LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

‘ಅಸ್ಸಲಾಮ್‌ಅಲೈಕುಂ’ಗೆ ಚೆನ್ನಾಗಿ ರಿಪ್ಲೈ ಮಾಡುವ ಐಫೋನ್ ಸಿರಿ ‘ಜೈಶ್ರೀರಾಮ್’ ಎಂದಾಗ ಕೊಟ್ಟ ರಿಪ್ಲೈ ನೋಡಿ ಕಿಡಿಕಾರಿದ ಭಕ್ತ; ವಿಡಿಯೊ

ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಸರ್ವಧರ್ಮದವರೂ ಒಟ್ಟಾಗಿ ಹಲವು ಶತಮಾನಗಳಿಂದ ಕೂಡಿ ಬಾಳಿರುವ ತಾಣ. ಪೋರ್ಚುಗೀಸರು, ಡಚ್ಚರು, ಫ್ರೆಂಚರು ಹಾಗೂ ಬ್ರಿಟಿಷರು ಬಂದು ಆಳಿ ಹೋದರೂ ದೇಶದಲ್ಲಿನ ಯಾವುದೇ ಧರ್ಮದವರೂ ಕೋಮುಗಲಭೆಯಿಂದ ಹೊಡೆದಾಡಿಕೊಳ್ಳದೇ ಒಗ್ಗಟ್ಟಿನಿಂದ ಉಳಿದುಕೊಂಡ ನೆಲ.

ಆದರೆ ಕೆಲ ಕಿಡಿಗೇಡಿಗಳು ತಮ್ಮ ಧರ್ಮದ ಮೇಲಿನ ಪ್ರೀತಿಯನ್ನು ಬೇರೆ ಧರ್ಮದ ಮೇಲಿನ ದ್ವೇಷವನ್ನಾಗಿ ಪರಿವರ್ತಿಸಿಕೊಂಡು ಕೋಮುಗಲಭೆಗೆ ಪ್ರಚೋದನೆ ನೀಡುವಂತಹ ಕೆಲಸಗಳನ್ನು ಮಾಡಿ ದ್ವೇಷದ ಬೀಜ ಭಿತ್ತನೆ ಮಾಡತೊಡಗಿದ್ದಾರೆ.

ಇಂಥವರನ್ನು ಮಟ್ಟಹಾಕಿ ಭ್ರಾತೃತ್ವ ಕಾಪಾಡಿಕೊಳ್ಳಲೆಂದೇ ಸರ್ಕಾರಗಳು ಕೋಮುಗಲಭೆಗೆ ಪ್ರಚೋದನೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕಾನೂನಿನಡಿ ಆದೇಶಗಳನ್ನು ಹೊರಡಿಸಿದೆ.

ಆದರೂ ಸಹ ಕಿಡಿಗೇಡಿಗಳು ಭ್ರಾತೃತ್ವ ಕದಡುವ ಕೆಲಸ ಮಾಡುತ್ತಲೇ ಇದ್ದಾರೆ. ಕೇವಲ ಒಂದು ಧರ್ಮವಲ್ಲ, ಎಲ್ಲ ಧರ್ಮಗಳಲ್ಲೂ ಈ ದುಷ್ಕೃತ್ಯಕ್ಕೆ ಕೈಹಾಕಿದ ಉದಾಹರಣೆಗಳು ಸಾಕಷ್ಟಿವೆ.

ಇದೀಗ ಅಂತಹ ಉದಾಹರಣೆಗಳಿಗೆ ಮತ್ತೊಂದು ಸೇರ್ಪಡೆ ಶ್ರೀರಾಮನ ಭಕ್ತನೊಬ್ಬ ಐಫೋನ್ ಜಿಹಾದಿ ಎಂದು ಆರೋಪಿಸಿ ಮಾಡಿರುವ ವಿಡಿಯೊ. ಹೌದು, ಅಂತಾರಾಷ್ಟ್ರೀಯ ಸೆಲ್‌ಫೋನ್ ಬ್ರಾಂಡ್ ಐ ಫೋನ್‌ನ ಆಪ್ಷನ್ ಆದ ಸಿರಿ ಮುಸ್ಲಿಮರ ‘ಅಸ್ಸಲಾಮ್ಅಲೈಕುಂ’ ಎಂದರೆ ಅದಕ್ಕೆ ‘ವ ಅಲೈಕುಮುಸ್ಸಲಾಂ’ ಎಂದು ಪ್ರತಿಕ್ರಿಯಿಸುತ್ತದೆ, ಆದರೆ ಜೈ ಶ್ರೀರಾಮ್ ಅಥವಾ ಜೈ ಮಹಾಕಾಲ್ ಎಂದರೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ವಿಡಿಯೊ ಮಾಡಿ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಫೋನ್ ಹಿಡಿದು ಸಿರಿಗೆ ಪ್ರಶ್ನೆ ಕೇಳಿರುವ ಈತ ಪ್ರತಿಕ್ರಿಯೆ ಬರುತ್ತಿಲ್ಲ, ಯಾರೂ ಸಹ ಐ ಫೋನ್ ಬಳಸಬೇಡಿ ಎಂದು ಕರೆಕೊಟ್ಟಿದ್ದಾರೆ. ಅಲ್ಲದೇ ಕೋಟ್ಯಂತರ ಹಿಂದೂಗಳು ಐ ಫೋನ್‌ಗಳನ್ನು ಮುಗಿಬಿದ್ದು ಖರೀದಿ ಮಾಡಿ ನಿಮ್ಮ ಡೇಟಾಗಳನ್ನು ನೀವೇ ಕೊಡುತ್ತಿದ್ದೀರ ಎಂದೂ ಸಹ ಆರೋಪಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