LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೊಹಮ್ಮದ್ ಸಿರಾಜ್ ವೃತ್ತಿಜೀವನಕ್ಕೆ ಇದು ಸುಖಾಂತ್ಯವಾಗುವುದಿಲ್ಲ; ಸತತ ಕಡೆಗಣನೆಗೆ ಒಳಗಾದ ವೇಗಿಯ ಬಗ್ಗೆ ಆರ್. ಅಶ್ವಿನ್ ಆತಂಕದ ನುಡಿ

ಕ್ರೈಸ್ಟ್‌ಚರ್ಚ್: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಆಡುವ ಬಳಗದಿಂದ ಕೈಬಿಡಲಾಗಿದೆ. ಸತತ ಎರಡನೇ ಪಂದ್ಯದಲ್ಲೂ ಬೆಂಚ್ ಕಾಯುವಂತಾಗಿರುವ ಸಿರಾಜ್ ಅವರ ಅಂತಾರಾಷ್ಟ್ರೀಯ ಭವಿಷ್ಯದ ಕುರಿತು ಭಾರತದ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಆವೃತ್ತಿಯಲ್ಲಿ 11 ಪಂದ್ಯಗಳಿಂದ 43 ವಿಕೆಟ್ ಕಬಳಿಸಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿರುವ ಸಿರಾಜ್ ಅವರನ್ನು ಟೀಮ್ ಮ್ಯಾನೇಜ್‌ಮೆಂಟ್ ಸಂಪೂರ್ಣವಾಗಿ ಕಡೆಗಣಿಸುತ್ತಿರುವುದು ಅಚ್ಚರಿ ಮೂಡಿಸಿದೆ.

ಸಿರಾಜ್‌ಗೆ ಇದು ಒಳ್ಳೆಯ ಸೂಚನೆಯಲ್ಲ ಎಂದ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕುರಿತು ಮಾತನಾಡಿರುವ ಅಶ್ವಿನ್, ಸದ್ಯದ ಪರಿಸ್ಥಿತಿಯಲ್ಲಿ ವೇಗಿಗಳ ಪಟ್ಟಿಯಲ್ಲಿ ಸಿರಾಜ್ ಅವರು ನಿತೀಶ್ ಕುಮಾರ್ ರೆಡ್ಡಿಗಿಂತಲೂ ಹಿಂದೆ ಸರಿದಂತೆ ಕಾಣುತ್ತಿದೆ ಎಂದಿದ್ದಾರೆ. ಸಿರಾಜ್ ಅತ್ಯಂತ ಭಾವುಕ ವ್ಯಕ್ತಿಯಾಗಿದ್ದು, ಸದ್ಯ ಅವರ ಆತ್ಮವಿಶ್ವಾಸ ತೀರಾ ಕುಸಿದಿರಬಹುದು. ಯಾರಾದರೂ ಅವರೊಂದಿಗೆ ಮಾತನಾಡಿ ಧೈರ್ಯ ತುಂಬಬೇಕಿದೆ, ಇಲ್ಲದಿದ್ದರೆ ಸಿರಾಜ್ ವೃತ್ತಿಜೀವನಕ್ಕೆ ಇದು ಸುಖಾಂತ್ಯವಾಗುವುದಿಲ್ಲ ಎಂದು ಅಶ್ವಿನ್ ಎಚ್ಚರಿಸಿದ್ದಾರೆ.

ಮ್ಯಾನೇಜ್‌ಮೆಂಟ್ ಹಳೆಯ ಸಾಧಕರನ್ನು ಬಿಟ್ಟು ಮುಂದೆ ಸಾಗಲು ನಿರ್ಧರಿಸಿದಂತಿದೆ. ಗುರ್ನೂರ್ ಬ್ರಾರ್ ತಂಡಕ್ಕೆ ಬಂದಾಗಲೇ ಸಿರಾಜ್ ಈ ಪಂದ್ಯ ಆಡುವುದಿಲ್ಲ ಎಂಬುದು ನನಗೆ ಖಚಿತವಾಗಿತ್ತು. ಮುಂದೆ ಅವಕಾಶ ಸಿಕ್ಕಾಗ ಗಂಟೆಗೆ 145 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಐದು ವಿಕೆಟ್ ಗೊಂಚಲು ಪಡೆದರೆ ಮಾತ್ರ ಸಿರಾಜ್ ತಂಡದಲ್ಲಿ ಉಳಿಯಲು ಸಾಧ್ಯ ಎಂದು ಅಶ್ವಿನ್ ವಿಶ್ಲೇಷಿಸಿದ್ದಾರೆ.

