LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೆಕ್ಯುರಿಟಿ ಡೆಪಾಸಿಟ್ ನಿಯಮಗಳು: ಬಾಡಿಗೆದಾರರೇ ಮನೆ/ಮಳಿಗೆ ಖಾಲಿ ಮಾಡುವ ಮುನ್ನ ಈ ವಿಷಯ ತಿಳಿದಿರಲಿ

ಬೆಂಗಳೂರು: ದೇಶದಲ್ಲಿ ಮನೆ ಅಥವಾ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ಪಡೆಯುವಾಗ ಸೆಕ್ಯುರಿಟಿ ಡೆಪಾಸಿಟ್ (ಭದ್ರತಾ ಠೇವಣಿ) ನೀಡುವುದು ಸಾಮಾನ್ಯ. ಆದರೆ, ಮಾಲೀಕರು ಎಷ್ಟು ಡೆಪಾಸಿಟ್ ಕೇಳಬಹುದು? ಮನೆ ಖಾಲಿ ಮಾಡುವಾಗ ಯಾವ ಆಧಾರದ ಮೇಲೆ ಹಣ ಕಡಿತಗೊಳಿಸಬಹುದು? ಈ ಬಗ್ಗೆ ಕಾನೂನು ಏನು ಹೇಳುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಸೆಕ್ಯುರಿಟಿ ಡೆಪಾಸಿಟ್‌ಗೆ ಕಾನೂನಿನ ಮಿತಿ ಇದೆಯೇ?


ಕೇಂದ್ರ ಸರ್ಕಾರದ ಮಾದರಿ ಬಾಡಿಗೆ ಕಾಯ್ದೆ, 2021 (Model Tenancy Act) ರ ಪ್ರಕಾರ ಸೆಕ್ಯುರಿಟಿ ಡೆಪಾಸಿಟ್‌ಗೆ ಸ್ಪಷ್ಟ ಮಿತಿ ಹೇರಲಾಗಿದೆ:

ವಸತಿ ಮನೆಗಳಿಗೆ: ಗರಿಷ್ಠ 2 ತಿಂಗಳ ಬಾಡಿಗೆ.

ವಾಣಿಜ್ಯ (Commercial) ಆಸ್ತಿಗಳಿಗೆ: ಗರಿಷ್ಠ 6 ತಿಂಗಳ ಬಾಡಿಗೆ.

ನೆನಪಿರಲಿ: ಈ ಕಾಯ್ದೆಯನ್ನು ಎಲ್ಲಾ ರಾಜ್ಯಗಳು ಇನ್ನೂ ಏಕರೂಪವಾಗಿ ಜಾರಿಗೆ ತಂದಿಲ್ಲ. ಸುಪ್ರೀಂ ಕೋರ್ಟ್ ವಕೀಲರಾದ ತುಷಾರ್ ಕುಮಾರ್ ಅವರ ಪ್ರಕಾರ, “ದೆಹಲಿ, ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಇಂದಿಗೂ ಮಾರುಕಟ್ಟೆಯ ವಾಡಿಕೆ ಹಾಗೂ ಮಾಲೀಕ-ಬಾಡಿಗೆದಾರರ ನಡುವಿನ ಒಪ್ಪಂದದ ಆಧಾರದ ಮೇಲೆಯೇ ಡೆಪಾಸಿಟ್ ನಿರ್ಧಾರವಾಗುತ್ತಿದೆ.” ಆದರೆ, ಈ ಮೊತ್ತವು ಅಸಮಂಜಸವಾಗಿ ಅಥವಾ ಅನ್ಯಾಯವಾಗಿ ಇರಬಾರದು ಎಂದು ಅವರು ಸ್ಪಷ್ಟಪಡಿಸುತ್ತಾರೆ.

ಡೆಪಾಸಿಟ್ ಹಣದಲ್ಲಿ ಯಾವ ಕಡಿತಗಳನ್ನು (Deductions) ಮಾಡಬಹುದು?


ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಸದಸ್ಯರಾದ ಹರ್ಷಲ್ ದಿಲ್ವಾಲಿ ಅವರ ಪ್ರಕಾರ, ಮಾಲೀಕರು ಸಿಕ್ಕಸಿಕ್ಕ ಕಾರಣಗಳಿಗೆ ಹಣ ಕಡಿತಗೊಳಿಸುವಂತಿಲ್ಲ. ಕೇವಲ ಈ ಕೆಳಗಿನ ಕಾರಣಗಳಿಗೆ ಮಾತ್ರ ಕಡಿತ ಸಿಂಧುವಾಗುತ್ತದೆ:

ಬಾಕಿ ಇರುವ ಬಾಡಿಗೆ ಅಥವಾ ಯುಟಿಲಿಟಿ ಬಿಲ್‌ಗಳು (ವಿದ್ಯುತ್, ನೀರಿನ ಬಿಲ್ ಇತ್ಯಾದಿ).

ಬಾಡಿಗೆದಾರರ ನಿರ್ಲಕ್ಷ್ಯದಿಂದಾದ ಹಾನಿ: ಗ್ಲಾಸ್ ಒಡೆಯುವುದು, ಫಿಕ್ಚರ್‌ಗಳನ್ನು ಹಾಳು ಮಾಡುವುದು ಅಥವಾ ತೀವ್ರವಾದ ಕಲೆಗಳು.

