LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

MPM, KFDC ಅರಣ್ಯ ನೆಡುತೋಪು ಗುತ್ತಿಗೆದಾರರ ಟ್ರಸ್ಟ್ ರಾಜ್ಯಾಧ್ಯಕ್ಷರಾಗಿ ಧರ್ಮೇಂದ್ರ ಶಿರವಾಳ ಪುನರಾಯ್ಕೆ

ಶಿವಮೊಗ್ಗ: ಕರ್ನಾಟಕ ರಾಜ್ಯ ಎಂಪಿಎಂ (MPM) ಮತ್ತು ಕೆಎಫ್‌ಡಿಸಿ (KFDC) ಅರಣ್ಯ ನೆಡುತೋಪು ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ರಾಜ್ಯಾಧ್ಯಕ್ಷರಾಗಿ ಧರ್ಮೇಂದ್ರ ಶಿರವಾಳ ಅವರು ಸತತ ಎರಡನೇ ಬಾರಿಗೆ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಶಿವಮೊಗ್ಗ ನಗರದ ನಿಸರ್ಗ ಗಾರ್ಡನ್‌ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಂಘದ ಮಹತ್ವದ ವಾರ್ಷಿಕ ಮಹಾಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಗುತ್ತಿಗೆದಾರರ ಸಮ್ಮುಖದಲ್ಲಿ ಈ ಸರ್ವಾನುಮತದ ಆಯ್ಕೆ ನಡೆಯಿತು.

ಗುತ್ತಿಗೆದಾರರ ಹಿತರಕ್ಷಣೆಗೆ ನಿರಂತರ ಹೋರಾಟ: ಧರ್ಮೇಂದ್ರ ಶಿರವಾಳ

ತಮ್ಮನ್ನು ಪುನರಾಯ್ಕೆ ಮಾಡಿದ ಬಳಿಕ ಮಾತನಾಡಿದ ನೂತನ ರಾಜ್ಯಾಧ್ಯಕ್ಷ ಧರ್ಮೇಂದ್ರ ಶಿರವಾಳ, "ಸಂಘದ ಎಲ್ಲಾ ಹಿರಿಯ ಮತ್ತು ಕಿರಿಯ ಗುತ್ತಿಗೆದಾರರು ನನ್ನ ಹಿಂದಿನ ಕಾರ್ಯವೈಖರಿಯನ್ನು ಗುರುತಿಸಿ ಮತ್ತೊಮ್ಮೆ ರಾಜ್ಯಾಧ್ಯಕ್ಷ ಸ್ಥಾನದ ದೊಡ್ಡ ಜವಾಬ್ದಾರಿಯನ್ನು ನಂಬಿಕೆಯಿಂದ ವಹಿಸಿದ್ದಾರೆ. ನಿಮ್ಮೆಲ್ಲರ ವಿಶ್ವಾಸಕ್ಕೆ ಸದಾ ಚಿರಋಣಿಯಾಗಿದ್ದೇನೆ ಎಂದರು.

ಪ್ರಸ್ತುತ ಅರಣ್ಯ ನೆಡುತೋಪು ಗುತ್ತಿಗೆದಾರರು ಎದುರಿಸುತ್ತಿರುವ ಬಿಲ್ ಪಾವತಿ ವಿಳಂಬ, ಕಾರ್ಮಿಕರ ಸಮಸ್ಯೆಗಳು ಹಾಗೂ ಇಲಾಖಾ ಮಟ್ಟದ ವಿವಿಧ ಸವಾಲುಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಂಘಟನೆಯನ್ನು ರಾಜ್ಯವ್ಯಾಪಿ ಮತ್ತಷ್ಟು ಬಲಪಡಿಸಿ, ಪ್ರತಿಯೊಬ್ಬ ಗುತ್ತಿಗೆದಾರರ ಹಿತರಕ್ಷಣೆಗೆ ಬದ್ಧವಾಗಿರುತ್ತೇನೆ ಎಂದು ಭರವಸೆ ನೀಡಿದರು.

ಸಂಘಟನೆಯ ಬಲವರ್ಧನೆಗೆ ಒಗ್ಗಟ್ಟು ಅನಿವಾರ್ಯ: ಗೌರವಾಧ್ಯಕ್ಷ ಪೆರುಮಾಳ್ ಕರೆ

ಟ್ರಸ್ಟ್‌ನ ಗೌರವಾಧ್ಯಕ್ಷರಾದ ಪೆರುಮಾಳ್ ಮಾತನಾಡಿ, "ಧರ್ಮೇಂದ್ರ ಶಿರವಾಳ ಅವರ ಸಮರ್ಥ ನಾಯಕತ್ವ ಹಾಗೂ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಗುಣ ಸಂಘಟನೆಗೆ ಅಗತ್ಯವಿತ್ತು. ಹೀಗಾಗಿ ಎಲ್ಲರೂ ಒಕ್ಕೊರಲಿನಿಂದ ಅವರನ್ನು ಪುನರಾಯ್ಕೆ ಮಾಡಿದ್ದೇವೆ. ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಬಾಕಿ ಉಳಿದಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಲು ಹೊಸ ಕಾರ್ಯಕಾರಿ ಸಮಿತಿಗೆ ಸಂಪೂರ್ಣ ಬೆಂಬಲ ನೀಡಲಿದ್ದೇವೆ," ಎಂದರು.

