LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜಕೀಯ ಭಾಷಣದ ನಡುವೆ ಮದುವೆ ಪ್ರಸ್ತಾಪ: ಸಂಸತ್‌ನಲ್ಲಿ ಗೆಳತಿಗೆ ಪ್ರಪೋಸ್ ಮಾಡಿದ ಆಸ್ಟ್ರೇಲಿಯಾ ಸಂಸದ

ಸಾಮಾನ್ಯವಾಗಿ ಸಂಸತ್ ಭವನದಲ್ಲಿ ಗಂಭೀರ ರಾಜಕೀಯ ಚರ್ಚೆಗಳು, ವಾದ-ವಿವಾದಗಳು ನಡೆಯುತ್ತವೆ. ಆದರೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಸಂಸತ್ತಿನಲ್ಲಿ ನಡೆದ ಅಪರೂಪದ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ರೈಡ್ ಕ್ಷೇತ್ರದ ಸಂಸದ ಜೋರ್ಡಾನ್ ಲೇನ್ ಅವರು ತಮ್ಮ ಬೀಳ್ಕೊಡುಗೆ ಭಾಷಣದ ನಡುವೆಯೇ ಬಹುಕಾಲದ ಗೆಳತಿ ನಟಾಲಿ ಅವರಿಗೆ ಮದುವೆಯಾಗುವಂತೆ ಪ್ರಪೋಸ್ ಮಾಡಿದ್ದಾರೆ. ನಟಾಲಿ ಕೂಡ ಸಂತೋಷದಿಂದ ಒಪ್ಪಿಗೆ ಸೂಚಿಸಿದ್ದು, ಸದನದಲ್ಲಿ ಚಪ್ಪಾಳೆ ಮತ್ತು ಹರ್ಷೋದ್ಗಾರ ಮೊಳಗಿದೆ.

‘ನನ್ನ ಕೊನೆಯ ಪ್ರಶ್ನೆ ನನ್ನ ಪ್ರೀತಿಗೆ…’

ರೈಡ್ (Ryde) ಕ್ಷೇತ್ರದ 32 ವರ್ಷದ ಲಿಬರಲ್ ಪಕ್ಷದ ಸಂಸದ ಜೋರ್ಡಾನ್ ಲೇನ್ ಅವರು, 2027ರ ಮಾರ್ಚ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ರಾಜಕೀಯದಿಂದ ನಿವೃತ್ತರಾಗಲಿದ್ದಾರೆ ಎಂದು ಇತ್ತೀಚೆಗೆ ಘೋಷಿಸಿದ್ದರು. ಇದರ ಬೆನ್ನಲ್ಲೇ ನವೆಂಬರ್ 19ರಂದು ಸಂಸತ್ತಿನಲ್ಲಿ ತಮ್ಮ ಬೀಳ್ಕೊಡುಗೆ ಭಾಷಣ ಮಾಡುತ್ತಿದ್ದ ವೇಳೆ ಈ ವಿಶೇಷ ಘಟನೆ ನಡೆದಿದೆ.

ಸ್ಪೀಕರ್ ಅವರು ಭಾಷಣ ಮಾಡಲು ಅನುಮತಿ ನೀಡಿದ ಬಳಿಕ ಮಾತನಾಡಲು ಆರಂಭಿಸಿದ ಜೋರ್ಡಾನ್, ತಮ್ಮ ಜೀವನದಲ್ಲಿ ಪ್ರೀತಿ, ಕುಟುಂಬ ಮತ್ತು ರಾಜಕೀಯದ ಮಹತ್ವವನ್ನು ವಿವರಿಸಿದರು. ಪ್ರೀತಿ ಎನ್ನುವುದು ತೀವ್ರವಾದ ಭಾವನೆ. ಅದು ಕೆಲವೊಮ್ಮೆ ತರ್ಕಕ್ಕೂ ಮೀರಿರುತ್ತದೆ ಎಂದು ಹೇಳಿದ ಅವರು, ತಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ಪ್ರೀತಿ ಮತ್ತು ರಾಜಕೀಯ ಎರಡೂ ಪ್ರಮುಖ ಪಾತ್ರ ವಹಿಸಿವೆ ಎಂದರು.

