LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇಷ್ಟು ಹೀನಾಯ ಟೀಕೆ ಮಾಡುವಂತಹ ಸಿನಿಮಾ ಅಲ್ಲವೇ ಅಲ್ಲ ಟಾಕ್ಸಿಕ್; ಇದು ಹಾಲಿವುಡ್ ರೇಂಜಿನ ಕನ್ನಡ ಚಿತ್ರ

ನಿನ್ನೆ ( ಆಗಸ್ಟ್ 26 ) ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ವಿಶ್ವದಾದ್ಯಂತ ಬಿಡುಗಡೆಯಾಯಿತು. ಕೆಜಿಎಫ್ ಚಿತ್ರ ಸರಣಿಯ ಬೃಹತ್ ಯಶಸ್ಸಿನ ಬಳಿಕ ಯಶ್ ನಟನೆಯ ಚಿತ್ರವಾಗಿದ್ದ ಕಾರಣ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ಹೈಪ್ ಇತ್ತು. ಅಲ್ಲದೇ ಯಶ್ ಆರಿಸಿಕೊಳ್ಳುವ ಕಥೆ ಪಕ್ಕಾ ಹಿಟ್ ಆಗಲಿದೆ ಎನ್ನುವ ನಂಬಿಕೆಯೂ ಇತ್ತು.

ಆದರೆ ನಿನ್ನೆ ಬೆಳಗ್ಗೆ ಎದ್ದು ಸಾಮಾಜಿಕ ಜಾಲತಾಣ ತೆರೆದವರಿಗೆ ಶಾಕ್ ಕಾದಿತ್ತು. ಬೆಳಗ್ಗೆ ಎಂಟು ಗಂಟೆಯಿಂದಲೇ ಚಿತ್ರಕ್ಕೆ ಸಿಕ್ಕಾಪಟ್ಟೆ ನೆಗೆಟಿವ್ ರಿವ್ಯೂಸ್ ಹರಿದುಬಂದಿದ್ದವು. ಚಿತ್ರದಲ್ಲಿ ಏನೂ ಇಲ್ಲ, ಕೆಟ್ಟ ಸಿನಿಮಾ, ಐದಕ್ಕೆ ಎರಡು ಸ್ಟಾರ್ ಕೂಡ ಕೊಡಲಾಗುವುದಿಲ್ಲ, ದೊಡ್ಡ ಟಾರ್ಚರ್ ಎಂದೆಲ್ಲ ವಿಮರ್ಶೆಗಳು ಹರಿದಾಡಿದವು.

ಇನ್ನು ಅಸಲಿಯತ್ತಿಗೆ ಚಿತ್ರ ಇಷ್ಟು ನೆಗೆಟಿವ್ ರಿವ್ಯೂ ಪಡೆದುಕೊಳ್ಳುವಂತಹದ್ದಲ್ಲ. ಟಾಕ್ಸಿಕ್ ಗಟ್ಟಿ ಕಥೆ ಹಾಗೂ ಎಂಗೇಜಿಂಗ್ ಸ್ಕ್ರೀನ್‌ಪ್ಲೇ ಹೊಂದಿರುವ ಚಿತ್ರ. ಇಲ್ಲಿ ಭಾರತೀಯ ಸಿನಿಮಾಗಳ ಶೈಲಿಯಲ್ಲಿ ಕಥೆ ಹೇಳಲಾಗಿಲ್ಲ, ಬದಲಾಗಿ ಹಾಲಿವುಡ್ ಮಾದರಿಯಲ್ಲಿ ಕಥೆ ಸಾಗಲಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಗೋವಾ ಮಾತ್ರ 1961ರ ಆಪರೇಷನ್ ವಿಜಯ್ ನಡೆಯುವವರೆಗೂ ಪೋರ್ಚುಗಲ್ ಆಳ್ವಿಕೆಯಲ್ಲಿತ್ತು. ಈ ಅವಧಿಯಲ್ಲಿ ಮಾದಕವಸ್ತು ಮಾಫಿಯಾಗಾಗಿ ಪೋರ್ಚುಗೀಸರು ಹಾಗೂ ಕೆಲ ಭಾರತೀಯರ ನಡುವೆ ನಡೆಯುವ ಕಥೆ ಚಿತ್ರದ ಒಂದು ಭಾಗವಾಗಿದೆ. ಈ ಸಮಯದಲ್ಲಿ ನಾಯಕ ರಾಯ ( ಯಶ್ ) ತನ್ನ ಅಕ್ಕ ಗಂಗಾಳೊಂದಿಗೆ ( ನಯನತಾರಾ ) ಇಡೀ ಮಾಫಿಯಾವನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಮುಂದಾಗುತ್ತಾನೆ. ಇದು ನಾಯಕನ ಅಕ್ಕನ ಮಹದಾಸೆ ಕೂಡ ಹೌದು. ಹೀಗೆ ಪೋರ್ಚುಗೀಸರ ಬಿಗಿಮುಷ್ಟಿಯಲ್ಲಿದ್ದ ಮಾಫಿಯಾವನ್ನು ರಾಯ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನಾ? ಇದರಿಂದ ಆತನ ಜೀವನದಲ್ಲಾಗುವ ಪರಿಣಾಮಗಳೇನು ಎನ್ನುವುದೇ ಚಿತ್ರದ ಕಥೆ.

