LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

KBC ವೇದಿಕೆಯಲ್ಲಿ ಮತ್ತೆ ‘ಚಂದ್ರಮುಖಿ’ಯಾದ ಮಾಧುರಿ ದೀಕ್ಷಿತ್..! ನಟಿಯ ನೃತ್ಯಕ್ಕೆ ಅಮಿತಾಭ್ ಫಿದಾ |WATCH VIDEO

ಮುಂಬೈ: ಕೌನ್ ಬನೇಗಾ ಕರೋಡ್‌ಪತಿ (KBC) ಸೀಸನ್‌ 18ರಲ್ಲಿ ಅತಿಥಿ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌, ತಮ್ಮ ಜನಪ್ರಿಯ ಹಾಡು ‘ಕಾಹೇ ಛೇಡ್ ಮೋಹೇ’ಗೆ ಅದ್ಭುತವಾಗಿ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಈ ವಿಶೇಷ ಪ್ರದರ್ಶನಕ್ಕೆ ಬಾಲಿವುಡ್‌ ಹಿರಿಯ ನಟ ಹಾಗೂ KBC ನಿರೂಪಕ ಅಮಿತಾಭ್ ಬಚ್ಚನ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಮಿತಾಭ್ ಬಚ್ಚನ್‌ ಅವರ ಜನ್ಮದಿನದ ವಿಶೇಷ ವಾರದ ಕಾರ್ಯಕ್ರಮದ ಭಾಗವಾಗಿ ಈ ವಿಶೇಷ ಸಂಚಿಕೆ ರೂಪಿಸಲಾಗಿದೆ. ಈ ವೇಳೆ ಮಾಧುರಿ ದೀಕ್ಷಿತ್‌ ಅವರು 2002ರಲ್ಲಿ ಬಿಡುಗಡೆಯಾದ ಜನಪ್ರಿಯ ಚಿತ್ರ ‘ದೇವದಾಸ್’ನ ತಮ್ಮ ಐಕಾನಿಕ್‌ ಪಾತ್ರ ಚಂದ್ರಮುಖಿಯನ್ನು ಮತ್ತೊಮ್ಮೆ ನೆನಪಿಸಿದ್ದಾರೆ.

‘ಕಾಹೇ ಛೇಡ್ ಮೋಹೇ’ಗೆ ಮಾಧುರಿ ಮೋಡಿ

ಕಾರ್ಯಕ್ರಮದ ವೇಳೆ ಅಮಿತಾಭ್ ಬಚ್ಚನ್‌ ಅವರು ಕಂಪ್ಯೂಟರ್‌ಗೆ 2002ರ ದೇವದಾಸ್ ಚಿತ್ರದ ಜನಪ್ರಿಯ ಶಾಸ್ತ್ರೀಯ ಗೀತೆ ‘ಕಾಹೇ ಛೇಡ್ ಮೋಹೇ’ಯನ್ನು ಪ್ಲೇ ಮಾಡುವಂತೆ ಕೇಳಿಕೊಂಡರು.

ಗುಲಾಬಿ ಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದ ಮಾಧುರಿ ದೀಕ್ಷಿತ್‌, ಹಾಟ್‌ ಸೀಟ್‌ನಲ್ಲೇ ಕುಳಿತು ಚಂದ್ರಮುಖಿ ಪಾತ್ರವನ್ನು ನೆನಪಿಸುವಂತೆ ಭಾವಾಭಿನಯ ಮತ್ತು ಶಾಸ್ತ್ರೀಯ ಹಸ್ತಮುದ್ರೆಗಳ ಮೂಲಕ ಅದ್ಭುತವಾಗಿ ಪ್ರದರ್ಶನ ನೀಡಿದರು.

