LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಂಕ್ರಾಂತಿ ಅಖಾಡಕ್ಕೆ ಲಗ್ಗೆಯಿಡಲು ಸಜ್ಜಾದ ಕಾಕಾ: ಡಿಸೆಂಬರ್ ಮೊದಲ ವಾರದಿಂದಲೇ ಮೆಗಾ ಪ್ರಚಾರ ಆರಂಭ

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಟನೆಯ ಮುಂಬರುವ ಬಹುನಿರೀಕ್ಷಿತ ಕಾಕಾ ಸಿನಿಮಾದ ಪ್ರಚಾರದ ಕುರಿತು ಸಂಗೀತ ನಿರ್ದೇಶಕ ಎಸ್ ಎಸ್ ತಮನ್ ಮಹತ್ವದ ಸುಳಿವು ನೀಡಿದ್ದಾರೆ. ವಾಲ್ತೇರು ವೀರಯ್ಯ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಮೆಗಾಸ್ಟಾರ್ ಚಿರಂಜೀವಿ ಮತ್ತು ನಿರ್ದೇಶಕ ಬಾಬಿ ಜೋಡಿ ಮತ್ತೊಮ್ಮೆ ಒಂದಾಗಿದ್ದು, ಈ ಗ್ಯಾಂಗ್ ಸ್ಟರ್ ಆಕ್ಷನ್ ಡ್ರಾಮಾ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಹುಟ್ಟಿಕೊಂಡಿದೆ.

ಮುಂಬರುವ 2027ರ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಅಂದರೆ ಜನವರಿ 13ರಂದು ಸಿನಿಮಾ ತೆರೆಕಾಣಲಿದೆ. ಅದಕ್ಕೂ ಮುಂಚಿತವಾಗಿ ಡಿಸೆಂಬರ್ 1ರಿಂದ ಚಿತ್ರದ ಪ್ರಚಾರದ ಅಬ್ಬರ ಅಧಿಕೃತವಾಗಿ ಆರಂಭವಾಗಲಿದೆ ಎಂದು ತಮನ್ ತಿಳಿಸಿದ್ದಾರೆ. ಡಿಸೆಂಬರ್ ಮೊದಲ ವಾರದಿಂದ ಸಾಲು ಸಾಲು ಪ್ರಚಾರದ ಕಂಟೆಂಟ್ ಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

ಕೆವಿಎನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೆಂಕಟ್ ಕೆ ನಾರಾಯಣ್ ಭರ್ಜರಿ ಬಜೆಟ್ ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕೋನಾ ವೆಂಕಟ್ ಅವರು ಈ ಚಿತ್ರಕ್ಕೆ ಚಿತ್ರಕಥೆ ಒದಗಿಸುತ್ತಿದ್ದು, ಅನುರಾಗ್ ಕಶ್ಯಪ್, ಅನಸ್ವಾರ ರಾಜನ್, ನಿವೇತಾ ಪೆಥುರಾಜ್ ಮತ್ತು ಸುನಿಲ್ ಸೇರಿದಂತೆ ಪ್ರಮುಖ ತಾರಾಗಣ ಈ ಚಿತ್ರದಲ್ಲಿದೆ. ಶಂಕ್ರಾಂತಿ ಅಖಾಡದಲ್ಲಿ ಮೆಗಾಸ್ಟಾರ್ ಆರ್ಭಟ ಹೇಗಿರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಕ್ರಿಕೆಟ್ ಗೆ ಅದ್ಭುತ ದಿನ: ಪಾಕ್ ವಿರುದ್ಧ ರೋಚಕ ಗೆಲುವು ಕಂಡ ಭಾರತ U19 ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆಆಪರೇಷನ್ ಸಿಂದೂರ್ ಬಳಿಕ ಇದೇ ಮೊದಲ ಬಾರಿ ದೆಹಲಿಗೆ ಪಾಕ್ ಸಚಿವ ಭೇಟಿ: ಎಸ್ಸಿಒ ಸಭೆಯಲ್ಲಿ ಭಾಗಿಶಾಕಿಂಗ್ ! ಕಂದನ ಜೀವ ತೆಗೆದ ಡಿಜೆ ಮ್ಯೂಸಿಕ್: ಅತಿಯಾದ ಶಬ್ದಕ್ಕೆ ಹೃದಯ ಸ್ತಂಭನದಿಂದ 20 ದಿನದ ಮಗು ಸಾವುರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ: ರದ್ದಾಗುತ್ತಾ ದಶಕಗಳಷ್ಟು ಹಳೆಯ RAC ವ್ಯವಸ್ಥೆ? ರೈಲ್ವೆ ಇಲಾಖೆಯಿಂದ ಮಹತ್ವದ ಚಿಂತನೆಪಾಕಿಸ್ತಾನದ ವಿರುದ್ಧ ರೋಚಕ ಜಯ ಸಾಧಿಸಿದ ಭಾರತಕ್ಕೆ U19 ಏಷ್ಯಾ ಕಪ್ಒಮೆಗಾ-3 ಸಪ್ಲಿಮೆಂಟ್ಸ್ ಮೂರು ತಿಂಗಳೊಳಗೆ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು: ಅಧ್ಯಯನದ ವರದಿ600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ತೆಲುಗು ನಟ ಗಿರಿಬಾಬು ನಿಧನ; ಚಿರಂಜೀವಿ, ಚಂದ್ರಬಾಬು ನಾಯ್ಡು ಶ್ರದ್ಧಾಂಜಲಿನವೆಂಬರ್ 16 ರಿಂದ ‘ನಮೋ ಭಾರತ್’ ರೈಲು ಸೇವೆಯಲ್ಲಿ 8 ಹೆಚ್ಚುವರಿ ವೇಗದ ರೈಲುಗಳು ಸೇರ್ಪಡೆ; ಮಾರ್ಗಗಳು, ಸಮಯ ಮತ್ತು ಪ್ರಯಾಣದ ಅವಧಿಯ ವಿವರ ಇಲ್ಲಿದೆಕ್ಯಾನ್ಸರ್ ಚಿಕಿತ್ಸೆಯಲ್ಲಿ ರಷ್ಯಾದ ಮಹತ್ವದ ಹೆಜ್ಜೆ: ವೈಯಕ್ತಿಕ ಲಸಿಕೆ ಪಡೆದ ಮೊದಲ ರೋಗಿಯ ದೇಹದಲ್ಲಿ ಕ್ಯಾನ್ಸರ್ ಗಡ್ಡೆಗಳು ಮಾಯ1993ರ ಉಡುಗೊರೆ ಪತ್ರ ಪ್ರಶ್ನಿಸಿದ ರಮೋಲಾ ಬಚ್ಚನ್