LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತಂದೆಯ ಆಸ್ತಿಯಲ್ಲಿ ಸಂಪೂರ್ಣ ಪಾಲು ಕೇಳಿದ್ದ ಮಗನಿಗೆ ಬಿಗ್ ಶಾಕ್..! ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ತಂದೆಯ ಆಸ್ತಿಯಲ್ಲಿ ತನಗೇ ಸಂಪೂರ್ಣ ಹಕ್ಕು ಇದೆ ಎಂದು ವಾದಿಸಿದ್ದ ವ್ಯಕ್ತಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಮಲತಾಯಿ ಕಾನೂನುಬದ್ಧವಾಗಿ ಪಡೆದಿದ್ದ ಆಸ್ತಿಯನ್ನು ತನ್ನ ಮಗಳಿಗೆ ವಿಲ್ ಮೂಲಕ ನೀಡಿದ್ದು, ಆಕೆ ಬಳಿಕ ಆಸ್ತಿಯ ಒಂದು ಭಾಗವನ್ನು ಮಾರಾಟ ಮಾಡಿದ್ದ ಪ್ರಕರಣದಲ್ಲಿ, ಮಲತಾಯಿಯ ಹಕ್ಕನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಅಸಲಿಗೆ ನಡೆದಿದ್ದೇನು?

ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೇರದಾಳ ಗ್ರಾಮದ ಗಣಪತಿ ಎಂಬುವವರು ತಮ್ಮ ತಂದೆ ಗಂಗಾರಾಮ್ ಅವರ ಆಸ್ತಿಯಲ್ಲಿ ತನಗೇ ಸಂಪೂರ್ಣ ಹಕ್ಕು ಇದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

ಗಂಗಾರಾಮ್ ಅವರು 1949ರಲ್ಲಿ ಮೃತಪಟ್ಟಿದ್ದರು. ಅವರ ಮೊದಲ ಪತ್ನಿಯಿಂದ ಗಣಪತಿ ಎಂಬ ಮಗನಿದ್ದರೆ, ಎರಡನೇ ಪತ್ನಿ ಕಾಶಿಬಾಯಿ ಅವರಿಗೆ ಶಕುಂತಲಾ ಮತ್ತು ಕಮಲವ್ವ ಎಂಬ ಇಬ್ಬರು ಪುತ್ರಿಯರಿದ್ದರು.

ಗಂಗಾರಾಮ್ ಅವರ ನಿಧನದ ಬಳಿಕ ಕಾಶಿಬಾಯಿ ಆಸ್ತಿಯಲ್ಲಿ ತಮ್ಮ ಹಕ್ಕನ್ನು ಪಡೆದಿದ್ದರು. ನಂತರ 1986ರಲ್ಲಿ ಮೃತಪಟ್ಟ ಕಾಶಿಬಾಯಿ, 1984ರ ಅಕ್ಟೋಬರ್ 13ರಂದು ಮಾಡಿದ್ದ ನೋಂದಾಯಿತ ವಿಲ್ ಮೂಲಕ ಆಸ್ತಿಯನ್ನು ತಮ್ಮ ಪುತ್ರಿ ಶಕುಂತಲಾ ಅವರಿಗೆ ನೀಡಿದ್ದರು. ಶಕುಂತಲಾ ಹೆಸರಿನಲ್ಲಿ ಆಸ್ತಿಯ ದಾಖಲೆಗಳು ಬದಲಾದಾಗ ಗಣಪತಿಗೆ ವಿಷಯ ತಿಳಿದು, ಅದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

ಮಗನ ವಾದ ಏನಾಗಿತ್ತು?

ತಂದೆ ಗಂಗಾರಾಮ್ 1949ರಲ್ಲಿ ಮೃತಪಟ್ಟಿದ್ದು, ಆಗ ಹಿಂದೂ ಉತ್ತರಾಧಿಕಾರ ಕಾಯ್ದೆ ಜಾರಿಗೆ ಬಂದಿರಲಿಲ್ಲ. ಹಿಂದೂ ಮಹಿಳಾ ಆಸ್ತಿ ಹಕ್ಕು ಕಾಯಿದೆ ಪ್ರಕಾರ ಕಾಶಿಬಾಯಿ ತನ್ನ ಗಂಡನ ಆಸ್ತಿ ವರ್ಗಾವಣೆ ಮಾಡಿಕೊಂಡಿರುತ್ತಾರೆ. ಕಾನೂನಿನ ಪ್ರಕಾರ ತಾನೇ ತಂದೆಯ ಆಸ್ತಿಯ ಏಕೈಕ ಪುರುಷ ಸಹಪಾಲುದಾರನಾಗಿದ್ದು, ಆಸ್ತಿಯ ಸಂಪೂರ್ಣ ಮಾಲೀಕನಾಗಿದ್ದೇನೆ ಎಂದು ಗಣಪತಿ ವಾದಿಸಿದ್ದರು.

ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ಸಮಯದಲ್ಲೇ ಶಕುಂತಲಾ ಆಸ್ತಿಯ ಒಂದು ಭಾಗವನ್ನು ಬಾಬುರಾವ್ ಎಂಬುವವರಿಗೆ ಮಾರಾಟ ಮಾಡಿದ್ದರು.

ಸುಪ್ರೀಂ ಕೋರ್ಟ್ ಹೇಳಿದ್ದೇನು?

ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕಾಶಿಬಾಯಿ ಅವರ ಹಕ್ಕನ್ನು ಎತ್ತಿಹಿಡಿದಿದೆ. 1937ರ Hindu Women’s Rights to Property Act ಅಡಿಯಲ್ಲಿ ಗಂಗಾರಾಮ್ ಅವರ ಪತ್ನಿಯಾಗಿದ್ದ ಕಾಶಿಬಾಯಿ ಅವರಿಗೆ ಪತಿಯ ಆಸ್ತಿಯಲ್ಲಿ ಕಾನೂನುಬದ್ಧ ಹಕ್ಕು ದೊರೆತಿತ್ತು ಎಂದು ಕೋರ್ಟ್ ಹೇಳಿದೆ.

ನಂತರ 1956ರಲ್ಲಿ Hindu Succession Act ಜಾರಿಗೆ ಬಂದಾಗ, ಅದರ ಸೆಕ್ಷನ್ 14(1) ಅಡಿಯಲ್ಲಿ ಕಾಶಿಬಾಯಿ ಹೊಂದಿದ್ದ ಸೀಮಿತ ಹಕ್ಕು ಸಂಪೂರ್ಣ ಮಾಲೀಕತ್ವದ ಹಕ್ಕಾಗಿ ಪರಿವರ್ತನೆಯಾಯಿತು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಈ ಹಕ್ಕು ರೂಪುಗೊಳ್ಳಲು ಪ್ರತ್ಯೇಕವಾಗಿ ಔಪಚಾರಿಕ ಆಸ್ತಿ ವಿಭಜನೆ ನಡೆದಿರುವುದು ಕಡ್ಡಾಯವಲ್ಲ ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ.

ಮಲತಾಯಿಗೆ ಆಸ್ತಿ ವಿಲ್ ಮಾಡುವ ಹಕ್ಕಿತ್ತು

ಕಾಶಿಬಾಯಿ ಆಸ್ತಿಯ ಸಂಪೂರ್ಣ ಮಾಲೀಕರಾದ ಬಳಿಕ, ತಮ್ಮ ಇಚ್ಛೆಯಂತೆ ಆಸ್ತಿಯನ್ನು ವಿಲ್ ಮಾಡುವ ಕಾನೂನುಬದ್ಧ ಹಕ್ಕು ಹೊಂದಿದ್ದರು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹೀಗಾಗಿ ಕಾಶಿಬಾಯಿ ತಮ್ಮ ಪುತ್ರಿ ಶಕುಂತಲಾ ಹೆಸರಿಗೆ ಮಾಡಿದ್ದ ವಿಲ್ ಮಾನ್ಯವಾಗಿದೆ. ಶಕುಂತಲಾ ನಂತರ ಆಸ್ತಿಯ ಒಂದು ಭಾಗವನ್ನು ಬಾಬುರಾವ್ ಅವರಿಗೆ ಮಾರಾಟ ಮಾಡಿರುವುದೂ ಕಾನೂನುಬದ್ಧವಾಗಿದೆ ಎಂದು ಕೋರ್ಟ್ ತೀರ್ಮಾನಿಸಿದೆ.

ಮಗನಿಗೆ ಏಕೆ ಸಂಪೂರ್ಣ ಆಸ್ತಿ ಸಿಗಲಿಲ್ಲ?

