LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

‘SSLC’ ಬಳಿಕ ಸ್ಮಾರ್ಟ್ ಚಾಯ್ಸ್ : ಪಾಲಿಟೆಕ್ನಿಕ್‌ನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಬಾಗಿಲು

ಬಳ್ಳಾರಿ : 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಪೋಷಕರು ಮತ್ತು ವಿದ್ಯಾರ್ಥಿಗಳ ಎದುರು ‘ಮುಂದೇನು? ಯಾವ ದಾರಿ ಹಿಡಿಯಬೇಕು?’ ಎಂಬ ಅತ್ಯಂತ ಮಹತ್ವದ ಮತ್ತು ಆತಂಕದ ಪ್ರಶ್ನೆ ಎದುರಾಗುತ್ತದೆ. ಕೇವಲ ಅಂಕಗಳನ್ನೇ ಮಾನದಂಡವಾಗಿಟ್ಟುಕೊಳ್ಳದೆ, ಬದುಕಿಗೆ ಭದ್ರತೆ ಒದಗಿಸುವ ಹಾಗೂ ವ್ಯಾಸಂಗ ಮಾಡುವ ಕಾಲೇಜಿನಲ್ಲಿಯೇ ಕ್ಯಾಂಪಸ್ ಸಂದರ್ಶನದ ಮೂಲಕ ಉದ್ಯೋಗ ನೀಡುವ ಪಾಲಿಟೆಕ್ನಿಕ್ ಶಿಕ್ಷಣ ಇಂದಿನ ಸ್ಮಾರ್ಟ್ ಚಾಯ್ಸ್ ಆಗಿದೆ ಎಂದು ಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್‌ನ ಯಾಂತ್ರಿಕ ವಿಭಾಗದ ಆಯ್ಕೆ ಶ್ರೇಣಿ ಉಪನ್ಯಾಸಕ ಅಪ್ರಮೇಯ ಸಿ.ಆರ್ ತಿಳಿಸಿದ್ದಾರೆ.

ಕೌಶಲಾಧಾರಿತ ಶಿಕ್ಷಣಕ್ಕೆ ಹೆಚ್ಚಿದ ಬೇಡಿಕೆ:

ಇಂದಿನ ಕೃತಕ ಬುದ್ಧಿಮತ್ತೆ, ಡಿಜಿಟಲ್ ತಂತ್ರಜ್ಞಾನ ಹಾಗೂ ಯಾಂತ್ರೀಕರಣದ ವೇಗದ ಜಗತ್ತಿನಲ್ಲಿ ತಾಂತ್ರಿಕ ಪ್ರಾವೀಣ್ಯತೆ ಅತ್ಯಗತ್ಯವಾಗಿದೆ. ಐಟಿ ಕ್ಷೇತ್ರದಲ್ಲಿ ಉದ್ಯೋಗ ಕಡಿತದ ಆತಂಕಗಳಿದ್ದರೆ, ಮತ್ತೊಂದೆಡೆ ಉತ್ಪಾದನಾ ವಲಯ, ನವೀಕರಿಸಬಹುದಾದ ಇಂಧನ, ಎಲೆಕ್ಟ್ರಿಕ್ ವಾಹನಗಳು ಹಾಗೂ ಕೋರ್ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ನುರಿತ ವೃತ್ತಿಪರರಿಗೆ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯೂ ಕೂಡ ವೃತ್ತಿಪರ ಕೌಶಲಕ್ಕೆ ಅತಿ ಹೆಚ್ಚು ಒತ್ತು ನೀಡುತ್ತಿದೆ.

ಬಳ್ಳಾರಿ ಜಿಲ್ಲೆಯು ಗಣಿಗಾರಿಕೆ, ಬೃಹತ್ ಉಕ್ಕು ಉತ್ಪಾದನೆ, ಸಾರಿಗೆ, ನಿರ್ಮಾಣ ಹಾಗೂ ಲಾಜಿಸ್ಟಿಕ್ಸ್ ವಲಯಗಳಿಂದ ರಾಜ್ಯದ ಪ್ರಮುಖ ಕೈಗಾರಿಕಾ ಹಬ್ ಆಗಿ ರೂಪುಗೊಂಡಿದ್ದು, ಇಲ್ಲಿ ಪಾಲಿಟೆಕ್ನಿಕ್ ಹಾಗೂ ಐಟಿಐನಂತಹ ಕೌಶಲಾಧಾರಿತ ಶಿಕ್ಷಣ ಪಡೆದ ಸ್ಥಳೀಯ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿವೆ ಎಂದು ಅವರು ವಿವರಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ನಂತರದ ಪ್ರಮುಖ ನಾಲ್ಕು ದಾರಿಗಳು:

