LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಿಜೆಪಿ ರಾಜ್ಯಾಧ್ಯಕ್ಷ ಬದಲಾದರೆ ಇವತ್ತೇ ನಾನು ಬಿಜೆಪಿಗೆ ಸೇರುವ ಸಮಯ ಬರುತ್ತದೆ : ಶಾಸಕ ಯತ್ನಾಳ್ ಹೇಳಿಕೆ

ಬಾಗಲಕೋಟೆ : ರಾಜ್ಯಾಧ್ಯಕ್ಷರ ಬದಲಾವಣೆ ಆಗದೆ ಬಿಜೆಪಿ ಉದ್ಧಾರ ಆಗಲ್ಲ ರಾಜ್ಯಾಧ್ಯಕ್ಷರ ಬದಲಾವಣೆ ಆದರೆ ಇವತ್ತೇ ನಾನು ಬಿಜೆಪಿಗೆ ಸೇರುವ ಸಮಯ ಬರುತ್ತದೆ ಇನ್ನೊಂದು ಎರಡು ತಿಂಗಳು ಆದಮೇಲೆ ಮಾತಾಡೋಣ. ನವೆಂಬರ ಅಂತ್ಯಕ್ಕೆ ರಾಜ್ಯಾಧ್ಯಕ್ಷರ ಅವಧಿ ಮುಗಿಯುತ್ತದೆ. ಇಂತಹ ಅಯೋಗ್ಯ, ಅಸಫಲರನ್ನು ಮುಂದುವರಿಸಿದರೆ ಪಕ್ಷ ಉಳಿಯಲ್ಲ ಎಂದು ಬಾಗಲಕೋಟೆಯಲ್ಲಿ ಶಾಸಕ ಬಸನಗೌಡ ಪಾಟೀಲ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ಸತೀಶ್ ಜಾರಕಿಹೊಳಿ ಮನೆಯ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡಿ ದಾಳಿಯನ್ನು ಕಾಂಗ್ರೆಸ್ ಪಕ್ಷದವರೇ ಮಾಡಿಸಿದ್ದು. ಇಡಿ ದಾಳಿಗೆ ಸಿದ್ದರಾಮಯ್ಯನವರ ಶಾಪವೇ ಕಾರಣ. ಸಿದ್ದರಾಮಯ್ಯ ಅವರನ್ನು ಇಳಿಸಿದರೆ ನಮ್ಮ ಅಭ್ಯಂತರ ಇಲ್ಲ ಅಂದರು. ಎಂಬಿ ಪಾಟೀಲ್, ಜಮೀರ್, ಜಾರಕಿಹೊಳಿ ಇವರೆಲ್ಲ ಹೇಳಿದರು 36 ಶಾಸಕರ ಸಹಿ ಮಾಡಿಸಿಕೊಟ್ಟಿದ್ದೆ ಸತೀಶ್ ಜಾರಕಿಹೊಳಿ. ಬಿಜೆಪಿಯಲ್ಲಿ ಇಂತಹದನ್ನು ಮಾಡುವವರು ಯಾರು ಇಲ್ಲ. ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ ನಲ್ಲಿಯೇ ದ್ವೇಷ ಇದೆ. ವಾಲ್ಮೀಕಿ ಸಮುದಾಯದಲ್ಲಿ ಒಳ್ಳೆಯ ಲೀಡರ್ ಆಗುತ್ತಿದ್ದಾನೆ.ಒಳ್ಳೆಯ ಲೀಡರ್ ರೆಡಿಯಾಗುತ್ತಿದ್ದಾನೆ ಅಂತ ಹೇಗೆ ಮಾಡಿದರು ಎಂದರು.

ಕೆಪಿಎಸ್‌ಸಿ ಹಗರಣದ ಹಣದಲ್ಲಿ ವಿಜಯೇಂದ್ರಗೂ ಪಾಲು ಹೋಗಿದೆ ಅದೇ ಹಣದಿಂದ ವಿಜೇಂದ್ರ ಬಳ್ಳಾರಿ ಪಾದಯಾತ್ರೆ ನಡೆಸಿದ್ದಾರೆ ಎಂದು ಶಾಸಕ ಯತ್ನಾಳ್ ಗಂಭೀರವಾಗಿ ಆರೋಪಿಸಿದರು. ಪಾದಯಾತ್ರೆ ಮಾಡುವ ಅವಶ್ಯಕತೆ ಏನಿತ್ತು ಪಾಪ ವೀ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾನೆ. ರಾಜೀನಾಮೆ ಕೊಟ್ಟ ಬಳಿಕ ಪಾದಯಾತ್ರೆ ನಡೆಸುವ ಅವಶ್ಯಕತೆ ಇರಲಿಲ್ಲ. ಬಿ ವೈ ವಿಜಯೇಂದ್ರ ಜೀರೋ ಆಗಿದ್ದಾರೆ. ಅವರನ್ನು ಹೈಕಮಾಂಡ್ ಬದಲಿಸುವುದರಲ್ಲಿದೆ ಹೈ ಕಮಾಂಡ್ ಗಮನ ಸೆಳೆಯಲು ವಿಜಯೇಂದ್ರ ಪಾದಯಾತ್ರೆ ನಡೆಸಿದ್ದಾರೆ.ಅಲ್ಲೂ ಅವರ ಫೋಟೋ ಬರಬೇಕು ಹೊಸ ಬಟ್ಟೆ ಹಾಕಿ ನಾಟಿ ಮಾಡಿದ್ದಾನೆ. ಒಂದು ದಿನವಾದರೂ ಬಿ ವೈ ವಿಜಯೇಂದ್ರ ಹೊಲಕ್ಕೆ ಹೋಗಿದ್ದಾರ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