LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚಿನ್ನದ ಬೆಲೆ ಎಲ್ಲಿಗೆ ತಲುಪಲಿದೆ? ರಾಬರ್ಟ್ ಕಿಯೋಸಾಕಿ ಭವಿಷ್ಯ ಕೇಳಿ ಹೂಡಿಕೆದಾರರು ಶಾಕ್

ಬೆಂಗಳೂರು: ಜಾಗತಿಕ ಆರ್ಥಿಕ ಪರಿಸರವು ಹದಗೆಡುತ್ತಿರುವುದು ಮತ್ತು ಸಾಲದ ಪ್ರಮಾಣ ದಿನೇ ದಿನೇ ಹೆಚ್ಚುತ್ತಿರುವುದನ್ನು ಕಂಡು, ‘ರಿಚ್ ಡ್ಯಾಡ್ ಪೂವರ್ ಡ್ಯಾಡ್’ (Rich Dad Poor Dad) ಪುಸ್ತಕದ ಪ್ರಸಿದ್ಧ ಲೇಖಕ ರಾಬರ್ಟ್ ಕಿಯೋಸಾಕಿ ಅವರು ಚಿನ್ನದ ಮೇಲಿನ ತಮ್ಮ ಹೂಡಿಕೆಯ ನಿಲುವನ್ನು ಮತ್ತಷ್ಟು ಬಲಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಈ ಅಮೂಲ್ಯ ಲೋಹದ ಬೆಲೆ ಸುದೀರ್ಘಾವಧಿಯವರೆಗೆ ಭಾರಿ ಏರಿಕೆ ಕಾಣಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಎಕ್ಸ್ (ಟ್ವಿಟರ್) ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಕಿಯೋಸಾಕಿ, ತಾವು ಮತ್ತಷ್ಟು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಆರಂಭಿಸಿರುವುದಾಗಿ ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿ ಕಳೆದ ಹಲವು ವರ್ಷಗಳಿಂದ ಬೆಲೆ ಹೆಚ್ಚಳವಾಗಿದ್ದರೂ, ಪ್ರಸ್ತುತ ದರಗಳು ಹೊಸದಾಗಿ ಹೂಡಿಕೆ ಮಾಡಲು ಇನ್ನೂ ಉತ್ತಮ ಅವಕಾಶವನ್ನು ಒದಗಿಸುತ್ತಿವೆ ಎಂಬುದು ಅವರ ವಾದವಾಗಿದೆ. ಹೆಚ್ಚುತ್ತಿರುವ ಸರ್ಕಾರಿ ಸಾಲ ಮತ್ತು ಕಾಗದದ ಕರೆನ್ಸಿಗಳು (ಫಿಯೆಟ್ ಮನಿ) ಕಾಲಾನಂತರದಲ್ಲಿ ಜನರ ಕೊಳ್ಳುವ ಶಕ್ತಿಯನ್ನು ಕುಗ್ಗಿಸುತ್ತವೆ ಎಂದು ಅವರು ಸತತವಾಗಿ ಎಚ್ಚರಿಸುತ್ತಾ ಬಂದಿದ್ದಾರೆ

ಚಿನ್ನ ಈಗಷ್ಟೇ ಹೊಸ ತಿರುವು ಪಡೆದುಕೊಂಡಿದೆ. ನಾನು ತಪ್ಪಾಗಿರಬಹುದು, ಆದರೆ ನನ್ನ ಪ್ರಕಾರ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದೀರ್ಘಕಾಲದವರೆಗೆ ಹೆಚ್ಚಾಗಲಿವೆ. ಪ್ರಸಿದ್ಧ ಮಾರುಕಟ್ಟೆ ವಿಶ್ಲೇಷಕ ಜಿಮ್ ರಿಕಾರ್ಡ್ಸ್ ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ 35,000 ಡಾಲರ್ ತಲುಪಲಿದೆ ಎಂದು ಅಂದಾಜಿಸಿದ್ದಾರೆ

ಚಿನ್ನದ ಬೆಲೆ ದಿಢೀರ್ ಕುಸಿಯಲು ಕಾರಣವೇನು?
ಡಾಲರ್ ಡಿಮ್ಯಾಂಡ್: ಜಾಗತಿಕ ರಾಜಕೀಯ ಉದ್ವಿಗ್ನತೆಗಳು ತಿಳಿಗೊಂಡಿರುವುದು ಮತ್ತು ಅಮೆರಿಕದಲ್ಲಿ ದೀರ್ಘಾವಧಿಯವರೆಗೆ ಬಡ್ಡಿ ದರಗಳು ಹೆಚ್ಚಿರಬಹುದು ಎಂಬ ಮುನ್ಸೂಚನೆಯೇ ಈ ಕುಸಿತಕ್ಕೆ ಮೇನ್ ಕಾರಣ.

