LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾನು ಹುಟ್ಟಿದಾಗಿನಿಂದಲೂ ಹೀಗೆಯೇ ಇದ್ದೇನೆ ಎನ್ನುವುದು ಮೂರ್ಖತನ ಕಾಸ್ಮೆಟಿಕ್ ಸರ್ಜರಿ ಬಗ್ಗೆ ಖಡಕ್ ಮಾತುಗಳನ್ನಾಡಿದ ಶ್ರುತಿ ಹಾಸನ್!

ಚಿತ್ರರಂಗದಲ್ಲಿ ಅನೇಕ ನಟಿಯರು ತಾವು ಸೌಂದರ್ಯವರ್ಧಕ ಚಿಕಿತ್ಸೆ ಅಥವಾ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದರೂ ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಹಿಂಜರಿಯುತ್ತಾರೆ. ಆದರೆ ಬಹುಭಾಷಾ ನಟಿ ಶ್ರುತಿ ಹಾಸನ್ ಮಾತ್ರ ಈ ವಿಚಾರದಲ್ಲಿ ಎಂದಿಗೂ ಮುಚ್ಚುಮರೆ ಮಾಡಿದವರಲ್ಲ. ಇತ್ತೀಚೆಗೆ ಬಾಲಿವುಡ್ ನಟಿ ನೇಹಾ ಧೂಪಿಯಾ ಅವರ ವ್ಲಾಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರುತಿ, ತಾವು ಮಾಡಿಸಿಕೊಂಡಿರುವ ಕಾಸ್ಮೆಟಿಕ್ ಚಿಕಿತ್ಸೆಗಳ ಬಗ್ಗೆ ಅತ್ಯಂತ ಮುಕ್ತವಾಗಿ ಮತ್ತು ನೇರವಾಗಿ ಮಾತನಾಡಿದ್ದಾರೆ.

ತಮ್ಮ ಮುಖದ ಸೌಂದರ್ಯಕ್ಕೆ ಮಾಡಿಸಿಕೊಂಡಿರುವ ಬದಲಾವಣೆಗಳ ಕುರಿತು ಪ್ರತಿಕ್ರಿಯಿಸಿದ ಶ್ರುತಿ ಹಾಸನ್, ನಾನು ಜನರ ಕಣ್ಣಮುಂದೆಯೇ ಬೆಳೆದವಳು ಮತ್ತು ನನ್ನಲ್ಲಿ ಆಗಿರುವ ಬದಲಾವಣೆಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಹೀಗಿರುವಾಗ ಸತ್ಯವನ್ನು ಮರೆಮಾಚಿ ಸುಳ್ಳು ಹೇಳುವುದು ಅತ್ಯಂತ ಮೂರ್ಖತನದ ಕೆಲಸ ಎಂದು ಅಭಿಪ್ರಾಯಪಟ್ಟಿದ್ದಾರೆ. ಚಿಕಿತ್ಸೆ ಮಾಡಿಸಿಕೊಳ್ಳುವವರ ಬಗ್ಗೆ ತಮಗೆ ಯಾವುದೇ ತಕರಾರಿಲ್ಲ, ಆದರೆ ಮೂರು ವಾರಗಳ ಹಿಂದೆ ಬೇರೆಯದೇ ರೀತಿ ಕಾಣಿಸುತ್ತಿದ್ದವರು ಈಗ ನಾನು ಹುಟ್ಟಿದಾಗಿನಿಂದಲೂ ಹೀಗೆಯೇ ಇದ್ದೇನೆ ಎಂದು ವಾದಿಸುವುದು ಹಾಸ್ಯಾಸ್ಪದವಾಗಿರುತ್ತದೆ ಎಂದು ಅವರು ಕುಟುಕಿದ್ದಾರೆ.

ತಾವು ಕಾಸ್ಮೆಟಿಕ್ ಚಿಕಿತ್ಸೆಗೆ ಒಳಗಾಗಿದ್ದರೂ ಸಹ ಅದನ್ನು ಯಾರಿಗೂ ಪ್ರಚಾರ ಮಾಡಲು ಬಯಸುವುದಿಲ್ಲ ಎಂದು ಶ್ರುತಿ ಸ್ಪಷ್ಟಪಡಿಸಿದ್ದಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಯಕ್ತಿಕ ಇಷ್ಟಾನಿಷ್ಟಗಳಿರುತ್ತವೆ, ಆದರೆ ಇಂತಹ ಚಿಕಿತ್ಸೆಗಳು ತುಂಬಾ ನೋವಿನಿಂದ ಕೂಡಿರುತ್ತವೆ. ಆದ್ದರಿಂದ ಯಾರಾದರೂ ಈ ಬಗ್ಗೆ ಆಲೋಚಿಸುತ್ತಿದ್ದರೆ ಬೇರೆಯವರ ಸಲಹೆ ಕೇಳುವ ಬದಲು ಸ್ವತಃ ಸಂಶೋಧನೆ ನಡೆಸಿ, ನುರಿತ ವೈದ್ಯರನ್ನು ಸಂಪರ್ಕಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.

