LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದುಬೈ ಸಂಗೀತ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ‘ಧುರಂಧರ್: ದಿ ರಿವೆಂಜ್’ ಹಾಡು ಹಾಡಿದ ಆತಿಫ್ ಅಸ್ಲಾಂ; ವಿಡಿಯೋ ವೈರಲ್

ನವದೆಹಲಿ: ಪಾಕಿಸ್ತಾನದ ಖ್ಯಾತ ಗಾಯಕ ಆತಿಫ್ ಅಸ್ಲಾಂ ಶುಕ್ರವಾರ (ನವೆಂಬರ್ 27) ರಾತ್ರಿ ದುಬೈನ ಕೋಕಾ-ಕೋಲಾ ಅರೆನಾದಲ್ಲಿ ಅದ್ಧೂರಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ತುಂಬಿದ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಒಂದು ವಿಶೇಷ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ.

ಕಾರ್ಯಕ್ರಮದ ವೇಳೆ ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ ಚಿತ್ರದ ‘ಜಾನ್ ಸೆ ಗುಜಾರ್ತೆ ಹೈ’ ಹಾಡನ್ನು ಆತಿಫ್ ಅಸ್ಲಾಂ ಹಾಡಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ಸಂತಸ ಮೂಡಿಸಿದೆ.

ಈ ವಿಡಿಯೋ ತುಣುಕನ್ನು ಅಭಿಮಾನಿಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಇದನ್ನು ಅನಿರೀಕ್ಷಿತ ಕ್ರಾಸ್‌ಓವರ್ ಎಂದು ಬಣ್ಣಿಸಿದ್ದಾರೆ. ಕೆಲವು ಹಾಡುಗಳಿಗೆ ವೀಸಾ ಅಗತ್ಯವಿರುವುದಿಲ್ಲ ಎಂದು ಅವರು ಬರೆದುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಹಾಡು ‘ಧುರಂಧರ್’ ಚಿತ್ರದ ಮೂಲಕ ಹೆಚ್ಚು ಜನಪ್ರಿಯವಾಗಿದ್ದರೂ, ಇದರ ಮೂಲ ಇತಿಹಾಸ ಇನ್ನೂ ಹಳೆಯದು. ಖ್ಯಾತ ಪಾಕಿಸ್ತಾನಿ ಕವ್ವಾಲಿ ಗಾಯಕ ನುಸ್ರತ್ ಫತೇ ಅಲಿ ಖಾನ್ 1977ರಲ್ಲಿ ಹಾಡಿದ್ದ ‘ದಿಲ್ ಪೇ ಜಖಮ್ ಖಾತೆ ಹೈ’ ಮೂಲ ಕವ್ವಾಲಿಯನ್ನು ‘ಧುರಂಧರ್: ದಿ ರಿವೆಂಜ್’ ಚಿತ್ರಕ್ಕಾಗಿ ‘ಜಾನ್ ಸೆ ಗುಜಾರ್ತೆ ಹೈ’ ಎಂದು ಮರುಸೃಷ್ಟಿಸಲಾಗಿದ್ದು, ಖಾನ್ ಸಾಬ್ ಮತ್ತು ಶಾಶ್ವತ್ ಸಚ್‌ದೇವ್ ಧ್ವನಿ ನೀಡಿದ್ದಾರೆ.

ಪಾಕಿಸ್ತಾನಿ ಕಂಟೆಂಟ್ ವಿವಾದದ ನಡುವೆ ಗಮನ ಸೆಳೆದ ಹಾಡು ಭಾರತದಲ್ಲಿ ಪಾಕಿಸ್ತಾನಿ ಮನರಂಜನಾ ಕಂಟೆಂಟ್ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿರುವ ಸಂದರ್ಭದಲ್ಲೇ ಈ ವಿಡಿಯೋ ವೈರಲ್ ಆಗಿರುವುದು ಕುತೂಹಲ ಮೂಡಿಸಿದೆ. ಪಾಕಿಸ್ತಾನ ಮೂಲದ ಕಂಟೆಂಟ್ ವಿಚಾರವಾಗಿ ಈ ಹಿಂದಿನ ನಿಲುವನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇತ್ತೀಚೆಗೆ ನೆಟ್‌ಫ್ಲಿಕ್ಸ್ ಸಂಸ್ಥೆಗೆ ನೆನಪಿಸಿದೆ.

