LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

1ನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ: ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ 2,500 ಮಾಹಿತಿ ತಂತ್ರಜ್ಞಾನ ಶಿಕ್ಷಕರ ಹುದ್ದೆ ಮಂಜೂರು ಮಾಡಿ ಅಧಿಕೃತ ಆದೇಶ

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ(KPS)ಗಾಗಿ ಪ್ರತ್ಯೇಕ ಕಂಪ್ಯೂಟರ್ ಸೈನ್ಸ್ ಶಿಕ್ಷಕರ ವೃಂದವನ್ನು (Cadre) ಸ್ಥಾಪಿಸಿದೆ. ಶಿಕ್ಷಕರ ನಿಯೋಜನೆ ಮತ್ತು ಮರುಹಂಚಿಕೆ ಪ್ರಕ್ರಿಯೆಯ ನಂತರ, ಸರ್ಕಾರವು 2,500 ಕಂಪ್ಯೂಟರ್ ಸೈನ್ಸ್ ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಹೊಸ ಶಿಕ್ಷಕರ ವೃಂದಕ್ಕಾಗಿ ಪ್ರತ್ಯೇಕ ವೃಂದ ಮತ್ತು ನೇಮಕಾತಿ (Cadre & Recruitment – C&R) ನಿಯಮಗಳನ್ನು ಇಲಾಖೆ ರೂಪಿಸುತ್ತಿದೆ.

ಶಾಲಾ ಶಿಕ್ಷಣ ಇಲಾಖೆಯ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮರು / (Rationalisation) ថថ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಹೊಸದಾಗಿ ಸೃಜಿಸಿ 2500 ಮಾಹಿತಿ ತಂತ್ರಜ್ಞಾನ ಶಿಕ್ಷಕರ ಹುದ್ದೆಗಳನ್ನಾಗಿ ಪರಿವರ್ತಿಸುವ ಕುರಿತು ಆದೇಶಿಸಲಾಗಿದೆ.

ರಾಜ್ಯದಲ್ಲಿರುವ ಆಯ್ಕೆ ಸರ್ಕಾರಿ ಶಾಲೆಗಳನ್ನು (ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 200 ಶಾಲೆಗಳನ್ನು ಹಾಗೂ ರಾಜ್ಯದ ಇತರೆಡೆ 500 ಶಾಲೆಗಳನ್ನು) ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಿ, ಹೆಚ್ಚುವರಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ 2026-27ನೇ ಸಾಲಿನಿಂದ ಒಂದನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣದ ಪರಿಚಯಿಸಲು ಆದೇಶಿಸಲಾಗಿರುತ್ತದೆ.

ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು 2017ನೇ ಸಾಲಿನಲ್ಲಿ ಒಟ್ಟು 126170 ಪ್ರಾಥಮಿಕ ಶಾಲಾ ಶಿಕ್ಷಕರ (PST) ವೃಂದ ಬಲದಲ್ಲಿ 1946 ಶಾಲಾ ಮಾತೆಯರ ಹುದ್ದೆಗಳು, 849 ಪದವೀಧರ ಪಾಥಮಿಕ ಶಾಲಾ ಶಿಕ್ಷಕರ ಹುದೆಗಳು ಮತ್ತು 2 ಚಿತ್ರಕಲಾ ಶಿಕ್ಷಕರ ಹುದ್ದೆಗಳನ್ನು ಮರು ಹಂಚಿಕೆ ಮಾಡಲಾಗಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಕ್ಕೆ ಸೇರಿಸಲಾಗಿದೆ. ಆದಕಾರಣ, 2022 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ (PST) ಒಟ್ಟು ವೃಂದ ಬಲ 128959 ಹುದ್ದೆಗಳಾಗಿರುತ್ತದೆ. 2024ರ ವೃಂದಬಲ ನಿಗಧಿಯಲ್ಲಿ ಪಾಥಮಿಕ ಶಾಲಾ ಶಿಕ್ಷಕರ ವೃಂದಬಲ ಒಟ್ಟು 120707 ಆಗಿದ್ದು, ಇವುಗಳಲ್ಲಿ ಮರುಹಂಚಿಕೆಯ ನಂತರ 6117 ಪ್ರಾಥಮಿಕ ಶಾಲಾ ಶಿಕ್ಷಕರ (PST) ಹುದ್ದೆಗಳು ಮೀಸಲು ಹುದ್ದೆಗಳಾಗಿರುತ್ತವೆ.

