LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಕೇರಳ ತಂಡಕ್ಕೆ ಸಂಜು ಸ್ಯಾಮ್ಸನ್ ನಾಯಕ!

ತಿರುವನಂತಪುರಂ: ಮುಂಬರುವ 2026-27ರ ಸಾಲಿನ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ ಸಂಜು ಸ್ಯಾಮ್ಸನ್ ಅವರನ್ನು ಕೇರಳ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ತಮ್ಮ 32ನೇ ಜನ್ಮದಿನದ ಮುನ್ನಾದಿನದಂದು ಸ್ಯಾಮ್ಸನ್ ಅವರಿಗೆ ಈ ಜವಾಬ್ದಾರಿ ಲಭಿಸಿದೆ.

ಕೇರಳ ತಂಡವು ನವೆಂಬರ್ 14 ರಂದು ನ್ಯೂ ಚಂಡೀಗಢದ ಪಿಸಿಎ ಕ್ರೀಡಾಂಗಣದಲ್ಲಿ ಮಧ್ಯಪ್ರದೇಶ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ. ರೆಡ್ ಬಾಲ್ ತಂಡದ ನಾಯಕ ವಿಷ್ಣು ವಿನೋದ್ ಹಾಗೂ ಅನುಭವಿ ಆಲ್‌ರೌಂಡರ್ ಜಲಜ್ ಸಕ್ಸೇನಾ 18 ಸದಸ್ಯರ ಈ ಬಲಿಷ್ಠ ಬಳಗದಲ್ಲಿದ್ದಾರೆ.

ಇತ್ತೀಚೆಗೆ ನಡೆದ ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಯುವ ಆಟಗಾರರಾದ ಅಹಮ್ಮದ್ ಇಮ್ರಾನ್ ಹಾಗೂ ಗೋವಿಂದ್ ದೇವ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದರೊಂದಿಗೆ ಬೌಲಿಂಗ್ ವಿಭಾಗದಲ್ಲಿ ಕೆಎಮ್ ಆಸಿಫ್ ಹಾಗೂ ವಿಘ್ನೇಶ್ ಪೂತೂರ್ ಕೂಡ ಆಯ್ಕೆಯಾಗಿದ್ದಾರೆ.

ಕಳೆದ ಆವೃತ್ತಿಯಲ್ಲಿ ಸ್ಯಾಮ್ಸನ್ ಸಾರಥ್ಯದಲ್ಲೇ ಕಣಕ್ಕಿಳಿದಿದ್ದ ಕೇರಳ ತಂಡವು ಗ್ರೂಪ್ ಹಂತದಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ನಾಕೌಟ್ ಪ್ರವೇಶಿಸಲು ವಿಫಲವಾಗಿತ್ತು. ಈ ಬಾರಿ ಗ್ರೂಪ್ ಸಿ ಯಲ್ಲಿರುವ ಕೇರಳ, ಮಧ್ಯಪ್ರದೇಶ, ಆಂಧ್ರಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಪುದುಚೇರಿ ಮತ್ತು ತ್ರಿಪುರಾ ತಂಡಗಳ ವಿರುದ್ಧ ಸೆಣಸಲಿದೆ.

ಭಾರತದ ಟಿ20 ವಿಶ್ವಕಪ್ ಗೆಲುವಿನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಸಂಜು ಸ್ಯಾಮ್ಸನ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರ ನಾಯಕತ್ವದಲ್ಲಿ ಕೇರಳ ತಂಡ ಈ ಬಾರಿ ಶುಭಾರಂಭ ಮಾಡುವ ನಿರೀಕ್ಷೆಯಿದೆ.