ಮುರಳಿ ಕಾರ್ತಿಕ್ ಮತ್ತು ರಹಾನೆ ಅಸಮಾಧಾನ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ಭಾರತ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿದರೂ ಸಿರಾಜ್‌ಗೆ ಸ್ಥಾನ ಸಿಗಲಿಲ್ಲ. ಪಂದ್ಯಕ್ಕೂ ಮುನ್ನ ಕಪ್ಪು ಕನ್ನಡಕ ಧರಿಸಿ ಭಾವುಕರಾಗಿದ್ದ ಸಿರಾಜ್ ದೃಶ್ಯಗಳನ್ನು ಕಂಡು ಮಾಜಿ ಕ್ರಿಕೆಟಿಗರಾದ ಅಜಿಂಕ್ಯ ರಹಾನೆ ಮತ್ತು ಮುರಳಿ ಕಾರ್ತಿಕ್ ಬೇಸರ ವ್ಯಕ್ತಪಡಿಸಿದ್ದಾರೆ.

ಸೋನಿ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಮುರಳಿ ಕಾರ್ತಿಕ್, ಸಿರಾಜ್ ಅಳುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು. ಏಕದಿನ ಸರಣಿಯಲ್ಲೂ ಅವರನ್ನು ಬೆಂಚ್ ಕಾಯಿಸಲಾಗಿತ್ತು. ಇಷ್ಟೆಲ್ಲಾ ವಿಕೆಟ್ ಪಡೆದಿರುವ ಆಟಗಾರನನ್ನು ಆಡಿಸಲು ಇಷ್ಟವಿಲ್ಲದಿದ್ದರೆ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಅಗತ್ಯವಾದರೂ ಏನಿತ್ತು ಎಂದು ಕಾರ್ತಿಕ್ ಟೀಮ್ ಮ್ಯಾನೇಜ್‌ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸುಳ್ಳು ಹೇಳುವುದರಲ್ಲಿ ಸೂಪರ್ ಡಾಕ್ಟರೇಟ್ ಪಡೆದಿದ್ದೀರಾ?’ ರಾಹುಲ್ ಗಾಂಧಿಗೆ ರವಿಶಂಕರ್ ಪ್ರಸಾದ್ ತಿರುಗೇಟುಮದುವೆ ಸೀಸನ್ ನಲ್ಲಿ ಹೆಚ್ಚುತ್ತಿರುವ ಬೇಡಿಕೆ: ಎಲ್ ನಿನೊ ಆತಂಕದ ನಡುವೆ ಹಣದುಬ್ಬರ ಮತ್ತಷ್ಟು ಏರಿಕೆ ಸಾಧ್ಯತೆ5 ವರ್ಷದ ಮಗುವಿನ ತಂದೆ ಯಾರು…? ಡಿಎನ್ಎ ಪರೀಕ್ಷೆಗೆ ಒಪ್ಪಿದ ಅಸ್ಸಾಂ ವಿಧಾನಸಭೆ ಉಪಸಭಾಧ್ಯಕ್ಷಡಿಸೆಂಬರ್ ನಲ್ಲಿ RBI ನಿಂದ ಮತ್ತೆ ಬಡ್ಡಿದರ ಏರಿಕೆ ಸಾಧ್ಯತೆ: 0.25% ಹೆಚ್ಚಳ ನಿರೀಕ್ಷೆಬೇರೆಯವರ ಕಥೆಯಲ್ಲಿ ಹೀರೋ ಆಗ್ತಾನಲ್ಲ, ಅವನೇ ನಮ್ಮ ಹೀರೋ!’ ಕಿಚ್ಚನ ‘ದಾದಾ ಆನ್ ಹಾಲಿಡೇ’ ಟೀಸರ್ ವೈರಲ್ಭಾರತೀಯ ಪೌರತ್ವ ಪಡೆಯುವ ಮೊದಲೇ ಸೋನಿಯಾ ಗಾಂಧಿ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ?ಜಾರ್ಖಂಡ್ ಹೆದ್ದಾರಿಯಲ್ಲಿ ಭೀಕರ ಅಪಘಾತ: 4 ಮಕ್ಕಳು, 4 ಮಹಿಳೆಯರು ಸೇರಿ 13 ಮಂದಿ ಸಾವುಅತ್ಯುತ್ತಮ ನಟ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ, ಹನುಮಾನ್ ಅಂಶ್ ಚಿತ್ರಕ್ಕಾಗಿ ವಿಶಾಲ್ ಚತುರ್ವೇದಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಕ್ಷೇತ್ರಗಳನ್ನು ಮರುರೂಪಿಸಲು ಮೋದಿ ‘ಬ್ಲಾಂಕ್ ಚೆಕ್’ ಬಯಸಿದ್ದಾರೆ: ರಾಹುಲ್ ಗಾಂಧಿವೀಕೆಂಡ್‌ನಲ್ಲಿ ಚಿನ್ನದ ಬೆಲೆ ಇಳಿಕೆ : 10 ಗ್ರಾಂಗೆ ₹540 ಇಳಿಕೆ ಬೆಳ್ಳಿ ಬೆಲೆ ಸ್ಥಿರ ಇಂದಿನ ದರ ಇಲ್ಲಿದೆ