LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚಿನ್ನದ ದರ ಏರಿಕೆ ನಾಗಾಲೋಟ: ₹1.62 ಲಕ್ಷ ದಾಟಿದ ಅಪರಂಜಿ; ಆಭರಣ ಪ್ರಿಯರಿಗೆ ಶಾಕ್ ನೀಡಿದ ಕೇಂದ್ರ

ಬೆಂಗಳೂರು: ಅಮೆರಿಕ- ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ವಿದೇಶಿ ವಿನಿಮಯ ಉಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನ ಕೊಳ್ಳದಂತೆ ಕರೆ ನೀಡಿದ ಬೆನ್ನಲ್ಲೇ, ಮಾರುಕಟ್ಟೆಯಲ್ಲಿ ಚಿನ್ನದ ದರ ಗಗನಕ್ಕೇರಿದೆ. ಕೇಂದ್ರ ಸರ್ಕಾರವು ಚಿನ್ನದ ಆಮದು ಸುಂಕವನ್ನು (Import Duty) ಶೇ. 6 ರಿಂದ ಶೇ. 15 ಕ್ಕೆ ಏರಿಸಿದ ಪರಿಣಾಮವಾಗಿ, ಕಳೆದೆರಡು ದಿನಗಳಿಂದ ಬೆಲೆಗಳು ರಾಕೆಟ್ ವೇಗದಲ್ಲಿ ಏರಿಕೆ ಕಾಣುತ್ತಿವೆ.

ಬೆಂಗಳೂರಲ್ಲಿ ಇಂದಿನ ಲೇಟೆಸ್ಟ್ ದರಗಳು (ಮೇ 14, 2026):

24 ಕ್ಯಾರೆಟ್ ಚಿನ್ನ (ಅಪರಂಜಿ):

ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ ₹330 ಏರಿಕೆಯಾಗಿದ್ದು, ₹1,62,330 ದಾಖಲಾಗಿದೆ.

ಇಂದು 1 ಗ್ರಾಂ ಚಿನ್ನದ ಬೆಲೆ ₹33 ಏರಿಕೆ ಕಂಡು ₹16,233 ಕ್ಕೆ ತಲುಪಿದೆ.

ಗಮನಾರ್ಹವಾಗಿ, ನಿನ್ನೆ ಬುಧವಾರ ಒಂದೇ ದಿನ ₹8,020 ರಷ್ಟು ಭಾರೀ ಏರಿಕೆ ಕಂಡು ₹1,62,000 ದಾಖಲಾಗಿತ್ತು.

22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ):

ಇಂದು ಪ್ರತಿ 10 ಗ್ರಾಂ ಚಿನ್ನದ ಮೇಲೆ ₹300 ಏರಿಕೆಯಾಗಿದ್ದು, ₹1,48,800 ರಂತೆ ವಹಿವಾಟು ನಡೆಸುತ್ತಿದೆ.

ನಿನ್ನೆ ಬುಧವಾರ ಈ ದರ ₹1,48,500 ಕ್ಕೆ ತಲುಪಿತ್ತು.

ಬೆಳ್ಳಿ ದರದಲ್ಲಿ ಅಲ್ಪ ಇಳಿಕೆ:

ಚಿನ್ನದ ಬೆಲೆ ಏರುತ್ತಿದ್ದರೂ, ಬೆಳ್ಳಿ ದರದಲ್ಲಿ ಇಂದು ಸ್ವಲ್ಪ ಸಮಾಧಾನಕರ ಅಂಶ ಕಂಡುಬಂದಿದೆ. ಇಂದು ಪ್ರತಿ ಕೆಜಿ ಬೆಳ್ಳಿ ದರ ₹10,000 ಇಳಿಕೆಯಾಗಿದೆ.

ಆಮದು ಸುಂಕ ಏರಿಕೆಗೆ ಕಾರಣವೇನು?

ವಿದೇಶಿ ವಿನಿಮಯವನ್ನು ಉಳಿಸಲು ಮತ್ತು ಅತಿಯಾದ ಆಮದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ ಮೇಲಿನ ಸುಂಕವನ್ನು ಶೇ. 15ಕ್ಕೆ ಏರಿಸಿದೆ. ಪ್ರಧಾನಿ ಮೋದಿಯವರು ಕೂಡ ಚಿನ್ನದ ಖರೀದಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಈ ಆಕಸ್ಮಿಕ ಬದಲಾವಣೆಯು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ್ದು, ಆಭರಣ ಖರೀದಿದಾರರಲ್ಲಿ ಆತಂಕ ಮೂಡಿಸಿದೆ.

ಭಾರತದ ಪ್ರಮುಖ ನಗರದಲ್ಲಿ ಚಿನ್ನದ ಬೆಲೆ

ನಗರ 24 ಕ್ಯಾರಟ್ ಚಿನ್ನದ ದರ (1 ಗ್ರಾಂ)

ಚೆನ್ನೈ ₹16,418

ಮುಂಬೈ ₹16,233

ದೆಹಲಿ ₹16,226

ಕೋಲ್ಕತ್ತಾ ₹16,233

ಬೆಂಗಳೂರು ₹16,233

ಹೈದರಾಬಾದ್ ₹16,233

ಕೇರಳ ₹16,233

ಪುಣೆ ₹16,233

ವಡೋದರಾ ₹16,238

ಅಹಮದಾಬಾದ್ ₹16,238

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