LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

‘ಪೆಡ್ಡಿ’ ವಿವಾದ: ಜಾನ್ವಿ ಕಪೂರ್ ಪರ ನಿಂತ ನಟಿ ಡಿಂಪಲ್ ಹಯಾತಿ; ಸಿನೆಮಾ ಮೇಕರ್ಸ್ ವಿರುದ್ಧ ಆಕ್ರೋಶ!

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ‘ಪೆಡ್ಡಿ’ ಚಿತ್ರದಲ್ಲಿನ ಜಾನ್ವಿ ಕಪೂರ್ ಪಾತ್ರದ ಚಿತ್ರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಬೆನ್ನಲ್ಲೇ ಜಾನ್ವಿ ಕಪೂರ್ ಬೆಂಬಲಕ್ಕೆ ನಿಂತಿರುವ ಟಾಲಿವುಡ್ ನಟಿ ಡಿಂಪಲ್ ಹಯಾತಿ, ಚಿತ್ರದಲ್ಲಿನ ಲೋಪದೋಷಗಳಿಗೆ ನಟಿಯರನ್ನು ಹೊಣೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಸಿನಿಮಾ ಮೇಕರ್ಸ್ ವಿರುದ್ಧ ಡಿಂಪಲ್ ಅಸಮಾಧಾನ

‘ಪೆಡ್ಡಿ’ ಸಿನಿಮಾದಲ್ಲಿ ಮಹಿಳಾ ಪಾತ್ರವನ್ನು ವೈಭವೀಕರಿಸಿರುವ ಮತ್ತು ವಸ್ತುವಿನಂತೆ ಬಿಂಬಿಸಿರುವ ರೀತಿಗೆ ಪ್ರೇಕ್ಷಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಡಿಂಪಲ್ ಹಯಾತಿ, ಚಿತ್ರರಂಗದಲ್ಲಿ ನಟಿಯರ ಪಾತ್ರಗಳನ್ನು ಸೃಷ್ಟಿಸುವ ವ್ಯವಸ್ಥೆಯನ್ನೇ ಪ್ರಶ್ನಿಸಿದ್ದಾರೆ. ಚಿತ್ರಕಥೆಯಲ್ಲಿ ಮಹಿಳಾ ಪಾತ್ರಗಳನ್ನು ಕೀಳಾಗಿ ಬರೆಯುವ ಚಿತ್ರ ತಯಾರಕರು ಮತ್ತು ಇಡೀ ವ್ಯವಸ್ಥೆಯನ್ನು ನಾವು ದೂಷಿಸಬೇಕೇ ಹೊರತು, ಸಿಕ್ಕ ಅವಕಾಶದಲ್ಲಿ ನಟಿಸುವ ನಟಿಯರನ್ನಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ನಟಿಯರು ತಮಗೆ ಸಿಗುವ ಅವಕಾಶಗಳಲ್ಲೇ ದೊಡ್ಡ ಮಟ್ಟಕ್ಕೆ ಬೆಳೆಯಲು ಮತ್ತು ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಶ್ರಮಿಸುತ್ತಾರೆ. ಆದರೆ ಕಥೆಯಲ್ಲಿ ನಾಯಕನಿಗೆ ಕೊಡುವ ಪ್ರಾಮುಖ್ಯತೆಯನ್ನು ನಾಯಕಿಯರ ಪಾತ್ರಕ್ಕೆ ನೀಡುವುದಿಲ್ಲ. ಚಿತ್ರಕಥೆ ಕಳಪೆಯಾಗಿದ್ದರೆ ಅದಕ್ಕೆ ನಿರ್ದೇಶಕರು ಮತ್ತು ಲೇಖಕರು ಹೊಣೆಯಾಗುತ್ತಾರೆ. ದುರಾದೃಷ್ಟವಶಾತ್ ಚಿತ್ರರಂಗದಲ್ಲಿ ನಟಿಯರನ್ನು ಕೇವಲ ಗ್ಲಾಮರ್ ಗೊಂಬೆಗಳಾಗಿ ಬಿಂಬಿಸಿ ಅವರ ನಿಜವಾದ ನಟನಾ ಸಾಮರ್ಥ್ಯವನ್ನು ಹತ್ತಿಕ್ಕಲಾಗುತ್ತಿದೆ ಎಂದು ಡಿಂಪಲ್ ಬೇಸರ ಹೊರಹಾಕಿದ್ದಾರೆ.

ಕ್ಷಮೆಯಾಚಿಸಿದ ನಿರ್ದೇಶಕ ಬುಚ್ಚಿ ಬಾಬು ಸನಾ

ಸಿನಿಮಾದ ದೃಶ್ಯಗಳು ಮತ್ತು ಸಂಭಾಷಣೆಗಳ ವಿರುದ್ಧ ಕೇಳಿಬಂದಿರುವ ಸಾರ್ವಜನಿಕ ಆಕ್ರೋಶಕ್ಕೆ ಚಿತ್ರದ ನಿರ್ದೇಶಕ ಬುಚ್ಚಿ ಬಾಬು ಸನಾ ಸ್ಪಂದಿಸಿದ್ದಾರೆ. ಪ್ರೇಕ್ಷಕರ ವಿಮರ್ಶೆಯನ್ನು ಗೌರವಿಸುವುದಾಗಿ ತಿಳಿಸಿರುವ ಅವರು, ಸಿನಿಮಾದಲ್ಲಿ ಮಹಿಳೆಯರನ್ನು ಗೌರವವಿಲ್ಲದೇ ಬಿಂಬಿಸುವ ಯಾವುದೇ ಉದ್ದೇಶ ತಮಗಿರಲಿಲ್ಲ ಎಂದಿದ್ದಾರೆ. ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಯಾಚಿಸುವುದಾಗಿ ಹೇಳಿರುವ ನಿರ್ದೇಶಕರು, ವಿವಾದಾತ್ಮಕ ದೃಶ್ಯಗಳನ್ನು ಮರುಸಂಪಾದನೆ (ಎಡಿಟ್) ಮಾಡಿ ಬದಲಾವಣೆ ತರುವುದಾಗಿ ಭರವಸೆ ನೀಡಿದ್ದಾರೆ.

ಗ್ರಾಮೀಣ ಹಿನ್ನೆಲೆಯ ಕಥಾಹಂದರ ಹೊಂದಿರುವ ‘ಪೆಡ್ಡಿ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದ್ದರೂ, ಮಹಿಳಾ ಪಾತ್ರದ ಚಿತ್ರಣದ ವಿಚಾರದಲ್ಲಿ ಮಾತ್ರ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಈ ಇಡೀ ವಿವಾದದ ಕುರಿತು ನಟಿ ಜಾನ್ವಿ ಕಪೂರ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