LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!

ಚಿತ್ರದುರ್ಗ : ಇಂದಿನ ಡಿಜಿಟಲ್ ಹಾಗೂ ಮೊಬೈಲ್ ಯುಗದಲ್ಲಿ ಯುವಪೀಳಿಗೆ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಿ, ಮಕ್ಕಳ ಸುಪ್ತ ಮನಸ್ಸಿನ ಸಾಮರ್ಥ್ಯವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಲೇಖಕ ಹಾಗೂ ಸಂಪನ್ಮೂಲ ವ್ಯಕ್ತಿ ಸಂತೋಷ್ ಬಿ.ಟಿ. ಅವರು ‘ನಮ್ಮ ಮಕ್ಕಳು ನಮ್ಮ ಭವಿಷ್ಯ’ ಎಂಬ ಮೌಲ್ಯಯುತ ಮಾರ್ಗದರ್ಶಿ ಕೃತಿಯನ್ನು ರಚಿಸಿದ್ದಾರೆ.

ಪ್ರತಿಯೊಬ್ಬ ಪೋಷಕರು ಮತ್ತು ಶಿಕ್ಷಕರು ಓದಲೇಬೇಕಾದ ಕೈಪಿಡಿಯಾಗಿ ಮೂಡಿಬಂದಿರುವ ಈ ಪುಸ್ತಕವು ಗಡೇಕಾರ ಪ್ರಕಾಶನದ ಮೂಲಕ ಲೋಕಾರ್ಪಣೆಗೊಳ್ಳುತ್ತಿದೆ.

ನೈಜ ಘಟನೆಗಳ ಮೂಲಕ ಮಕ್ಕಳ ಮನಸ್ಸಿನ ಅನಾವರಣ

ಮಕ್ಕಳ ಮನಸ್ಥಿತಿ ಅತ್ಯಂತ ಸೂಕ್ಷ್ಮವಾದುದು. ಸಮಾಜದಲ್ಲಿ ದಿನನಿತ್ಯ ನಡೆಯುವ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಕೃತಿಯನ್ನು ರೂಪಿಸಲಾಗಿದ್ದು, ಮಕ್ಕಳ ಆಲೋಚನೆಗಳು ಹೇಗೆ ಬದಲಾಗುತ್ತವೆ ಹಾಗೂ ಪ್ರಸ್ತುತ ಮೊಬೈಲ್ ಗೀಳು ಅವರ ಭವಿಷ್ಯದ ಮೇಲೆ ಯಾವ ರೀತಿಯ ದುಷ್ಪರಿಣಾಮ ಬೀರುತ್ತಿದೆ ಎಂಬುದನ್ನು ವಿಶ್ಲೇಷಿಸಲಾಗಿದೆ. ಮಕ್ಕಳ ಮನಸ್ಸಿನ ತಳಮಳಗಳನ್ನು ಅರಿತು ಅವರಲ್ಲಿ ಸಕಾರಾತ್ಮಕ ಬದಲಾವಣೆ ತರುವ ವಿಧಾನಗಳನ್ನು ಸರಳ ಶೈಲಿಯಲ್ಲಿ ವಿವರಿಸಲಾಗಿದೆ.

ಪೋಷಕರು, ಶಿಕ್ಷಕರು ಹಾಗೂ ಶಾಲಾ-ಕಾಲೇಜು ಆಡಳಿತ ಮಂಡಳಿಯ ಹೊಣೆಗಾರಿಕೆ

ಮಗುವಿನ ಬೆಳವಣಿಗೆ ಕೇವಲ ಅಂಕಗಳಿಗೆ ಸೀಮಿತವಾಗದೆ, ಸಮಗ್ರ ವ್ಯಕ್ತಿತ್ವ ರೂಪಿಸುವಲ್ಲಿ ಸಮಾಜದ ಪ್ರಮುಖ ಮೂರು ಕಂಬಗಳ ಪಾತ್ರವನ್ನು ಪುಸ್ತಕದಲ್ಲಿ ಒತ್ತಿ ಹೇಳಲಾಗಿದೆ:

  • ಪೋಷಕರ ಜವಾಬ್ದಾರಿ: ಮಕ್ಕಳ ದೈಹಿಕ ಬೆಳವಣಿಗೆಯ ಜೊತೆಗೆ ಅವರ ಆಹಾರ, ನೈತಿಕ ಶಿಕ್ಷಣ, ಮಾನಸಿಕ ಆರೋಗ್ಯ ಹಾಗೂ ನಿತ್ಯದ ನಡವಳಿಕೆಯನ್ನು ಪ್ರೀತಿಯಿಂದ ತಿದ್ದುವ ಹೊಣೆಗಾರಿಕೆ ಪೋಷಕರ ಮೇಲಿದೆ.

  • ಶಿಕ್ಷಕರ ಕರ್ತವ್ಯ: ಕೇವಲ ಪಠ್ಯ ಬೋಧನೆ ಮಾಡುವುದಲ್ಲದೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಗುರುತಿಸಿ, ಉತ್ತಮ ನಡತೆ ಹಾಗೂ ಜೀವನ ಮೌಲ್ಯಗಳನ್ನು ಧಾರೆ ಎರೆಯುವುದು ಶಿಕ್ಷಕರ ಕೆಲಸವಾಗಿದೆ.

  • ಆಡಳಿತ ಮಂಡಳಿಯ ಪಾತ್ರ: ಶಾಲಾ-ಕಾಲೇಜುಗಳು ಕೇವಲ ವ್ಯಾಪಾರೀ ಕೇಂದ್ರಗಳಾಗದೆ, ವಿದ್ಯಾರ್ಥಿಗಳಿಗೆ ಕಲಿಯಲು ಮುಕ್ತ ವಾತಾವರಣ ಮತ್ತು ಮಾನಸಿಕ ನೆಮ್ಮದಿಯ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಬದ್ಧತೆ ಹೊಂದಿರಬೇಕು.