ಕೇರಳ ಸೈಯದ್ ಮುಷ್ತಾಕ್ ಅಲಿ ತಂಡ:

ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್ ಕೀಪರ್), ರೋಹನ್ ಕುನ್ನುಮ್ಮಲ್, ಮೊಹಮ್ಮದ್ ಅಜರುದ್ದೀನ್, ಅಹಮ್ಮದ್ ಇಮ್ರಾನ್, ಗೋವಿಂದ್ ದೇವ್, ಕೃಷ್ಣ ದೇವನ್, ವಿಷ್ಣು ವಿನೋದ್, ಸಲ್ಮಾನ್ ನಿಜಾರ್, ಅಖಿಲ್ ಸಕಾರಿಯಾ, ನಿಖಿಲ್ ಎಂ, ವಿಘ್ನೇಶ್ ಪೂತೂರ್, ಬಿಜು ನಾರಾಯಣನ್, ಕಾರ್ತಿಕ್ ಬಿ ನಾಯರ್, ವೈಶಾಖ್ ಚಂದ್ರನ್, ಕೆಎಂ ಆಸಿಫ್, ನಿಧೀಶ್ ಎಂಡಿ, ಶರಾಫುದ್ದೀನ್ ಎನ್‌ಎಂ, ಜಲಜ್ ಸಕ್ಸೇನಾ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಿಳಾ ಮೀಸಲಾತಿ ಮಸೂದೆಗಾಗಿ ಸಂಸತ್ತಿನ ವಿಶೇಷ ಅಧಿವೇಶನ ನಡೆಯುವ ಸಾಧ್ಯತೆ; ಮಸೂದೆ ಅಂಗೀಕಾರದ ವಿಶ್ವಾಸದಲ್ಲಿ ಕೇಂದ್ರ ಸರ್ಕಾರಆರನೇ ತರಗತಿ ವಿದ್ಯಾರ್ಥಿನಿ ಮೇಲೆ ಐದನೇ ತರಗತಿಯ ವಿದ್ಯಾರ್ಥಿಯಿಂದ ಹಲ್ಲೆ: 14 ದಿನಗಳ ಸಾವು-ಬದುಕಿನ ಹೋರಾಟದ ಬಳಿಕ ಮೃತಪಟ್ಟ ಬಾಲಕಿಅಮಿತಾಬ್ ಬಚ್ಚನ್ ಅವರ ಜಲ್ಸಾ ಮನೆ ಮಾಲೀಕತ್ವದ ಬಗ್ಗೆ ಪ್ರಶ್ನೆ: ಸಹೋದರನ ಪತ್ನಿಯಿಂದ ದೂರು ದಾಖಲು‘ಪಾನ್ ಕಾರ್ಡ್’ ಬಳಕೆದಾರರಿಗೆ ಬಿಗ್ ಅಲರ್ಟ್! ಈ 5 ನಿಯಮಗಳು ಗೊತ್ತಿಲ್ಲದಿದ್ದರೆ ₹10,000 ದಂಡ ಕಟ್ಟಬೇಕಾಗಬಹುದು!ರೈಲಿನಲ್ಲಿ ಭೀಕರ ಕೃತ್ಯ: ‘ಬ್ಯಾಡ್ ಟಚ್’ ಪ್ರಶ್ನಿಸಿದ ಯುವತಿಯನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಕಾಮುಕ!ನೇಪಾಳದಲ್ಲಿ ಘೋರ ದುರಂತ ; ಕಂದಕಕ್ಕೆ ಎಲೆಕ್ಟ್ರಿಕ್ ಬಸ್ ಉರುಳಿಬಿದ್ದು 10 ಮಂದಿ ಸಾವುದುನಿಯಾ ವಿಜಯ್ ಬಗ್ಗೆ ಅವಹೇಳನಕಾರಿ ಹೇಳಿಕೆ; ತಮಿಳು ನಟನ ವಿರುದ್ಧ ಕನ್ನಡಿಗರ ಆಕ್ರೋಶ, ಕ್ಷಮೆಗೆ ಪಟ್ಟು!ಪಂಜಾಬ್‌ನಲ್ಲಿ ಐಎಸ್‌ಐ ಪ್ರಭಾವದ ಶಂಕೆಮೋದಿ ಅವರನ್ನು ಹೊಗಳಿದ ಸ್ಯಾಮ್ ಪಿತ್ರೋಡಾಕುಲ್ಗಾಮ್ ಸಿಆರ್‌ಪಿಎಫ್ ದಾಳಿ