ಇದೇ ವೇಳೆ ಸತ್ಯವನ್ನು ಒಪ್ಪಿಕೊಂಡಿದ್ದಕ್ಕಾಗಿ ತಾವು ಎದುರಿಸಿದ ಟೀಕೆಗಳ ಬಗ್ಗೆಯೂ ಶ್ರುತಿ ಹಾಸನ್ ಮನಬಿಚ್ಚಿ ಮಾತನಾಡಿದ್ದಾರೆ. ತಾವು ಸರ್ಜರಿ ಬಗ್ಗೆ ಬಹಿರಂಗವಾಗಿ ಮಾತನಾಡಿದಾಗ ಅನೇಕರು ತಮ್ಮನ್ನು ಪ್ಲಾಸ್ಟಿಕ್ ಸರ್ಜರಿ ಅಂಗಡಿ ಎಂದು ಗೇಲಿ ಮಾಡಿದ್ದರು. ಆದರೆ ತಾವೇನು ಮಾಡಿಸಿಕೊಂಡಿದ್ದೇನೆ ಎಂಬುದು ತಮಗೆ ಚೆನ್ನಾಗಿ ತಿಳಿದಿದೆ ಮತ್ತು ಇತರರು ಎಷ್ಟೆಲ್ಲಾ ಮಾಡಿಸಿಕೊಂಡಿದ್ದಾರೆ ಎಂಬುದೂ ಗೊತ್ತಿದೆ ಎಂದಿದ್ದಾರೆ. ಸತ್ಯ ಮಾತನಾಡಿದಾಗ ಜನರು ಬೆರಳು ಮಾಡಿ ತೋರಿಸುವುದು ಸಹಜ, ಆದರೆ ಪ್ರಾಮಾಣಿಕತೆಗೆ ತೆರಬೇಕಾದ ಈ ಬೆಲೆ ತಮಗೆ ಖುಷಿ ಕೊಟ್ಟಿದೆ ಎಂದು ಶ್ರುತಿ ಹಾಸನ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಕ್ರಿಕೆಟ್ ಗೆ ಅದ್ಭುತ ದಿನ: ಪಾಕ್ ವಿರುದ್ಧ ರೋಚಕ ಗೆಲುವು ಕಂಡ ಭಾರತ U19 ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆಆಪರೇಷನ್ ಸಿಂದೂರ್ ಬಳಿಕ ಇದೇ ಮೊದಲ ಬಾರಿ ದೆಹಲಿಗೆ ಪಾಕ್ ಸಚಿವ ಭೇಟಿ: ಎಸ್ಸಿಒ ಸಭೆಯಲ್ಲಿ ಭಾಗಿಶಾಕಿಂಗ್ ! ಕಂದನ ಜೀವ ತೆಗೆದ ಡಿಜೆ ಮ್ಯೂಸಿಕ್: ಅತಿಯಾದ ಶಬ್ದಕ್ಕೆ ಹೃದಯ ಸ್ತಂಭನದಿಂದ 20 ದಿನದ ಮಗು ಸಾವುರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ: ರದ್ದಾಗುತ್ತಾ ದಶಕಗಳಷ್ಟು ಹಳೆಯ RAC ವ್ಯವಸ್ಥೆ? ರೈಲ್ವೆ ಇಲಾಖೆಯಿಂದ ಮಹತ್ವದ ಚಿಂತನೆಪಾಕಿಸ್ತಾನದ ವಿರುದ್ಧ ರೋಚಕ ಜಯ ಸಾಧಿಸಿದ ಭಾರತಕ್ಕೆ U19 ಏಷ್ಯಾ ಕಪ್ಒಮೆಗಾ-3 ಸಪ್ಲಿಮೆಂಟ್ಸ್ ಮೂರು ತಿಂಗಳೊಳಗೆ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು: ಅಧ್ಯಯನದ ವರದಿ600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ತೆಲುಗು ನಟ ಗಿರಿಬಾಬು ನಿಧನ; ಚಿರಂಜೀವಿ, ಚಂದ್ರಬಾಬು ನಾಯ್ಡು ಶ್ರದ್ಧಾಂಜಲಿನವೆಂಬರ್ 16 ರಿಂದ ‘ನಮೋ ಭಾರತ್’ ರೈಲು ಸೇವೆಯಲ್ಲಿ 8 ಹೆಚ್ಚುವರಿ ವೇಗದ ರೈಲುಗಳು ಸೇರ್ಪಡೆ; ಮಾರ್ಗಗಳು, ಸಮಯ ಮತ್ತು ಪ್ರಯಾಣದ ಅವಧಿಯ ವಿವರ ಇಲ್ಲಿದೆಕ್ಯಾನ್ಸರ್ ಚಿಕಿತ್ಸೆಯಲ್ಲಿ ರಷ್ಯಾದ ಮಹತ್ವದ ಹೆಜ್ಜೆ: ವೈಯಕ್ತಿಕ ಲಸಿಕೆ ಪಡೆದ ಮೊದಲ ರೋಗಿಯ ದೇಹದಲ್ಲಿ ಕ್ಯಾನ್ಸರ್ ಗಡ್ಡೆಗಳು ಮಾಯ1993ರ ಉಡುಗೊರೆ ಪತ್ರ ಪ್ರಶ್ನಿಸಿದ ರಮೋಲಾ ಬಚ್ಚನ್