ಮೊದಲೇ ಹೇಳಿದಂತೆ ಇಲ್ಲಿ ಭಾರತ ಸಿನಿಮಾ ಶೈಲಿಯಲ್ಲಿ ಕಥೆಯನ್ನು ಹೆಣೆದಿಲ್ಲ, ಹಾಲಿವುಡ್‌ ಶೈಲಿಯ ಟ್ರೀಟ್‌ಮೆಂಟ್ ಚಿತ್ರಕ್ಕಿದೆ. ಪಾತ್ರಗಳ ನಡುವೆ ಅತಿಯಾದ ಎಮೋಷನ್ ಇಲ್ಲಿಲ್ಲ. ಉದಾಹರಣೆಗೆ ಅಕ್ಕ – ತಮ್ಮನ ಬಾಂಧವ್ಯ ಹಾಗೂ ಅವರಿಬ್ಬರು ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ಇಲ್ಲಿ ಅತಿಯಾದ ಸಂಭಾಷಣೆಗಳಿಂದಾಗಲಿ ಅಥವಾ ಹಿಂದಿನ ಘಟನೆಗಳನ್ನು ಕಣ್ಣೀರು ಹಾಕುತ್ತಾ ಹೇಳಿಸುವ ಮೂಲಕವಾಗಲಿ ತೋರಿಸಿಲ್ಲ. ಬದಲಾಗಿ ಇಂಗ್ಲಿಷ್ ಚಿತ್ರಗಳ ಹಾಗೆ ಆ ಸಮಯಕ್ಕೆ ತಕ್ಕಂತೆ ಅತಿಯಾದ ಎಮೋಷನ್ ಇಲ್ಲದೇ ಹೇಳಿಸಲಾಗಿದೆ. ಇದು ಪ್ರತಿ ಪಾತ್ರದಲ್ಲೂ ಕಾಣಸಿಗಲಿದೆ.

ಅಲ್ಲದೇ ಪಾತ್ರಗಳ ಪರಿಚಯವೂ ಅಷ್ಟೇ. ಹೆಚ್ಚೇನೂ ವಿಶ್ಲೇಷಣೆ ನೀಡದೇ ನೇರವಾಗಿ ತೆರೆ ಮೇಲೆ ಬರಲಿವೆ. ಕಥೆ ಸಾಗುವಾಗ ಅವರ ಕುರಿತ ಸಂಭಾಷಣೆ ಬಂದಾಗಷ್ಟೇ ಅವರ ಮಾಹಿತಿ ಪ್ರೇಕ್ಷಕರಿಗೆ ಸಿಗಲಿದ್ದು, ಇದನ್ನು ಗ್ರಹಿಸದಿದ್ದರೆ ಆ ದೃಶ್ಯದ ತೂಕ ಅರ್ಥವಾಗದು ಎಂದರೆ ತಪ್ಪಾಗಲಾರದು. ಪಾತ್ರಗಳನ್ನು ಅನುಸರಿಸುತ್ತಾ ಚಿತ್ರ ನೋಡುವವರನ್ನು ಎಂಗೇಜಿಂಗ್ ಆಗಿ ಹಿಡಿದಿಟ್ಟುಕೊಳ್ಳುವ ಕಥೆಯನ್ನು ಗಟ್ಟಿಯಾಗಿ ಸಿದ್ಧಪಡಿಸಿಕೊಂಡಿರುವ ಗೀತು ಮೋಹನ್‌ದಾಸ್ ಹಾಗೂ ಯಶ್ ಕ್ಲೈಮ್ಯಾಕ್ಸ್‌ನಲ್ಲಿ ಊಹಿಸಿರದ ಟ್ವಿಸ್ಟ್‌ ಸಹ ಇಟ್ಟಿದ್ದಾರೆ. ಈ ಟ್ವಿಸ್ಟ್‌ನ ಕಾನ್ಸೆಪ್ಟ್ ಸಹ ಬಹುತೇಕ ಭಾರತೀಯ ಪ್ರೇಕ್ಷಕರಿಗೆ ಹೊಸತಾಗಿದ್ದು, ಸೇಡು ಮುಗಿದ ಕೂಡಲೇ ಶಿಳ್ಳೆ ಹಾಕಿ ಚಿತ್ರಮಂದಿರದಿಂದಾಚೆಗೆ ಹೊರಡುವ ಕ್ಲೈಮ್ಯಾಕ್ಸ್ ಇಲ್ಲಿಲ್ಲ.

