ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಗ್ಗೆ ಹೈಕಮಾಂಡ್ ನಾಯಕರಿಗೆ ಭಯವಿದ್ದಂತಿದೆ. ರಾಜ್ಯಾಧ್ಯಕ್ಷರ ಕುಟುಂಬ ಬಹಳ ಪ್ರಭಾವಿಗಳೆಂದು ಅಂದುಕೊಂಡಿದ್ದಾರೆ. ಆದರೆ ಹೈಕಮಾಂಡ್ ಗೆ ಶೀಘ್ರದಲ್ಲಿಯೇ ಸತ್ಯದ ಅರಿವಾಗಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಯತ್ನಾಳ್, ಕೆಲ ರಾಜ್ಯಗಳಲ್ಲಿ ನಾಯಕರನ್ನು ಹೈಕಮಾಂಡ್ ಮನೆಗೆ ಕಳುಹಿಸಿದೆ. ನವೆಂಬರ್ ಅಥವಾ ಡಿಸೆಂಭರ್ ಒಳಗೆ ಇಲ್ಲಿಯೂ ಬದಲಾಗಬಹುದು. ಬಿಜೆಪಿ, ಕಾಂಗ್ರೆಸ್ ನ ಕೆಲವರು ಸೇರಿ ಅಡ್ಡ ಮತದಾನ ಮಾಡಿಸಿದರು. ಈ ಸತ್ಯ ಬಿಜೆಪಿ ಹೈಅಕ್ಮಾಂಡ್ ನಾಯಕರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಇಂತಹ ವಿಚಾರದಲ್ಲಿ ಯಾಕೆ ಮೌನವಗೈದ್ದಾರೆ? ಎಂದು ಪ್ರಶ್ನಿಸಿದರು.
ಇಲ್ಲಿ ಪಕ್ಷ ಪಕ್ಷಗಳು ಒಂದಾಗಿಲ್ಲ. ನಾಯಕರು ನಾಯಕರುಗಳು ಒಂದಾಗಿದ್ದಾರೆ. ಇದು ಪಕ್ಷವನ್ನು ಹಾಳು ಮಾಡುತ್ತಿದೆ ಎಂದು ಶಾಸಕ ಯತ್ನಾಳ್ ಕಳವವಳ ವ್ಯಕ್ತಪಡಿಸಿದ್ದಾರೆ.