LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

3,395 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ಜರಿ ನೇಮಕಾತಿ: ತೃತೀಯ ಲಿಂಗಿಗಳಿಗೆ 35 ಸೀಟು ಫಿಕ್ಸ್ ಅರ್ಹತೆಗಳೇನು?

ಮಂಗಳೂರು: ಖಾಕಿ ಧರಿಸಿ ದೇಶ ಸೇವೆ ಮಾಡಬೇಕು ಅಂದುಕೊಂಡಿರುವ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಪೊಲೀಸ್ ಇಲಾಖೆಯು ಬಿಗ್ ಗಿಫ್ಟ್ ನೀಡಿದೆ. ರಾಜ್ಯಾದ್ಯಂತ ಖಾಲಿ ಇರುವ ಒಟ್ಟು 3,395 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಅಧಿಕೃತವಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಬಾರಿಯ ನೇಮಕಾತಿಯಲ್ಲಿ ಮಹಿಳೆಯರಿಗೆ ಸಿಂಹಪಾಲು ನೀಡಲಾಗಿದ್ದು, ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ತೃತೀಯ ಲಿಂಗಿಗಳಿಗೂ (Transgenders) ವಿಶೇಷ ಮೀಸಲಾತಿ ಕಲ್ಪಿಸಿರುವುದು ಈ ನೋಟಿಫಿಕೇಶನ್‌ನ ಅತ್ಯಂತ ಬಿಗ್ ಹೈಲೈಟ್ ಆಗಿದೆ

ಮಹಿಳೆಯರಿಗೆ ಸಿಂಹಪಾಲು, ತೃತೀಯ ಲಿಂಗಿಗಳಿಗೆ 35 ಸೀಟು ಫಿಕ್ಸ್

ಈ ಬಾರಿಯ 3,395 ಹುದ್ದೆಗಳ ಭರ್ತಿಯಲ್ಲಿ ಇಲಾಖೆಯು ವರ್ಗಾವಾರು ಈ ಕೆಳಗಿನಂತೆ ಹಂಚಿಕೆ ಮಾಡಿದೆ:

ಮಹಿಳಾ ಅಭ್ಯರ್ಥಿಗಳು (ಸಿಂಹಪಾಲು): ಶೇ.66.75 ರಷ್ಟು ಅಂದರೆ ಬರೋಬ್ಬರಿ 2,266 ಹುದ್ದೆಗಳನ್ನು ಮಹಿಳೆಯರಿಗಾಗಿಯೇ ಮೀಸಲಿಡಲಾಗಿದೆ

ಪುರುಷ ಅಭ್ಯರ್ಥಿಗಳು: 755 ಹುದ್ದೆಗಳು.

ಮಾಜಿ ಸೈನಿಕರು (ಸೇನೆ): 257 ಹುದ್ದೆಗಳು.

ಮಹಿಳಾ ಸೇವಾ ಸಿಬ್ಬಂದಿ: 82 ಹುದ್ದೆಗಳು.

ತೃತೀಯ ಲಿಂಗಿಗಳು: 35 ಹುದ್ದೆಗಳು.

ಕಳೆದ 2025ರ ನೇಮಕಾತಿಯಲ್ಲೂ ತೃತೀಯ ಲಿಂಗಿಗಳಿಗೆ ಅವಕಾಶ ನೀಡಲಾಗಿತ್ತಾದರೂ, ಪರೀಕ್ಷಾ ವಿಧಾನ ಮತ್ತು ದೈಹಿಕ ಪರೀಕ್ಷೆಯ (Physical Test) ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ ಕೇವಲ ಇಬ್ಬರು ಮಾತ್ರ ಆಯ್ಕೆಯಾಗಿದ್ದರು. ಹೀಗಾಗಿ ಈ ಬಾರಿ 35 ಹುದ್ದೆಗಳನ್ನು ಮೀಸಲಿಟ್ಟು ಅರಿವು ಮೂಡಿಸಲಾಗುತ್ತಿದೆ.

