LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS: ದೇಶದ ನೈಜ ಯಜಮಾನರು ದಲಿತರು ಮತ್ತು ಆದಿವಾಸಿಗಳು: KPCC ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಪ್ರತಿಪಾದನೆ

ಬೆಂಗಳೂರು: ಭಾರತದ ಮೂಲ ನಿವಾಸಿಗಳಾದ ದಲಿತರು, ಬುಡಕಟ್ಟು ಹಾಗೂ ಅಲೆಮಾರಿ ಸಮುದಾಯದವರೇ ಈ ನೆಲದ ನೈಜ ಯಜಮಾನರು ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದ್ದರೂ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ಇನ್ನೂ ಪೂರ್ಣ ಪ್ರಮಾಣದಲ್ಲಿ ದಕ್ಕಿಲ್ಲ ಎಂದು ಅವರು ಹೇಳಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟು ಘಟಕದ ನೂತನ ಅಧ್ಯಕ್ಷರಾಗಿ ಎಲ್ಲಪ್ಪ ಅವರು ಅಧಿಕಾರ ಸ್ವೀಕರಿಸಿದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಸಮಾಜ ಸುಧಾರಕರಾದ ಬಿರ್ಸಾ ಮುಂಡಾ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಿ. ದೇವರಾಜ ಅರಸು ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.

ಮೂಲ ನಿವಾಸಿಗಳಲ್ಲಿ ಕೀಳರಿಮೆ ಸಲ್ಲದು

ಸ್ವಾತಂತ್ರ್ಯ ಬಂದು ದಶಕಗಳು ಕಳೆದರೂ ಈ ದೇಶದ ನಾಯಕತ್ವ ಮತ್ತು ಮಾಲೀಕತ್ವ ಮೂಲ ನಿವಾಸಿಗಳ ಕೈ ತಪ್ಪಿ ಬೇರೆಯವರ ಪಾಲಾಗಿದೆ. ಸ್ವಾತಂತ್ರ್ಯ ಹೋರಾಟದ ಮೂಲ ಆಶಯವೇ ಎಲ್ಲರಿಗೂ ಸಮಪಾಲು ಮತ್ತು ಸಮಬಾಳು ನೀಡುವುದಾಗಿತ್ತು. ಅಲೆಮಾರಿ ಹಾಗೂ ಬುಡಕಟ್ಟು ಸಮುದಾಯದವರು ಯಾವುದೇ ಕಾರಣಕ್ಕೂ ಕೀಳರಿಮೆ ಬೆಳೆಸಿಕೊಳ್ಳದೆ ಸ್ವಾವಲಂಬಿಗಳಾಗಿ ಬದುಕಬೇಕು. ಈ ಸಮುದಾಯಗಳ ಸಂಸ್ಕೃತಿ ಮತ್ತು ಕಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು, ಜಾಗತಿಕ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮತದಾನದ ಹಕ್ಕು ಭವಿಷ್ಯದ ಅಸ್ತ್ರ

ಪ್ರಜಾಪ್ರಭುತ್ವ ವ್ಯವಸ್ಥೆಯೇ ಶೋಷಿತರಿಗೆ ರಕ್ಷಾಕವಚ ಎಂದ ಹರಿಪ್ರಸಾದ್, ಪ್ರಜಾಪ್ರಭುತ್ವವಿಲ್ಲದ ದೇಶಗಳಲ್ಲಿ ದುರ್ಬಲ ವರ್ಗಗಳನ್ನು ಇಂದಿಗೂ ಗುಲಾಮರಂತೆ ನೋಡಲಾಗುತ್ತಿದೆ ಎಂದು ಎಚ್ಚರಿಸಿದರು. ಐದು ವರ್ಷಕ್ಕೊಮ್ಮೆ ಸಿಗುವ ಮತದಾನದ ಹಕ್ಕನ್ನು ಮದ್ಯ ಅಥವಾ ಹಣದ ಆಮಿಷಕ್ಕೆ ಬಲಿಯಾಗಿಸಬಾರದು. ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಒದಗಿಸುವ ನಾಯಕರಿಗೆ ಮಾತ್ರ ಮತ ನೀಡಬೇಕು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಂತೆ ಸಮುದಾಯದ ಪ್ರತಿಯೊಬ್ಬರಲ್ಲೂ ಅದ್ಭುತ ನಾಯಕತ್ವದ ಶಕ್ತಿಯಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್‌ನಿಂದ ಸಾಮಾಜಿಕ ಭದ್ರತೆ

