LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಬ್ಬದ ನೆಪದಲ್ಲಿ ಮಧ್ಯರಾತ್ರಿವರೆಗೂ ಪಟಾಕಿ ಸಿಡಿಸಿ, ಸಾಂಗ್ಸ್ ಹಾಕಿ ಸಂಭ್ರಮಾಚರಣೆ: ನಟಿ ರಮ್ಯಾ ಆಕ್ರೋಶ

ಬೆಂಗಳೂರು: ಹಬ್ಬದ ಹೆಸರಲ್ಲಿ ಮಧ್ಯರಾತ್ರಿವರೆಗೂ ಪಟಾಕಿ ಸಿಡಿಸಿ, ಕಿವಿಗಡಚಿಕ್ಕುವಂತೆ ಸಾಂಗ್ ಗಳನ್ನು ಹಾಕಿ ಸಂಭ್ರಮಿಸುವ ಹುಚ್ಚಾಟಕ್ಕೆ ಮಾಜಿ ಸಂಸದೆ, ನಟಿ ರಮ್ಯಾ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ರಾತ್ರಿ ವೇಳೆ ನಡೆಯುವ ಶಬ್ದ ಮಾಲಿನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರಮ್ಯಾ, ತಡರಾತ್ರಿ 3 ಗಂಟೆಯಾದರೂ ‘ಫನ್ ವರ್ಲ್ಡ್’ ಆವರಣದಲ್ಲಿ ಪಟಾಕಿಗಳನ್ನು ಸಿಡಿಸುವುದು ಮತ್ತು ಲೌಡ್‌ಸ್ಪೀಕರ್ ಹಾಕಿರುವ ಬಗ್ಗೆ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಮ್ಯಾ, ‘ಸಮಯ ಈಗ ಮುಂಜಾನೆ ಸುಮಾರು 3 ಗಂಟೆ. ಆದರೂ ಫನ್ ವರ್ಲ್ಡ್‌ನಲ್ಲಿ ಇನ್ನೂ ಪಟಾಕಿಗಳನ್ನು ಸಿಡಿಸಲಾಗುತ್ತಿದೆ ಮತ್ತು ಜೋರಾಗಿ ಸಂಗೀತವನ್ನು ಹಾಕಲಾಗುತ್ತಿದೆ. ಹಬ್ಬಗಳು ಅಥವಾ ವಿಶೇಷ ಸಂದರ್ಭಗಳಲ್ಲಿ ಸ್ವಲ್ಪಮಟ್ಟಿನ ವಿನಾಯಿತಿ ನೀಡುವುದನ್ನು ಒಪ್ಪಿಕೊಳ್ಳಬಹುದು. ಆದರೆ, ಈ ಸಮಯದಲ್ಲಿ ಈ ರೀತಿಯ ಸದ್ದು ಮಾಡುವುದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಫನ್ ವರ್ಲ್ಡ್ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಳಕಳಿ ವ್ಯಕ್ತಪಡಿಸಿರುವ ಅವರು, ‘ಹತ್ತಿರದಲ್ಲೇ ಆಸ್ಪತ್ರೆಗಳಿವೆ ಹಾಗೂ ವೃದ್ಧರು, ಚಿಕ್ಕ ಮಕ್ಕಳು ಇದ್ದಾರೆ’ ಇಂತಹ ಶಬ್ದದಿಂದ ವೃದ್ಧರು, ಮಕ್ಕಳು ಮತ್ತು ರೋಗಿಗಳು ಅನುಭವಿಸುವ ತೊಂದರೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

‘ಶಬ್ದ ಮಾಲಿನ್ಯ ನಿಯಂತ್ರಣ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ನೀಡಿದೆ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಪಟಾಕಿಗಳನ್ನು ಸಿಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೆ, ವಿಶೇಷ ಅನುಮತಿಗಳನ್ನು ಪಡೆದಿದ್ದರೂ ಕೂಡ ಮಧ್ಯರಾತ್ರಿ ದಾಟಿದ ಬಳಿಕ ಲೌಡ್‌ಸ್ಪೀಕರ್‌ಗಳನ್ನು ಬಳಸಲು ಅವಕಾಶವಿಲ್ಲ. ಆದರೂ ಈ ನಿಯಮಗಳು ಗಾಳಿಗೆ ತೂರಲಾಗುತ್ತಿದೆ’ ಎಂದು ರಮ್ಯಾ ಹೇಳಿದ್ದಾರೆ.