ಹಲವು ಗಣ್ಯರ ಉಪಸ್ಥಿತಿ

ಸಭೆಯಲ್ಲಿ ಕರ್ನಾಟಕ ರಾಜ್ಯ ಎಂಪಿಎಂ (MPM) ಮತ್ತು ಕೆಎಫ್‌ಡಿಸಿ (KFDC) ಅರಣ್ಯ ನೆಡುತೋಪು ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಫರ್ವೀಜ್ ಸಾಗರ, ಕಾರ್ತಿಕ್ ಹಾಸನ, ಷರೀಫ್ ಭದ್ರಾವತಿ, ಸುರೇಶ್ ಶೆಟ್ಟಿ, ಅನಂತಪದ್ಮನಾಭ ಕಿಣಿ ಸಿರಿಗೆರೆ, ಯಾಸೀನ್ ಖಾನ್ ತೀರ್ಥಹಳ್ಳಿ, ಫಾರುಕ್ ಜಹಾಂಗೀರ್ ಶಿವಮೊಗ್ಗ, ಗುರು ಶಿರವಾಳ, ರಾಜು ಕೆ. ನಾಯರ್, ಮುಕ್ತರ್ ಅಹ್ಮದ್, ಮಂಜೂರ್ ಆಲಿಖಾನ್, ಮುಬಿನ್ ಆಲಿಖಾನ್, ವಿಜಯ್ ಶೆಟ್ಟಿ, ಅನಿಲ್ ಮೇದಾ ದಾಂಡೇಲಿ, ಚಂದ್ರಶೇಖರ ಮಾಯಣ್ಣನವರ್ ಹಾನಗಲ್, ಮಂಜುನಾಥ್ ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ತಾಲೂಕು ಮತ್ತು ಜಿಲ್ಲೆಗಳ ನೂರಾರು ಗುತ್ತಿಗೆದಾರರು ಹಾಜರಿದ್ದು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೇಜರ್ ಪುತ್ರಿಯನ್ನು ತಮ್ಮೊಂದಿಗೇ ಇರುವಂತೆ ಪೋಷಕರು ಬಲವಂತಪಡಿಸುವಂತಿಲ್ಲ..! ಹೈಕೋರ್ಟ್ ಮಹತ್ವದ ತೀರ್ಪುತಂದೆಯ ಆಸ್ತಿಯಲ್ಲಿ ಸಂಪೂರ್ಣ ಪಾಲು ಕೇಳಿದ್ದ ಮಗನಿಗೆ ಬಿಗ್ ಶಾಕ್..! ಸುಪ್ರೀಂಕೋರ್ಟ್ ಮಹತ್ವದ ತೀರ್ಪುನಟ ಅಂಬರೀಷ್ ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಪತ್ರ.!KBC ವೇದಿಕೆಯಲ್ಲಿ ಮತ್ತೆ ‘ಚಂದ್ರಮುಖಿ’ಯಾದ ಮಾಧುರಿ ದೀಕ್ಷಿತ್..! ನಟಿಯ ನೃತ್ಯಕ್ಕೆ ಅಮಿತಾಭ್ ಫಿದಾ |WATCH VIDEOಕಪ್ಪತಗುಡ್ಡದಲ್ಲಿ ಕಲ್ಲು ಗಣಿಗಾರಿಕೆ ಪ್ರಸ್ತಾವನೆ ತಿರಸ್ಕಾರ, ಅರಣ್ಯ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ನಿಷೇಧ: ಸಚಿವ ರಾಮಲಿಂಗಾರೆಡ್ಡಿMPM, KFDC ಅರಣ್ಯ ನೆಡುತೋಪು ಗುತ್ತಿಗೆದಾರರ ಟ್ರಸ್ಟ್ ರಾಜ್ಯಾಧ್ಯಕ್ಷರಾಗಿ ಧರ್ಮೇಂದ್ರ ಶಿರವಾಳ ಪುನರಾಯ್ಕೆಆವಾಸಸ್ಥಾನಗಳ ರಕ್ಷಣೆಯಿಂದ ಜೀವವೈವಿಧ್ಯತೆ ಉಳಿವು ಸಾಧ್ಯ: ಶಿವಮೊಗ್ಗ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ಅಭಿಪ್ರಾಯಮಲೇರಿಯಾ ಮಾತ್ರೆ ಸೇವಿಸಿ ಬಾಲಕಿ ಸಾವು..! ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ಆಂಧ್ರಪ್ರದೇಶದಲ್ಲಿ ಪಾಕ್ ಗೂಢಚಾರರ ಜಾಲ ಬಯಲು..! ನೌಕಾಪಡೆ ಸಿಬ್ಬಂದಿ ಸೇರಿ 18 ಮಂದಿ ಅರೆಸ್ಟ್.!ಕೇಂದ್ರ ಸರ್ಕಾರದಿಂದ ರೈತರಿಗೆ ತಿಂಗಳಿಗೆ ₹3,000 ಪಿಂಚಣಿ..! ಜಸ್ಟ್ ಹೀಗೆ ಅರ್ಜಿ ಸಲ್ಲಿಸಿ