ತಮ್ಮ ರಾಜಕೀಯ ಪಯಣವನ್ನು ನೆನಪಿಸಿಕೊಂಡ ಅವರು, ಚುನಾವಣೆಯಲ್ಲಿ ಗೆದ್ದಿದ್ದು ಸುಲಭದ ಹಾದಿಯಾಗಿರಲಿಲ್ಲ ಎಂದು ತಿಳಿಸಿದರು. “ನಾನು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವನಲ್ಲ. ಕಳೆದ 75 ವರ್ಷಗಳಲ್ಲಿ ರೈಡ್ ಕ್ಷೇತ್ರದ ಜನರು ವಿರೋಧ ಪಕ್ಷದಲ್ಲಿ ಕೂರಲು ಹೊಸ ಸಂಸದನನ್ನು ಆಯ್ಕೆ ಮಾಡಿರಲಿಲ್ಲ” ಎಂದು ತಮ್ಮ ಗೆಲುವಿನ ಸವಾಲುಗಳನ್ನು ವಿವರಿಸಿದರು.

ಕುಟುಂಬದವರಿಗೆ, ಗೆಳತಿಗೆ ಧನ್ಯವಾದ ತಿಳಿಸಿದ ಸಂಸದ

ಭಾಷಣದ ವೇಳೆ ತಮ್ಮ ತಂದೆ-ತಾಯಿ ಜಾನೆಲ್ ಮತ್ತು ರಿಚರ್ಡ್ ಅವರಿಗೆ ಧನ್ಯವಾದ ತಿಳಿಸಿದ ಜೋರ್ಡಾನ್, ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ಸಭ್ಯತೆಯಂತಹ ಮೌಲ್ಯಗಳನ್ನು ಅವರು ಕಲಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ತಾವು ಹುಟ್ಟಿ ಬೆಳೆದ ರೈಡ್ ಪ್ರದೇಶದೊಂದಿಗಿನ ನಂಟಿನ ಬಗ್ಗೆಯೂ ಮಾತನಾಡಿದರು. ಈ ಪ್ರದೇಶವೇ ಸದಾ ತಮ್ಮ ಮನೆ, ಇಲ್ಲಿನ ಜನರೇ ತಮ್ಮ ಕುಟುಂಬ ಎಂದು ಭಾವುಕರಾದರು. ಇದೇ ವೇಳೆ ಸಹೋದರಿಯರಾದ ಕೆಂಡಾಲ್ ಮತ್ತು ಮ್ಯಾಡಿಸನ್, ಅಜ್ಜಿ ಜೂನ್ ಹಾಗೂ ಲಿಲಿ ಮತ್ತು ಆಸ್ಕರ್ ಅವರ ಬೆಂಬಲವನ್ನೂ ಸ್ಮರಿಸಿದರು.

ತಮ್ಮ ಬಹುಕಾಲದ ಗೆಳತಿ ನಟಾಲಿ ಹಿಸ್ಸಿ ಅವರ ಬಗ್ಗೆ ಮಾತನಾಡಿದ ಅವರು, ಹಲವು ಸವಾಲುಗಳ ನಡುವೆಯೂ ತಮ್ಮ ಸಂಬಂಧ ಗಟ್ಟಿಯಾಗಿ ಉಳಿದಿದೆ ಎಂದರು. ತಮ್ಮ ಜೀವನದಲ್ಲಿ ಒಳ್ಳೆಯದು ಮತ್ತು ಸತ್ಯವಾದ ಎಲ್ಲದಕ್ಕೂ ನಟಾಲಿ ಅವರೇ ಕಾರಣ ಎಂದು ಪ್ರೀತಿಯಿಂದ ಹೇಳಿದರು.

ಮಂಡಿಯೂರಿ ಕುಳಿತು ಮದುವೆ ಪ್ರಸ್ತಾಪ

ಭಾಷಣದ ಕೊನೆಯ ಭಾಗದಲ್ಲಿ, ಕೆಲವೊಮ್ಮೆ ಮಾತಿಗಿಂತ ಕೃತಿಯೇ ಹೆಚ್ಚು ಪ್ರಭಾವ ಬೀರುತ್ತದೆ ಎಂದು ಹೇಳಿದ ಜೋರ್ಡಾನ್, ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದ ಮಹತ್ವದ ಹೆಜ್ಜೆಯನ್ನು ಕಾರ್ಯರೂಪದಲ್ಲಿ ತೋರಿಸಲು ಬಯಸುವುದಾಗಿ ತಿಳಿಸಿದರು.

