LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

Investment Tips : ತಿಂಗಳಿಗೆ ₹12,500 ಉಳಿತಾಯ ಮಾಡಿದರೆ ಸಾಕು ; 24 ವರ್ಷಗಳಲ್ಲಿ ₹1 ಕೋಟಿ ಗಳಿಸಬಹುದು.!

ಹಣವನ್ನು ಉಳಿತಾಯ ಮಾಡಿ ಉತ್ತಮ ಆದಾಯ ಗಳಿಸಲು ದೇಶದಲ್ಲಿ ಹಲವು ಹೂಡಿಕೆ ಮಾರ್ಗಗಳಿವೆ. ಷೇರು ಮಾರುಕಟ್ಟೆ, ಸರ್ಕಾರಿ ಬಾಂಡ್‌ಗಳು, ಮ್ಯೂಚುವಲ್ ಫಂಡ್‌ಗಳು, ವಿಮಾ ಯೋಜನೆಗಳು ಹಾಗೂ ಕೇಂದ್ರ ಸರ್ಕಾರದ ಉಳಿತಾಯ ಯೋಜನೆಗಳು ಹೂಡಿಕೆದಾರರಿಗೆ ಲಭ್ಯವಿವೆ.

ಷೇರು ಮಾರುಕಟ್ಟೆಯಲ್ಲಿ ಅಪಾಯ ಹೆಚ್ಚು ಎಂಬ ಕಾರಣದಿಂದ ಅನೇಕರು ಹೂಡಿಕೆಗೆ ಹಿಂಜರಿಯುತ್ತಾರೆ. ಮ್ಯೂಚುವಲ್ ಫಂಡ್‌ಗಳಲ್ಲೂ ಮಾರುಕಟ್ಟೆ ಅಪಾಯ ಇರುತ್ತದೆ. ಆದರೆ ಕೇಂದ್ರ ಸರ್ಕಾರದ ಉಳಿತಾಯ ಯೋಜನೆಗಳಲ್ಲಿ ನಿಮ್ಮ ಹಣಕ್ಕೆ ಸರ್ಕಾರದ ಭದ್ರತೆ ಇರುವುದರಿಂದ ಅಪಾಯ ಕಡಿಮೆ. ಅಂತಹ ಒಂದು ಯೋಜನೆಯ ಮೂಲಕ ತಿಂಗಳಿಗೆ ಕೇವಲ ₹12,500 ಉಳಿತಾಯ ಮಾಡಿದರೆ, ದೀರ್ಘಾವಧಿಯಲ್ಲಿ ₹1 ಕೋಟಿಗೂ ಹೆಚ್ಚು ಸಂಪತ್ತು ನಿರ್ಮಿಸಬಹುದು.

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಕೇಂದ್ರ ಸರ್ಕಾರದ ಅತ್ಯಂತ ಜನಪ್ರಿಯ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಪ್ರಸ್ತುತ ಈ ಯೋಜನೆಗೆ ವಾರ್ಷಿಕ 7.1% ಬಡ್ಡಿದರ ದೊರೆಯುತ್ತಿದೆ.ಉದಾಹರಣೆಗೆ, ನಿಮ್ಮ ವಯಸ್ಸು ಈಗ 25 ವರ್ಷ ಎಂದುಕೊಳ್ಳಿ. ನೀವು ಪ್ರತಿ ತಿಂಗಳು ₹12,500, ಅಂದರೆ ವರ್ಷಕ್ಕೆ ₹1.50 ಲಕ್ಷವನ್ನು PPF ಖಾತೆಗೆ ಜಮೆ ಮಾಡಿದರೆ, 15 ವರ್ಷಗಳಲ್ಲಿ ಯೋಜನೆ ಮೆಚ್ಯುರ್ ಆಗುತ್ತದೆ.ಈ ಅವಧಿಯಲ್ಲಿ ನೀವು ಒಟ್ಟು ₹22,50,000 ಹೂಡಿಕೆ ಮಾಡಿರುತ್ತೀರಿ. ಅದಕ್ಕೆ ಸುಮಾರು ₹18,18,209 ಬಡ್ಡಿ ಸೇರಿ, ಮೆಚ್ಯುರಿಟಿ ವೇಳೆ ₹40,68,209 ನಿಮ್ಮ ಕೈ ಸೇರಬಹುದು.

PPF ಯೋಜನೆಯ ಮತ್ತೊಂದು ವಿಶೇಷತೆ ಎಂದರೆ, ಬಡ್ಡಿ ಆದಾಯ ಮತ್ತು ಮೆಚ್ಯುರಿಟಿ ಮೊತ್ತದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಹೀಗಾಗಿ ಸಂಪೂರ್ಣ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

₹1 ಕೋಟಿ ಗಳಿಸುವುದು ಹೇಗೆ?

PPF ಮೆಚ್ಯುರಿಟಿ ಬಳಿಕ ಸಿಗುವ ₹40,68,209 ಅನ್ನು ಖರ್ಚು ಮಾಡದೇ, ಅದನ್ನು ಈಕ್ವಿಟಿ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಿದರೆ ಉತ್ತಮ ಸಂಪತ್ತು ನಿರ್ಮಿಸಬಹುದು.ಈ ಹೂಡಿಕೆಗೆ ದೀರ್ಘಾವಧಿಯಲ್ಲಿ ಸರಾಸರಿ ವಾರ್ಷಿಕ 12% ಆದಾಯ ದೊರೆತರೆ, ಕೇವಲ 9 ವರ್ಷಗಳಲ್ಲಿ ಆ ಮೊತ್ತ ಸುಮಾರು ₹1,10,92,315 ಆಗಬಹುದು.ಅಂದರೆ, 15 ವರ್ಷ PPF + 9 ವರ್ಷ ಮ್ಯೂಚುವಲ್ ಫಂಡ್ = ಒಟ್ಟು 24 ವರ್ಷಗಳಲ್ಲಿ ₹1 ಕೋಟಿಗೂ ಅಧಿಕ ಸಂಪತ್ತು ನಿರ್ಮಿಸಬಹುದು.

ದೀರ್ಘಾವಧಿಯ ಹಣಕಾಸು ಗುರಿ ಹೊಂದಿರುವವರಿಗೆ ಈ ವಿಧಾನ ಉತ್ತಮ ಆಯ್ಕೆಯಾಗಬಹುದು. ಆದರೆ ಮ್ಯೂಚುವಲ್ ಫಂಡ್‌ಗಳು ಮಾರುಕಟ್ಟೆ ಅಪಾಯಕ್ಕೆ ಒಳಪಟ್ಟಿರುತ್ತವೆ. ಆದ್ದರಿಂದ ಹೂಡಿಕೆ ಮಾಡುವ ಮೊದಲು ನಿಮ್ಮ ಹಣಕಾಸು ಗುರಿ, ಅಪಾಯ ಸಹಿಷ್ಣುತೆ ಮತ್ತು ಅಗತ್ಯವಿದ್ದರೆ ಹಣಕಾಸು ಸಲಹೆಗಾರರ ಸಲಹೆಯನ್ನು ಪರಿಗಣಿಸುವುದು ಸೂಕ್ತ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