LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ : ಮೊಬೈಲ್ ನಲ್ಲೇ ಜಸ್ಟ್ ಹೀಗೆ `ಇ-ಕೆವೈಸಿ’ ಮಾಡಿಕೊಳ್ಳಿ.!

ಪಡಿತರ ಚೀಟಿ (Ration Card) ಹೊಂದಿರುವ ಪ್ರತಿಯೊಬ್ಬರೂ ಇ-ಕೆವೈಸಿ (e-KYC) ಮಾಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಪಡಿತರ ದುರುಪಯೋಗ ತಡೆಯುವುದು, ಕಾಳಸಂತೆ ವ್ಯಾಪಾರಕ್ಕೆ ಬ್ರೇಕ್ ಹಾಕುವುದು ಹಾಗೂ ಅರ್ಹ ಫಲಾನುಭವಿಗಳಿಗೆ ಮಾತ್ರ ಆಹಾರ ಧಾನ್ಯ ತಲುಪುವಂತೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಇದಕ್ಕಾಗಿ ನೀವು ನ್ಯಾಯಬೆಲೆ ಅಂಗಡಿಗಳಿಗಾಗಲಿ, ಸರ್ಕಾರಿ ಕಚೇರಿಗಳಿಗಾಗಲಿ ಅಥವಾ ಸೈಬರ್ ಸೆಂಟರ್‌ಗಳಿಗಾಗಲಿ ಅಲೆಯಬೇಕಿಲ್ಲ. ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಮೂಲಕ ಕೇವಲ ಎರಡು ನಿಮಿಷಗಳಲ್ಲಿ ಸುಲಭವಾಗಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಮೊಬೈಲ್‌ನಲ್ಲಿ ಇ-ಕೆವೈಸಿ ಮಾಡಲು ಬೇಕಾಗುವ ಆ್ಯಪ್‌ಗಳು:

ಕೇಂದ್ರ ಸರ್ಕಾರವು 'ಮೇರಾ ರೇಷನ್' (Mera Ration) ಎಂಬ ಅಧಿಕೃತ ಆ್ಯಪ್ ಅನ್ನು ಪರಿಚಯಿಸಿದೆ. ಈ ಆ್ಯಪ್ ಮೂಲಕ ಪಡಿತರ ಚೀಟಿ ವಿವರ ಪಡೆಯುವುದು, ಡಿಜಿಟಲ್ ಕಾರ್ಡ್ ಡೌನ್‌ಲೋಡ್, ಮಾರ್ಪಾಡುಗಳು ಹಾಗೂ ಕೆವೈಸಿ ಪ್ರಕ್ರಿಯೆಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಮೊಬೈಲ್ ಮೂಲಕ ಕೆವೈಸಿ ಮಾಡಲು ಗೂಗಲ್ ಪ್ಲೇ ಸ್ಟೋರ್‌ನಿಂದ ಈ ಕೆಳಗಿನ ಎರಡು ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು:

Mera Ration App

Aadhaar FaceRD App

ಮೊಬೈಲ್ ಮೂಲಕ ಇ-ಕೆವೈಸಿ ಮಾಡುವ ವಿಧಾನ:

ಮೊದಲು ಗೂಗಲ್ ಪ್ಲೇ ಸ್ಟೋರ್‌ನಿಂದ Mera Ration ಮತ್ತು Aadhaar FaceRD ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ.

'ಮೇರಾ ರೇಷನ್' ಆ್ಯಪ್ ತೆರೆದು ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ.

ನಂತರ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಮತ್ತು ಪರದೆಯ ಮೇಲಿರುವ ಕ್ಯಾಪ್ಚಾ (Captcha) ಕೋಡ್ ನಮೂದಿಸಿ.

ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ದಾಖಲಿಸಿ ಮುಂದುವರಿಯಿರಿ.

ಈಗ 'Aadhaar FaceRD' ಆ್ಯಪ್ ಸಹಾಯದಿಂದ ಕ್ಯಾಮೆರಾ ಆನ್ ಆಗಲಿದ್ದು, ನಿಮ್ಮ ಮುಖವನ್ನು ಸ್ಕ್ಯಾನ್ ಮಾಡಿ.

ಕ್ಯಾಮೆರಾ ನೋಡುತ್ತಾ ಕಣ್ಣುಗಳನ್ನು ಮಿಟುಕಿಸಿದರೆ (Blink) ಮುಖದ ಗುರುತು ಸ್ಕ್ಯಾನ್ ಪೂರ್ಣಗೊಳ್ಳುತ್ತದೆ.

ಪ್ರಕ್ರಿಯೆ ಮುಗಿದ ನಂತರ ಸ್ಕ್ರೀನ್ ಮೇಲೆ ‘Success’ ಎಂಬ ಸಂದೇಶ ಬಂದರೆ ನಿಮ್ಮ ಇ-ಕೆವೈಸಿ ಯಶಸ್ವಿಯಾಗಿದೆ ಎಂದರ್ಥ.

ಆಫ್‌ಲೈನ್‌ನಲ್ಲಿ ಮಾಡಿಸುವುದು ಹೇಗೆ?

ಆನ್‌ಲೈನ್‌ನಲ್ಲಿ ಮಾಡಲು ಸಾಧ್ಯವಾಗದವರು ನೇರವಾಗಿ ನಿಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗೆ (ರೇಷನ್ ಅಂಗಡಿ) ತೆರಳಿ ಬಯೋಮೆಟ್ರಿಕ್ ಯಂತ್ರದ ಮೂಲಕ ಬೆರಳಚ್ಚು ನೀಡಿ ಇ-ಕೆವೈಸಿ ಮಾಡಿಸಬಹುದು. ಅಥವಾ ಹತ್ತಿರದ ಗ್ರಾಮ ಒನ್ / ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿಯೂ ಈ ಪ್ರಕ್ರಿಯೆ ಮುಗಿಸಬಹುದು. ರೇಷನ್ ಕಾರ್ಡ್‌ನಲ್ಲಿ ಹೆಸರಿರುವ ಪ್ರತಿಯೊಬ್ಬ ಸದಸ್ಯರೂ ಈ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