ಬಳಿಕ ಸಾರ್ವಜನಿಕ ಗ್ಯಾಲರಿಯಲ್ಲಿ ಕುಳಿತಿದ್ದ ನಟಾಲಿ ಅವರತ್ತ ತಿರುಗಿ, ಸ್ಪೀಕರ್ ಅವರೇ, ರೈಡ್ ಕ್ಷೇತ್ರದ ಸಂಸದನಾಗಿ ನನ್ನ ಕೊನೆಯ ಪ್ರಶ್ನೆ ನನ್ನ ಮಹಾನ್ ಪ್ರೀತಿ ನಟಾಲಿಗೆ: ನೀನು ನನ್ನನ್ನು ಮದುವೆಯಾಗುತ್ತೀಯಾ? (Will you marry me?) ಎಂದು ಕೇಳಿದರು.

ಈ ವೇಳೆ ಜೋರ್ಡಾನ್ ತಮ್ಮ ಜೇಬಿನಿಂದ ನಿಶ್ಚಿತಾರ್ಥದ ಉಂಗುರವನ್ನು ಹೊರತೆಗೆದು ಮಂಡಿಯೂರಿ ಕುಳಿತು ಪ್ರಪೋಸ್ ಮಾಡಿದ್ದಾರೆ. ನಟಾಲಿ ಸಂತೋಷದಿಂದ ತಲೆಯಾಡಿಸಿ ಒಪ್ಪಿಗೆ ಸೂಚಿಸಿದ್ದು, ಬಳಿಕ ಅವರ ಬೆರಳಿಗೆ ಉಂಗುರ ತೊಡಿಸಿ ಅಪ್ಪಿಕೊಂಡಿದ್ದಾರೆ. ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಸಹ ಸಂಸದರು ಚಪ್ಪಾಳೆ ತಟ್ಟಿ, ಹರ್ಷೋದ್ಗಾರದ ಮೂಲಕ ಜೋಡಿಗೆ ಶುಭಾಶಯ ಕೋರಿದ್ದಾರೆ.

ಈ ಸುಂದರ ಕ್ಷಣದ ಬಳಿಕ ಹಾಸ್ಯಭರಿತವಾಗಿ ಮಾತನಾಡಿದ ಜೋರ್ಡಾನ್ ಲೇನ್, ನಟಾಲಿ ಹೌದು ಎಂದು ಹೇಳಿರುವುದನ್ನು ಸಂಸತ್ತಿನ ಅಧಿಕೃತ ದಾಖಲೆ ‘ಹ್ಯಾನ್ಸಾರ್ಡ್’ (Hansard)ನಲ್ಲೂ ದಾಖಲಿಸಬೇಕು ಎಂದು ಮನವಿ ಮಾಡಿದ್ದಾರೆ.

https://x.com/thetatvaindia/status/2123733098219327976?s=20

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಗ್ರೆಗ್ ಪೈಪರ್, 58ನೇ ಸಂಸತ್ತು ಪ್ರೀತಿಯ ಸಂಸತ್ತು (Parliament of Love) ಎಂದೇ ನೆನಪಿನಲ್ಲಿ ಉಳಿಯಲಿದೆ ಎಂದು ಹಾಸ್ಯಮಿಶ್ರಿತವಾಗಿ ಹೇಳಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡ ಸಂಸದ

https://www.instagram.com/reel/Df6eF6OO-Dy/?utm_source=ig_embed&utm_campaign=loading” data-instgrm-version=”14″ style=” background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% – 2px); width:calc(100% – 2px);”>
https://www.instagram.com/reel/Df6eF6OO-Dy/?utm_source=ig_embed&utm_campaign=loading” style=” background:#FFFFFF; line-height:0; padding:0 0; text-align:center; text-decoration:none; width:100%;” target=”_blank”>
View this post on Instagram

https://www.instagram.com/reel/Df6eF6OO-Dy/?utm_source=ig_embed&utm_campaign=loading” style=” color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;” target=”_blank”>A post shared by Jordan Lane MP – For Ryde (@jordanlaneryde)

