LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS : ಕರ್ನಾಟಕದ ನೂತನ ‘CM’ ಪ್ರಮಾಣ ವಚನ ಸಮಾರಂಭ : ಭದ್ರತೆ ಮತ್ತು ಶಿಷ್ಟಾಚಾರಕ್ಕಾಗಿ 100 ಡಿ.ವಿ ವಾಹನಗಳ ನಿಯೋಜನೆ.!

ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯವರ ಪದಗ್ರಹಣ ಮತ್ತು ಗೌಪ್ಯತಾ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ತುರ್ತು ಸಿದ್ಧತೆಗಳನ್ನು ಆರಂಭಿಸಿದೆ. ಮುಖ್ಯಮಂತ್ರಿಯವರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳುವ ಗಣ್ಯರ ಶಿಷ್ಟಾಚಾರ ಮತ್ತು ಭದ್ರತೆಯ ಉದ್ದೇಶಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 100 ಡಿ.ವಿ (D.V) ವಾಹನಗಳನ್ನು ಬೆಂಗಳೂರಿಗೆ ಕಳುಹಿಸಲು ಸರ್ಕಾರ ಆದೇಶಿಸಿದೆ.

ಈ ಸಂಬಂಧ ಸರ್ಕಾರವು ಅಧಿಕೃತ ಪತ್ರವನ್ನು ಹೊರಡಿಸಿದ್ದು, ಜಿಲ್ಲಾಧಿಕಾರಿಗಳಿಗೆ ಈ ವಾಹನಗಳನ್ನು ತುರ್ತಾಗಿ ನಿಯೋಜಿಸುವಂತೆ ಸೂಚಿಸಲಾಗಿದೆ.ಆಯಾ ಜಿಲ್ಲೆಗಳಿಂದ ನಿಯೋಜಿಸಲ್ಪಟ್ಟ ವಾಹನಗಳು ಮೇ 31, 2026 ರಂದು ಸಂಜೆ 4:00 ಗಂಟೆಯೊಳಗೆ ಬೆಂಗಳೂರಿನ ಕುಮಾರ ಕೃಪ ಅತಿಥಿ ಗೃಹದಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಸೂಚನೆ: ವಾಹನಗಳು ಸುಸ್ಥಿತಿಯಲ್ಲಿರಬೇಕು ಮತ್ತು ಇಂಧನ ಭರ್ತಿಯಾಗಿರಬೇಕು ಎಂದು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ನಿಗದಿತ ವಾಹನಗಳು ದುರಸ್ತಿಯಲ್ಲಿದ್ದರೆ, ಬದಲಾಗಿ ಬೇರೆ ಸುಸ್ಥಿತಿಯಲ್ಲಿರುವ ವಾಹನಗಳನ್ನು ಚಾಲಕರೊಂದಿಗೆ ಕಳುಹಿಸಲು ತಿಳಿಸಲಾಗಿದೆ.

ಶಿಸ್ತಿನ ಎಚ್ಚರಿಕೆ: ಇದು ಅತ್ಯಂತ ತುರ್ತು ಕಾರ್ಯವಾಗಿರುವುದರಿಂದ, ಯಾವುದೇ ಲೋಪವಾದಲ್ಲಿ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

ಜಿಲ್ಲಾವಾರು ವಾಹನಗಳ ವಿವರ (ಒಟ್ಟು 100):

ಚಿತ್ರದುರ್ಗ: 05, ಶಿವಮೊಗ್ಗ: 05, ಕೊಪ್ಪಳ: 03, ದಾವಣಗೆರೆ: 03, ಹಾವೇರಿ: 03, ಗದಗ: 05, ವಿಜಯಪುರ: 02, ಬಾಗಲಕೋಟೆ: 02, ರಾಯಚೂರು: 05, ಕಲಬುರಗಿ: 05, ಉತ್ತರ ಕನ್ನಡ: 05, ಬಳ್ಳಾರಿ: 05, ದಕ್ಷಿಣ ಕನ್ನಡ: 05, ಮೈಸೂರು: 05, ಧಾರವಾಡ: 05, ಉಡುಪಿ: 05, ಹಾಸನ: 02, ಚಾಮರಾಜನಗರ: 04, ಬೀದರ್: 02, ಚಿಕ್ಕಬಳ್ಳಾಪುರ: 02, ಚಿಕ್ಕಮಗಳೂರು: 02, ಕೊಡಗು: 02, ಕೋಲಾರ: 02, ಮಂಡ್ಯ: 02, ಬೆಂಗಳೂರು ದಕ್ಷಿಣ: 01, ತುಮಕೂರು: 03, ವಿಜಯನಗರ: 02, ಯಾದಗಿರಿ: 02, ಬೆಳಗಾವಿ: 06.

    Author
    All About Belagavi
    is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
    WhatsApp

    Don't Miss Out! Join Our WhatsApp Group!

    Get latest news updates delivered straight to your WhatsApp.

    LATEST
    BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