ಮಾಧುರಿಯ ಈ ಅನಿರೀಕ್ಷಿತ ಪ್ರದರ್ಶನಕ್ಕೆ ಪ್ರೇಕ್ಷಕರು ಭರ್ಜರಿ ಚಪ್ಪಾಳೆ ತಟ್ಟಿದರು. ಅವರ ನೃತ್ಯದಿಂದ ಮಂತ್ರಮುಗ್ಧರಾದ ಅಮಿತಾಭ್ ಬಚ್ಚನ್‌ ಅವರು ಕೂಡ ವೇದಿಕೆಯ ಸುತ್ತ ನಡೆದುಕೊಂಡು ಹೋಗುತ್ತಾ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಮಾಧುರಿಯ ಪ್ರದರ್ಶನದಿಂದ ಪ್ರಭಾವಿತರಾದ ಅಮಿತಾಭ್‌, “ಕ್ಯಾ ಬಾತ್ ಹೈ! ಅದ್ಭುತ, ಅದ್ಭುತ, ಮಾಧುರಿ ಜೀ!” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ ತನ್ನ ಪ್ರೋಮೋ ವಿಡಿಯೋ ಹಂಚಿಕೊಂಡು, “ಮಾಧುರಿಯ ಅಂದಾಜ್ ಎಲ್ಲರಿಗೂ ವಿಶೇಷ. ಕೌನ್ ಬನೇಗಾ ಕರೋಡ್‌ಪತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ ಮತ್ತು ಸೋನಿ LIVನಲ್ಲಿ ವೀಕ್ಷಿಸಿ” ಎಂದು ಬರೆದುಕೊಂಡಿದೆ.

24 ವರ್ಷಗಳ ಬಳಿಕ ಮತ್ತೆ ನಿರೂಪಕಿಯಾಗಿ ಮಾಧುರಿ

ಈ ವಿಶೇಷ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ, ಮಾಧುರಿ ದೀಕ್ಷಿತ್‌ ಅವರು ಕ್ವಿಜ್‌ ಶೋ ಫ್ರಾಂಚೈಸಿಯಲ್ಲಿ ಮೊದಲ ಬಾರಿಗೆ ಮಹಿಳಾ ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಅವರು ಮರಾಠಿ ಭಾಷೆಯ ಕ್ವಿಜ್‌ ಶೋ ‘ಕೋನ್ ಹೊಣಾರ್ ಕರೋಡ್‌ಪತಿ’ಯನ್ನು ನಿರೂಪಿಸಲಿದ್ದಾರೆ. ಈ ಮೂಲಕ ಬರೋಬ್ಬರಿ 24 ವರ್ಷಗಳ ಬಳಿಕ ಮಾಧುರಿ ದೀಕ್ಷಿತ್‌ ಅವರು ಮತ್ತೆ ಕಿರುತೆರೆ ನಿರೂಪಕಿಯಾಗಿ ಮರಳುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಮಾಧುರಿ ಸ್ಪರ್ಧಿಗಳೊಂದಿಗೆ ಸಂವಾದ ನಡೆಸಲಿದ್ದು, ಅವರ ವೈಯಕ್ತಿಕ ಕಥೆಗಳನ್ನು ಆಲಿಸಿ, ಕಠಿಣ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭದಲ್ಲಿ ಅವರಿಗೆ ಮಾರ್ಗದರ್ಶನ ನೀಡಲಿದ್ದಾರೆ.

2013ರಲ್ಲಿ ಮೊದಲ ಬಾರಿಗೆ ಪ್ರಸಾರವಾದ ‘ಕೋನ್ ಹೊಣಾರ್ ಕರೋಡ್‌ಪತಿ’ ಕಾರ್ಯಕ್ರಮವನ್ನು ಈ ಹಿಂದೆ ಸಚಿನ್ ಖೇಡೇಕರ್‌, ನಾಗರಾಜ್ ಮಂಜುಳೆ ಮತ್ತು ಸ್ವಪ್ನಿಲ್ ಜೋಶಿ ಸೇರಿದಂತೆ ಹಲವು ಜನಪ್ರಿಯ ವ್ಯಕ್ತಿಗಳು ನಿರೂಪಿಸಿದ್ದರು. ಇದೀಗ ಮಾಧುರಿ ದೀಕ್ಷಿತ್‌ ಅವರು ನಿರೂಪಕಿಯ ಸ್ಥಾನವನ್ನು ಅಲಂಕರಿಸಲಿದ್ದಾರೆ.