ಮಾರುಕಟ್ಟೆ ಒತ್ತಡ: ಇದರಿಂದಾಗಿ ಹೂಡಿಕೆದಾರರು ಮತ್ತೆ ಸುರಕ್ಷಿತವಾಗಿ ಡಾಲರ್ (Dollar) ಕಡೆಗೆ ಮುಖ ಮಾಡುತ್ತಿದ್ದು, ಚಿನ್ನದ ಮಾರುಕಟ್ಟೆಯ ಮೇಲೆ ತೀವ್ರ ಒತ್ತಡ ಹೆಚ್ಚಾಗಿದೆ.

ಈ ಭಾರಿ ಕುಸಿತದ ಬೆನ್ನಲ್ಲೇ ರಾಬರ್ಟ್ ಕಿಯೋಸಾಕಿ, “ಮಾರುಕಟ್ಟೆಯ ಟ್ರೆಂಡ್ ನಮಗೆ ಬೆಸ್ಟ್ ಫ್ರೆಂಡ್. ತಾಂತ್ರಿಕ ಚಾರ್ಟ್‌ಗಳಲ್ಲಿ ಬದಲಾವಣೆ ಆಗೋದನ್ನೇ ನಾನು ಕಾಯ್ತಿದ್ದೆ, ಸರಿಯಾದ ಸಮಯಕ್ಕೆ ಮತ್ತಷ್ಟು ಚಿನ್ನ ಬಾಚಿಕೊಳ್ತೀನಿ” ಅಂತ ತಮ್ಮ ಸೀಕ್ರೆಟ್ ಹೂಡಿಕೆ ಸೂತ್ರ ಬಿಚ್ಚಿಟ್ಟಿದ್ದಾರೆ.

ಕಿಯೋಸಾಕಿ ನೀಡಿದ ಮನೆ ಉದಾಹರಣೆ

ರಾಬರ್ಟ್ ಕಿಯೋಸಾಕಿ ತಮ್ಮ ಹೂಡಿಕೆ ತಂತ್ರವನ್ನು ಒಂದು ಭರ್ಜರಿ ಉದಾಹರಣೆಯೊಂದಿಗೆ ವಿವರಿಸಿದ್ದಾರೆ. “ಚಿನ್ನದ ಬೆಲೆ ಇಳಿಯುವುದು ಅಂದರೆ ಒಂದು ಮನೆಯ ಬೆಲೆ ಇಳಿದಂತೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಆಸ್ತಿ ಬೆಲೆ ಹೆಚ್ಚುತ್ತಿದ್ದರೆ, ನಾನು ಕಡಿಮೆ ಬೆಲೆಗೆ ಸಿಗುವ ಆ ಮನೆಯನ್ನು ಕಣ್ಣು ಮುಚ್ಚಿ ಖರೀದಿಸುತ್ತೇನೆ. ಆದರೆ ಇಡೀ ಏರಿಯಾದಲ್ಲೇ ಬೆಲೆ ಕುಸಿಯುತ್ತಿದ್ದರೆ ಆ ಪ್ಲಾನ್ ಕೈಬಿಡುತ್ತೇನೆ” ಎಂದಿದ್ದಾರೆ. ಅವರ ಪ್ರಕಾರ ಡಾಲರ್, ಷೇರುಗಳು ದೀರ್ಘಾವಧಿಗೆ ಅಸಲಿ ಆಸ್ತಿಯಲ್ಲ; ಬದಲಿಗೆ ಚಿನ್ನ, ಬೆಳ್ಳಿ ಮತ್ತು ಬಿಟ್‌ಕಾಯಿನ್ (Bitcoin) ಮಾತ್ರ ನಮ್ಮ ಸಂಪತ್ತನ್ನು ಹೆಚ್ಚಿಸುವ ನಿಜವಾದ ದಾರಿಗಳಾಗಿವೆ.

