LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಮೆರಿಕಾದಲ್ಲಿ FAA ಸಂವಹನ ವೈಫಲ್ಯ: ದೇಶಾದ್ಯಂತ 10 ಸಾವಿರ ವಿಮಾನ ಹಾರಾಟ ಸ್ಥಗಿತ: 4,700ಕ್ಕೂ ಹೆಚ್ಚು ಫ್ಲೈಟ್ ರದ್ದು

ವಾಷಿಂಗ್ಟನ್: ಅಮೆರಿಕಾದಲ್ಲಿ ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಸಂವಹನ ವ್ಯವಸ್ಥೆಯಲ್ಲಿನ ತಾಂತ್ರಿಕ ವೈಫಲ್ಯದಿಂದ ದೇಶಾದ್ಯಂತ ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯವಾಗಿದ್ದು, ಪ್ರಯಾಣಿಕರು ಸಂಕಷ್ಟ ಪಡುವಂತಾಗಿದೆ.

ಅಮೆರಿಕಾದಲ್ಲಿ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿನ ಸಂವಹನ ವೈಫಲ್ಯದಿಂದ ದೇಶಾದ್ಯಂತ ವಿಮಾನಗಳ ಹಾರಾಟಕ್ಕೆ ತಾತ್ಕಾಲಿಕ ತಡೆ ನೀಡಲಾಗಿತ್ತು. ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಂದ ಹೊರಡುವ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿತ್ತು. ಇದರಿಂದ ಸಾವಿರಾರು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಲಕ್ಷಾಂತರ ಪ್ರಯಾಣಿಕರು ಪರದಾಡುವಂತಾಗಿದೆ.

ಇದೀಗ ವಿಮಾನ ಹಾರಾಟಕ್ಕೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದ್ದರೂ, ವಿಮಾನಯಾನ ಸೇವೆಗಳು ಸಹಜ ಸ್ಥಿತಿಗೆ ಮರಳಲು ಸಮಯ ಬೇಕಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಅಮೆರಿಕದ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ನೀಡಿರುವ ಮಾಹಿತಿ ಪ್ರಕಾರ, ಹಳೆಯ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿನ ಸ್ವಿಚ್‌ಗಳು ಮತ್ತು ರೂಟರ್‌ಗಳು ಅತಿಯಾದ ಡೇಟಾ ಒತ್ತಡದಿಂದ ಓವರ್‌ಲೋಡ್ ಆಗಿದ್ದವು. ಇದರಿಂದ ತಪ್ಪಾದ ಹಾಗೂ ಅಸಮಂಜಸ ಮಾಹಿತಿಗಳು ರವಾನೆಯಾಗಿದ್ದು, ಸಂವಹನ ಮತ್ತು ರಾಡಾರ್ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿತ್ತು. ದೇಶದಾದ್ಯಂತ ಇರುವ 22 ಪ್ರಾದೇಶಿಕ ವಾಯು ಸಂಚಾರ ನಿಯಂತ್ರಣ ಕೇಂದ್ರಗಳ ಮೇಲೂ ಇದರ ಪರಿಣಾಮ ಬೀರಿತ್ತು.

ಪೈಲಟ್‌ಗಳು ಮತ್ತು ಏರ್ ಟ್ರಾಫಿಕ್ ಕಂಟ್ರೋಲರ್‌ಗಳ ನಡುವೆ ಸರಿಯಾದ ಸಂವಹನ ಸಾಧ್ಯವಾಗದಿದ್ದರೆ ವಿಮಾನಗಳ ಸುರಕ್ಷತೆಗೆ ಅಪಾಯ ಎದುರಾಗಬಹುದು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ FAA ವಿಮಾನಗಳ ಟೇಕ್‌ಆಫ್‌ಗೆ ತಡೆ ನೀಡಿತ್ತು. ಆದರೆ ಈಗಾಗಲೇ ಆಕಾಶದಲ್ಲಿದ್ದ ವಿಮಾನಗಳಿಗೆ ಸುರಕ್ಷಿತವಾಗಿ ಲ್ಯಾಂಡ್ ಆಗಲು ಅವಕಾಶ ನೀಡಲಾಗಿತ್ತು.