  • ಪಿಯುಸಿ: ದೀರ್ಘಕಾಲಿಕ ಶೈಕ್ಷಣಿಕ ಗುರಿ ಹೊಂದಿರುವವರಿಗೆ ಇದು ಸೂಕ್ತ.
  • ಪಾಲಿಟೆಕ್ನಿಕ್/ಡಿಪ್ಲೊಮಾ: ಕಡಿಮೆ ವೆಚ್ಚದಲ್ಲಿ, ಅತಿ ಕಡಿಮೆ ಅವಧಿಯಲ್ಲಿ ತಾಂತ್ರಿಕ ಜಗತ್ತಿಗೆ ಪ್ರವೇಶ ಕಲ್ಪಿಸುವ ಕೌಶಲ-ಕೇಂದ್ರಿತ ಕೋರ್ಸ್. ಇದರ ನಂತರ ನೇರ ಉದ್ಯೋಗ ಪಡೆಯಬಹುದು ಅಥವಾ ಬಿ.ಇ/ಬಿ.ಟೆಕ್ ಪದವಿಗೆ ‘ಲ್ಯಾಟರಲ್ ಎಂಟ್ರಿ’ ಮೂಲಕ ನೇರ ಎರಡನೇ ವರ್ಷಕ್ಕೆ ಪ್ರವೇಶ ಪಡೆಯಬಹುದು.
  • ಐಟಿಐ: ಪ್ರಾಯೋಗಿಕ ಕೌಶಲಗಳನ್ನು ಬೇಗನೆ ಕರಗತ ಮಾಡಿಕೊಂಡು ತ್ವರಿತವಾಗಿ ಉದ್ಯೋಗಕ್ಕೆ ಸೇರಬಯಸುವ ಗ್ರಾಮೀಣ ವಿದ್ಯಾರ್ಥಿಗಳಿಗೆ ತ್ವರಿತ ಆದಾಯದ ಮಾರ್ಗ.
  • ಕೌಶಲಾಧಾರಿತ ಅಲ್ಪಾವಧಿ ಕೋರ್ಸ್ಗಳು: ಡಿಜಿಟಲ್ ಮಾರ್ಕೆಟಿಂಗ್, ಗ್ರಾಫಿಕ್ ಡಿಸೈನ್, ಅರೆ-ವೈದ್ಯಕೀಯ ಮುಂತಾದ ಕೋರ್ಸ್ಗಳು ತ್ವರಿತ ಉದ್ಯೋಗ ಒದಗಿಸುತ್ತವೆ.

ಸಾಂಪ್ರದಾಯಿಕ (‘ಕೋರ್’) ಇಂಜಿನಿಯರಿಂಗ್ ವಿಭಾಗದಲ್ಲಿರುವ ನವೀನ ಅವಕಾಶಗಳು:

ಕೋರ್ ಇಂಜಿನಿಯರಿಂಗ್ ಶಾಖೆಗಳು ಹಳೆಯದಾಗಿಲ್ಲ; ಬದಲಾಗಿ ನವೀನ ತಂತ್ರಜ್ಞಾನಗಳೊಂದಿಗೆ ಬೆರೆತು, ಮುಂದಿನ ದಶಕದ ಉದ್ಯೋಗ ಮಾರುಕಟ್ಟೆಯ ‘ಆಶಾಕಿರಣ’ವಾಗಿ ರೂಪುಗೊಳ್ಳುತ್ತಿವೆ.

