LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಪ್ಪತಗುಡ್ಡದಲ್ಲಿ ಕಲ್ಲು ಗಣಿಗಾರಿಕೆ ಪ್ರಸ್ತಾವನೆ ತಿರಸ್ಕಾರ, ಅರಣ್ಯ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ನಿಷೇಧ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ರಾಜ್ಯದ ವನ್ಯಜೀವಿ ಮತ್ತು ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದ್ದು, ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿಧಾಮದ ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ಕಲ್ಲುಗಳ ಗಣಿಗಾರಿಕೆಗೆ ಅನುಮತಿ ಕೋರಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ. ಅರಣ್ಯ, ಪರಿಸರ ಮತ್ತು ಜೀವ ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 8ನೇ ಸಭೆ ಹಾಗೂ ಹುಲಿ ಸಂರಕ್ಷಿತ ಪ್ರತಿಷ್ಠಾನಗಳ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಾಯಕ ತೀರ್ಮಾನಗಳನ್ನು ಪ್ರಕಟಿಸಲಾಗಿದೆ.

ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಬ್ರೇಕ್, ಭದ್ರಾ ರೆಸಾರ್ಟ್ ಪ್ರಸ್ತಾವನೆ ಮುಂದೂಡಿಕೆ

ಗದಗದ ಸಮೃದ್ಧ ಜೀವವೈವಿಧ್ಯ ತಾಣವಾಗಿರುವ ಕಪ್ಪತಗುಡ್ಡದ ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡುವ ಪ್ರಸ್ತಾವನೆಯನ್ನು ರಾಜ್ಯ ವನ್ಯಜೀವಿ ಮಂಡಳಿಯು ವಿವರವಾದ ಚರ್ಚೆಯ ಬಳಿಕ ಸ್ಪಷ್ಟವಾಗಿ ತಳ್ಳಿಹಾಕಿದೆ. ಇದೇ ವೇಳೆ, ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದಲ್ಲಿರುವ ಖಾಸಗಿ ಜಮೀನಿನಲ್ಲಿ ಪರಿಸರ-ವಿಹಾರಧಾಮ ನಿರ್ಮಿಸುವ ಪ್ರಸ್ತಾವನೆಯನ್ನು ಮುಂದೂಡಲಾಗಿದೆ.

ವಿವಿಧ ರಕ್ಷಿತ ಪ್ರದೇಶಗಳು ಹಾಗೂ ಹುಲಿ ಯೋಜನೆಗಳ ಬಫರ್ ವಲಯಗಳಲ್ಲಿ ಅಧಿಸೂಚನೆ ಹೊರಬಿದ್ದ ನಂತರ ಎಷ್ಟು ರೆಸಾರ್ಟ್ ಮತ್ತು ಹೋಂಸ್ಟೇಗಳು ಅಸ್ತಿತ್ವಕ್ಕೆ ಬಂದಿವೆ ಎಂಬ ಸಮಗ್ರ ವರದಿ ನೀಡುವಂತೆ ಸಚಿವರು ಸೂಚಿಸಿದ್ದು, ಅಕ್ರಮವಾಗಿ ತಲೆಯೆತ್ತಿರುವ ರೆಸಾರ್ಟ್‌ಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಇಕೋ-ಸೆನ್ಸಿಟಿವ್ ವಲಯಗಳು ಇನ್ನು 'ಸೈಲೆಂಟ್ ಝೋನ್'

ಪರಿಸರ ಸೂಕ್ಷ್ಮ ವಲಯಗಳಲ್ಲಿ ಮಾನವ ಹಸ್ತಕ್ಷೇಪ ಹಾಗೂ ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಇಡೀ ಇಕೋ-ಸೆನ್ಸಿಟಿವ್ ವಲಯಗಳನ್ನು (ESZ) ಕಡ್ಡಾಯವಾಗಿ ಮೌನ ವಲಯಗಳನ್ನಾಗಿ (Silent Zones) ಘೋಷಿಸಲು ನಿರ್ಧರಿಸಲಾಗಿದೆ. ಈ ಭಾಗಗಳಲ್ಲಿ ಸಾರ್ವಜನಿಕರಿಗೆ ಸೂಕ್ತ ಅರಿವು ಮೂಡಿಸಲು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳ ಮಾರ್ಗಸೂಚಿ ಪ್ರಕಟಿಸುವುದರ ಜೊತೆಗೆ, ತಕ್ಷಣವೇ ಜೋನಲ್ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಇದೇ ವೇಳೆ ಬೆಳ್ತಂಗಡಿಯ ವಿದ್ಯುದ್ದೀಕರಣ, ಶರಾವತಿ ಕಣಿವೆಯಲ್ಲಿ ಬಿಎಸ್‌ಎನ್‌ಎಲ್ 4G ಟವರ್ ಹಾಗೂ ಒಎಫ್‌ಸಿ ಕೇಬಲ್ ಅಳವಡಿಕೆ ಮತ್ತು ಹೊನ್ನಾವರ ಸೇತುವೆ ಕಾಮಗಾರಿಗಳ ಪ್ರಸ್ತಾವನೆಗಳನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಶಿಫಾರಸು ಮಾಡಲು ಅನುಮೋದಿಸಲಾಗಿದೆ.

