ಬೆಂಗಳೂರು: ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಮುಂಬರುವ ಜನ್ಮದಿನದ ಆಚರಣೆ ಕುರಿತು ಅಭಿಮಾನಿಗಳನ್ನು ಉದ್ದೇಶಿಸಿ ನಾಲ್ಕು ಪುಟಗಳ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ಬಲವಾದ ವೈಯಕ್ತಿಕ ಕಾರಣಗಳಿಂದಾಗಿ ಈ ವರ್ಷ ಸೆಪ್ಟೆಂಬರ್ 2 ರಂದು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಹೊಸ ಸೀಸನ್ ಹಾಗೂ ಸಾಲು ಸಾಲು ಸಿನಿಮಾಗಳ ಸಿದ್ಧತೆಯಲ್ಲಿರುವ ನಟ ಸುದೀಪ್, ಅಂದು ತಾವು ಮನೆಯಲ್ಲಿ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದು, ಯಾರೂ ಮನೆಯ ಬಳಿ ಬಂದು ಕಾಯುವುದು ಬೇಡ ಎಂದು ಮನವಿ ಮಾಡಿದ್ದಾರೆ.
https://x.com/KicchaSudeep/status/2092857077706506638
ಸುದೀಪ್ ಅವರ ಪತ್ರದಲ್ಲೇನಿದೆ?
30 ವರ್ಷಗಳ ಪ್ರೀತಿಗೆ ಧನ್ಯವಾದ: ಸೆಪ್ಟೆಂಬರ್ 2 ಎಂಬುದು ಕೇವಲ ಒಂದು ದಿನಾಂಕ ಅಷ್ಟೇ. ಅದನ್ನು ಕಳೆದ 30 ವರ್ಷಗಳಿಂದ ಸಂಭ್ರಮವನ್ನಾಗಿ ಪರಿವರ್ತಿಸಿದ ಅಪಾರ ಪ್ರೀತಿ ನಿಮ್ಮದು. ಪ್ರತಿಯೊಂದು ಸಿನಿಮಾ, ಬಿಗ್ ಬಾಸ್ ಹಾಗೂ ಪ್ರತಿಯೊಂದು ಹೆಜ್ಜೆಯಲ್ಲೂ ನೀವು ನೀಡಿದ ಪ್ರೋತ್ಸಾಹವೇ ನನಗೆ ಶ್ರೀರಕ್ಷೆ ಎಂದು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
https://www.instagram.com/p/DciHq2XkYCd/?utm_source=ig_embed&utm_campaign=loading” data-instgrm-version=”14″ style=” background:#FFF; border:0; border-radius:3px; box-shadow:0 0 1px 0 rgba(0,0,0,0.5),0 1px 10px 0 rgba(0,0,0,0.15); margin: 1px; max-width:540px; min-width:326px; padding:0; width:99.375%; width:-webkit-calc(100% – 2px); width:calc(100% – 2px);”>https://www.instagram.com/p/DciHq2XkYCd/?utm_source=ig_embed&utm_campaign=loading” style=” background:#FFFFFF; line-height:0; padding:0 0; text-align:center; text-decoration:none; width:100%;” target=”_blank”>View this post on Instagramhttps://www.instagram.com/p/DciHq2XkYCd/?utm_source=ig_embed&utm_campaign=loading” style=” color:#c9c8cd; font-family:Arial,sans-serif; font-size:14px; font-style:normal; font-weight:normal; line-height:17px; text-decoration:none;” target=”_blank”>A post shared by KicchaSudeepa (@kichchasudeepa)
">www.instagram.com/embed.js”>
ಆಚರಿಸದಿರಲು ವೈಯಕ್ತಿಕ ಕಾರಣ: ಈ ವರ್ಷ ಬಲವಾದ ವೈಯಕ್ತಿಕ ಕಾರಣಗಳಿಂದಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಸಂಭ್ರಮಗಳನ್ನು ತೆರೆದ ಹೃದಯದಿಂದ ಆಚರಿಸಲು ಸಾಧ್ಯವಾಗದಿದ್ದರೆ ಅದು ನನಗೆ ಸಂಭ್ರಮವೇ ಅಲ್ಲ ಎಂದು ತಮ್ಮ ನಿರ್ಧಾರಕ್ಕೆ ಕಾರಣ ತಿಳಿಸಿದ್ದಾರೆ.
ಮನೆಯ ಬಳಿ ಬರಬೇಡಿ: ಸತ್ಕಾರಗಳು ಗದ್ದಲವಾಗಬಾರದು ಎಂಬ ಸಂಸ್ಕಾರಯುತ ಸಂದೇಶ ನೀಡಿರುವ ಕಿಚ್ಚ, “ಅಂದು ನಾನು ಮನೆಯ ಬಳಿ ಲಭ್ಯವಿರುವುದಿಲ್ಲ. ನೀವು ನೀಡುವ ಉಡುಗೊರೆಗಳು ಸಮಾಜಕ್ಕೆ ಸದ್ವಿನಿಯೋಗವಾಗಲಿ. ನಿಮ್ಮ ಊರುಗಳಲ್ಲೇ ನೀವು ಮಾಡುವ ಒಳ್ಳೆಯ ಕಾರ್ಯಕ್ರಮಗಳೇ ನನಗೆ ಆಶೀರ್ವಾದ” ಎಂದು ಕೋರಿದ್ದಾರೆ.
‘ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ…’:
ಚಿತ್ರಗಳ ತಡವಾಗುವಿಕೆ ಹಾಗೂ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆಯೂ ಪತ್ರದಲ್ಲಿ ಉತ್ತರಿಸಿರುವ ಸುದೀಪ್, ತಮ್ಮದೇ ಸಿನಿಮಾದ ಖಡಕ್ ಸಂಭಾಷಣೆಯನ್ನು ಉಲ್ಲೇಖಿಸಿದ್ದಾರೆ:”ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ.”
ಮೂವತ್ತು ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದು, ಸಿನಿಮಾ ಮಾಡುವುದು ತಮ್ಮ ಪರಮ ಕಾಯಕ ಎಂದಿದ್ದಾರೆ. “ಕೆಲವೊಮ್ಮೆ ಸಿನಿಮಾಗಳು ತಡವಾಗಬಹುದು, ಆದರೆ ಕನ್ನಡಿಗರನ್ನು ರಂಜಿಸುವ ವಿಷಯದಲ್ಲಿ ನಾನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ‘ಕನ್ನಡ ನನ್ನ ಸತ್ಯ, ಕನ್ನಡದಿಂದ ನಾನು ನಿತ್ಯ'” ಎಂದು ಬರೆಯುವ ಮೂಲಕ ಮುಂದಿನ ಬಿಗ್ ಪ್ರಾಜೆಕ್ಟ್‌ಗಳಿಗೆ ಭರ್ಜರಿಯಾಗಿ ಸಜ್ಜಾಗುತ್ತಿರುವ ಸ್ಪಷ್ಟ ಸುಳಿವನ್ನು ನೀಡಿದ್ದಾರೆ.”ಜೀವನದಲ್ಲಿ ಏನೇ ಹೂವು-ಮುಳ್ಳು ಬಂದರೂ ನಿಮ್ಮ ಪ್ರೀತಿಯೇ ನನಗೆ ಮೈಲಿಗಲ್ಲು” ಎಂದು ಹೇಳಿ ‘ಪ್ರೀತಿಯಿಂದ ಕಿಚ್ಚ’ ಎಂದು ತಮ್ಮ ಲೇಖನವನ್ನು ಮುಕ್ತಾಯಗೊಳಿಸಿದ್ದಾರೆ.