LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಿಗಮ-ಮಂಡಳಿ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಬಹುದಿನಗಳಿಂದ ಕಾಯುತ್ತಿರುವ ವಿವಿಧ ನಿಗಮ ಮಂಡಳಿಗಳ ನೇಮಕಾತಿ ಪ್ರಕ್ರಿಯೆ ಇದೇ ತಿಂಗಳಾಂತ್ಯದೊಳಗೆ ಅಂತಿಮಗೊಳ್ಳುವ ಭರವಸೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಈಗಾಗಲೇ ಹಲವು ಆಕಾಂಕ್ಷಿಗಳ ಪಟ್ಟಿಯನ್ನು ಪರಿಶೀಲಿಸಿ ಅನುಮೋದಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಚುನಾವಣಾ ನೀತಿ ಸಂಹಿತೆ ಅಕ್ಟೋಬರ್ 23ರ ನಂತರ ಮುಕ್ತಾಯವಾಗಲಿದೆ. ಆ ಬಳಿಕ ತೆರವಾಗಿರುವ ನಿರ್ದೇಶಕರು ಹಾಗೂ ಸದಸ್ಯ ಸ್ಥಾನಗಳಿಗೆ ಜಿಲ್ಲಾವಾರು ಮತ್ತು ಕ್ಷೇತ್ರವಾರು ನೇಮಕಾತಿ ಪಟ್ಟಿ ಅಧಿಕೃತವಾಗಿ ಹೊರಬೀಳಲಿದೆ ಎಂದು ವಿವರಿಸಿದರು.

ಪರಿಷತ್ ಚುನಾವಣೆ ಫಲಿತಾಂಶ ಮುಂಬರುವ ಚುನಾವಣೆಗೆ ದಿಕ್ಸೂಚಿ

ವಿಧಾನಪರಿಷತ್ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ನಾಲ್ಕು ದಿನಗಳ ಕಾಲ ಸಕ್ರಿಯವಾಗಿ ಪ್ರಚಾರ ಕೈಗೊಂಡಿದ್ದು, ಕ್ಷೇತ್ರಗಳಲ್ಲಿ ಮತದಾರರ ಉತ್ಸಾಹ ಅಭೂತಪೂರ್ವವಾಗಿದೆ ಎಂದರು. ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸುವುದು ನಿಶ್ಚಿತ. ಶಿಕ್ಷಕರು ಹಾಗೂ ಪದವೀಧರ ಮತದಾರರು ಸಂವಿಧಾನ ರಕ್ಷಣೆ ಮತ್ತು ಕಾಂಗ್ರೆಸ್ ಪರವಾಗಿ ಒಲವು ಹೊಂದಿದ್ದಾರೆ. ಈ ಬಾರಿಯ ಫಲಿತಾಂಶವು ರಾಜ್ಯದ ಮುಂದಿನ ಸಾರ್ವತ್ರಿಕ ಚುನಾವಣೆಗೂ ದಿಕ್ಸೂಚಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆ ವಿಚಾರ

ಮಹಿಳಾ ಘಟಕದ ಅಧ್ಯಕ್ಷರ ರಾಜೀನಾಮೆ ಕುರಿತು ಸ್ಪಷ್ಟನೆ ನೀಡಿದ ಹರಿಪ್ರಸಾದ್, ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಹೆಚ್ಚಿನ ಸಮಯಾವಕಾಶ ಬೇಕಾಗಿದ್ದರಿಂದ ಅವರು ಮೊದಲೇ ರಾಜೀನಾಮೆ ನಿರ್ಧಾರ ತಿಳಿಸಿದ್ದರು. ಪ್ರಸ್ತುತ ಎಐಸಿಸಿ ಮಹಿಳಾ ಘಟಕವು ನೂತನ ಸಾರಥಿಯ ಹುಡುಕಾಟದಲ್ಲಿದ್ದು, ಶೀಘ್ರದಲ್ಲೇ ಮುಂದಿನ ತೀರ್ಮಾನ ಪ್ರಕಟವಾಗಲಿದೆ ಎಂದರು.

ಹೆಚ್‌ಡಿಕೆ ಗಡುವಿಗೆ ತಿರುಗೇಟು

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ಟಿಂಗ್ ಆಪರೇಷನ್ ವಿರುದ್ಧ ಹೋರಾಟಕ್ಕೆ ಗಡುವು ನೀಡಿರುವ ಕುರಿತು ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವವರನ್ನು ಬಂಧಿಸುವ ಬಿಜೆಪಿ ಶೈಲಿಯನ್ನು ಕಾಂಗ್ರೆಸ್ ಅನುಸರಿಸುವುದಿಲ್ಲ. ಪ್ರತಿಭಟನೆ ಮಾಡುವುದು ಅವರ ಹಕ್ಕು, ಅದಕ್ಕೆ ತಕ್ಕ ರಾಜಕೀಯ ಪ್ರತ್ಯುತ್ತರ ನೀಡಲು ಸರ್ಕಾರ ಸಿದ್ಧವಿದೆ ಎಂದರು.