ಮುಂದುವರೆದು, ಪಸ್ತುತ ಅಂದಾಜು 2500 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಕರ ಹುದ್ದೆಗಳನ್ನು ನೀಡಬೇಕಾಗಿರುತ್ತದೆ. ಸದರಿ ಹುದ್ದೆಗಳ ವೇತನ ಶ್ರೇಣಿ ರೂ.44425-83700 ರಂತೆ ನಿಗದಿಪಡಿಸಬಹುದಾಗಿದ್ದು, ಇದಕ್ಕಾಗಿ ಪ್ರಾಥಮಿಕ ಶಾಲಾ ಶಿಕ್ಷಕರ (PST) ಮೀಸಲು ಹುದ್ದೆಗಳನ್ನು ಬಳಸಬಹುದಾಗಿದ್ದು SRHM ಮತ್ತು HM ಹುದ್ದೆಗಳಿಗೆ ಬೋಧನೆಯೊಂದಿಗೆ ಆಡಳಿತಾತ್ಮಕ ಜವಾಬ್ದಾರಿಗಳು ಇರುವ ಕಾರಣ ವೇತನ ಶ್ರೇ ರೂ.41300-81800 ಹೊಂದಿರುವ ಮೀಸಲಿರುವ 6117 ಬೋಧಕ ಹುದ್ದೆಗಳಾದ PST AM ಹುದ್ದೆಗಳಲ್ಲಿ 2500 ಹುದ್ದೆಗಳನ್ನು ಮಾಹಿತಿ ತಂತ್ರಜ್ಞಾನ ಶಿಕ್ಷಕರ ಹುದ್ದೆಗಳನ್ನಾಗಿ ಪರಿವರ್ತಿಸಬಹುದಾಗಿರುತ್ತದೆ. ಇದರಿಂದಾಗಿ ಸರ್ಕಾರಕ್ಕೆ ವಾರ್ಷಿಕ ಒಟ್ಟು ರೂ.1141.50 ಲಕ್ಷಗಳು ಹೆಚ್ಚುವರಿಯಾಗಿ ಅಗತ್ಯವಾಗಲಿರುವುದರಿಂದ ಮೇಲಿನ ಅಂಶಗಳನ್ನು ಪರಿಗಣಿಸಿ, ರಾಜ್ಯದ ಅಂದಾಜು 2500 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಕಂಪೂಟರ್ ಶಿಕ್ಷಕರ ಹುದ್ದೆಗಳನ್ನು ನೀಡಲು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ಮಾಡುವಂತೆ ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ ಶಾಲಾ ಶಿಕ್ಷಣ ಇಲಾಖೆಯ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮರು ಹೊಂದಾಣಿಕೆ / ಮರು ಹಂಚಿಕೆಯ (Rationalisation) ನಂತರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಹೊಸದಾಗಿ ಸೃಜಿಸಿ 2500 ಮಾಹಿತಿ ತಂತ್ರಜ್ಞಾನ ಶಿಕ್ಷಕರ ಹುದ್ದೆಗಳನ್ನಾಗಿ ಪರಿವರ್ತಿಸಲು ಸರ್ಕಾರವು ತೀರ್ಮಾನಿಸಿದೆ.

ಅದರಂತೆ ಈ ಕೆಳಕಂಡ ಆದೇಶ ಹೊರಡಿಸಲಾಗಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣ ಇಲಾಖೆಯ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮಾಹಿತಿ ತಂತ್ರಜ್ಞಾನ ಶಿಕ್ಷಕರ ವೃಂದವನ್ನು ಸೃಜಿಸಿ ಮರು ಹೊಂದಾಣಿಕೆ / ಮರು ಹಂಚಿಕೆಯ ನಂತರ ಉಳಿದ 6,117 ಪ್ರಾಥಮಿಕ ಶಾಲಾ ಶಿಕ್ಷಕರ (PST) ಹುದ್ದೆಗಳಲ್ಲಿ 2500 ಮಾಹಿತಿ ತಂತ್ರಜ್ಞಾನ ಶಿಕ್ಷಕರ ಹುದ್ದೆಗಳನ್ನಾಗಿ (ವೇತನ ಶ್ರೇಣಿ ರೂ.44,425-83700) ಪರಿವರ್ತಿಸಿ ಆದೇಶಿಸಲಾಗಿದೆ.

ಮಾಹಿತಿ ತಂತ್ರಜ್ಞಾನ ಶಿಕ್ಷಕರ ವೃಂದಕ್ಕೆ ಪ್ರತ್ಯೇಕವಾಗಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸಲಾಗುವುದು.

