LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚಿನ್ನದ ದರ ಇತಿಹಾಸ:56 ವರ್ಷಗಳ ಹಿಂದೆ 10 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು? ಹಳೆಯ ಬಿಲ್‌ನಿಂದ ಬಯಲಾಯ್ತು ಅಚ್ಚರಿಯ ಸತ್ಯ

ಬೆಂಗಳೂರು: ಇಂದಿನ ದುಬಾರಿ ಕಾಲದಲ್ಲಿ ಮಧ್ಯಮ ವರ್ಗದ ಜನರಿಗೆ ಚಿನ್ನದ ಆಭರಣ ಖರೀದಿಸುವುದು ಒಂದು ದೊಡ್ಡ ಕನಸಾಗಿ ಉಳಿದಿದೆ. ದಿನದಿಂದ ದಿನಕ್ಕೆ ಬಂಗಾರದ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ, ಸೋಷಿಯಲ್ ಮೀಡಿಯಾದಲ್ಲಿ 56 ವರ್ಷ ಹಳೆಯದಾದ ಚಿನ್ನದ ಬಿಲ್ ಒಂದು ಭಾರಿ ಸದ್ದು ಮಾಡುತ್ತಿದೆ. ಆ ಕಾಲದ ಚಿನ್ನದ ದರ ನೋಡಿದರೆ ನೀವು ಖಂಡಿತ ಆಶ್ಚರ್ಯ ಪಡುತ್ತೀರಿ

ವೈರಲ್ ಬಿಲ್‌ನಲ್ಲೇನಿದೆ?

ಜೈಪುರದ ಪ್ರಸಿದ್ಧ ಶ್ಯಾಮ್ ಜ್ಯುವೆಲ್ಲರ್ಸ್‌ಗೆ ಸೇರಿದ 1969-70ರ ಅವಧಿಯ ಈ ಬಿಲ್‌ನಲ್ಲಿ ಬೆಲೆಗಳು ನಂಬಲಸಾಧ್ಯವಾಗಿವೆ:

22 ಕ್ಯಾರೆಟ್ ಬಂಗಾರ: ಆಗ 20 ಗ್ರಾಂ ಚಿನ್ನದ ಬೆಲೆ ಕೇವಲ ₹370

10 ಗ್ರಾಂ ದರ: ಅಂದರೆ ಕೇವಲ ₹185 ಕ್ಕೆ 10 ಗ್ರಾಂ ಚಿನ್ನ ಲಭ್ಯವಿತ್ತು.

ಮೇಕಿಂಗ್ ಚಾರ್ಜ್: ಅಚ್ಚರಿಯೆಂದರೆ ಕೇವಲ ₹15 ಮೇಕಿಂಗ್ ಚಾರ್ಜ್ ಇತ್ತು.

ಬೆಳ್ಳಿ ಬೆಲೆ: 100 ಗ್ರಾಂ ಬೆಳ್ಳಿಯನ್ನು ಗ್ರಾಹಕರು ಕೇವಲ ₹60 ಕೊಟ್ಟು ಮನೆಗೆ ಕೊಂಡೊಯ್ಯುತ್ತಿದ್ದರು.

800 ಪಟ್ಟು ಹೆಚ್ಚಾದ ಬಂಗಾರದ ಬೆಲೆ

1970ರ ದಶಕದಲ್ಲಿ ಸಾಮಾನ್ಯ ಜನರ ಕೈಗೆಟುಕುವಂತಿದ್ದ ಚಿನ್ನ, 1990ರ ಆರ್ಥಿಕ ಉದಾರೀಕರಣದ ನಂತರ ಏರುತ್ತಲೇ ಸಾಗಿದೆ. 56 ವರ್ಷಗಳ ಅವಧಿಯಲ್ಲಿ ಚಿನ್ನದ ಬೆಲೆ ಬರೋಬ್ಬರಿ 800 ಪಟ್ಟು ಏರಿಕೆಯಾಗಿದೆ.ಇಂದಿನ ದರ (ಅಂದಾಜು) 24 ಕ್ಯಾರೆಟ್ ಚಿನ್ನ ₹1,62,000 ಹಾಗೂ 22 ಕ್ಯಾರೆಟ್ ಚಿನ್ನ ₹1,49,000 ರ ಆಸುಪಾಸಿನಲ್ಲಿದೆ.

ಹೂಡಿಕೆದಾರರಿಗೆ ಚಿನ್ನವೇ ಆಸರೆ

ಈ ವೈರಲ್ ಬಿಲ್ ಒಂದು ಪ್ರಮುಖ ಪಾಠವನ್ನು ಕಲಿಸುತ್ತದೆ ಅದುವೇ ದೀರ್ಘಾವಧಿ ಹೂಡಿಕೆ. ಅಂದು ಕೇವಲ ₹370 ಹೂಡಿಕೆ ಮಾಡಿದ ವ್ಯಕ್ತಿಯ ಆಸ್ತಿ ಇಂದು ಲಕ್ಷಾಂತರ ರೂಪಾಯಿ ಮೌಲ್ಯದ್ದಾಗಿದೆ. ಇಂದು ಆಭರಣಗಳ ಮೇಕಿಂಗ್ ಚಾರ್ಜ್ ಶೇ. 10 ರಿಂದ 25 ರಷ್ಟಿದ್ದು, ಅಂದಿಗೂ ಇಂದಿಗೂ ಆಕಾಶ ಭೂಮಿ ವ್ಯತ್ಯಾಸವಿದೆ.

ತಜ್ಞರ ಸಲಹೆ ಏನು?

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಒಂದು ವರ್ಷಗಳ ಕಾಲ ಚಿನ್ನದ ಖರೀದಿ ಕಡಿಮೆ ಮಾಡುವಂತೆ ಮನವಿ ಮಾಡಿದ್ದರು. ಹಣಕಾಸು ತಜ್ಞರ ಪ್ರಕಾರ ನಿಮ್ಮ ಒಟ್ಟು ಹೂಡಿಕೆಯ ಶೇ. 5-10 ರಷ್ಟು ಮಾತ್ರ ಚಿನ್ನದಲ್ಲಿರಲಿ.ಬೆಲೆ ವಿಪರೀತ ಹೆಚ್ಚಿರುವಾಗ ಬೃಹತ್ ಪ್ರಮಾಣದಲ್ಲಿ ಖರೀದಿಸುವುದು ಬೇಡ.ಚಿನ್ನ ಕೇವಲ ಆಭರಣವಲ್ಲ, ಆಪತ್ಕಾಲದ ಆಸ್ತಿ ಎಂಬುದನ್ನು ಮರೆಯಬೇಡಿ.ಒಟ್ಟಿನಲ್ಲಿ, ಅಂದು ನೂರರಲ್ಲಿದ್ದ ಚಿನ್ನ ಇಂದು ಲಕ್ಷದ ಗಡಿ ದಾಟಿದೆ. ಈ ಹಳೆಯ ಬಿಲ್ ಮಾತ್ರ ಅಂದಿನ ಸುವರ್ಣ ಯುಗವನ್ನು ನೆನಪಿಸುತ್ತಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