ಸಾಮಾನ್ಯ ಸವಕಳಿಗೆ ಹಣ ಹಿಡಿಯುವಂತಿಲ್ಲ:
ಗೋಡೆಯ ಬಣ್ಣ ಮಸುಕಾಗುವುದು ಅಥವಾ ದಿನಬಳಕೆಯಿಂದ ತಾನಾಗಿಯೇ ಆಗುವ ಸಣ್ಣಪುಟ್ಟ ಸವೆತಗಳನ್ನು (Normal wear and tear) ನೆಪವಾಗಿಸಿ ಹಣ ಕಡಿತಗೊಳಿಸುವಂತಿಲ್ಲ. ಇನ್ನು ಮನೆಗೆ ಸುಣ್ಣ-ಬಣ್ಣ ಬಳಿಯುವ (Painting) ಅಥವಾ ಕ್ಲೀನಿಂಗ್ ವೆಚ್ಚವನ್ನು ಬಾಡಿಗೆ ಒಪ್ಪಂದದಲ್ಲಿ (Rent Agreement) ಮೊದಲೇ ಉಲ್ಲೇಖಿಸಿದ್ದರೆ ಮಾತ್ರ ಕಡಿತಗೊಳಿಸಲು ಅವಕಾಶವಿರುತ್ತದೆ.

ಡೆಪಾಸಿಟ್ ಹಣ ಮರಳಿ ನೀಡಲು ಕಾಲಮಿತಿ ಏನು?
ವಸತಿ ಮನೆಗಳು: ಮಾದರಿ ಬಾಡಿಗೆ ಕಾಯ್ದೆಯಡಿ, ಬಾಡಿಗೆದಾರರು ಆಸ್ತಿಯನ್ನು ಖಾಲಿ ಮಾಡಿದ ಒಂದು ತಿಂಗಳ ಒಳಗಾಗಿ ಮಾಲೀಕರು ಬಾಕಿ ಡೆಪಾಸಿಟ್ ಹಣವನ್ನು ಹಿಂತಿರುಗಿಸಬೇಕು.

ವಾಣಿಜ್ಯ ಆಸ್ತಿಗಳು: ಸಾಮಾನ್ಯವಾಗಿ ಒಪ್ಪಂದ ಮುಗಿದ ೧೫ ರಿಂದ ೩೦ ದಿನಗಳ ಒಳಗಾಗಿ ಹಣ ರೀಫಂಡ್ ಮಾಡಬೇಕು.

ಕಾಯ್ದೆ ಜಾರಿಯಲ್ಲಿಲ್ಲದ ಕಡೆಗಳಲ್ಲಿ, ಬಾಡಿಗೆ ಒಪ್ಪಂದದಲ್ಲಿ ಬರೆದುಕೊಂಡಿರುವ ಸಮಯದ ಮಿತಿಯೇ ಅಂತಿಮವಾಗಿರುತ್ತದೆ.

ಮಾಲೀಕರು ಹಣ ನೀಡದಿದ್ದರೆ ಬಾಡಿಗೆದಾರರ ಮುಂದಿರುವ ಆಯ್ಕೆಗಳೇನು?


ಒಂದು ವೇಳೆ ಮಾಲೀಕರು ಡೆಪಾಸಿಟ್ ಮರಳಿ ನೀಡಲು ಸಕಾಲದಲ್ಲಿ ಸ್ಪಂದಿಸದಿದ್ದರೆ ಅಥವಾ ಅಕ್ರಮವಾಗಿ ಹಣ ಕಡಿತಗೊಳಿಸಿದರೆ, ಈ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಕಾನೂನು ತಜ್ಞರು ಸಲಹೆ ನೀಡುತ್ತಾರೆ:

ದಾಖಲೆಗಳೊಂದಿಗೆ ಔಪಚಾರಿಕ ಮಾತುಕತೆ: ಮನೆ ಖಾಲಿ ಮಾಡುವಾಗ ಇದ್ದ ಸ್ಥಿತಿಯ ಫೋಟೋಗಳು, ಪೇಮೆಂಟ್ ರಶೀದಿಗಳು ಮತ್ತು ಬಾಡಿಗೆ ಒಪ್ಪಂದದ ಪ್ರತಿಯೊಂದಿಗೆ ಮಾಲೀಕರನ್ನು ಲಿಖಿತವಾಗಿ ಸಂಪರ್ಕಿಸಿ.

ಲೀಗಲ್ ನೋಟಿಸ್: ಸಮಸ್ಯೆ ಬಗೆಹರಿಯದಿದ್ದರೆ, ವಕೀಲರ ಮೂಲಕ ಮಾಲೀಕರಿಗೆ ಕಾನೂನು ನೋಟಿಸ್ ಕಳುಹಿಸುವುದು ಅತ್ಯಂತ ಪರಿಣಾಮಕಾರಿ ಮಾರ್ಗ.

ಬಾಡಿಗೆ ಪ್ರಾಧಿಕಾರಕ್ಕೆ ದೂರು: ಕಾಯ್ದೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ‘ಬಾಡಿಗೆ ಪ್ರಾಧಿಕಾರ’ವನ್ನು (Rent Authority) ಅಥವಾ ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸಬಹುದು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