ಕಾಂಗ್ರೆಸ್ ಪಕ್ಷವು ಯಾವಾಗಲೂ ಹಿಂದುಳಿದ ಮತ್ತು ಬುಡಕಟ್ಟು ವರ್ಗಗಳ ಪರವಾಗಿ ದೃಢವಾಗಿ ನಿಂತಿದೆ. ಸೋನಿಯಾ ಗಾಂಧಿ ಹಾಗೂ ಡಾ. ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದ ಅರಣ್ಯ ಹಕ್ಕು ಕಾಯ್ದೆ ಹಾಗೂ ಆಹಾರ ಭದ್ರತಾ ಕಾಯ್ದೆಗಳು ಕೋಟ್ಯಂತರ ಶೋಷಿತರಿಗೆ ಬದುಕು ಕಲ್ಪಿಸಿವೆ. ಇಂತಹ ಐತಿಹಾಸಿಕ ಯೋಜನೆಗಳನ್ನು ತಂದ ಪಕ್ಷದ ಬಾಗಿಲು ಸದಾ ಶೋಷಿತರ ಪರವಾಗಿ ತೆರೆದಿರುತ್ತದೆ ಎಂದು ತಿಳಿಸಿದ ಅವರು, ನೂತನ ಅಧ್ಯಕ್ಷ ಎಲ್ಲಪ್ಪ ಅವರ ಕಾರ್ಯವೈಖರಿಗೆ ಶುಭ ಹಾರೈಸಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೈಲಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಕೆ ಪ್ರಕರಣ: ಜೈಲು ಸಿಬ್ಬಂದಿ ಸೇರಿ ಏಳು ಜನರ ವಿರುದ್ಧ FIR ದಾಖಲುಸತೀಶ್ ಜಾರಕಿಹೊಳಿ ಪರ ಸಿಎಂ ಡಿ.ಕೆ.ಶಿವಕುಮಾರ್ ಬ್ಯಾಟಿಂಗ್: ಕಾಂಗ್ರೆಸ್ ಪಕ್ಷವನ್ನೇ ಗುರಿಯಾಗಿಸಿ ED ದಾಳಿ ಆರೋಪನೇರ ಕಾಲೇಜು ಚುನಾವಣೆಗೆ ಸರ್ಕಾರದ ಆದೇಶ: ನಿಯಮ ಧಿಕ್ಕರಿಸಿ ಮಂಗಳೂರು ವಿವಿಯಲ್ಲಿ ಪರೋಕ್ಷ ಮತದಾನ ಆರೋಪರಾಜ್ಯದ ಜನತೆ ಗಮನಕ್ಕೆ: ಸೆ.19, 20ರಂದು 'ವಿಶೇಷ ಮತದಾರರ ನೋಂದಣಿ ಅಭಿಯಾನ'ಭಾವನಾತ್ಮಕ ಸಂಕಷ್ಟವನ್ನು ಒಬ್ಬರೇ ಎದುರಿಸುತ್ತಿರುವ ಭಾರತದ ಶೇ 49.5ರಷ್ಟು ಯುವಜನತೆ: ಎಂಪವರ್ ಸಮೀಕ್ಷೆ ಬಹಿರಂಗBREAKING: ನ.1ರೊಳಗೆ ಅಕ್ರಮ ಬಂದೂಕು ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಿ: ಸಿಎಂ ಡಿ.ಕೆ.ಶಿವಕುಮಾರ್ ಖಡಕ್ ಆದೇಶಪರಿಶ್ರಮ, ಆರ್ಥಿಕ ಶಿಸ್ತಿನಿಂದ ಉದ್ಯಮದಲ್ಲಿ ಯಶಸ್ಸು: ಸಾಗರದಲ್ಲಿ ಆನಂದ ಸುವರ್ಣ ಅಭಿಮತಈ ಸರ್ಕಾರದ ಆಡಳಿತದಲ್ಲಿ ಒಂದೇ ಒಂದು ಉತ್ತಮ ಯೋಜನೆಗಳಿಲ್ಲ: ಛಲವಾದಿ ನಾರಾಯಣಸ್ವಾಮಿಡಿಕೆಶಿ ಸರ್ಕಾರದ 100 ದಿನದ ಸಾಧನೆ ಅಂದ್ರೆ ಅದು ಮೊದಲ ವಿಕೆಟ್ ಬಿದ್ದಿದ್ದು: ಪ್ರತಿಪಕ್ಷ ನಾಯಕ ಆರ್.ಅಶೋಕ್BIG NEWS: ದೇಶದ ನೈಜ ಯಜಮಾನರು ದಲಿತರು ಮತ್ತು ಆದಿವಾಸಿಗಳು: KPCC ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಪ್ರತಿಪಾದನೆ