ಎಸ್‌ಐಆರ್ ಪ್ರತಿಭಟನೆ ಮತ್ತು ಕಾಂಗ್ರೆಸ್ ಪಾದಯಾತ್ರೆ ಅಭಿಯಾನ

ಚುನಾವಣಾ ಆಯೋಗದ ಅಧಿಕಾರಿ ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಎಸ್‌ಐಆರ್ ಹೋರಾಟಕ್ಕೆ ಎಐಸಿಸಿ ವೀಕ್ಷಕರನ್ನು ನೇಮಿಸಿದ್ದು, ಬ್ಲಾಕ್ ಹಾಗೂ ತಾಲೂಕು ಹಂತದಲ್ಲೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿದರು.

ಇದೇ ವೇಳೆ ಪಕ್ಷದ ಮುಂದಿನ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ, ಭಾರತ್ ಜೋಡೋ ಅಭಿಯಾನದ ನೆನಪಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸದ್ಯ ಎಐಸಿಸಿ ನಿರ್ದೇಶನದಂತೆ ಎರಡು ತಿಂಗಳ ಕಾಲ ರಾಜ್ಯಾದ್ಯಂತ 'ಮತ ಉಳಿಸಿ ದೇಶ ಉಳಿಸಿ' ಜಾಗೃತಿ ಅಭಿಯಾನ ನಡೆಯಲಿದೆ. ಈ ಅಭಿಯಾನ ಮುಗಿದ ತಕ್ಷಣ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಆರಂಭವಾಗಲಿದೆ ಎಂದು ಹರಿಪ್ರಸಾದ್ ತಿಳಿಸಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೋರ್ ಇದೆ, ಕರೆಂಟ್ ಇದೆ, ಆದ್ರೂ ನೀರಿಲ್ಲ: ಸಾಗರದ 'ಕಲ್ಮನೆ ಗ್ರಾಮ ಪಂಚಾಯ್ತಿ' ವ್ಯಾಪ್ತಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾರದ ನೀರು!ಪತಿ ನಿಧನದ ಬಳಿಕ ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಬಂದ ನಟಿ ಅರುಣಾ ಇರಾನಿ; ಭಾವುಕ ಸಂದೇಶ ವೈರಲ್ |WATCHಏಷ್ಯನ್ ಪ್ಯಾರಾ ಗೇಮ್ಸ್: ಪುರುಷರ ಜಾವೆಲಿನ್ ಎಸೆತದಲ್ಲಿ ರಿಂಕುಗೆ ಚಿನ್ನ, ಅಜೀತ್ ಸಿಂಗ್ ಗೆ ಬೆಳ್ಳಿಅಂಬಾನಿ ಕುಟುಂಬದ ಜೊತೆ ನವರಾತ್ರಿ ಸಂಭ್ರಮದಲ್ಲಿ ಧೋನಿ! ಪತ್ನಿ ಸಾಕ್ಷಿ ಜೊತೆಗಿನ ತುಂಟಾಟಕ್ಕೆ ಫ್ಯಾನ್ಸ್ ಫಿದಾ | VIDEOBIG NEWS: ಸ್ಟಿಂಗ್ ಆಪರೇಷನ್‌ನ ಅಸಲಿ ಪಿತಾಮಹ ಮಧು ಬಂಗಾರಪ್ಪ, ಮೊದಲು ಬಲಿ ಆಗಿದ್ದೇ ನಾನು: ಮಾಜಿ ಸಚಿವ ಹಾಲಪ್ಪಕೇಂದ್ರ ಸರ್ಕಾರದಿಂದ ಪಿಂಚಣಿದಾರರಿಗೆ ಬಿಗ್ ಅಲರ್ಟ್! ನ.30ರೊಳಗೆ ಈ ಕೆಲಸ ಮಾಡದಿದ್ದರೆ ಪಿಂಚಣಿ ಸ್ಥಗಿತ.!ನನಗೆ ಗೌರವ ಡಾಕ್ಟರೇಟ್ ಬಂದಿರುವುದೇ ಗೊತ್ತಿರಲಿಲ್ಲ, ನನ್ನನ್ನು 'ಡಾಕ್ಟರ್' ಅನ್ನಬೇಡಿ: ಸಿದ್ದರಾಮಯ್ಯ ಹಾಸ್ಯ ಚಟಾಕಿ!ನವೆಂಬರ್ 8 ಭಾನುವಾರ NSE, BSE ದೀಪಾವಳಿ ‘ಮುಹೂರ್ತ ಟ್ರೇಡಿಂಗ್’ಆಟವಾಡುತ್ತಿದ್ದಾಗ ಅಲ್ಯೂಮಿನಿಯಂ ಪಾತ್ರೆಯೊಳಗೆ ಸಿಲುಕಿದ ಬಾಲಕನ ತಲೆ ! ಮುಂದೇನಾಯ್ತು? WATCH VIDEO‘ಪಾಕಿಸ್ತಾನದ ಕೈಗೊಂಬೆಯಾಗಬೇಡಿ’… ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆ OIC ವಿರುದ್ಧ ಭಾರತ ಕಿಡಿ!