LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾವು ಗೆದ್ದು ಬಂದ ಮುದ್ದು ಕಂದಮ್ಮ: ರಕ್ತ ಪರೀಕ್ಷೆ ವರದಿ ಬರುವ ಮುನ್ನವೇ ಸಾವು ಘೋಷಿಸಿದ್ದ ವೈದ್ಯ !

ಅಮೆರಿಕದ ಅರಿಜೋನಾ ರಾಜ್ಯದ ಗಿಲ್ಬರ್ಟ್ ನಗರದಲ್ಲಿ ವೈದ್ಯಕೀಯ ಕ್ಷೇತ್ರವೇ ತಲೆ ತಗ್ಗಿಸುವಂತಹ ಘಟನೆಯೊಂದು ನಡೆದಿದ್ದು, ಮೃತಪಟ್ಟಿದ್ದಾನೆ ಎಂದು ವೈದ್ಯರಿಂದ ಘೋಷಿಸಲ್ಪಟ್ಟು ಶವಾಗಾರಕ್ಕೆ ರವಾನೆಯಾಗಿದ್ದ ಹದಿನೆಂಟು ತಿಂಗಳ ಮಗುವೊಂದು ಐದು ಗಂಟೆಗಳ ನಂತರ ಜೀವಂತವಾಗಿ ಪತ್ತೆಯಾಗಿದೆ. ಈ ಘೋರ ನಿರ್ಲಕ್ಷ್ಯದ ವಿರುದ್ಧ ಪೋಲಿಸರು ವೈದ್ಯರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗಿದ್ದು, ಮಗುವಿನ ತಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿನ್ಸೆಂಟ್ ಲೊರೆಂಜೊ ಫಿಯೋರ್ಡಿಲಿನೋ ಎಂಬ ಹದಿನೆಂಟು ತಿಂಗಳ ಮಗು ಕುಟುಂಬದ ಕಾರ್ಯಕ್ರಮವೊಂದರಲ್ಲಿ ಆಟವಾಡುತ್ತಿದ್ದಾಗ ಅಕಸ್ಮಾತ್ ಆಗಿ ಈಜುಕೊಳಕ್ಕೆ ಬಿದ್ದಿತ್ತು. ತಕ್ಷಣವೇ ಮಗುವನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡುತ್ತಾ ಮೆರ್ಸಿ ಗಿಲ್ಬರ್ಟ್ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪಿದ ಕೇವಲ ಹದಿನಾರೇ ನಿಮಿಷಗಳಲ್ಲಿ, ವೈದ್ಯರು ಮಗು ಮೃತಪಟ್ಟಿದೆ ಎಂದು ಅಧಿಕೃತವಾಗಿ ಘೋಷಿಸಿ ಶವವನ್ನು ಶವಾಗಾರಕ್ಕೆ ಕಳುಹಿಸಿಕೊಟ್ಟಿದ್ದರು.

ಆದರೆ ಮಗು ಮೃತಪಟ್ಟಿದೆ ಎಂದು ಭಾವಿಸಿ ದುಃಖದಲ್ಲಿದ್ದ ಕುಟುಂಬಸ್ಥರಿಗೆ ಐದು ಗಂಟೆಗಳ ನಂತರ ಆಸ್ಪತ್ರೆಯಿಂದ ಬಂದ ಕರೆ ಆಶ್ಚರ್ಯ ಮತ್ತು ಆಘಾತವನ್ನು ಉಂಟುಮಾಡಿದೆ. ಶವಾಗಾರದಲ್ಲಿದ್ದ ಮಗುವಿನಲ್ಲಿ ಜೀವಂತಿಕೆಯ ಕುರುಹುಗಳು ಕಂಡುಬಂದಿದ್ದು, ಮಗು ಉಸಿರಾಡುತ್ತಿರುವುದು ಸಿಬ್ಬಂದಿಯ ಗಮನಕ್ಕೆ ಬಂದಿದೆ. ತಕ್ಷಣವೇ ಮಗುವನ್ನು ಹೊರತೆಗೆದು ತುರ್ತು ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.

ಈ ಘಟನೆಯ ಕುರಿತು ಪೋಲೀಸರು ನಡೆಸಿದ ತನಿಖೆಯಲ್ಲಿ ವೈದ್ಯರ ಕಡೆಯಿಂದ ಅತ್ಯಂತ ಗಂಭೀರ ಸ್ವರೂಪದ ಲೋಪವಾಗಿರುವುದು ಬೆಳಕಿಗೆ ಬಂದಿದೆ. ಮಗುವಿನ ರಕ್ತದ ಮಾದರಿಯ ತಪಾಸಣಾ ವರದಿ ಬರುವ ಮುನ್ನವೇ ವೈದ್ಯರು ಸಾವು ಘೋಷಿಸಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ರಕ್ತದ ವರದಿ ಬರುವುದು ತಡವಾಗಿದ್ದರೂ, ಅದನ್ನು ಕಾಯದೆ ವೈದ್ಯರು ಮಗು ತೀರಿಕೊಂಡಿದೆ ಎಂದು ಆತುರದ ನಿರ್ಧಾರಕ್ಕೆ ಬಂದಿದ್ದರು.