ಮಾರ್ಚ್ 26ರ ನಂತರ ಕನಿಷ್ಠ ಮಟ್ಟಕ್ಕೆ ಬಂಗಾರ

2026ರ ಆರಂಭದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾರ್ವಕಾಲಿಕ ದಾಖಲೆ ಬರೆದಿದ್ದವು. ಆ ಸಮಯದಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ಗೆ 5,000 ಡಾಲರ್‌ಗೂ ಅಧಿಕ ಹಾಗೂ ಬೆಳ್ಳಿ ಬೆಲೆ 100 ಡಾಲರ್‌ಗೂ ಹೆಚ್ಚಾಗಿತ್ತು. ಆದರೆ ಮಾರ್ಚ್ 26ರ ನಂತರ ಇದೇ ಮೊದಲ ಬಾರಿಗೆ ಚಿನ್ನದ ದರ ಇಷ್ಟೊಂದು ಕನಿಷ್ಠ ಮಟ್ಟಕ್ಕೆ ಕುಸಿದಿರುವುದರಿಂದ, ಒಡವೆ ಕೊಳ್ಳಲು ಮತ್ತು ಲಾಂಗ್ ಟರ್ಮ್ ಇನ್ವೆಸ್ಟ್‌ಮೆಂಟ್‌ಗೆ ಇದುವೇ ಪರ್ಫೆಕ್ಟ್ ಟೈಮ್ ಅಂತ ಮಾರುಕಟ್ಟೆಯ ಪಂಡಿತರು ಹೇಳ್ತಿದ್ದಾರೆ.

ಇಂದಿನ ಚಿನ್ನ ಮತ್ತು ಬೆಳ್ಳಿಯ ಅಂತರರಾಷ್ಟ್ರೀಯ ದರ ಸರಣಿ

ಇನ್ನೊಂದೆಡೆ, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಸತತವಾಗಿ ನಾಲ್ಕನೇ ವಾರವೂ ಕುಸಿತದ ಹಾದಿ ಹಿಡಿದಿವೆ. ಬಲಿಷ್ಠವಾಗುತ್ತಿರುವ ಅಮೆರಿಕನ್ ಡಾಲರ್ ಮತ್ತು ಅಲ್ಲಿನ ಹೆಚ್ಚುತ್ತಿರುವ ಬಡ್ಡಿ ದರಗಳ ಮುನ್ಸೂಚನೆಯು ಹೂಡಿಕೆದಾರರ ಮೇಲೆ ಪ್ರಭಾವ ಬೀರಿದೆ

ಸ್ಪಾಟ್ ಗೋಲ್ಡ್ (Spot Gold): ಶೇ. 0.9 ರಷ್ಟು ಇಳಿಕೆ ಕಂಡು ಪ್ರತಿ ಔನ್ಸ್‌ಗೆ 3,991.49 ಡಾಲರ್ ತಲುಪಿದೆ

ಯುಎಸ್ ಗೋಲ್ಡ್ ಫ್ಯೂಚರ್ಸ್ (ಆಗಸ್ಟ್ ಡೆಲಿವರಿ): ಶೇ. 1 ರಷ್ಟು ಕುಸಿದು 4,007.30 ಡಾಲರ್ ಆಗಿದೆ. ಬೆಳ್ಳಿ ದರ: ಶೇ. 3.2 ರಷ್ಟು ಭಾರಿ ಇಳಿಕೆಯೊಂದಿಗೆ ಪ್ರತಿ ಔನ್ಸ್‌ಗೆ 56.01 ಡಾಲರ್ ತಲುಪಿದೆ

ನವೆಂಬರ್ 2025ರ ನಂತರ ಇದೇ ಮೊದಲ ಬಾರಿಗೆ ಚಿನ್ನದ ಬೆಲೆ ಪ್ರಮುಖ ಮೈಲಿಗಲ್ಲಾದ 4,000 ಡಾಲರ್ ಮಟ್ಟಕ್ಕಿಂತ ಕೆಳಗೆ ಕುಸಿದಿದೆ. ಜನವರಿ 29 ರಂದು ದಾಖಲಾಗಿದ್ದ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 5,594.82 ಡಾಲರ್‌ಗೆ ಹೋಲಿಸಿದರೆ ಪ್ರಸ್ತುತ ಚಿನ್ನದ ಬೆಲೆ ಶೇ. 29 ರಷ್ಟು ಕುಸಿತ ಕಂಡಂತಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