LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಾರಿನಲ್ಲಿ ಪ್ರಯಾಣಿಸುವಾಗಲೂ ಹೆಲ್ಮೆಟ್‌ ಧರಿಸಿ! ಎಐ ಕ್ಯಾಮೆರಾ ಎಡವಟ್ಟಿಗೆ ದಂಡದ ನೋಟಿಸ್ ಪಡೆದು ಶಾಕ್ ಆದ ಕಾರು ಮಾಲೀಕ

ಬೆಳಗಾವಿ : ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸಂಚಾರ ಪೊಲೀಸರ ತಂತ್ರಜ್ಞಾನದ ಬಳಕೆಯ ಎಡವಟ್ಟಿನಿಂದ ವಿಚಿತ್ರ ಘಟನೆಯೊಂದು ಸಂಭವಿಸಿದೆ. ಕಾರು ಓಡಿಸುವಾಗ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣ ನೀಡಿ ಕಾರು ಮಾಲೀಕರೊಬ್ಬರಿಗೆ ದಂಡ ವಿಧಿಸಿರುವ ಘಟನೆ ಸಾರ್ವಜನಿಕರಲ್ಲಿ ಆಶ್ಚರ್ಯ ಹಾಗೂ ನಗುವಿಗೆ ಕಾರಣವಾಗಿದೆ. ವಾಟ್ಸಪ್‌ನಲ್ಲಿ ಬಂದ ನೋಟಿಸ್‌ ಕಂಡು ಕಾರು ಮಾಲೀಕ ಸಂಪೂರ್ಣವಾಗಿ ತಬ್ಬಿಬ್ಬಾಗಿದ್ದಾರೆ.

ಅಥಣಿ ಪಟ್ಟಣದ ನಿವಾಸಿ ಸುಭಾಷ್ ಬೋಜನೆ ಎಂಬುವವರು ಇತ್ತೀಚೆಗೆ ತಮ್ಮ ಕಾರಿನಲ್ಲಿ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದರು. ಈ ವೇಳೆ ಪಟ್ಟಣದ ಪ್ರಮುಖ ಅಂಬೇಡ್ಕರ್ ಸರ್ಕಲ್‌ನಲ್ಲಿ ಕಾರು ಪ್ರಯಾಣಿಸುತ್ತಿದ್ದಾಗ, ಅಲ್ಲಿ ಅಳವಡಿಸಲಾಗಿದ್ದ ಎಐ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಕ್ಯಾಮೆರಾ ಕಾರಿನ ಫೋಟೋವನ್ನು ಸೆರೆಹಿಡಿದಿದೆ. ಆದರೆ, ಕಾರಿನಲ್ಲಿದ್ದ ಚಾಲಕ ಹೆಲ್ಮೆಟ್ ಧರಿಸಿಲ್ಲವೆಂದು ತಂತ್ರಜ್ಞಾನ ತಪ್ಪಾಗಿ ಗ್ರಹಿಸಿ ನೋಟಿಸ್ ಕಳುಹಿಸಿದೆ.

ಎಐ ಕ್ಯಾಮೆರಾ ಕಳುಹಿಸಿದ ಸಂದೇಶ ಹಾಗೂ ಫೋಟೋವನ್ನು ಸರಿಯಾಗಿ ಪರಿಶೀಲಿಸದ ಸಂಚಾರ ಪೊಲೀಸರು, ನಿಯಮ ಉಲ್ಲಂಘನೆಯಾಗಿದೆ ಎಂದು ಪರಿಗಣಿಸಿ ಸುಭಾಷ್ ಅವರ ವಾಟ್ಸಪ್ ಸಂಖ್ಯೆಗೆ 500 ರೂಪಾಯಿ ದಂಡದ ನೋಟಿಸ್‌ ರವಾನಿಸಿದ್ದಾರೆ. ವಾಟ್ಸಪ್‌ನಲ್ಲಿ ಕಾರಿನ ಫೋಟೋದೊಂದಿಗೆ ಬಂದ ದಂಡದ ನೋಟಿಸ್ ನೋಡಿ ಮಾಲೀಕ ಸುಭಾಷ್ ಶಾಕ್‌ಗೆ ಒಳಗಾಗಿದ್ದು, "ಕಾರು ಓಡಿಸುವಾಗಲೂ ಹೆಲ್ಮೆಟ್ ಧರಿಸಬೇಕೇ?" ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿ ಜಿಲ್ಲಾ ಸಂಚಾರ ಪೊಲೀಸರು ಕಾರು ಚಾಲಕರಿಗೂ ಹೆಲ್ಮೆಟ್ ಕಡ್ಡಾಯಗೊಳಿಸುವಂತಹ ಹೊಸ ನಿಯಮವನ್ನೇನಾದರೂ ಜಾರಿಗೆ ತಂದಿದ್ದಾರೆಯೇ ಎಂದು ಸಾರ್ವಜನಿಕರು ತಮಾಷೆಯಾಗಿ ಚರ್ಚಿಸುತ್ತಿದ್ದಾರೆ. ಸಂಚಾರ ವ್ಯವಸ್ಥೆಯಲ್ಲಿ ಎಐ ಕ್ಯಾಮೆರಾಗಳು ಮತ್ತು ಆಧುನಿಕ ತಂತ್ರಜ್ಞಾನದ ಅತಿಯಾದ ನಂಬಿಕೆಯಿಂದ ಎಂತಹ ಎಡವಟ್ಟುಗಳು ಉಂಟಾಗುತ್ತವೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದೆ.

ಈ ಘಟನೆಯ ನಂತರ ಕಾರು ಮಾಲೀಕ ಸುಭಾಷ್ ಅವರು ಸ್ವತಃ ಹೆಲ್ಮೆಟ್ ಧರಿಸಿ ಕಾರು ಓಡಿಸುವ ಮೂಲಕ ಎಐ ತಂತ್ರಜ್ಞಾನ ಹಾಗೂ ಪೊಲೀಸರ ನಿರ್ಲಕ್ಷ್ಯದ ಎಡವಟ್ಟನ್ನು ಸಾರ್ವಜನಿಕವಾಗಿ ಬಯಲಿಗೆಳೆದಿದ್ದಾರೆ. ಸೂಕ್ತ ಪರಿಶೀಲನೆ ನಡೆಸದೇ ದಂಡದ ನೋಟಿಸ್ ಕಳುಹಿಸುವ ವ್ಯವಸ್ಥೆಯ ವಿರುದ್ಧ ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದು, ಪೊಲೀಸರು ಇನ್ಮುಂದೆಯಾದರೂ ಪರಿಶೀಲಿಸಿ ನೋಟಿಸ್ ಕಳುಹಿಸಲಿ ಎಂದು ಆಗ್ರಹಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