LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪ

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಅಲ್ಪಸಂಖ್ಯಾತರರ ತುಷ್ಟೀಕರಣ ಮಾಡುವುದರ ಜೊತೆಗೆ ಅವರ ಓಲೈಕೆಯಲ್ಲೇ ತೊಡಗಿದೆ. ಹಿಂದೂ ಕಾರ್ಯಕರ್ತರ ಆಚರಣೆಗಳಿಗೆ ಅಡ್ಡಿ ಮಾಡುವುದೇ ಇವರ ಕೆಲಸವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿ.ನರಸೀಪುರದ ಪೊಲೀಸ್‌ ಇನ್‌ಸ್ಪೆಕ್ಟರ್‌ ಗಣಪತಿ ಆಚರಣೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ. ಹಿಂದೂ ಕಾರ್ಯಕರ್ತರು ಗಣೇಶ ಮೆರವಣಿಗೆ ವೇಳೆ ಮಸೀದಿ ಒಳಗೆ ಹೋಗಿ ಪಟಾಕಿ ಹೊಡೆಯುವುದು ಕಾನೂನು ಬಾಹಿರ. ಆದರೆ ಬೀದಿಯಲ್ಲೂ ಪಟಾಕಿ ಸಿಡಿಸಬಾರದು ಎಂದು ಹೇಳುವುದಾದರೆ ನಾವೇನು ಪಾಕಿಸ್ತಾನದಲ್ಲಿದ್ದೇವೆಯೇ ಎಂದು ಪ್ರಶ್ನಿಸಿದರು. 

ಗಣೇಶ ಚತುರ್ಥಿ ಕೇವಲ ಹಬ್ಬ ಅಲ್ಲ. ಅದು ಇಡೀ ರಾಷ್ಟ್ರದ ಜನರಲ್ಲಿ ಜಾಗೃತಿ ಮೂಡಿಸುವ ಆಚರಣೆ. ಗಣೇಶ ಹಬ್ಬ ಬಂದಾಗೆಲ್ಲ ಹಿಂದೂಗಳಿಗೆ ಈ ಸರ್ಕಾರ ತೊಂದರೆ ಮಾಡ್ತಾನೆ ಇದೆ. ಎಲ್ಲಕ್ಕೂ ಅನುಮತಿ ಪಡೆಯಬೇಕು. ಇನ್‌ಸ್ಪೆಕ್ಟರ್‌ ಎಚ್ಚರಿಕೆ ನೀಡಿದ್ದಾನೆಂದರೆ ಅದು ಅವರು ಮಾತನಾಡಿದಲ್ಲ. ಆಡಳಿತ ಪಕ್ಷ ಅವರ ಬಾಯಿಂದ ಮಾತನಾಡಿಸಿದೆ ಎಂದರು. 

ಸರ್ಕಾರ, ಸಚಿವರೇ ಹೊಣೆಯಾಗುತ್ತಾರೆ.. 

ವಂದೇ ಮಾತರಂ ವಿಚಾರದಲ್ಲೂ ಈ ಸರ್ಕಾರ ಎಡಬಿಡಂಗಿತನ ಪ್ರದರ್ಶನ ಮಾಡಿದೆ. ಇವರಿಗೆ ಭವಿಷ್ಯದಲ್ಲಿ ಹಿಂದೂಗಳ ಮತಗಳೇ ಬೇಡ ಎಂದಾದರೆ ಆಗಬಹುದು. ಆದರೆ ಈ ರೀತಿ ಪೊಲೀಸರು ಉದ್ಧಟತನದಿಂದ ನಡೆದುಕೊಳ್ಳಬಾರದು. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಹಿಂದೂಗಳು ತಾಳ್ಮೆ ಕಳೆದುಕೊಳ್ಳದೆ ಸಮಾಧಾನದಿಂದ ನಡೆದುಕೊಳ್ಳುತ್ತಿದ್ದರೂ ಅದಕ್ಕೂ ಅಡ್ಡಿ ಮಾಡುತ್ತಾರೆ. ನಾಳೆ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಸರ್ಕಾರ ಮತ್ತು ಗೃಹ ಸಚಿವರೇ ಹೊಣೆ ಎಂದು ಎಚ್ಚರಿಸಿದರು. 

ಗಣೇಶ ಆಚರಣೆಗೆ ಎಚ್ಚರಿಕೆ ನೀಡಿರುವ ಅಧಿಕಾರಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲೇ ಬೇಕು. ಈ ಬಗ್ಗೆ ಗೃಹ ಸಚಿವರು ಗಮನಹರಿಸಬೇಕು ಎಂದು ಆಗ್ರಹಿಸಿದರು.

ಮುಂದಿನ ಕಾರ್ಯತಂತ್ರ ಅಧಿವೇಶನ ನಂತರ...