ತೃತೀಯ ಲಿಂಗಿಗಳಿಗೆ ಜಿಲ್ಲಾವಾರು ಹುದ್ದೆಗಳ ಲೆಕ್ಕಾಚಾರ:

ಒಟ್ಟು 35 ಹುದ್ದೆಗಳ ಪೈಕಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಸಿಂಹಪಾಲು ನೀಡಲಾಗಿದೆ:

ಬೆಂಗಳೂರು ನಗರ: 25 ಹುದ್ದೆಗಳು.

ಮೈಸೂರು ನಗರ-1, ಹುಬ್ಬಳ್ಳಿ-ಧಾರವಾಡ-1, ಮಂಗಳೂರು ನಗರ-1, ಮೈಸೂರು ಜಿಲ್ಲೆ-1, ಕೊಡಗು-1, ಮಂಡ್ಯ-1, ಶಿವಮೊಗ್ಗ-1, ಚಿತ್ರದುರ್ಗ-1, ಹಾವೇರಿ-1, ಉಡುಪಿ ಜಿಲ್ಲೆಗೆ 1 ಹುದ್ದೆಯನ್ನು ಫಿಕ್ಸ್ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು? (Eligibility & Qualification)

ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದ ಮಂಡಳಿಯಿಂದ ಪಿಯುಸಿ (PUC / 12th Std) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ (Age Limit):

ಸಾಮಾನ್ಯ ವರ್ಗದ (General Category) ಅಭ್ಯರ್ಥಿಗಳಿಗೆ: 18 ರಿಂದ 33 ವರ್ಷ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (SC/ST) ಮತ್ತು ಒಬಿಸಿ (OBC) ಅಭ್ಯರ್ಥಿಗಳಿಗೆ: 18 ರಿಂದ 35 ವರ್ಷ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ (Written Exam), ದೇಹದಾಢ್ರ್ಯತೆ (Physical Standard Test) ಮತ್ತು ಸಹಿಷ್ಣುತೆ ಪರೀಕ್ಷೆಯ ಮೂಲಕ ಅರ್ಹರನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: ಜೂನ್ 8, 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 3, 2026

ಅರ್ಜಿ ಶುಲ್ಕ ಪಾವತಿಸಲು ಲಾಸ್ಟ್ ಡೇಟ್: ಜುಲೈ 4, 2026

ಲಿಖಿತ ಪರೀಕ್ಷೆ ನಡೆಯುವ ದಿನಾಂಕ: ಆಗಸ್ಟ್ 2, 2026

ನಿಮ್ಮ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ನೋಡಿ?

ರಾಜ್ಯದ ಒಟ್ಟು 25 ಕ್ಕೂ ಅಧಿಕ ವಿಭಾಗಗಳಲ್ಲಿ ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಲಾಗಿದೆ:

ಬೆಂಗಳೂರು ನಗರ: 2,015 (ಅತಿ ಹೆಚ್ಚು)

ಮಂಗಳೂರು ನಗರ: 125

ಮಂಡ್ಯ: 100

ಶಿವಮೊಗ್ಗ: 100

ಉಡುಪಿ: 100

ಮೈಸೂರು ಜಿಲ್ಲೆ: 58

ಕೊಡಗು: 75

ಚಿತ್ರದುರ್ಗ: 75

ಹುಬ್ಬಳ್ಳಿ-ಧಾರವಾಡ: 75

ಮೈಸೂರು ನಗರ: 70

ದಕ್ಷಿಣ ಕನ್ನಡ ಜಿಲ್ಲೆ: 70

ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾವೇರಿ, ಉತ್ತರ ಕನ್ನಡ, ಚಿಕ್ಕಮಗಳೂರು: ತಲಾ 50 ಹುದ್ದೆಗಳು.

ಹಾಸನ: 40

ಗದಗ: 35

ರೈಲ್ವೇಸ್‌ ಬೆಂಗಳೂರು: 25

ದಾವಣಗೆರೆ: 25

ರಾಯಚೂರು: 20

ಬಳ್ಳಾರಿ: 10 ಹುದ್ದೆಗಳು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