LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS : EPF ನಿಯಮಗಳಲ್ಲಿ ಮಹತ್ವದ ಬದಲಾವಣೆ : ವರ್ಷಕ್ಕೆ 2 ಬಾರಿ ಮಾತ್ರ ಹಣ ಹಿಂಪಡೆಯಲು ಅವಕಾಶ

ಉದ್ಯೋಗಿಗಳ ಭವಿಷ್ಯ ನಿಧಿ (EPF), ಉದ್ಯೋಗಿಗಳ ಪಿಂಚಣಿ ಯೋಜನೆ (EPS) ಹಾಗೂ ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮೆ (EDLI) ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಹೊಸ ಸಾಮಾಜಿಕ ಭದ್ರತಾ ಸಂಹಿತೆಯ ಭಾಗವಾಗಿ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ-2026, ಉದ್ಯೋಗಿಗಳ ಪಿಂಚಣಿ ಯೋಜನೆ-2026 ಹಾಗೂ ಉದ್ಯೋಗಿಗಳ ಠೇವಣಿ ವಿಮೆ ಯೋಜನೆ-2026 ಅನ್ನು ಜಾರಿಗೆ ತರುವ ಕುರಿತು ಕೇಂದ್ರ ಸರ್ಕಾರ ಅಧಿಕೃತ ಗಜೆಟ್ ಅಧಿಸೂಚನೆ ಹೊರಡಿಸಿದೆ. ಈ ಹೊಸ ನಿಯಮಗಳ ಪ್ರಕಾರ ಪಿಎಫ್ ಖಾತೆಯಿಂದ ಹಣ ಹಿಂಪಡೆಯುವ (Withdrawal) ಪ್ರಕ್ರಿಯೆಯನ್ನು ಇನ್ನಷ್ಟು ನಿಯಂತ್ರಿತಗೊಳಿಸಲಾಗಿದ್ದು, ಕೆಲವು ಹೊಸ ಷರತ್ತುಗಳನ್ನು ಕಡ್ಡಾಯಗೊಳಿಸಲಾಗಿದೆ.

ವರ್ಷಕ್ಕೆ ಎರಡು ಬಾರಿ ಮಾತ್ರ ಭಾಗಶಃ ಹಣ ಹಿಂಪಡೆಯಲು ಅವಕಾಶ

ಹೊಸ ನಿಯಮಗಳ ಪ್ರಕಾರ, ಪಿಎಫ್ ಖಾತೆಯಿಂದ ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ ಎರಡು ಬಾರಿ ಮಾತ್ರ ಭಾಗಶಃ (Partial Withdrawal) ಹಣ ಹಿಂಪಡೆಯಲು ಅವಕಾಶ ಇರುತ್ತದೆ. ಇದುವರೆಗೆ ಅನಾರೋಗ್ಯದ ಕಾರಣ ನೀಡಿ ಹಲವು ಬಾರಿ ಹಣ ಪಡೆಯಬಹುದಾಗಿದ್ದರೆ, ಇನ್ನು ಮುಂದೆ ಆ ಅವಕಾಶವನ್ನು ವರ್ಷಕ್ಕೆ ಎರಡು ಬಾರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಬೇರೆ ಅಗತ್ಯಕ್ಕಾಗಿ ಒಮ್ಮೆ ಹಣ ಪಡೆದಿದ್ದರೆ, ಅದೇ ವರ್ಷದಲ್ಲಿ ಅನಾರೋಗ್ಯದ ಹೆಸರಿನಲ್ಲಿ ಮತ್ತೊಮ್ಮೆ ಮಾತ್ರ ಹಣ ಪಡೆಯಲು ಸಾಧ್ಯವಾಗುತ್ತದೆ.