ಗಣಪತಿ ಮಾತ್ರವೇ ತಂದೆಯ ಆಸ್ತಿಯ ವಾರಸುದಾರ ಎಂಬ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಲಿಲ್ಲ. ತಂದೆಯ ಮರಣದ ಸಮಯದಲ್ಲೇ ಅವರ ವಿಧವೆಯಾದ ಕಾಶಿಬಾಯಿ ಅವರಿಗೆ 1937ರ ಕಾಯ್ದೆಯಡಿ ಹಕ್ಕು ದೊರೆತಿತ್ತು. 1956ರ ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 14(1) ಮೂಲಕ ಆ ಹಕ್ಕು ಸಂಪೂರ್ಣ ಮಾಲೀಕತ್ವವಾಗಿ ಪರಿವರ್ತನೆಯಾಯಿತು.

ಆದ್ದರಿಂದ ಕಾಶಿಬಾಯಿ ತಮ್ಮ ಆಸ್ತಿಯನ್ನು ಪುತ್ರಿಗೆ ವಿಲ್ ಮೂಲಕ ನೀಡಲು ಅರ್ಹರಾಗಿದ್ದರು. ಹೀಗಾಗಿ ಗಣಪತಿ ಸಲ್ಲಿಸಿದ್ದ ಸಂಪೂರ್ಣ ಆಸ್ತಿ ಹಕ್ಕಿನ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

 

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗದಲ್ಲಿ ಲಾರಿ-ಕಾರಿನ ನಡುವೆ ಭೀಕರ ಅಪಘಾತ: ಮೂವರು ಯುವಕರ ದುರ್ಮರಣಮೇಜರ್ ಪುತ್ರಿಯನ್ನು ತಮ್ಮೊಂದಿಗೇ ಇರುವಂತೆ ಪೋಷಕರು ಬಲವಂತಪಡಿಸುವಂತಿಲ್ಲ..! ಹೈಕೋರ್ಟ್ ಮಹತ್ವದ ತೀರ್ಪುತಂದೆಯ ಆಸ್ತಿಯಲ್ಲಿ ಸಂಪೂರ್ಣ ಪಾಲು ಕೇಳಿದ್ದ ಮಗನಿಗೆ ಬಿಗ್ ಶಾಕ್..! ಸುಪ್ರೀಂಕೋರ್ಟ್ ಮಹತ್ವದ ತೀರ್ಪುನಟ ಅಂಬರೀಷ್ ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಪತ್ರ.!KBC ವೇದಿಕೆಯಲ್ಲಿ ಮತ್ತೆ ‘ಚಂದ್ರಮುಖಿ’ಯಾದ ಮಾಧುರಿ ದೀಕ್ಷಿತ್..! ನಟಿಯ ನೃತ್ಯಕ್ಕೆ ಅಮಿತಾಭ್ ಫಿದಾ |WATCH VIDEOಕಪ್ಪತಗುಡ್ಡದಲ್ಲಿ ಕಲ್ಲು ಗಣಿಗಾರಿಕೆ ಪ್ರಸ್ತಾವನೆ ತಿರಸ್ಕಾರ, ಅರಣ್ಯ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ನಿಷೇಧ: ಸಚಿವ ರಾಮಲಿಂಗಾರೆಡ್ಡಿMPM, KFDC ಅರಣ್ಯ ನೆಡುತೋಪು ಗುತ್ತಿಗೆದಾರರ ಟ್ರಸ್ಟ್ ರಾಜ್ಯಾಧ್ಯಕ್ಷರಾಗಿ ಧರ್ಮೇಂದ್ರ ಶಿರವಾಳ ಪುನರಾಯ್ಕೆಆವಾಸಸ್ಥಾನಗಳ ರಕ್ಷಣೆಯಿಂದ ಜೀವವೈವಿಧ್ಯತೆ ಉಳಿವು ಸಾಧ್ಯ: ಶಿವಮೊಗ್ಗ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ಅಭಿಪ್ರಾಯಮಲೇರಿಯಾ ಮಾತ್ರೆ ಸೇವಿಸಿ ಬಾಲಕಿ ಸಾವು..! ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ಆಂಧ್ರಪ್ರದೇಶದಲ್ಲಿ ಪಾಕ್ ಗೂಢಚಾರರ ಜಾಲ ಬಯಲು..! ನೌಕಾಪಡೆ ಸಿಬ್ಬಂದಿ ಸೇರಿ 18 ಮಂದಿ ಅರೆಸ್ಟ್.!