ಈಗಾಗಲೇ ಪಾದಯಾತ್ರೆ ಮುಗಿದಿದೆ. ಯಶಸ್ವಿಯೂ ಆಗಿದೆ. ಮುಂದಿನ ನಮ್ಮ ಹೋರಾಟ, ಕಾರ್ಯಕ್ರಮಗಳ ಬಗ್ಗೆ ಅಧಿವೇಶನ ಮುಗಿದ ನಂತರ ತೀರ್ಮಾನ ಮಾಡಲಾಗುವುದು. ಅಧಿವೇಶನದಲ್ಲಿ ಚರ್ಚೆ ಮಾಡಲು ಸಾಕಷ್ಟು ವಿಷಯಗಳಿಗೆ. ಈ ಕುರಿತು ವಿರೋಧಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಲಾಗುವುದು. ಈಗಾಗಲೇ ನಡೆದ ಅಧಿವೇಶನ ನಾಗೇಂದ್ರ ರಾಜೀನಾಮೆ ವಿಷಯಕ್ಕಷ್ಟೇ ಸೀಮಿತವಾಯಿತು ಎಂದರು. 

ವಿದ್ಯುತ್‌ ಅಭಾವವಿದ್ದರೂ ನಿರ್ಲಕ್ಷ್ಯ.... 

ರಾಜ್ಯದಲ್ಲಿ ತೀವ್ರವಾದ ಬರವಿದೆ. ಇದರ ಜೊತೆಗೆ ವಿದ್ಯುತ್‌ ಅಭಾವವಿದೆ. ಬೋರ್‌ ಇದ್ದವರೂ ತ್ರಿಫೇಸ್‌ ವಿದ್ಯುತ್‌ ಇಲ್ಲದೆ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ವಿದ್ಯುತ್‌ ಕೊರತೆಯಾದಾಗ ಛತ್ತೀಸಗಡದಿಂದ ವಿದ್ಯುತ್‌ ಖರೀದಿ ಮಾಡಿದ್ದರು. ಆದರೆ ಈ ಸರ್ಕಾರಕ್ಕೆ ರೈತರೆಂದರೆ ಆಸಕ್ತಿಯೇ ಇಲ್ಲ. ಎಲ್ಲಾ ಕಡೆ ವಿದ್ಯುತ್‌ ಅಭಾವವಿದೆ ಎಂದರು. 

ಈಗ ಮೋಡಬಿತ್ತನೆಗೆ ಸರ್ಕಾರ ಮುಂದಾಗಿದೆ. 28 ಕೋಟಿ ಹಣವನ್ನು ಅದಕ್ಕಾಗಿ ಇಟ್ಟಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಈ ಮೋಡ ಬಿತ್ತನೆ ಸಹ ಫ್ಲಾಪ್‌ ಆಗಲಿದೆ ಎಂದು ವ್ಯಂಗ್ಯವಾಡಿದರು. 
 
ಸೆ.15 ರಂದು ಜೆ.ಪಿ.ನಡ್ಡಾ ರಾಜ್ಯಕ್ಕೆ... 

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರು ಇದೇ 15 ರಂದು ರಾಜ್ಯಕ್ಕೆ ಬರಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ 25 ವರ್ಷ ಪೂರೈಸಿದ್ದರ ಹಿನ್ನೆಲೆಯಲ್ಲಿ ದೇಶಾದ್ಯಂತ ಸೇವಾ ಸಂಕಲ್ಪ ಅಭಿಯಾನ ಮಾಡ್ತ ಇದ್ದೇವೆ. 15 ರಂದು ನಡ್ಡಾ  ಮಾಧ್ಯಮಗಳೊಂದಿಗೆ ಮಾತನಾಡಲಿದ್ದಾರೆ ಎಂದರು.  

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕಪ್ರತಿಭಟನೆ ಹೆಸರಲ್ಲಿ ಬಿಜೆಪಿಯದ್ದು ಸದಾರಮೆ ನಾಟಕ: ಆರ್.ಅಶೋಕ್‌ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿBREAKING: 'KPSC ರದ್ದು' ಮಾಡಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗೆ ಮನವಿ: ಸಚಿವ ಈಶ್ವರ ಖಂಡ್ರೆBREAKING: ಗಣೇಶೋತ್ಸವ ಆಚರಣೆಗೆ ಮಾರ್ಗಸೂಚಿ ಪ್ರಕಟಿಸಿದ ಬೆಸ್ಕಾಂ: ಈ ನಿಯಮಗಳ ಪಾಲನೆ ಕಡ್ಡಾಯಗಣೇಶ ತುಳಸಿಗೆ ಕೊಟ್ಟ ಶಾಪದ ಕತೆ ಇದು!