ಭಾರತ ಚಿತ್ರರಂಗದಲ್ಲಿ ಈ ರೀತಿ ಕಥೆ ಹೇಳುವುದು ಹೊಸತಾಗಿರುವ ಕಾರಣ ಪ್ರೇಕ್ಷಕರು ಇದಕ್ಕೆ ಸಿದ್ಧರಿರಲಿಲ್ಲ, ಹಾಗಾಗಿಯೇ ಚಿತ್ರ ಅನೇಕರಿಗೆ ಸಪ್ಪೆ ಎನಿಸಿರಬಹುದು.

ಇಂತಹದ್ದೇ ಅಭಿಪ್ರಾಯ ಅನೇಕರಿಂದ ವ್ಯಕ್ತವಾಗುತ್ತಿದ್ದು, ಹಾಲಿವುಡ್ ರೇಂಜಿನ ಕನ್ನಡ ಸಿನಿಮಾವಿದು, ಜನರಿಗೆ ಅರ್ಥವಾಗುತ್ತಿಲ್ಲ ಅಷ್ಟೇ ಎನ್ನುತ್ತಿದ್ದಾರೆ. ಅಲ್ಲದೇ ಕೆಲವೊಂದಷ್ಟು ವರ್ಷಗಳ ಬಳಿಕ ಇದೇ ಚಿತ್ರವನ್ನು ‘ಕಲ್ಟ್ ಕ್ಲಾಸಿಕ್’ ಎಂದು ಕರೆಯಲಿದ್ದಾರೆ ಎಂದು ಅನೇಕ ವಿಶ್ವ ಸಿನಿಮಾ ಪ್ರೇಮಿಗಳು ಭವಿಷ್ಯ ನುಡಿದಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಸಿಇಟಿ ಇಂಜಿನಿಯರಿಂಗ್ ಚಾಯ್ಸ್ ದಾಖಲಿಸಲು, ಕಾಲೇಜುಗಳಲ್ಲಿ ಪ್ರವೇಶಕ್ಕೆ ದಿನಾಂಕ ವಿಸ್ತರಣೆBREAKING: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆಯಶ್ ಎಂದರೆ ಯಾಕಿಷ್ಟು ಹೊಟ್ಟೆ ಕಿಚ್ಚು?: ಇಷ್ಟು ದಿನ ಸುಮ್ಮನಿದ್ದು ಟಾಕ್ಸಿಕ್ ದಿನವೇ ಯಶ್ ತುಳಿಯಲು ಮುಂದಾದ ರಶ್ಮಿಕಾ – ವಿಜಯ್ ದೇವರಕೊಂಡ?ಆ.29 ರಿಂದ ಪ್ರಧಾನಿ ಮೋದಿ ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್ ಗೆ ಭೇಟಿ: SCO ಶೃಂಗಸಭೆಯಲ್ಲಿ ಭಾಗಿಐಟಿಐ ಪಾಸಾದವರಿಗೆ ಗುಡ್ ನ್ಯೂಸ್: ಹೆಚ್ಎಎಲ್ ನಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿಶಿವಮೊಗ್ಗದಲ್ಲಿ ಪ್ಯಾಲೇಸ್ತೀನ್ ಧ್ವಜ ಹಾರಿಸಿದ ಓರ್ವ ಅರೆಸ್ಟ್ಯಶ್ ಎಂದರೆ ಯಾಕಿಷ್ಟು ಹೊಟ್ಟೆ ಕಿಚ್ಚು?: ಇಷ್ಟು ದಿನ ಸುಮ್ಮನಿದ್ದು ಟಾಕ್ಸಿಕ್ ದಿನವೇ ಯಶ್ ತುಳಿಯಲು ಮುಂದಾದ ರಶ್ಮಿಕಾ – ವಿಜಯ್ ದೇವರಕೊಂಡ!ಗ್ರಾಮೀಣ ಜಲ ಆಸ್ತಿ ನಿರ್ವಹಣೆ: ಮೊಬೈಲ್, ವೆಬ್ ಆಪ್ ಲೋಕಾರ್ಪಣೆಗ್ರಾಮೀಣ ಕುಡಿವ ನೀರಿಗೆ 67000 ಕೋಟಿ ರೂ: ಈಶ್ವರ ಖಂಡ್ರೆಶಿಕ್ಷಣ, ಉದ್ಯೋಗ, ಕೃಷಿ, ಆಹಾರ ತಯಾರಿಕೆ 4 ಯೋಜನೆಗಳಿಗೆ ಅರ್ಜಿ ಆಹ್ವಾನ: ಕರಪತ್ರ ಬಿಡುಗಡೆ ಮಾಡಿದ ಡಿಸಿಎಂ ಡಾ.ಜಿ. ಪರಮೇಶ್ವರ್