‘ಕೋನ್ ಹೊಣಾರ್ ಕರೋಡ್‌ಪತಿ’ ಯಾವಾಗ, ಎಲ್ಲಿ ಪ್ರಸಾರ?

‘ಕೋನ್ ಹೊಣಾರ್ ಕರೋಡ್‌ಪತಿ’ ಕಾರ್ಯಕ್ರಮವು ಸೋನಿ ಮರಾಠಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಜೊತೆಗೆ ಸೋನಿ LIVನಲ್ಲಿ ಸ್ಟ್ರೀಮಿಂಗ್‌ ಕೂಡ ಲಭ್ಯವಿರಲಿದೆ. ಈ ಕಾರ್ಯಕ್ರಮವು ಅಕ್ಟೋಬರ್ 12ರಿಂದ ಪ್ರಸಾರ ಆರಂಭವಾಗಲಿದೆ.

 

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೇಜರ್ ಪುತ್ರಿಯನ್ನು ತಮ್ಮೊಂದಿಗೇ ಇರುವಂತೆ ಪೋಷಕರು ಬಲವಂತಪಡಿಸುವಂತಿಲ್ಲ..! ಹೈಕೋರ್ಟ್ ಮಹತ್ವದ ತೀರ್ಪುತಂದೆಯ ಆಸ್ತಿಯಲ್ಲಿ ಸಂಪೂರ್ಣ ಪಾಲು ಕೇಳಿದ್ದ ಮಗನಿಗೆ ಬಿಗ್ ಶಾಕ್..! ಸುಪ್ರೀಂಕೋರ್ಟ್ ಮಹತ್ವದ ತೀರ್ಪುನಟ ಅಂಬರೀಷ್ ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಪತ್ರ.!KBC ವೇದಿಕೆಯಲ್ಲಿ ಮತ್ತೆ ‘ಚಂದ್ರಮುಖಿ’ಯಾದ ಮಾಧುರಿ ದೀಕ್ಷಿತ್..! ನಟಿಯ ನೃತ್ಯಕ್ಕೆ ಅಮಿತಾಭ್ ಫಿದಾ |WATCH VIDEOಕಪ್ಪತಗುಡ್ಡದಲ್ಲಿ ಕಲ್ಲು ಗಣಿಗಾರಿಕೆ ಪ್ರಸ್ತಾವನೆ ತಿರಸ್ಕಾರ, ಅರಣ್ಯ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ನಿಷೇಧ: ಸಚಿವ ರಾಮಲಿಂಗಾರೆಡ್ಡಿMPM, KFDC ಅರಣ್ಯ ನೆಡುತೋಪು ಗುತ್ತಿಗೆದಾರರ ಟ್ರಸ್ಟ್ ರಾಜ್ಯಾಧ್ಯಕ್ಷರಾಗಿ ಧರ್ಮೇಂದ್ರ ಶಿರವಾಳ ಪುನರಾಯ್ಕೆಆವಾಸಸ್ಥಾನಗಳ ರಕ್ಷಣೆಯಿಂದ ಜೀವವೈವಿಧ್ಯತೆ ಉಳಿವು ಸಾಧ್ಯ: ಶಿವಮೊಗ್ಗ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ಅಭಿಪ್ರಾಯಮಲೇರಿಯಾ ಮಾತ್ರೆ ಸೇವಿಸಿ ಬಾಲಕಿ ಸಾವು..! ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ಆಂಧ್ರಪ್ರದೇಶದಲ್ಲಿ ಪಾಕ್ ಗೂಢಚಾರರ ಜಾಲ ಬಯಲು..! ನೌಕಾಪಡೆ ಸಿಬ್ಬಂದಿ ಸೇರಿ 18 ಮಂದಿ ಅರೆಸ್ಟ್.!ಕೇಂದ್ರ ಸರ್ಕಾರದಿಂದ ರೈತರಿಗೆ ತಿಂಗಳಿಗೆ ₹3,000 ಪಿಂಚಣಿ..! ಜಸ್ಟ್ ಹೀಗೆ ಅರ್ಜಿ ಸಲ್ಲಿಸಿ