  • ಮೆಕ್ಯಾನಿಕಲ್ ಇಂಜಿನಿಯರಿಂಗ್: ಇಂದು ರೋಬೋಟಿಕ್ಸ್, 3ಡಿ ಪ್ರಿಂಟಿಂಗ್, ಡ್ರೋನ್ ತಂತ್ರಜ್ಞಾನ ಮತ್ತು ಕಾರ್ಖಾನೆಗಳ ಆಟೊಮೇಷನ್ ಒಳಗೊಂಡಿದೆ.
  • ಆಟೋಮೊಬೈಲ್ ಇಂಜಿನಿಯರಿಂಗ್: ಎಲೆಕ್ಟ್ರಿಕ್ ವಾಹನಗಳ ಕಡೆಗೆ ಜಗತ್ತು ವಾಲುತ್ತಿರುವುದರಿಂದ ಬ್ಯಾಟರಿ ಕೂಲಿಂಗ್, ಮೋಟಾರ್ ವಿನ್ಯಾಸ ವಲಯದಲ್ಲಿ ಭಾರಿ ಬೇಡಿಕೆ ಇದೆ.
  • ಎಲೆಕ್ಟ್ರಿಕಲ್ ಇಂಜಿನಿಯರಿಂಗ್: ಹಸಿರು ಇಂಧನ (ಸೌರಶಕ್ತಿ, ಪವನಶಕ್ತಿ), ಇವಿ ಚಾರ್ಜಿಂಗ್ ಸ್ಟೇಷನ್ ಮತ್ತು “ಸ್ಮಾರ್ಟ್ ಗ್ರಿಡ್” ನಿರ್ವಹಣೆಯಲ್ಲಿ ಪಾತ್ರ ದೊಡ್ಡದು.
  • ಸಿವಿಲ್ ಇಂಜಿನಿಯರಿಂಗ್: ಭವಿಷ್ಯದ ‘ಸ್ಮಾರ್ಟ್ ಸಿಟಿ’ಗಳು, ಪರಿಸರ ಸ್ನೇಹಿ ಹಸಿರು ಕಟ್ಟಡಗಳು ಮತ್ತು ಸುಸ್ಥಿರ ಮೂಲಸೌಕರ್ಯಗಳ ನಿರ್ಮಾಣಕ್ಕೆ ಅಗತ್ಯ.
  • ಮೆಟಲರ್ಜಿ ಮತ್ತು ಮೆಟೀರಿಯಲ್ ಸೈನ್ಸ್: ಸೆಮಿಕಂಡಕ್ಟರ್ ಮತ್ತು ಬ್ಯಾಟರಿ ಉತ್ಪಾದನೆಯಲ್ಲಿ ಈ ತಜ್ಞರಿಗೆ ಚಿನ್ನದಂತಹ ಬೆಲೆಯಿದೆ.

ಮೂರು ವರ್ಷದ ಪಾಲಿಟೆಕ್ನಿಕ್ ಡಿಪ್ಲೊಮಾ ಶಿಕ್ಷಣವು ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸುವುದರ ಜೊತೆಗೆ, ಉನ್ನತ ಶಿಕ್ಷಣದ ಕನಸು ಹೊಂದಿರುವವರಿಗೆ ಇಂಜಿನಿಯರಿಂಗ್ ಸೇರಿದಂತೆ ಅನೇಕ ಕ್ಷೇತ್ರಗಳತ್ತ ಮುಕ್ತ ದಾರಿಗಳನ್ನು ತೆರೆಯುತ್ತದೆ. ಅದಕ್ಕಾಗಿಯೇ ಇದನ್ನು “ದುಪ್ಪಟ್ಟು ಲಾಭ”ದ ಶಿಕ್ಷಣ ಮಾರ್ಗ ಎನ್ನಲಾಗುತ್ತದೆ.

ಶಿಕ್ಷಣದ ಆಯ್ಕೆಯು ಕೇವಲ “ಪ್ರತಿಷ್ಠೆ”ಯ ಆಧಾರದ ಮೇಲೆ ಆಗಬಾರದು; ಅದು ವಿದ್ಯಾರ್ಥಿಯ “ಪ್ರವೃತ್ತಿ, ಪ್ರತಿಭೆ ಮತ್ತು ಅವಕಾಶ”ದ ಆಧಾರದ ಮೇಲೆ ಆಗಬೇಕು. ಪೋಷಕರು ಮಕ್ಕಳ ಮೇಲೆ ತಮ್ಮ ಕನಸುಗಳನ್ನು ಹೇರದೆ ಅವರ ಆಸಕ್ತಿಯನ್ನು ಗುರುತಿಸಿ ಬೆಂಬಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಗರದ ಹೊಸಪೇಟೆಯ ರಸ್ತೆಯ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ಪ್ರಾಚಾರ್ಯರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