LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಖತ್ ಸೌಂಡ್ ಮಾಡ್ತಿದೆ ಮ್ಯಾರೇಜ್ ಪಾರ್ಟಿ ಚಿತ್ರದ ಹೊಸ ಹಾಡು; ಆನಂದ್ ಆಡಿಯೋದಲ್ಲಿ ಅಂದಗಾತಿಯೇ ಲಿರಿಕಲ್ ವೀಡಿಯೊ ರಿಲೀಸ್

ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಕುತೂಹಲ ಮೂಡಿಸುತ್ತಿರುವ ಮ್ಯಾರೇಜ್ ಪಾರ್ಟಿ ಸಿನಿಮಾದಿಂದ ಹೊಸ ಹಾಡೊಂದು ಹೊರಬಂದಿದೆ. ಚಿತ್ರದ ಬಹುನಿರೀಕ್ಷಿತ ಅಂದಗಾತಿಯೇ ಎಂಬ ಲಿರಿಕಲ್ ವಿಡಿಯೋ ಸಾಂಗ್ ಅನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ಮೂಲಕ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಕ್ಷಣದಿಂದಲೇ ಈ ಹಾಡು ಸಂಗೀತ ರಸಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಈ ಸುಂದರ ಗೀತೆಗೆ ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜನೆ ಮಾಡಿದ್ದು, ಖ್ಯಾತ ಗಾಯಕರಾದ ಕಪಿಲ್ ಕಪಿಲನ್ ಹಾಗೂ ಸುಮನ್ ನಾರಾಯಣ್ ತಮ್ಮ ಮಧುರ ಧ್ವನಿಯಲ್ಲಿ ಈ ಹಾಡಿಗೆ ಜೀವ ತುಂಬಿದ್ದಾರೆ. ಪ್ರಮೋದ್ ಮರವಂತೆ ಅವರ ಸಾಹಿತ್ಯವು ಹಾಡಿನ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ಗಿಟಾರ್ ಹಾಗೂ ವಿವಿಧ ವಾದ್ಯ ಸಾಧನಗಳ ಸುಂದರ ಸಂಯೋಜನೆಯು ಹಾಡಿಗೆ ಅತ್ಯುತ್ತಮ ಮೆಲೋಡಿ ಸ್ಪರ್ಶ ನೀಡಿದೆ.

ಚಯನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಶ್ರೀ ವರಾಹಿ ಫಿಲ್ಮ್ಸ್ ಲಾಂಚ್ ಅಡಿಯಲ್ಲಿ ಸಂತೋಷ್ ವಿ ಅವರು ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ವಿನೀತ್ ಕುಮಾರ್, ಪ್ರಕಾಶ್ ಕೆ ತುಮಿನಾಡು, ದೀಪಕ್ ರೈ ಪಣಜೆ, ನವೀನ್ ಡಿ ಪಡೀಲ್, ಮೈಮ್ ರಾಮದಾಸ್, ಪುಷ್ಪರಾಜ್ ಬೋಲಾರ್ ಸೇರಿದಂತೆ ಪ್ರತಿಭಾವಂತ ಕಲಾವಿದರ ದೊಡ್ಡ ತಾರಾಗಣವೇ ಇದೆ. ಮನರಂಜನೆಯ ಹಂದರವನ್ನು ಹೊಂದಿರುವ ಈ ಸಿನಿಮಾ ಮೇಲೆ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆಗಳಿದ್ದು, ಸದ್ಯ ಬಿಡುಗಡೆಯಾಗಿರುವ ಈ ಮ್ಯೂಜಿಕಲ್ ನಂಬರ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬ್ರಿಟಿಷ್ ಪೌರತ್ವ ಪಡೆದಿರುವುದಾಗಿ ಘೋಷಿಸಿದ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ: ಯುಕೆ ಈಗ ತಮ್ಮ ಮನೆಯಾಗಿದೆ ಎಂದು ಹೇಳಿಕೆಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: 2029ರ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲಿದೆ ಭಾರತ; ಬಾಂಗ್ಲಾದೇಶದೊಂದಿಗೆ 2031ರ ವಿಶ್ವಕಪ್ ಆತಿಥ್ಯಮಕ್ಕಳ ಭವಿಷ್ಯಕ್ಕೆ ಉಳಿತಾಯ: ಮಕ್ಕಳ ಹೆಸರಿನಲ್ಲಿ PPF ಖಾತೆ ತೆರೆಯಿರಿ; ಶಿಕ್ಷಣ, ಉನ್ನತ ವಿದ್ಯಾಭ್ಯಾಸಕ್ಕೆ ಸಿಗಲಿದೆ ದೊಡ್ಡ ಮೊತ್ತಅಮೆರಿಕದಲ್ಲಿ ವಿಮಾನಯಾನ ವ್ಯವಸ್ಥೆಗೆ ತಾಂತ್ರಿಕ ಸಂಕಷ್ಟ: ಹಳೆಯ ಏರ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆ ಬದಲಿಸಲು ಬೇಕಿದೆ 50 ಬಿಲಿಯನ್ ಡಾಲರ್ನಿಮ್ಮ ಬ್ಯಾಂಕ್ ಖಾತೆ ಈಗ ಇನ್ನಷ್ಟು ಸುರಕ್ಷಿತ: ಸೈಬರ್ ವಂಚನೆ ತಡೆಯಲು RBI ಹೊಸ ಅಸ್ತ್ರ: ಬ್ಯಾಂಕ್ ಗಳಿಗೆ 6 ಗಂಟೆಯೊಳಗೆ ವರದಿ ನಿಯಮ ಕಡ್ಡಾಯಛತ್ ಪೂಜೆ: ಭಕ್ತರಿಗಾಗಿ ನವೆಂಬರ್ 16 ರಂದು ಬೆಳಿಗ್ಗೆ 4.30 ಕ್ಕೆ ದೆಹಲಿ ಮೆಟ್ರೋ ಸೇವೆ ಆರಂಭ; ಪ್ರತಿ 15 ನಿಮಿಷಕ್ಕೊಂದು ರೈಲುಶಾಕಿಂಗ್ ನ್ಯೂಸ್: ಒಡಿಶಾದಲ್ಲಿ ಅಮಾನವೀಯ ಘಟನೆ: ಹಸಿವು ತಾಳದೇ ಸತ್ತ ನಾಯಿಯ ಅಂಗಾಂಗಗಳನ್ನು ತಿಂದ ವ್ಯಕ್ತಿಟಿ20 ಬಳಿಕ ಏಕದಿನ ಸರಣಿಯಲ್ಲೂ ಭಾರತದ ಅಧಿಪತ್ಯ; ಅಂತಿಮ ಪಂದ್ಯದಲ್ಲಿ ನ್ಯೂಜಿಲೆಂಡ್ ಮಣಿಸಿ ಸರಣಿ ವಶಪಡಿಸಿಕೊಂಡ ಭಾರತಪಾಕಿಸ್ತಾನ ಗ್ಯಾಲರಿಯಲ್ಲೂ ಮೊಳಗಿತು ಸೆಹ್ವಾಗ್ ಹೆಸರು; ಅಂಡರ್ 19 ಗೆಲುವಿನ ರೋಚಕ ಅನುಭವ ತಂದೆಯ ಬಳಿ ಬಿಚ್ಚಿಟ್ಟ ಆರ್ಯವೀರ್ತಿರುಪತಿ: ಹೈದರಾಬಾದ್ ವ್ಯಕ್ತಿಯಿಂದ ಟಿಟಿಡಿ ಅನ್ನಪ್ರಸಾದಂ ಟ್ರಸ್ಟ್ ಗೆ 10 ಕೋಟಿ ರೂ. ದೇಣಿಗೆ