LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಉಸ್ಮಾನ್ ಖವಾಜಾ ಕ್ರಿಕೆಟ್ ಲೋಕ ಕಂಡ ಅತಿ ದೊಡ್ಡ ದ್ರೋಹಿ: ಸ್ಯಾಂಡ್‌ಪೇಪರ್ ಗೇಟ್ ವಿವಾದಕ್ಕೆ ತುಪ್ಪ ಸುರಿದ ದಕ್ಷಿಣ ಆಫ್ರಿಕಾ ದಿಗ್ಗಜ!

ವಿಶ್ವ ಕ್ರಿಕೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದ್ದ 2018ರ ಆಸ್ಟ್ರೇಲಿಯಾ ತಂಡದ ಬಾಲ್ ಟ್ಯಾಂಪರಿಂಗ್ ಅಥವಾ ಸ್ಯಾಂಡ್‌ಪೇಪರ್ ಗೇಟ್ ವಿವಾದ ಎಂಟು ವರ್ಷಗಳ ಬಳಿಕ ಮತ್ತೆ ಭುಗಿಲೆದ್ದಿದೆ. ಮಾಜಿ ಬ್ಯಾಟರ್ ಉಸ್ಮಾನ್ ಖವಾಜಾ ತಮ್ಮ ಆತ್ಮಚರಿತ್ರೆಯಲ್ಲಿ ಈ ಪ್ರಕರಣದ ಕುರಿತು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ ಬೆನ್ನಲ್ಲೇ, ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಫ್ಯಾನಿ ಡಿ ವಿಲಿಯರ್ಸ್ ಅವರು ಖವಾಜಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಖವಾಜಾ ಅವರನ್ನು ತಾನು ಕಂಡ ಅತಿ ದೊಡ್ಡ ದ್ರೋಹಿ ಎಂದು ಕರೆದಿರುವ ಫ್ಯಾನಿ ಡಿ ವಿಲಿಯರ್ಸ್, ಸಹ ಆಟಗಾರರನ್ನು ಅವರು ಮಾರಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಪರ್ತ್‌ನ ರೇಡಿಯೋ ವಾಹಿನಿಯೊಂದರಲ್ಲಿ ಮಾತನಾಡಿದ ಅವರು, ಕಳೆದ ನಲವತ್ತೈವತ್ತು ವರ್ಷಗಳಿಂದ ಕ್ರಿಕೆಟ್ ನೋಡುತ್ತಿದ್ದೇನೆ, ಆದರೆ ಖವಾಜಾ ಅವರಂತಹ ದೊಡ್ಡ ದ್ರೋಹಿಯನ್ನು ನಾನು ನೋಡಿಲ್ಲ. ತಂಡದೊಳಗಿನ ಎಲ್ಲಾ ನೀತಿ ಸಂಹಿತೆಗಳನ್ನು ಅವರು ಮುರಿದಿದ್ದಾರೆ. ಮುಗಿದು ಹೋಗಿದ್ದ ಹಳೆಯ ವಿವಾದವನ್ನು ಮತ್ತೆ ಕೆದಕುವ ಮೂಲಕ ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಮತ್ತೊಮ್ಮೆ ಕಳಂಕ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಸಬ್ರ್ ಎಂಬ ಆತ್ಮಚರಿತ್ರೆಯಲ್ಲಿ ಉಸ್ಮಾನ್ ಖವಾಜಾ ಅವರು 2018ರ ದಕ್ಷಿಣ ಆಫ್ರಿಕಾ ಪ್ರವಾಸದ ಬಾಲ್ ಟ್ಯಾಂಪರಿಂಗ್ ಪ್ರಕರಣದ ಬಗ್ಗೆ ಹಲವು ಸಂಗತಿಗಳನ್ನು ಬರೆದುಕೊಂಡಿದ್ದಾರೆ. ಅಂದು ಕೇವಲ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಮಾತ್ರವಲ್ಲದೆ, ತಂಡದಲ್ಲಿದ್ದ ಪ್ರತಿಯೊಬ್ಬರಿಗೂ ಚೆಂಡು ವಿರೂಪಗೊಳಿಸುವ ವಿಷಯ ತಿಳಿದಿತ್ತು. ಹೀಗಾಗಿ ಇಡೀ ತಂಡ ಇದರ ಸಾಮೂಹಿಕ ಹೊಣೆ ಹೊರಬೇಕು ಎಂದು ಖವಾಜಾ ಪ್ರತಿಪಾದಿಸಿದ್ದಾರೆ. ಅಲ್ಲದೆ 2017-18ರ ಆಶಸ್ ಸರಣಿಯಲ್ಲೂ ಚೆಂಡಿನ ಸ್ಥಿತಿ ಬದಲಿಸಲಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ.

