ಯಾದಗಿರಿ : ಮೊಟನಹಳ್ಳಿ ಬಳಿಯ ಬಗ್ಗಲುಮುಡು ಅರಣ್ಯ ಬಳಿ ನವಿಲುಗಳನ್ನು ಬೇಟೆಯಾಡಿದ 7 ಆರೋಪಿಗಳನ್ನು ಇದೀಗ ಅರಣ್ಯ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಯಾದಗಿರಿ ತಾಲೂಕಿನ ಮೋಟನ ಹಳ್ಳಿಯ ಅರಣ್ಯ ಪ್ರದೇಶದಲ್ಲಿ ನವಿಲುಗಳನ್ನು ಬೇಟೆ ಯಾಗಿದ್ದರು.
ಯಾದಗಿರಿ ಪ್ರದೇಶದ ಅರಣ್ಯ ಅಧಿಕಾರಿಗಳಿಂದ ಆರೋಪಿಗಳನ್ನು ಬಂಧಿಸಲಾಗಿದೆ. ನಿಂಗಪ್ಪ, ವಾಸುದೇವ, ಕರೆಪ್ಪ, ಕಾಂತಪ್ಪ, ಯಲ್ಲಾಲಿಂಗ, ಬಸವರಾಜ ಹಾಗೂ ಮಲ್ಲಪ್ಪ ಬಂಧಿತ ಆರೋಪಿಗಳು. ಎರಡು ನವಿಲುಗಳನ್ನು 7 ಆರೋಪಿಗಳು ಬೇಟೆಯಾಡಿದ್ದರು. ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳು ದಾಳಿ ಮಾಡಿದ್ದಾರೆ.ಈ ವೇಳೆ 6 ನಾಡ ಬಂದೂಕುಗಳನ್ನು ವಶಕ್ಕೆ ಪಡೆದಿದ್ದಾರೆ.