LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮುಂಬೈ ಇಂಡಿಯನ್ಸ್ ನಾಯಕತ್ವದ ಖಾಲಿ ಕುರ್ಚಿ: ಮುಂದಿನ ಸಾರಥಿ ಯಾರೆಂಬ ಕುತೂಹಲ!

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಮುಂಬರುವ ಐಪಿಎಲ್ ಆವೃತ್ತಿಗೂ ಮುನ್ನ ದೊಡ್ಡ ಬದಲಾವಣೆಗೆ ಮುಂದಾಗಿದೆ. ತಂಡದ ಪ್ರಮುಖ ಆಲ್‌ರೌಂಡರ್ ಹಾಗೂ ಕಳೆದ ಎರಡು ಸೀಸನ್‌ಗಳ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ಟ್ರೇಡ್ ಮಾಡಿಕೊಳ್ಳಲಾಗಿದ್ದು, ಪ್ರತಿಯಾಗಿ ಭಾರತದ ಸ್ಟಾರ್ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರನ್ನು ಮುಂಬೈ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಈ ದಿಢೀರ್ ಬೆಳವಣಿಗೆಯಿಂದಾಗಿ ಐದು ಬಾರಿಯ ಚಾಂಪಿಯನ್ಸ್ ಶಿಬಿರದಲ್ಲಿ ಸಾರಥ್ಯದ ಪ್ರಶ್ನೆ ಎದ್ದಿದ್ದು, ಹೊಸ ನಾಯಕನ ಆಯ್ಕೆಗಾಗಿ ಯಾವುದೇ ಯದ್ವಾತದ್ವಾ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ. ನವೆಂಬರ್ 17 ರಂದು ನಡೆಯಲಿರುವ ಆಟಗಾರರ ಉಳಿಸಿಕೊಳ್ಳುವಿಕೆ ಪ್ರಕ್ರಿಯೆ ಹಾಗೂ ಡಿಸೆಂಬರ್ 16 ರಂದು ಗೋವಾದಲ್ಲಿ ನಡೆಯಲಿರುವ ಮಿನಿ ಹರಾಜಿಗೂ ಮುನ್ನ ನಾಯಕನ ವಿಚಾರದಲ್ಲಿ ಗಂಭೀರ ಚಿಂತನೆ ನಡೆಸುವುದಾಗಿ ತಂಡದ ಮ್ಯಾನೇಜ್‌ಮೆಂಟ್ ತಿಳಿಸಿದೆ. ಮುಂಬರುವ ದಿನಗಳಲ್ಲಿ ಸೂಕ್ತ ಸಮಯದಲ್ಲಿ ಹೊಸ ನಾಯಕನ ಹೆಸರನ್ನು ಅಧಿಕೃತವಾಗಿ ಪ್ರಕಟಿಸುವುದಾಗಿ ಫ್ರಾಂಚೈಸಿ ವರದಿ ತಿಳಿಸಿದೆ.

ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಸುದೀರ್ಘ ಹಾಗೂ ಸ್ಮರಣೀಯ ಒಡನಾಟವನ್ನು ಹೊಂದಿದ್ದರು. 2015 ರಲ್ಲಿ ಯುವ ಆಟಗಾರನಾಗಿ ತಂಡ ಪ್ರವೇಶಿಸಿದ್ದ ಅವರು, ನಾಲ್ಕು ಐಪಿಎಲ್ ಟ್ರೋಫಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಗುಜರಾತ್ ಟೈಟಾನ್ಸ್ ತಂಡ ಸೇರಿ ಯಶಸ್ಸು ಕಂಡಿದ್ದ ಅವರು, 2024 ರಲ್ಲಿ ಮರಳಿ ಮುಂಬೈ ಕ್ಯಾಪ್ಟನ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಹೊಸ ಒಪ್ಪಂದದ ಪ್ರಕಾರ ಹಾರ್ದಿಕ್ ಪಾಂಡ್ಯ ಅವರ ಸಂಭಾವನೆ 18 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಮತ್ತೊಂದೆಡೆ, ಕಳೆದ ಎಂಟು ಸೀಸನ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಈಗ ಮುಂಬೈ ಇಂಡಿಯನ್ಸ್ ಪಾಳಯಕ್ಕೆ ಕಾಲಿಟ್ಟಿದ್ದಾರೆ. ಪಂಜಾಬ್ ಪರ 96 ಪಂದ್ಯಗಳಿಂದ 111 ವಿಕೆಟ್ ಕಬಳಿಸಿ ಸಾರ್ವಕಾಲಿಕ ಗರಿಷ್ಠ ವಿಕೆಟ್ ಟೇಕರ್ ಎನಿಸಿರುವ ಅವರು, 18 ಕೋಟಿ ರೂ. ಮೊತ್ತಕ್ಕೆ ಮುಂಬೈ ತಂಡಕ್ಕೆ ವರ್ಗಾವಣೆಗೊಂಡಿದ್ದಾರೆ. ಜಸ್ಪ್ರಿತ್ ಬುಮ್ರಾ ಜತೆಗೆ ಅರ್ಷದೀಪ್ ಸಿಂಗ್ ಸಾಥ್ ನೀಡಲಿದ್ದು, ಮುಂಬೈ ತಂಡದ ವೇಗದ ಬೌಲಿಂಗ್ ದಳ ಇನ್ನಷ್ಟು ಬಲಗೊಳ್ಳಲಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಿಳಾ ಮೀಸಲಾತಿ ಮಸೂದೆಗಾಗಿ ಸಂಸತ್ತಿನ ವಿಶೇಷ ಅಧಿವೇಶನ ನಡೆಯುವ ಸಾಧ್ಯತೆ; ಮಸೂದೆ ಅಂಗೀಕಾರದ ವಿಶ್ವಾಸದಲ್ಲಿ ಕೇಂದ್ರ ಸರ್ಕಾರಆರನೇ ತರಗತಿ ವಿದ್ಯಾರ್ಥಿನಿ ಮೇಲೆ ಐದನೇ ತರಗತಿಯ ವಿದ್ಯಾರ್ಥಿಯಿಂದ ಹಲ್ಲೆ: 14 ದಿನಗಳ ಸಾವು-ಬದುಕಿನ ಹೋರಾಟದ ಬಳಿಕ ಮೃತಪಟ್ಟ ಬಾಲಕಿಅಮಿತಾಬ್ ಬಚ್ಚನ್ ಅವರ ಜಲ್ಸಾ ಮನೆ ಮಾಲೀಕತ್ವದ ಬಗ್ಗೆ ಪ್ರಶ್ನೆ: ಸಹೋದರನ ಪತ್ನಿಯಿಂದ ದೂರು ದಾಖಲು‘ಪಾನ್ ಕಾರ್ಡ್’ ಬಳಕೆದಾರರಿಗೆ ಬಿಗ್ ಅಲರ್ಟ್! ಈ 5 ನಿಯಮಗಳು ಗೊತ್ತಿಲ್ಲದಿದ್ದರೆ ₹10,000 ದಂಡ ಕಟ್ಟಬೇಕಾಗಬಹುದು!ರೈಲಿನಲ್ಲಿ ಭೀಕರ ಕೃತ್ಯ: ‘ಬ್ಯಾಡ್ ಟಚ್’ ಪ್ರಶ್ನಿಸಿದ ಯುವತಿಯನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಕಾಮುಕ!ನೇಪಾಳದಲ್ಲಿ ಘೋರ ದುರಂತ ; ಕಂದಕಕ್ಕೆ ಎಲೆಕ್ಟ್ರಿಕ್ ಬಸ್ ಉರುಳಿಬಿದ್ದು 10 ಮಂದಿ ಸಾವುದುನಿಯಾ ವಿಜಯ್ ಬಗ್ಗೆ ಅವಹೇಳನಕಾರಿ ಹೇಳಿಕೆ; ತಮಿಳು ನಟನ ವಿರುದ್ಧ ಕನ್ನಡಿಗರ ಆಕ್ರೋಶ, ಕ್ಷಮೆಗೆ ಪಟ್ಟು!ಪಂಜಾಬ್‌ನಲ್ಲಿ ಐಎಸ್‌ಐ ಪ್ರಭಾವದ ಶಂಕೆಮೋದಿ ಅವರನ್ನು ಹೊಗಳಿದ ಸ್ಯಾಮ್ ಪಿತ್ರೋಡಾಕುಲ್ಗಾಮ್ ಸಿಆರ್‌ಪಿಎಫ್ ದಾಳಿ