ಖವಾಜಾ ಅವರ ಈ ಹೇಳಿಕೆಗಳನ್ನು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಸಂಪೂರ್ಣ ಅಸಂಬದ್ಧ ಎಂದು ತಳ್ಳಿಹಾಕಿದ್ದರು. ಆದರೆ ಬುಧವಾರ ಪತ್ರಿಕೆಯೊಂದರಲ್ಲಿ ಸುದೀರ್ಘ ಲೇಖನ ಬರೆದಿರುವ ಕ್ಯಾಮರೂನ್ ಬ್ಯಾಂಕ್ರಾಫ್ಟ್, ಖವಾಜಾ ಅವರ ಮಾತುಗಳಿಗೆ ಧ್ವನಿಗೂಡಿಸಿದ್ದಾರೆ. ಚೆಂಡಿಗೆ ಸ್ಯಾಂಡ್‌ಪೇಪರ್ ಬಳಸುವ ವಿಚಾರ ತಂಡದ ಬಹುತೇಕ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಗೆ ತಿಳಿದಿತ್ತು ಹಾಗೂ ಅದಕ್ಕೆ ಪ್ರೋತ್ಸಾಹವೂ ಸಿಕ್ಕಿತ್ತು ಎಂದು ಬ್ಯಾಂಕ್ರಾಫ್ಟ್ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಪ್ಯಾಟ್ ಕಮಿನ್ಸ್ ಅವರ ಏಜೆಂಟ್ ನೀಲ್ ಮ್ಯಾಕ್ಸ್‌ವೆಲ್ ಪ್ರತಿಕ್ರಿಯಿಸಿದ್ದು, ಕಮಿನ್ಸ್ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದ್ದಾರೆ. ಮತ್ತೊಂದೆಡೆ ಎಂಟು ವರ್ಷಗಳ ಹಳೆಯ ಪ್ರಕರಣದ ಸತ್ಯಾಸತ್ಯತೆ ಮತ್ತು ಆಟಗಾರರ ಅನುಭವಗಳನ್ನು ಆಲಿಸಲು ಸ್ವತಂತ್ರ ವೇದಿಕೆಯೊಂದನ್ನು ರಚಿಸುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿದೆ. ಆದರೆ ಯಾರ ಮೇಲೂ ಹೊಸದಾಗಿ ಯಾವುದೇ ಶಿಕ್ಷೆ ವಿಧಿಸುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿನ್ನ ಖರೀದಿದಾರರಿಗೆ ಶುಭ ಶುಕ್ರವಾರ ಸತತ 2ನೇ ದಿನವೂ ಚಿನ್ನದ ಬೆಲೆ ಭಾರೀ ಇಳಿಕೆ, ಒಂದೇ ದಿನ ₹5,120 ಇಳಿಕೆಕೆನಡಾದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಗೋಲ್ಡಿ ಬ್ರಾರ್ ನಂ.1; ಪತ್ತೆಗೆ ₹11 ಕೋಟಿಗೂ ಅಧಿಕ ಬಹುಮಾನ!ಪ್ರಧಾನಿ ಮೋದಿ ಜೊತೆ ಮಹತ್ವದ ಮಾತುಕತೆ, ಹಲವು ಒಪ್ಪಂದಗಳ ನಿರೀಕ್ಷೆಚಳಿಗಾಲದ ಆರೋಗ್ಯ ಮಾರ್ಗದರ್ಶಿ: ಮನೆಯಲ್ಲಿ ನೆಗಡಿ ಮತ್ತು ಕೆಮ್ಮು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಯುವುದು ಹೇಗೆ? ವೈದ್ಯರ ಸಲಹೆವಾಹನದ ‘ಇನ್ಸೂರನ್ಸ್’ ಇಲ್ಲದಿದ್ದರೆ ಟೋಲ್ ಪ್ಲಾಜಾದಲ್ಲಿ ದಂಡ ಬೀಳುತ್ತಾ? NHAI ಮಹತ್ವದ ಸ್ಪಷ್ಟನೆ!ದಾಖಲೆಗಳ ಸರದಾರ ‘ರಾಮಾಯಣ’ ಕಲೆಕ್ಷನ್‌ನಲ್ಲಿ ಕುಸಿತ :15ನೇ ದಿನ ಗಳಿಸಿದ್ದೆಷ್ಟು ಗೊತ್ತಾ?ಸ್ಕೂಟರ್‌ಗೆ ಟ್ರಕ್ ಡಿಕ್ಕಿ: ಭೀಕರ ಅಪಘಾತದಲ್ಲಿ ಮಹಿಳೆ ಸ್ಥಳದಲ್ಲೇ ಸಾವು: ಘೋರ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಚುನಾವಣಾ ಆಯುಕ್ತರ (ಇಸಿ) ನೇಮಕಾತಿ ಅರ್ಜಿ ವಿಚಾರಣೆಗೆ ಸುಪ್ರೀಂ ನಿರಾಕರಣೆವೀಕೆಂಡ್‌ಗೆ ಸಿನಿಪ್ರಿಯರಿಗೆ ಭರ್ಜರಿ ಮನರಂಜನೆ: ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈಗ ಫ್ರೀಯಾಗಿ ನೋಡಿ ‘ದಿ ವಾನ್’ ಸಿನಿಮಾ!ಭಾರತ–ಪಾಕಿಸ್ತಾನ ಮಾತುಕತೆಗೆ ಉಗ್ರವಾದವೇ ಅಡ್ಡಿ! ಪಾಕ್ ವಿದ್ಯಾರ್ಥಿಗೆ ರಾಹುಲ್ ಗಾಂಧಿ ಖಡಕ್ ಉತ್ತರ