ನಟಿ ರಮ್ಯಾ ಅವರು ಹಿಂದಿನಿಂದಲೂ ಸಮಾಜದ ವಿವಿಧ ಪ್ರಮುಖ ಸಮಸ್ಯೆಗಳು, ಪರಿಸರ ಕಾಳಜಿ ಹಾಗೂ ಸಾರ್ವಜನಿಕರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಧ್ವನಿ ಎತ್ತುತ್ತಾ ಬಂದಿದ್ದಾರೆ. ಈಗ ಮತ್ತೊಮ್ಮೆ ನಗರದ ನೈರ್ಮಲ್ಯ ಹಾಗೂ ಜನರ ನೆಮ್ಮದಿಗೆ ಭಂಗ ತರುತ್ತಿರುವ ಈ ಘಟನೆಯನ್ನು ಖಂಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ವಿಜಯದಶಮಿ ದಿನ ಕಟ್ಟಿಗೆ ಬಡಿದಾಟದ ಆಚರಣೆ ವೇಳೆ ದುರಂತ: ಓರ್ವ ಸಾವು: 100ಕ್ಕೂ ಹೆಚ್ಚು ಜನರಿಗೆ ಗಾಯ

ಹೈದರಾಬಾದ್: ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಗ್ರಾಮದಲ್ಲಿ ಆಚರಿಸುವ ಕಟ್ಟಿಗೆ ಬಡಿದಾಟ ಆಚರಣೆ ವೇಳೆ ಓರ್ವ ಸಾವನ್ನಪ್ಪಿದ್ದು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ದೇವಗರಗಟ್ಟು ಗ್ರಾಮದಲ್ಲಿ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ನಡೆದ ಸಾಂಪ್ರದಾಯಿಕ ಕಟ್ಟಿಗೆ ಬಡಿದಾಟದ ಆಚರಣೆಯಲ್ಲಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಸುಮಾರು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಪ್ರತಿ ವರ್ಷ ವಿಜಯದಶಮಿ ಹಬ್ಬದ ಪ್ರಯುಕ್ತ ದೇವಗರಗಟ್ಟು ಗ್ರಾಮದಲ್ಲಿ ಬನ್ನಿ ಹಂಚುವ ಆಚರಣೆಯ ಭಾಗವಾಗಿ ಕಟ್ಟಿಗೆ ಬಡಿದಾಟ ನಡೆಯುತ್ತದೆ. ಈ ವರ್ಷ ಆಚರಣೆಯ ವೇಳೆ ಕಾಲ್ತುಳಿತ ಉಂಟಾಗಿದ್ದು, ಓರ್ವ ಸಾವನ್ನಪ್ಪಿದ್ದಾರೆ. ಮೃತರನ್ನು ಪೋತುರಾಜು (32) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ 18 ಜನರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಲೂರು ಆಸ್ಪತ್ರೆ ಸೇರಿದಂತೆ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಉಳಿದ ನೂರಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ದುರಂತಕ್ಕೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ಗಲಾಟೆಯೇ ಕಾರಣವಾಗಿದೆ ಎಂದು ತಿಳಿದುಬಂದಿದೆ. ಕಟ್ಟಿಗೆಗಳಿಂದ ಹೊಡೆದಾಡುವಾಗ ಪರಿಸ್ಥಿತಿ ಕೈಮೀರಿ ಕಾಲ್ತುಳಿತಕ್ಕೆ ಕಾರಣವಾಯಿತು. ಈ ವೇಳೆ ದುರಂತ ಸಂಭವಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮದುವೆಯಾದ ಹತ್ತು ದಿನಗಳಲ್ಲೇ ಪತಿ ಸಂಪರ್ಕಕ್ಕೆ ಸಿಗದ ಹಿನ್ನೆಲೆ – ಎರಡು ದಿನಗಳಲ್ಲಿ ಎರಡು ಬಾರಿ ಟವರ್ ಏರಿದ 20 ವರ್ಷದ ಮಹಿಳೆಸೌದಿ ಅರಾಮ್ಕೊ ತೈಲ ಘಟಕದ ಮೇಲೆ ಡ್ರೋನ್ ದಾಳಿ: ಇಬ್ಬರು ಸಾವು, ಗಾಯಾಳುಗಳಲ್ಲಿ ಭಾರತೀಯ; ಅಮೆರಿಕದ ಸಿಬ್ಬಂದಿ ತೆರವಿಗೆ ಆದೇಶಪ್ರಿಯಾಂಕಾ ಗಾಂಧಿ ಪುತ್ರನ ಛಾಯಾಚಿತ್ರ ಪ್ರದರ್ಶನಕ್ಕೆ ಅಡ್ಡಿ: 74 ಛಾಯಾಚಿತ್ರಗಳನ್ನು ತೆರವುಗೊಳಿಸಿದ ಬಿಕಾನೆರ್ ಹೌಸ್: ಕಾಂಗ್ರೆಸ್ ಆಕ್ರೋಶಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ: ದೀಪಾವಳಿಗೆ ಚಿನ್ನ ಖರೀದಿಸಲು ಇದೇ ಸೂಕ್ತ ಸಮಯವೇ?ಸಿಬ್ಬಂದಿ ಕೊರತೆ ಪರಿಹಾರಕ್ಕೆ ಕರ್ನಾಟಕ ಸರ್ಕಾರದ ಮಹತ್ವದ ನಿರ್ಧಾರ ಖಾಸಗಿ ಸಂಸ್ಥೆಗಳಿಗೆ ನಿಯಂತ್ರಕ ಕಾರ್ಯಗಳ ಜವಾಬ್ದಾರಿಸಚಿವ ಈಶ್ವರ್ ಖಂಡ್ರೆ ಖಡಕ್ ಸೂಚನೆಗೂ ಡೋಂಟ್ ಕೇರ್: 6 ತಿಂಗಳಾದರೂ ಕುಡಿಯುವ ನೀರಿನ ಬೋರ್ ಸರಿಮಾಡದೇ ನಿರ್ಲಕ್ಷ್ಯ!ರಾಜ್ಯದ ಗೃಹಜ್ಯೋತಿ ಫಲಾನುಭವಿಗಳೇ ಗಮನಿಸಿ : ಅ. 31ರೊಳಗೆ ದಾಖಲೆ ಸಲ್ಲಿಸದಿದ್ದರೆ ಉಚಿತ ವಿದ್ಯುತ್ ಕಟ್!ರಮಾದೇವಿ ಮಾದರಿಯಲ್ಲಿ ರಾಜಭವನ ಮುಕ್ತಗೊಳಿಸಿ: ರಾಜ್ಯಪಾಲರಿಗೆ ರಮೇಶ್ ಬಾಬು ಬಹಿರಂಗ ಪತ್ರಹಬ್ಬದ ನೆಪದಲ್ಲಿ ಮಧ್ಯರಾತ್ರಿವರೆಗೂ ಪಟಾಕಿ ಸಿಡಿಸಿ, ಸಾಂಗ್ಸ್ ಹಾಕಿ ಸಂಭ್ರಮಾಚರಣೆ: ನಟಿ ರಮ್ಯಾ ಆಕ್ರೋಶಬಿಕಾನೇರ್ ಹೌಸ್‌ನಲ್ಲಿ ರೈಹಾನ್ ವಾದ್ರಾ ಅವರ ಪ್ರತಿಭಟನೆಯ ಛಾಯಾಚಿತ್ರಗಳಿಗೆ ಕತ್ತರಿ: ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಹೊಸ ವಿವಾದ