ಫವಾದ್ ಖಾನ್ ಮತ್ತು ಮಾಹಿರಾ ಖಾನ್ ನಟನೆಯ ಮುಂಬರುವ ಪಾಕಿಸ್ತಾನಿ ಸರಣಿ ‘ಜೋ ಬಚೇ ಹೈ ಸಂಗ್ ಸಮೈಟ್ ಲೋ’ ಚಿತ್ರದ ಭಾರತ ಬಿಡುಗಡೆಯನ್ನು ತಡೆಯುವಂತೆ ಅಖಿಲ ಭಾರತ ಸಿನಿ ಕಾರ್ಮಿಕರ ಸಂಘ (ಎಐಸಿವಿಎ) ಮತ್ತು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (ಎಫ್‌ಡಬ್ಲ್ಯೂಐಸಿಇ) ಒತ್ತಾಯಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಎಫ್‌ಡಬ್ಲ್ಯೂಐಸಿಇ ಅಧ್ಯಕ್ಷ ಬಿ.ಎನ್. ತಿವಾರಿ ಮಾತನಾಡಿ, ಪಾಕಿಸ್ತಾನಿ ಕಂಟೆಂಟ್ ಪ್ರಸಾರ ಮಾಡದಂತೆ ಒಟಿಟಿ ವೇದಿಕೆಗಳಿಗೆ ಸರ್ಕಾರ ಕಳೆದ ವರ್ಷವೇ ಸೂಚನೆ ನೀಡಿತ್ತು ಎಂದು ತಿಳಿಸಿದ್ದಾರೆ. ಆದರೂ ಸರಣಿಯ ಪ್ರೋಮೋ ಬಿಡುಗಡೆ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಅವರು, ಡಿಸೆಂಬರ್ 4ರಂದು ಈ ಸರಣಿ ಬಿಡುಗಡೆಯಾದರೆ ಡಿಸೆಂಬರ್ 5ರಿಂದ ಭಾರತದಲ್ಲಿ ನಡೆಯುವ ಶೂಟಿಂಗ್‌ಗಳಿಗೆ ಅವಕಾಶ ನೀಡುವುದಿಲ್ಲ ಮತ್ತು ತಮ್ಮ ಸಂಘದ ಸದಸ್ಯರು ಹಿಂದೆ ಸರಿಯುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸುಳ್ಳು ಹೇಳುವುದರಲ್ಲಿ ಸೂಪರ್ ಡಾಕ್ಟರೇಟ್ ಪಡೆದಿದ್ದೀರಾ?’ ರಾಹುಲ್ ಗಾಂಧಿಗೆ ರವಿಶಂಕರ್ ಪ್ರಸಾದ್ ತಿರುಗೇಟುಮದುವೆ ಸೀಸನ್ ನಲ್ಲಿ ಹೆಚ್ಚುತ್ತಿರುವ ಬೇಡಿಕೆ: ಎಲ್ ನಿನೊ ಆತಂಕದ ನಡುವೆ ಹಣದುಬ್ಬರ ಮತ್ತಷ್ಟು ಏರಿಕೆ ಸಾಧ್ಯತೆ5 ವರ್ಷದ ಮಗುವಿನ ತಂದೆ ಯಾರು…? ಡಿಎನ್ಎ ಪರೀಕ್ಷೆಗೆ ಒಪ್ಪಿದ ಅಸ್ಸಾಂ ವಿಧಾನಸಭೆ ಉಪಸಭಾಧ್ಯಕ್ಷಡಿಸೆಂಬರ್ ನಲ್ಲಿ RBI ನಿಂದ ಮತ್ತೆ ಬಡ್ಡಿದರ ಏರಿಕೆ ಸಾಧ್ಯತೆ: 0.25% ಹೆಚ್ಚಳ ನಿರೀಕ್ಷೆಬೇರೆಯವರ ಕಥೆಯಲ್ಲಿ ಹೀರೋ ಆಗ್ತಾನಲ್ಲ, ಅವನೇ ನಮ್ಮ ಹೀರೋ!’ ಕಿಚ್ಚನ ‘ದಾದಾ ಆನ್ ಹಾಲಿಡೇ’ ಟೀಸರ್ ವೈರಲ್ಭಾರತೀಯ ಪೌರತ್ವ ಪಡೆಯುವ ಮೊದಲೇ ಸೋನಿಯಾ ಗಾಂಧಿ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ?ಜಾರ್ಖಂಡ್ ಹೆದ್ದಾರಿಯಲ್ಲಿ ಭೀಕರ ಅಪಘಾತ: 4 ಮಕ್ಕಳು, 4 ಮಹಿಳೆಯರು ಸೇರಿ 13 ಮಂದಿ ಸಾವುಅತ್ಯುತ್ತಮ ನಟ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ, ಹನುಮಾನ್ ಅಂಶ್ ಚಿತ್ರಕ್ಕಾಗಿ ವಿಶಾಲ್ ಚತುರ್ವೇದಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಕ್ಷೇತ್ರಗಳನ್ನು ಮರುರೂಪಿಸಲು ಮೋದಿ ‘ಬ್ಲಾಂಕ್ ಚೆಕ್’ ಬಯಸಿದ್ದಾರೆ: ರಾಹುಲ್ ಗಾಂಧಿವೀಕೆಂಡ್‌ನಲ್ಲಿ ಚಿನ್ನದ ಬೆಲೆ ಇಳಿಕೆ : 10 ಗ್ರಾಂಗೆ ₹540 ಇಳಿಕೆ ಬೆಳ್ಳಿ ಬೆಲೆ ಸ್ಥಿರ ಇಂದಿನ ದರ ಇಲ್ಲಿದೆ