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಇವರ ಟಿಪ್ಪಣಿ ಸಂಖ್ಯೆ: LAW -OPN 362 2026, ದಿನಾಂಕ: 14.05.2026, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಟಿಪ್ಪಣಿ ಸಂಖ್ಯೆ: DPAR/92/SRD/2026, ದಿನಾಂಕ: 20.05.2026 ಮತ್ತು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 21 ವೆಚ್ಚ-8/2026, ದಿನಾಂಕ: 06.06.2026 ಗಳಲ್ಲಿ ನೀಡಿರುವ ಸಹಮತಿಯನ್ನಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ.ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ) ಈ ಆದೇಶ ಹೊರಡಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಸಿದ್ಧರಾಮಯ್ಯ ಮುನಿಸಿನಿಂದ ಕೈತಪ್ಪಿದ ಸಚಿವ ಸ್ಥಾನ..? ಮನವೊಲಿಸಲು ಜಮೀರ್ ಅಹ್ಮದ್ ಕಸರತ್ತುಇಸ್ರೇಲ್, ಅಮೆರಿಕ ದಾಳಿಯಲ್ಲಿ ಮೃತಪಟ್ಟ 131 ದಿನಗಳ ನಂತರ ಜು. 9ರಂದು ಇರಾನ್ ಸುಪ್ರೀಂ ಲೀಡರ್ ಖಮೇನಿ ಅಂತ್ಯಕ್ರಿಯೆSHOCKING: ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ವಿಷಕಾರಿ ಅನಿಲ ಸೇವಿಸಿ ನಾಲ್ವರು ಸಾವುವಿವಾಹಿತೆಗೆ ಮತ್ತು ಬರುವ ಪಾನೀಯ ಕುಡಿಸಿ ರೇಪ್, ಬೆತ್ತಲೆ ಚಿತ್ರ ಸೆರೆಹಿಡಿದು ಬ್ಲಾಕ್ ಮೇಲ್BREAKING: ಇನ್ನು ಯಾರೂ ಒಂದು ರೂಪಾಯಿ ಲಂಚ ಕೊಡಬೇಕಿಲ್ಲ: ಭ್ರಷ್ಟಾಚಾರ ಮುಕ್ತ ರಾಜ್ಯವಾಗಿಸಲು ಸಿಎಂ ಡಿಕೆ ಮಹತ್ವದ ಹೆಜ್ಜೆಶಿವಮೊಗ್ಗ: ಕೊಳೆತ ಸ್ಥಿತಿಯಲ್ಲಿ ಮಹಿಳೆ, ಸಾಕು ನಾಯಿ ಶವ ಪತ್ತೆಧರ್ಮಸ್ಥಳ ಬುರುಡೆ ಗ್ಯಾಂಗ್ ಪ್ರಕರಣ: ಚಿನ್ನಯ್ಯನ ಬ್ರೇನ್ ಮ್ಯಾಪಿಂಗ್ ಹಾಗೂ ರಿಟ್ ಅರ್ಜಿ ತನಿಖೆ ನಡೆಸುವಂತೆ SITಗೆ ಗಿರೀಶ್ ಮಟ್ಟಣ್ಣನವರ್ ದೂರುBREAKING: ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳಿಗೆ ಮುಖ್ಯ ಮಾಹಿತಿ: ಯೋಜನೆ ಸೌಲಭ್ಯ ಪಡೆಯಲು ಮತ್ತೆ ಅರ್ಜಿ ಸಲ್ಲಿಸಬೇಕು: ಸಿಎಂ ಡಿಕೆ ಮಾಹಿತಿದೇಶದಲ್ಲಿ ನಕ್ಸಲ್ ಚಟುವಟಿಕೆಗಳಿಗೆ ವಿದೇಶದಿಂದ ಕೋಟ್ಯಂತರ ರೂ ಅಕ್ರಮ ಫಂಡಿಂಗ್ ಆರೋಪ: ಕರ್ನಾಟಕದ ನಾಲ್ವರು ಸೇರಿ 7 ಜನರ ವಿರುದ್ಧ FIR ದಾಖಲುಸಂಬಳ ಪಡೆಯುವ ಪ್ರತಿಯೊಬ್ಬ ಉದ್ಯೋಗಿಯೂ  ತಿಳಿಯಲೇಬೇಕಾದ ಸೀಕ್ರೆಟ್ ಪಿಎಫ್ ಕಟ್ ಆದ್ರೆ ಸಿಗುತ್ತೆ ₹7 ಲಕ್ಷದ ಬಿಗ್ ಇನ್ಶೂರೆನ್ಸ್ ಬೆನಿಫಿಟ್