LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (OC) ವಿನಾಯಿತಿ: ವಿದ್ಯುತ್ ಸಂಪರ್ಕಕ್ಕೆ OC ಕಡ್ಡಾಯವಿಲ್ಲ, 15 ದಿನಗಳ ವಿಶೇಷ ಅವಕಾಶ :ಹೊಸ ಮಾರ್ಗಸೂಚಿ ಪ್ರಕಟ

ಬೆಂಗಳೂರು :ಸ್ವಂತ ಮನೆ ಕಟ್ಟಿ, ಸ್ವಾಧೀನಾನುಭವ ಪ್ರಮಾಣಪತ್ರ (Occupancy Certificate – OC) ಸಿಗದೇ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಎಸ್ಕಾಂ ಕಚೇರಿಗಳಿಗೆ ಅಲೆಯುತ್ತಿದ್ದ ಸಾರ್ವಜನಿಕರಿಗೆ ರಾಜ್ಯ ಸರ್ಕಾರ ಅತ್ಯಂತ ಸಿಹಿ ಸುದ್ದಿ ನೀಡಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ನಿರ್ದಿಷ್ಟ ಮಿತಿಯೊಳಗಿನ ವಸತಿ ಕಟ್ಟಡಗಳಿಗೆ ಒಸಿ (OC) ಒದಗಿಸುವುದರಿಂದ ಒಂದು ಬಾರಿಯ ಕ್ರಮವಾಗಿ ವಿನಾಯಿತಿ ನೀಡಿ ಇಂಧನ ಇಲಾಖೆ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯ ನಿರ್ಣಯದಂತೆ ಈ ಮಹತ್ವದ ಆದೇಶ ಹೊರಬಿದ್ದಿದೆ. ವಿಶೇಷ ಎಂದರೆ, ಬಿಬಿಎಂಪಿ (BBMP) ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿ ಒಳಗೊಂಡಂತೆ ಇಡೀ ಕರ್ನಾಟಕಕ್ಕೆ ಈ ವಿನಾಯಿತಿ ಅನ್ವಯವಾಗಲಿದೆ.

ಯಾವ ಕಟ್ಟಡಗಳಿಗೆ ಈ ಸೌಲಭ್ಯ ಸಿಗಲಿದೆ?

ಎಲ್ಲಾ ಕಟ್ಟಡಗಳಿಗೂ ಈ ವಿನಾಯಿತಿ ಸಿಗುವುದಿಲ್ಲ. ಮಧ್ಯಮ ವರ್ಗದವರ ಮನೆಗಳನ್ನು ಗಮನದಲ್ಲಿಟ್ಟುಕೊಂಡು ನಿಯಮ ರೂಪಿಸಲಾಗಿದೆ:

ನಿವೇಶನದ ಅಳತೆ: 2,400 ಚದರ ಅಡಿ (+ ಶೇ.20ರಷ್ಟು ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ) ಅಳತೆಯ ಸೈಟ್‌ಗಳು.

ಮಹಡಿಗಳ ಮಿತಿ: ಈ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ಜಿ+3 (Ground + 3 Floors) ಅಂತಸ್ತಿನ ವಸತಿ ಕಟ್ಟಡಗಳು ಅಥವಾ ಸ್ಟಿಲ್ಟ್‌ ಪಾರ್ಕಿಂಗ್‌ + 4 ಮಹಡಿಗಳನ್ನು ಹೊಂದಿರುವ ವಸತಿ ಕಟ್ಟಡಗಳಿಗೆ ಮಾತ್ರ ಈ ಒಸಿ ವಿನಾಯಿತಿ ಸಿಗಲಿದೆ.ಕಟ್-ಆಫ್ ಡೇಟ್ 31-05-2026ರ ಒಳಗೆ ಕಟ್ಟಡ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿರಬೇಕು.

ಯಾರಿಗೆಲ್ಲಾ ಈ ಸೌಲಭ್ಯ ಲಭ್ಯ?

ಶಾಶ್ವತ ವಿದ್ಯುತ್‌ ಸಂಪರ್ಕಕ್ಕಾಗಿ ಈಗಾಗಲೇ 2026ರ ಮೇ 31ರೊಳಗೆ ಅರ್ಜಿ ಸಲ್ಲಿಸಿ ಬಾಕಿ ಉಳಿದಿರುವ ಪ್ರಕರಣಗಳು.

ತಾತ್ಕಾಲಿಕ (Temporary) ವಿದ್ಯುತ್‌ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿ ಪೂರ್ಣಗೊಳಿಸಿರುವ ಪ್ರಕರಣಗಳು.