ಸದ್ಯ ಮಗು ಜೀವಂತವಾಗಿದ್ದರೂ, ನೀರಿನಲ್ಲಿ ಮುಳುಗಿದ್ದರಿಂದ ಹಾಗೂ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದೆ ಶವಾಗಾರದಲ್ಲಿ ಹಲವು ಗಂಟೆಗಳ ಕಾಲ ಇದ್ದಿದ್ದರಿಂದ ಮಗುವಿನ ದೇಹದ ಅಂಗಾಂಗಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಮಗುವಿಗೆ ಜೀವಮಾನವಿಡೀ ವಿಶೇಷ ಆರೈಕೆಯ ಅಗತ್ಯವಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಪೋಲೀಸ್ ಇಲಾಖೆಯು ಅರಿಜೋನಾ ಅಟಾರ್ನಿ ಜನರಲ್ ಕಚೇರಿಗೆ ಮನವಿ ಸಲ್ಲಿಸಿದ್ದು, ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದೆ. ಮಗುವಿನ ಪೋಷಕರು ಕೂಡ ಆಸ್ಪತ್ರೆ ಮತ್ತು ಸಂಬಂಧಪಟ್ಟ ವೈದ್ಯರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲು ತೀರ್ಮಾನಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಸಂಭವಿಸಿದ ಈ ಘಟನೆ ಇಡೀ ಜಗತ್ತಿನ ಗಮನ ಸೆಳೆದಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅನೈತಿಕ ಸಂಬಂಧ ಶಂಕೆ: ಪತಿಯಿಂದಲೇ ಪತ್ನಿ ಬರ್ಬರ ಹತ್ಯೆಅಬ್ಬರಕ್ಕಿಂತ ಅಭಿನಯ ಮುಖ್ಯ ಎಂದಿದ್ದ ʼರಸ್ನಾ ಗರ್ಲ್‌ʼ ; ಇಲ್ಲಿದೆ ಹುಟ್ಟುಹಬ್ಬದಂದೇ ಪ್ರಾಣ ಕಳೆದುಕೊಂಡ ದುರಂತ ಕಥೆ !BREAKING : ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 7925 ಹುದ್ದೆ ಶೀಘ್ರ ಭರ್ತಿ : ಸಿಎಂ ಡಿಕೆ ಶಿವಕುಮಾರ್ ಘೋಷಣೆ!BIG NEWS : "ಪೊಲೀಸರು RSS ಆಳು ಮಕ್ಕಳಲ್ಲ, ಪಥ ಸಂಚಲನಕ್ಕೆ ಅನುಮತಿ ಕಡ್ಡಾಯ" : ಗೃಹ ಸಚಿವ ಪ್ರಿಯಾಂಕ್ ಖರ್ಗೆಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಕಳಂಕ: ವೈದ್ಯಕೀಯ ರೋಗನಿರ್ಣಯ ವಿಧಾನಗಳಿಂದಲೇ ಹೆಚ್ಚುತ್ತಿದೆಯೇ ತಾರತಮ್ಯ ?ಖಾತೆಗೆ ₹60 ಸಾವಿರ ಜಮೆಯಾದರೂ ತೆರಿಗೆ ನೋಟಿಸ್ ಬರಬಹುದು! UPI ಬಳಕೆದಾರರು ಈ ನಿಯಮಗಳನ್ನು ತಿಳಿಯಿರಿಪ್ರಶ್ನೆ ಕೇಳಿದರೆ ವಿದೇಶಿ ಏಜೆಂಟ್ ಎನ್ನುತ್ತಾರೆ! CJP ನಾಯಕರ ಬಂಧನಕ್ಕೆ ಅಣ್ಣಾಮಲೈ ಆಕ್ರೋಶ; ಬಿಜೆಪಿ ತಿರುಗೇಟುಬೆಳಗಾವಿಯಲ್ಲಿ ಭೀಕರ ಮರ್ಡರ್ : ಅನೈತಿಕ ಸಂಬಂಧ ಶಂಕೆ ಹಿನ್ನೆಲೆ, ಕುಡಗೋಲಿಂದ ಕೊಚ್ಚಿ ಪತ್ನಿಯ ಹತ್ಯೆಗೈದ ಪತಿ!ಪ್ಲಾಸ್ಟಿಕ್ ಬಾಟಲಿಯಲ್ಲಿ ದಿನನಿತ್ಯ ನೀರು ಕುಡಿಯುತ್ತಿದ್ದೀರಾ ? ಹಾಗಾದ್ರೆ ಎಚ್ಚರ ನಿಮ್ಮ ಆರೋಗ್ಯಕ್ಕೆ ಎದುರಾಗಲಿದೆ ಅಪಾಯ !ಕೌಟುಂಬಿಕ ಕಲಹಕ್ಕೆ ಬಲಿಯಾಯ್ತು ಮತ್ತೊಂದು ಜೀವ ; ಕಣ್ಣೀರಿಡುತ್ತಲೇ ವಿಡಿಯೋ ಮಾಡಿ ಸಾವನ್ನಪ್ಪಿದ ಯುವಕ | Video