ಮೆದುಳಿನ ಅಮೋಘ ಶಕ್ತಿ, ಸೂಕ್ತ ಮನಸ್ಸಿನ ಸಾಮರ್ಥ್ಯ ಹಾಗೂ ಮಾನಸಿಕ ಬದಲಾವಣೆ

ಮಾನವನ ಮೆದುಳು ಅಗಾಧ ಶಕ್ತಿಯ ಭಂಡಾರ. ಏಕಾಗ್ರತೆ, ಧ್ಯಾನ ಹಾಗೂ ದೃಢ ಸಂಕಲ್ಪದ ಮೂಲಕ ಸುಪ್ತ ಮನಸ್ಸನ್ನು (Subconscious Mind) ನಿಯಂತ್ರಿಸಿ ವಿದ್ಯಾರ್ಥಿಗಳು ತಮ್ಮ ಕಲಿಕಾ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ವೈಜ್ಞಾನಿಕವಾಗಿ ತೆರೆದಿಡಲಾಗಿದೆ. ಕೀಳರಿಮೆ, ಪರೀಕ್ಷಾ ಭಯ ಹಾಗೂ ನಕಾರಾತ್ಮಕ ಆಲೋಚನೆಗಳಿಂದ ಹೊರಬಂದು ಮಾನಸಿಕವಾಗಿ ಪರಿವರ್ತನೆ ಹೊಂದುವ ಪ್ರಾಯೋಗಿಕ ತಂತ್ರಗಳನ್ನು ಲೇಖಕರು ವಿವರಿಸಿದ್ದಾರೆ.

ವಿವಿಧ ಕೋರ್ಸ್‌ಗಳು ಮತ್ತು ವೃತ್ತಿ ಬದುಕಿನ ಮಾರ್ಗದರ್ಶನ

ಶಾಲಾ ಶಿಕ್ಷಣದ ನಂತರ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದಾದ ವಿವಿಧ ಶೈಕ್ಷಣಿಕ ಕೋರ್ಸ್‌ಗಳು ಹಾಗೂ ಭವಿಷ್ಯದ ವೃತ್ತಿ ಅವಕಾಶಗಳ ಕುರಿತು ಸಮಗ್ರ ಮಾಹಿತಿಯನ್ನು ಈ ಕೈಪಿಡಿ ಒಳಗೊಂಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಬಗೆ, ಉದ್ಯೋಗ ಮಾಹಿತಿಯ ಅಧಿಕೃತ ಜಾಲತಾಣಗಳ ಪರಿಚಯವನ್ನೂ ಸ್ಪರ್ಧಾರ್ಥಿಗಳಿಗಾಗಿ ಒದಗಿಸಲಾಗಿದೆ.

ಲೇಖಕರ ಹಿನ್ನೆಲೆ ಹಾಗೂ ಶ್ಲಾಘನೆ

ಮೂಲತಃ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬಿಳಸನೂರು ಗ್ರಾಮದವರಾದ ಸಂತೋಷ್ ಬಿ.ಟಿ. ಅವರು ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದು, ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಕೆ.ಪಿ.ಎಸ್.ಸಿ ಪರೀಕ್ಷೆಗಳಲ್ಲಿ ರಾಜ್ಯಮಟ್ಟದ ರ್ಯಾಂಕ್ ಗಳಿಸಿರುವ ಇವರು, ಪ್ರಸ್ತುತ ಚಿತ್ರದುರ್ಗದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನೂರಾರು ಐಎಎಸ್, ಕೆಎಎಸ್ ಮತ್ತು ಪೊಲೀಸ್ ಸ್ಪರ್ಧಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಅಪಾರ ಅನುಭವವನ್ನು ಹೊಂದಿರುವ ಇವರ ಈ ಕೃತಿಯು ಸಮಾಜಕ್ಕೆ ಅತ್ಯುತ್ತಮ ಕೊಡುಗೆ ಎಂದು ಲೇಖಕ-ಪ್ರಕಾಶಕ ಲಕ್ಷ್ಮಣ ಗಡೇಕಾರ ಹಾಗೂ ಶಿಕ್ಷಣ ತಜ್ಞ ಮಂಜುನಾಥ್. ಬಿ ಅಭಿನಂದಿಸಿದ್ದಾರೆ.

ಪುಸ್ತಕ ಖರೀದಿಗಾಗಿ ಸಂತೋಷ್ ಬಿ.ಟಿ ಅವರ 8431204434 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕಪ್ರತಿಭಟನೆ ಹೆಸರಲ್ಲಿ ಬಿಜೆಪಿಯದ್ದು ಸದಾರಮೆ ನಾಟಕ: ಆರ್.ಅಶೋಕ್‌ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿBREAKING: 'KPSC ರದ್ದು' ಮಾಡಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗೆ ಮನವಿ: ಸಚಿವ ಈಶ್ವರ ಖಂಡ್ರೆBREAKING: ಗಣೇಶೋತ್ಸವ ಆಚರಣೆಗೆ ಮಾರ್ಗಸೂಚಿ ಪ್ರಕಟಿಸಿದ ಬೆಸ್ಕಾಂ: ಈ ನಿಯಮಗಳ ಪಾಲನೆ ಕಡ್ಡಾಯಗಣೇಶ ತುಳಸಿಗೆ ಕೊಟ್ಟ ಶಾಪದ ಕತೆ ಇದು!