LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸತತ ಇಳಿಕೆ ಬೆನ್ನಲ್ಲೇ ರಾಕೆಟ್ ವೇಗದಲ್ಲಿ ಜಿಗಿದ ಚಿನ್ನ, ಬೆಳ್ಳಿ ಬೆಲೆ: ಒಂದೇ ದಿನ ಬಂಗಾರ ₹2,940, ಬೆಳ್ಳಿ ₹10,000 ಏರಿಕೆ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸತತವಾಗಿ ಇಳಿಕೆಯಾಗಿ ಗ್ರಾಹಕರ ಜೇಬಿಗೆ ಕೊಂಚ ನೆಮ್ಮದಿ ನೀಡಿದ್ದ ಚಿನ್ನ ಹಾಗೂ ಬೆಳ್ಳಿ ಬೆಲೆ, ವೀಕೆಂಡ್ ಆರಂಭದಲ್ಲೇ ಗ್ರಾಹಕರಿಗೆ ಚುರುಕು ಮುಟ್ಟಿಸಿದೆ ಭಾರತದ ಮಾರುಕಟ್ಟೆಯಲ್ಲಿ ಶುಕ್ರವಾರ (ಜೂನ್ 12) ಬಂಗಾರ ಮತ್ತು ಬೆಳ್ಳಿ ಬೆಲೆಯಲ್ಲಿ ದಿಢೀರ್ ಭಾರಿ ಜಿಗಿತ ಕಂಡುಬಂದಿದೆ. ಕಳೆದ ಒಂದು ವಾರದಲ್ಲಿ ಬರೋಬ್ಬರಿ 9,000 ರೂಪಾಯಿಗಿಂತಲೂ ಹೆಚ್ಚು ಕುಸಿದಿದ್ದ ಹಳದಿ ಲೋಹದ ಬೆಲೆ, ಇಂದು ಒಂದೇ ದಿನ ಬರೋಬ್ಬರಿ ₹2,940 ರಷ್ಟು ಭಾರಿ ಏರಿಕೆ ಕಂಡಿದೆ. ಇತ್ತ ಬೆಳ್ಳಿ ಬೆಲೆಯೂ ಕೂಡ ಗ್ರಾಹಕರು ತಲೆಮೇಲೆ ಕೈ ಹೊರುವಂತೆ ಮಾಡಿದ್ದು, ಕೆಜಿಗೆ ಬರೋಬ್ಬರಿ ₹10,000 ಜಂಪ್ ಆಗಿದೆ

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಇಂದಿನ ಲೇಟೆಸ್ಟ್ ದರ ಎಷ್ಟು?

ದೇಶದ ಪ್ರಮುಖ ಮಾರುಕಟ್ಟೆಗಳು ಹಾಗೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿಯ ನಿಖರ ದರಗಳ ಲಿಸ್ಟ್ ಇಲ್ಲಿದೆ:

22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): 10 ಗ್ರಾಮ್‌ಗೆ ₹1,36,200 ಆಗಿದೆ.

24 ಕ್ಯಾರೆಟ್ ಚಿನ್ನ (ಅಪರಂಜಿ ಚಿನ್ನ): 10 ಗ್ರಾಮ್‌ಗೆ ₹1,48,580 ತಲುಪಿದೆ.

ಬೆಳ್ಳಿ ಬೆಲೆ (Silver Rate): ಬೆಂಗಳೂರಿನಲ್ಲಿ 100 ಗ್ರಾಮ್ ಬೆಳ್ಳಿ ಬೆಲೆ ₹26,000 ಇದೆ (ಅಂದರೆ 1 ಕೆಜಿ ಬೆಳ್ಳಿಗೆ ಬರೋಬ್ಬರಿ ₹2,60,000 ತಲುಪಿದೆ). ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ 100 ಗ್ರಾಮ್ ಬೆಳ್ಳಿ ಬೆಲೆ ₹26,500 ರಷ್ಟಿದೆ.

ಕಳೆದ ವಾರ ಭಾರಿ ಕುಸಿತ, ಇವತ್ತು ದಿಢೀರ್ ಜಿಗಿತಕ್ಕೆ ಕಾರಣವೇನು?

ಕಳೆದ ಎರಡು ದಿನಗಳ ಹಿಂದಷ್ಟೇ 600 ರೂಪಾಯಿಗಿಂತಲೂ ಅಧಿಕ ಇಳಿಕೆ ಕಂಡುಬಂದಿತ್ತು. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಳದಿ ಲೋಹಕ್ಕೆ ಬೇಡಿಕೆ ದಿಢೀರ್ ಹೆಚ್ಚಾದ ಹಿನ್ನೆಲೆಯಲ್ಲಿ ವಿದೇಶಗಳಲ್ಲೂ ಚಿನ್ನದ ದರ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಇದರ ನೇರ ಪರಿಣಾಮ ಭಾರತೀಯ ಮಾರುಕಟ್ಟೆಯ ಮೇಲೂ ಬಿದ್ದಿದ್ದು, ಕೇವಲ ಒಂದು ವಾರದಲ್ಲಿ ಆಭರಣ ಪ್ರಿಯರಿಗೆ ಸಿಕ್ಕಿದ್ದ ಭಾರಿ ಆಫರ್ ಈಗ ಕೈತಪ್ಪಿದಂತಾಗಿದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

ಬೆಂಗಳೂರು ₹1,48,580

ನಾಗ್ಪುರ ₹1,48,580

ಮುಂಬೈ ₹1,48,580

ಚೆನ್ನೈ ₹1,50,550

ಕೋಲ್ಕತ್ತಾ ₹1,48,580

ಪಾಟ್ನಾ ₹1,48,630

ಸೂರತ್‌ ₹1,48,630

ಚಂಡೀಗಢ ₹1,48,730

ಲಕ್ನೋ ₹1,48,730

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