಿಂಚಣಿದಾರರಿಗೆ ಬಿಗ್ ಅಲರ್ಟ್! ನ.30ರೊಳಗೆ ಈ ಕೆಲಸ ಮಾಡದಿದ್ದರೆ ಪಿಂಚಣಿ ಸ್ಥಗಿತ.!ನನಗೆ ಗೌರವ ಡಾಕ್ಟರೇಟ್ ಬಂದಿರುವುದೇ ಗೊತ್ತಿರಲಿಲ್ಲ, ನನ್ನನ್ನು 'ಡಾಕ್ಟರ್' ಅನ್ನಬೇಡಿ: ಸಿದ್ದರಾಮಯ್ಯ ಹಾಸ್ಯ ಚಟಾಕಿ!ನವೆಂಬರ್ 8 ಭಾನುವಾರ NSE, BSE ದೀಪಾವಳಿ ‘ಮುಹೂರ್ತ ಟ್ರೇಡಿಂಗ್’ಆಟವಾಡುತ್ತಿದ್ದಾಗ ಅಲ್ಯೂಮಿನಿಯಂ ಪಾತ್ರೆಯೊಳಗೆ ಸಿಲುಕಿದ ಬಾಲಕನ ತಲೆ ! ಮುಂದೇನಾಯ್ತು? WATCH VIDEO‘ಪಾಕಿಸ್ತಾನದ ಕೈಗೊಂಬೆಯಾಗಬೇಡಿ’… ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆ OIC ವಿರುದ್ಧ ಭಾರತ ಕಿಡಿ!