ಯಾವುದೇ ವಿದ್ಯುತ್‌ ಸಂಪರ್ಕ ಪಡೆಯದೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿರುವ ಮನೆಗಳು.

ಅರ್ಜಿ ಸಲ್ಲಿಕೆಗೆ ಹೊಸ ಮಾರ್ಗಸೂಚಿ ಮತ್ತು ಕಠಿಣ ನಿಯಮಗಳು:

ಸರ್ಕಾರ ವಿನಾಯಿತಿ ನೀಡಿದ್ದರೂ ದುರುಪಯೋಗ ತಡೆಯಲು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಹೇಗೆ ಅರ್ಜಿ ಸಲ್ಲಿಸಬೇಕು? ಇಲ್ಲಿದೆ ಡಿಟೇಲ್ಸ್:

15 ದಿನಗಳ ಗಡುವು: ಸರ್ಕಾರದ ಆದೇಶ ಹೊರಬಿದ್ದ ದಿನಾಂಕದಿಂದ (ಜೂನ್ 22) ಮುಂದಿನ 15 ದಿನಗಳವರೆಗೆ ಮಾತ್ರ ಹೊಸದಾಗಿ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಕಡೆ ಅವಕಾಶ ನೀಡಲಾಗಿದೆ.

ಜಿಯೋ-ಟ್ಯಾಗ್ ಫೋಟೋ ಕಡ್ಡಾಯ: ಅರ್ಜಿ ಸಲ್ಲಿಸುವಾಗ ಪೂರ್ಣಗೊಂಡಿರುವ ಕಟ್ಟಡದ ದಿನಾಂಕ ಮತ್ತು ಸಮಯ ಮುದ್ರೆಯಿರುವ (Date & Time Stamp) ಜಿಯೋ-ಟ್ಯಾಗ್ ಫೋಟೋ ಅಪ್‌ಲೋಡ್ ಮಾಡುವುದು ಕಡ್ಡಾಯ.

ಅಪ್ಲಿಕೇಶನ್ ಐಡಿ: ಈಗಾಗಲೇ ಅರ್ಜಿ ಸಲ್ಲಿಸಿರುವವರು ತಮ್ಮ Application ID ಮತ್ತು ದಿನಾಂಕವನ್ನು ಕಡ್ಡಾಯವಾಗಿ ನೀಡಬೇಕು.

ಭೌತಿಕ ಸೌಲಭ್ಯ: ಇಂಟರ್ನೆಟ್ ಸಮಸ್ಯೆ ಇರುವವರಿಗೆ ಅನುಕೂಲವಾಗಲು ಇಲಾಖೆಯ ಉಪವಿಭಾಗ ಕಚೇರಿಗಳಲ್ಲಿ (Sub-division offices) ಭೌತಿಕವಾಗಿ ಅರ್ಜಿ ನೋಂದಣಿ ಮಾಡಲು ಸೌಲಭ್ಯ ಕಲ್ಪಿಸಲಾಗಿದೆ.

ಸ್ಥಳ ಪರಿಶೀಲನೆ: ಅರ್ಜಿ ಸಲ್ಲಿಕೆಯಾದ ನಂತರ ಕ್ಷೇತ್ರದ ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ ಬಳಿಕವೇ ಕನೆಕ್ಷನ್ ಸಿಗಲಿದೆ.

ಗ್ರಾಮೀಣ ಭಾಗದ ರೈತರಿಗೆ ಬಂಪರ್ ವಿನಾಯಿತಿ

ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದ ಜನರ ಮೇಲೆ ಸರ್ಕಾರ ಮತ್ತಷ್ಟು ಉದಾರತೆ ತೋರಿದೆ. ಹಳ್ಳಿಗಳಲ್ಲಿ ರೈತರು ಕಟ್ಟಿಕೊಳ್ಳುವ ಈ ಕೆಳಗಿನ ನಿರ್ಮಾಣಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಯಾವುದೇ ಒಸಿ (OC) ಪ್ರಮಾಣಪತ್ರದ ಅಗತ್ಯವೇ ಇಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ:

ರೈತರು ವಾಸಿಸುವ ಮನೆಗಳು ಹಾಗೂ ತೋಟದ ಮನೆಗಳು (Farm Houses)

ಕೃಷಿ ಉಪಕರಣಗಳನ್ನು ಇಡುವ ಶೆಡ್/ಮನೆಗಳು

ದನದ ಕೊಟ್ಟಿಗೆಗಳು (Cattle sheds) ಮತ್ತು ರೇಷ್ಮೆ ಗೂಡಿನ ಮನೆಗಳು

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