ಶೆಟ್ಟಿಹಳ್ಳಿ ಗಡಿ ಮರುವಿಂಗಡಣೆ ಮತ್ತು ಬನ್ನೇರುಘಟ್ಟ ವಲಯ ಯಥಾಸ್ಥಿತಿ

1974ರ ಅಧಿಸೂಚನೆಯಲ್ಲಿನ ಗೊಂದಲಗಳನ್ನು ಪರಿಹರಿಸಿ, ಶಿವಮೊಗ್ಗದ ಶೆಟ್ಟಿಹಳ್ಳಿ ವನ್ಯಜೀವಿಧಾಮದ ಗಡಿಯನ್ನು 41 ಅಧಿಸೂಚಿತ ಅರಣ್ಯ ಪ್ರದೇಶಗಳನ್ನೊಳಗೊಂಡ 397.96 ಚದರ ಕಿಲೋಮೀಟರ್‌ಗೆ ವೈಜ್ಞಾನಿಕವಾಗಿ ಮರುವಿಂಗಡಿಸುವ ಅಂತಿಮ ಪ್ರಸ್ತಾವನೆಯನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಸಲ್ಲಿಸಲು ಒಪ್ಪಿಗೆ ಸೂಚಿಸಲಾಯಿತು. ಮತ್ತೊಂದೆಡೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಆನೆ ಕಾರಿಡಾರ್‌ಗಳು ಈಗಾಗಲೇ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲೇ ಇರುವುದರಿಂದ, ಸದ್ಯ ಜಾರಿಯಲ್ಲಿರುವ ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆಯನ್ನು ಯಾವುದೇ ಮಾರ್ಪಾಡುಗಳಿಲ್ಲದೆ ಯಥಾವತ್ತಾಗಿ ಮುಂದುವರಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯದ ಅಭಿಪ್ರಾಯ ರವಾನಿಸಲು ತೀರ್ಮಾನಿಸಲಾಗಿದೆ.

ಅರಣ್ಯ ಪ್ರದೇಶಗಳು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ: ಸಚಿವರ ಖಡಕ್ ಸೂಚನೆ

ರಾಜ್ಯದ ಎಲ್ಲಾ ಅರಣ್ಯ ಪ್ರದೇಶಗಳು, ಅದರಲ್ಲೂ ಪ್ರಮುಖವಾಗಿ ಪರಿಸರ ಪ್ರವಾಸೋದ್ಯಮ ತಾಣಗಳನ್ನು ಇಂದಿನಿಂದಲೇ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಜಾರಿಗೊಳಿಸಲು ಸಚಿವ ರಾಮಲಿಂಗಾರೆಡ್ಡಿ ಗಡುವು ನೀಡಿದ್ದಾರೆ. ಪ್ರವಾಸಿಗರು ಮತ್ತು ಸ್ಥಳೀಯರಿಂದ ಪ್ಲಾಸ್ಟಿಕ್ ಬಳಕೆಯಾಗದಂತೆ ಆಯಾ ವಲಯದ ಕ್ಷೇತ್ರ ಅಧಿಕಾರಿಗಳು ಕಟ್ಟುನಿಟ್ಟಿನ ಕಣ್ಗಾವಲು ಇಡಬೇಕೆಂದು ತಾಕೀತು ಮಾಡಿದ್ದಾರೆ.