ಈ ತಾಂತ್ರಿಕ ಸಮಸ್ಯೆಯ ಹಿಂದೆ ಸೈಬರ್ ದಾಳಿ ಅಥವಾ ಕೃತಕ ಬುದ್ಧಿಮತ್ತೆಯ ಕೈವಾಡವಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿತ್ತು. ಆದರೆ ಪ್ರಾಥಮಿಕ ತನಿಖೆಯಲ್ಲಿ ಸೈಬರ್ ದಾಳಿಯ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಮಾರ್ಕ್‌ವೇನ್ ಮುಲ್ಲಿನ್ ತಿಳಿಸಿದ್ದಾರೆ. ಮೈಕ್ರೋಸಾಫ್ಟ್ ಸೇವೆಗಳಲ್ಲಿನ ವ್ಯತ್ಯಯಕ್ಕೂ ಈ ಘಟನೆಗೂ ಸಂಬಂಧವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಘಟನೆಯಿಂದ ಅಮೆರಿಕದಲ್ಲಿ 4 ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದ್ದು, 10 ಸಾವಿರಕ್ಕೂ ಅಧಿಕ ವಿಮಾನಗಳು ವಿಳಂಬವಾಗಿವೆ. ಸುಮಾರು 15 ಲಕ್ಷ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿದೆ. ಏರ್ ಇಂಡಿಯಾ ಕೂಡ ಅಮೆರಿಕಕ್ಕೆ ತೆರಳುವ ಮತ್ತು ಅಲ್ಲಿಂದ ಬರುವ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿತ್ತು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಕ್ರಿಕೆಟ್ ಗೆ ಅದ್ಭುತ ದಿನ: ಪಾಕ್ ವಿರುದ್ಧ ರೋಚಕ ಗೆಲುವು ಕಂಡ ಭಾರತ U19 ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆಆಪರೇಷನ್ ಸಿಂದೂರ್ ಬಳಿಕ ಇದೇ ಮೊದಲ ಬಾರಿ ದೆಹಲಿಗೆ ಪಾಕ್ ಸಚಿವ ಭೇಟಿ: ಎಸ್ಸಿಒ ಸಭೆಯಲ್ಲಿ ಭಾಗಿಶಾಕಿಂಗ್ ! ಕಂದನ ಜೀವ ತೆಗೆದ ಡಿಜೆ ಮ್ಯೂಸಿಕ್: ಅತಿಯಾದ ಶಬ್ದಕ್ಕೆ ಹೃದಯ ಸ್ತಂಭನದಿಂದ 20 ದಿನದ ಮಗು ಸಾವುರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ: ರದ್ದಾಗುತ್ತಾ ದಶಕಗಳಷ್ಟು ಹಳೆಯ RAC ವ್ಯವಸ್ಥೆ? ರೈಲ್ವೆ ಇಲಾಖೆಯಿಂದ ಮಹತ್ವದ ಚಿಂತನೆಪಾಕಿಸ್ತಾನದ ವಿರುದ್ಧ ರೋಚಕ ಜಯ ಸಾಧಿಸಿದ ಭಾರತಕ್ಕೆ U19 ಏಷ್ಯಾ ಕಪ್ಒಮೆಗಾ-3 ಸಪ್ಲಿಮೆಂಟ್ಸ್ ಮೂರು ತಿಂಗಳೊಳಗೆ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು: ಅಧ್ಯಯನದ ವರದಿ600ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ತೆಲುಗು ನಟ ಗಿರಿಬಾಬು ನಿಧನ; ಚಿರಂಜೀವಿ, ಚಂದ್ರಬಾಬು ನಾಯ್ಡು ಶ್ರದ್ಧಾಂಜಲಿನವೆಂಬರ್ 16 ರಿಂದ ‘ನಮೋ ಭಾರತ್’ ರೈಲು ಸೇವೆಯಲ್ಲಿ 8 ಹೆಚ್ಚುವರಿ ವೇಗದ ರೈಲುಗಳು ಸೇರ್ಪಡೆ; ಮಾರ್ಗಗಳು, ಸಮಯ ಮತ್ತು ಪ್ರಯಾಣದ ಅವಧಿಯ ವಿವರ ಇಲ್ಲಿದೆಕ್ಯಾನ್ಸರ್ ಚಿಕಿತ್ಸೆಯಲ್ಲಿ ರಷ್ಯಾದ ಮಹತ್ವದ ಹೆಜ್ಜೆ: ವೈಯಕ್ತಿಕ ಲಸಿಕೆ ಪಡೆದ ಮೊದಲ ರೋಗಿಯ ದೇಹದಲ್ಲಿ ಕ್ಯಾನ್ಸರ್ ಗಡ್ಡೆಗಳು ಮಾಯ1993ರ ಉಡುಗೊರೆ ಪತ್ರ ಪ್ರಶ್ನಿಸಿದ ರಮೋಲಾ ಬಚ್ಚನ್