ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನೆಲ್ಲೇ ನೈಸರ್ಗಿಕ ಅನಿಲ (ಸಿಎನ್‌ಜಿ) ಬೆಲೆಯೂ ಏರಿಕೆಯಾಗಿದೆ. ಕಂಪನಿಗಳು 9 ದಿನದಲ್ಲಿ ಮೂರನೇ ಬಾರಿ ಸಿಎನ್‌ಜಿ ದರ ಏರಿಸಿವೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಿಎನ್ ಜಿ ದರ ಕೇಳಿ ಗ್ರಾಹಕರೇ ಶಾಕ್ ಆಗಿದ್ದಾರೆ. ಬೆಂಗಳೂರಿನಲ್ಲಿ ಸಿಎನ್ ಜಿ ದರ2 ರೂಪಾಯಿ ಹೆಚ್ಚಳವಾಗಿದೆ. ಕೆಜಿ ಸಿಎನ್‌ಜಿ 93 ರೂಪಾಯಿಯಿಂದ 95 ರೂಪಾಯಿ ಏರಿಕೆಯಾಗಿದೆ.
ಇದರಿಂದ ವಾಹನ ಸವಾರರು ಕಂಗಾಲಾಗಿದ್ದಾರೆ. ನಿನ್ನೆ 93 ರೂಪಾಯಿ ಇದ್ದ ಸಿಎನ್ ಜಿ ದರ ಇಂದು 95 ರೂಪಾಯಿ ದಿಢೀರ್ ಏರಿಕೆಯಾಗಿದ್ದು, ಆಟೋ, ಕ್ಯಾಬ್ ಚಾಲಕರು ಪರದಾಡುವಂತಾಗಿದೆ.
ಮಧ್ಯಪ್ರಾಚ್ಯ ರಾಷ್ಟ್ರಗಳ ಸಂಘರ್ಷದ ನಡುವೆ ಇಂಧನ ಬಿಕ್ಕಟ್ಟು ಎದುರಾಗಿದ್ದು, ತೈಲ ಬೆಲೆ ದಿನದಿಂದ ದಿನಕ್ಕೆ ಏರ್ಕೆಯಾಗುತ್ತಿದೆ. ಇದು ಜನಸಾಮಾನ್ಯರ ಬದುಕನ್ನೇ ದುಸ್ತರಗೊಳಿಸುತ್ತಿದೆ.