ಸಿಬ್ಬಂದಿ ಕಲ್ಯಾಣ ಮತ್ತು ಆಕರ್ಷಕ ವೇತನದಲ್ಲಿ ಪಶುವೈದ್ಯರ ಗುತ್ತಿಗೆ ನೇಮಕ

ಹುಲಿ ಪ್ರತಿಷ್ಠಾನಗಳ ನಿಧಿಯನ್ನು ಕಾಡಂಚಿನ ಗ್ರಾಮಗಳು ಹಾಗೂ ಆದಿವಾಸಿ ಹಾಡಿಗಳ ಜನರ ಶಿಕ್ಷಣ, ವಿದ್ಯಾರ್ಥಿವೇತನ, ಆರೋಗ್ಯ ಮತ್ತು ಸ್ವಯಂ ಉದ್ಯೋಗ ಕಾರ್ಯಕ್ರಮಗಳಿಗೆ ಬಳಸಲು ಅನುಮೋದಿಸಲಾಗಿದೆ. ಜೊತೆಗೆ ಮುಂಚೂಣಿ ಅರಣ್ಯ ಸಿಬ್ಬಂದಿಗೆ ಸುಧಾರಿತ ಕ್ವಾರ್ಟರ್ಸ್, ಕಳ್ಳಬೇಟೆ ತಡೆ ಶಿಬಿರಗಳ ನವೀಕರಣ, ಆರೋಗ್ಯ ವಿಮೆ ಒದಗಿಸುವುದರೊಂದಿಗೆ ಬಾಡಿ ಕ್ಯಾಮೆರಾ, ನೈಟ್ ವಿಷನ್ ಕ್ಯಾಮೆರಾ ಟ್ರ್ಯಾಪ್, ಸ್ಮಾರ್ಟ್ ಸ್ಟಿಕ್ ಹಾಗೂ ರಕ್ಷಣಾ ಕವಚಗಳನ್ನು ಒದಗಿಸಲು ಸೂಚಿಸಲಾಗಿದೆ.

ಅರಣ್ಯ ಇಲಾಖೆ ಹಾಗೂ ಮೃಗಾಲಯ ಪ್ರಾಧಿಕಾರದಲ್ಲಿ ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣೆಗಾಗಿ ಖಾಲಿ ಇರುವ ಪಶುವೈದ್ಯರ ಹುದ್ದೆಗಳನ್ನು ಆಕರ್ಷಕ ವೇತನ ನೀಡಿ ತುರ್ತಾಗಿ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಹಾಗೂ ಕಾಯಂ ನೇಮಕಾತಿ ನಿಯಮಾವಳಿ ರೂಪಿಸಲು ಸಭೆಯಲ್ಲಿ ಹಸಿರು ನಿಶಾನೆ ನೀಡಲಾಯಿತು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೇಜರ್ ಪುತ್ರಿಯನ್ನು ತಮ್ಮೊಂದಿಗೇ ಇರುವಂತೆ ಪೋಷಕರು ಬಲವಂತಪಡಿಸುವಂತಿಲ್ಲ..! ಹೈಕೋರ್ಟ್ ಮಹತ್ವದ ತೀರ್ಪುತಂದೆಯ ಆಸ್ತಿಯಲ್ಲಿ ಸಂಪೂರ್ಣ ಪಾಲು ಕೇಳಿದ್ದ ಮಗನಿಗೆ ಬಿಗ್ ಶಾಕ್..! ಸುಪ್ರೀಂಕೋರ್ಟ್ ಮಹತ್ವದ ತೀರ್ಪುನಟ ಅಂಬರೀಷ್ ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಪತ್ರ.!KBC ವೇದಿಕೆಯಲ್ಲಿ ಮತ್ತೆ ‘ಚಂದ್ರಮುಖಿ’ಯಾದ ಮಾಧುರಿ ದೀಕ್ಷಿತ್..! ನಟಿಯ ನೃತ್ಯಕ್ಕೆ ಅಮಿತಾಭ್ ಫಿದಾ |WATCH VIDEOಕಪ್ಪತಗುಡ್ಡದಲ್ಲಿ ಕಲ್ಲು ಗಣಿಗಾರಿಕೆ ಪ್ರಸ್ತಾವನೆ ತಿರಸ್ಕಾರ, ಅರಣ್ಯ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ನಿಷೇಧ: ಸಚಿವ ರಾಮಲಿಂಗಾರೆಡ್ಡಿMPM, KFDC ಅರಣ್ಯ ನೆಡುತೋಪು ಗುತ್ತಿಗೆದಾರರ ಟ್ರಸ್ಟ್ ರಾಜ್ಯಾಧ್ಯಕ್ಷರಾಗಿ ಧರ್ಮೇಂದ್ರ ಶಿರವಾಳ ಪುನರಾಯ್ಕೆಆವಾಸಸ್ಥಾನಗಳ ರಕ್ಷಣೆಯಿಂದ ಜೀವವೈವಿಧ್ಯತೆ ಉಳಿವು ಸಾಧ್ಯ: ಶಿವಮೊಗ್ಗ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ಅಭಿಪ್ರಾಯಮಲೇರಿಯಾ ಮಾತ್ರೆ ಸೇವಿಸಿ ಬಾಲಕಿ ಸಾವು..! ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ಆಂಧ್ರಪ್ರದೇಶದಲ್ಲಿ ಪಾಕ್ ಗೂಢಚಾರರ ಜಾಲ ಬಯಲು..! ನೌಕಾಪಡೆ ಸಿಬ್ಬಂದಿ ಸೇರಿ 18 ಮಂದಿ ಅರೆಸ್ಟ್.!ಕೇಂದ್ರ ಸರ್ಕಾರದಿಂದ ರೈತರಿಗೆ ತಿಂಗಳಿಗೆ ₹3,000 ಪಿಂಚಣಿ..! ಜಸ್ಟ್ ಹೀಗೆ ಅರ್ಜಿ ಸಲ್ಲಿಸಿ