">www.instagram.com/embed.js”>

ಸಂಸತ್ತಿನಲ್ಲಿ ನಡೆದ ಈ ವಿಶೇಷ ಕ್ಷಣದ ವಿಡಿಯೋವನ್ನು ಜೋರ್ಡಾನ್ ಲೇನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. “ಇಂದು ನಾನು ಸಂಸತ್ತಿನಲ್ಲಿ ನನ್ನ ಕೊನೆಯ ಭಾಷಣ ಮಾಡಿದೆ. ರೈಡ್ ಕ್ಷೇತ್ರವನ್ನು ನಾನು ಪ್ರೀತಿಸುತ್ತೇನೆ, ಸದಾ ಪ್ರೀತಿಸುತ್ತೇನೆ. ಆದರೆ ನಟಾಲಿಯನ್ನು ಅದಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ರಾಜಕೀಯ ಭಾಷಣವಾಗಿ ಆರಂಭವಾದ ಕಾರ್ಯಕ್ರಮವು ಪ್ರೇಮ ನಿವೇದನೆಯೊಂದಿಗೆ ಅಂತ್ಯಗೊಂಡಿದ್ದು, ಜೋರ್ಡಾನ್ ಲೇನ್ ಅವರ ಸಂಸತ್ತಿನ ಕೊನೆಯ ಭಾಷಣ ಜೀವನದ ಮರೆಯಲಾಗದ ಕ್ಷಣವಾಗಿ ಉಳಿದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಶ್ಚಿಮ ಏಷ್ಯಾದ ಸಂಘರ್ಷ, ವದಂತಿಗಳ ನಡುವೆಯೂ ಸಮರ್ಪಕ ಅನಿಲ ಪೂರೈಕೆ: ಪ್ರಧಾನಿ ಮೋದಿಪಾರ್ಕ್ ನಲ್ಲಿದ್ದ ಯುವ ಜೋಡಿ ಮೇಲೆ ಹಲ್ಲೆ ಕೇಸ್: 8 ಮಂದಿ ಅಪ್ರಾಪ್ತರು ವಶಕ್ಕೆಆಹಾರ ಸುರಕ್ಷತಾ ಪರೀಕ್ಷೆಯಲ್ಲಿ ವಿಫಲವಾದ ಪತಂಜಲಿ ಹಸುವಿನ ತುಪ್ಪಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಬಗ್ಗೆ ಮಾಹಿತಿ ನೀಡಿದವರಿಗೆ 9 ಕೋಟಿ ಬಹುಮಾನ ಘೋಷಿಸಿದ ಎಫ್‌ಬಿಐ₹1.4 ಲಕ್ಷ ಮೌಲ್ಯದ ಗುಲಾಬಿ ಬಣ್ಣದ ಉಡುಪಿನಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ: ಮೆಟರ್ನಿಟಿ ಫ್ಯಾಶನ್ ನಲ್ಲಿ ಬೋಲ್ಡ್ ಲುಕ್ ನಲ್ಲಿ ಗಮನ ಸೆಳೆದ ನಟಿಚಿನ್ನದ ಆಭರಣದಲ್ಲೂ ಕಲಬೆರಕೆ ಭೀತಿ! 22 ಕ್ಯಾರೆಟ್ ಎಂದು ನಂಬಿ ಖರೀದಿಸಿದರೆ ಮೋಸವಾಗುತ್ತಾ? ರೀನಿಯಂ ಲೋಹದ ಬಗ್ಗೆ ಎಚ್ಚರರೈಲಿನಲ್ಲಿ ಬೈಕ್, ವಸ್ತುಗಳನ್ನು ಕಳುಹಿಸುತ್ತಿದ್ದೀರಾ? ಒಂದು ಗಂಟೆ ತಡವಾದರೂ ಬೀಳುತ್ತೆ ದಂಡ !ಡ್ರೆಸ್ಸಿಂಗ್ ರೂಮ್ ಮಾಹಿತಿ ಸೋರಿಕೆ ಆರೋಪ: ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕೇಂದ್ರ ಗುತ್ತಿಗೆಯಿಂದ ಮೊಹಮ್ಮದ್ ರಿಜ್ವಾನ್ ಔಟ್!ಮುದ್ದಿನ ಮಗಳು ಅಲ್ಲು ಅರ್ಹಾ ಹುಟ್ಟುಹಬ್ಬಕ್ಕೆ ಭಾವುಕ ಶುಭಾಶಯ ಕೋರಿದ ಐಕಾನ್ ಸ್ಟಾರ್ ಅಲ್ಲು ಅರ್ಜುನ್: ಫೋಟೋ ವೈರಲ್!BREAKING : ಬಿಹಾರದಲ್ಲಿ 9.76 ಕಿ.ಮೀ ಉದ್ದದ ‘ನಿತೀಶ್ ಸೇತು’ ಉದ್ಘಾಟಿಸಿದ ಪ್ರಧಾನಿ ಮೋದಿ |WATCH VIDEO