ಆದರೆ, ಉನ್ನತ ಶಿಕ್ಷಣಕ್ಕಾಗಿ ಸೇವಾ ಅವಧಿಯಲ್ಲಿ ಗರಿಷ್ಠ 10 ಬಾರಿ ಹಣ ಹಿಂಪಡೆಯುವ ಅವಕಾಶ ಮುಂದುವರಿದಿದೆ. ಮನೆ ಖರೀದಿ ಅಥವಾ ದುರಸ್ತಿ ಉದ್ದೇಶಕ್ಕಾಗಿ ಇದುವರೆಗೆ 2 ಬಾರಿ ಮಾತ್ರ ಅವಕಾಶ ಇದ್ದರೆ, ಹೊಸ ನಿಯಮದಂತೆ ಅದನ್ನು 5 ಬಾರಿ ವರೆಗೆ ಹೆಚ್ಚಿಸಲಾಗಿದೆ.

ಪಿಎಫ್ ಖಾತೆಯಲ್ಲಿ ಕನಿಷ್ಠ 25% ಮೊತ್ತ ಉಳಿದಿರಬೇಕು

ಇಪಿಎಫ್-2026 ನಿಯಮಗಳ ಪ್ರಕಾರ, ಭಾಗಶಃ ಹಣ ಹಿಂಪಡೆಯುವ ವೇಳೆ ಪಿಎಫ್ ಖಾತೆಯಲ್ಲಿ ಕನಿಷ್ಠ 25% ಮೊತ್ತ ಉಳಿದಿರಬೇಕು. ಈ ಕನಿಷ್ಠ ಮೊತ್ತವನ್ನು ಲೆಕ್ಕ ಹಾಕುವಾಗ ಉದ್ಯೋಗಿಯ ಪಾಲು, ಉದ್ಯೋಗದಾತನ ಪಾಲು ಹಾಗೂ ಅದರ ಮೇಲಿನ ಬಡ್ಡಿ – ಈ ಮೂರನ್ನೂ ಸೇರಿಸಿ ಲೆಕ್ಕಿಸಲಾಗುತ್ತದೆ.

ಒಂದು ವರ್ಷದ ಸೇವೆ ಪೂರ್ಣಗೊಂಡ ಬಳಿಕವೇ ವಿತ್‌ಡ್ರಾ

ಹೊಸ ನಿಯಮದಂತೆ, ಉದ್ಯೋಗಿಯು ಇಪಿಎಫ್ ಸದಸ್ಯನಾಗಿ ಕನಿಷ್ಠ ಒಂದು ವರ್ಷದ ಸೇವೆ ಪೂರ್ಣಗೊಳಿಸಿದ ಬಳಿಕವೇ ಪಿಎಫ್ ಖಾತೆಯಿಂದ ಯಾವುದೇ ರೀತಿಯ ಭಾಗಶಃ ಹಣ ಹಿಂಪಡೆಯಲು ಅರ್ಹನಾಗುತ್ತಾನೆ. ಹೊಸ ಇಪಿಎಫ್-2026 ನಿಯಮಗಳ ಮೂಲಕ ಪಿಎಫ್ ಹಣದ ಬಳಕೆಯನ್ನು ಹೆಚ್ಚು ನಿಯಂತ್ರಿತಗೊಳಿಸುವ ಜೊತೆಗೆ, ನಿವೃತ್ತಿ ಉಳಿತಾಯವನ್ನು ಸುರಕ್ಷಿತವಾಗಿಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ವರ್ಷಕ್ಕೆ ಹಣ ಹಿಂಪಡೆಯುವ ಮಿತಿಯನ್ನು ನಿಗದಿಪಡಿಸುವುದು, ಖಾತೆಯಲ್ಲಿ ಕನಿಷ್ಠ 25% ಮೊತ್ತ ಕಡ್ಡಾಯವಾಗಿ ಉಳಿಯುವಂತೆ ಮಾಡುವುದು ಹಾಗೂ ಒಂದು ವರ್ಷದ ಸೇವೆಯ ನಂತರವೇ ವಿತ್‌ಡ್ರಾಗೆ ಅವಕಾಶ ನೀಡುವುದು ಈ ಹೊಸ ನಿಯಮಗಳ ಪ್ರಮುಖ ಅಂಶಗಳಾಗಿವೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