LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಂಸತ್ತಿಗೆ ಬಾಂಬ್ ಕಳಿಸಿದಷ್ಟು ಸುಲಭವಲ್ಲ ಠಾಣೆಗೆ ನುಗ್ಗೋದು: ಪ್ರತಾಪ್ ಸಿಂಹಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ತಿರುಗೇಟು

ಬೆಂಗಳೂರು: ಪೊಲೀಸ್ ಠಾಣೆಗೆ ನುಗ್ಗುವುದಾಗಿ ಎಚ್ಚರಿಕೆ ನೀಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಂಹ ಅವರ ಹೇಳಿಕೆಯನ್ನು ಹತಾಶೆಯ ಪರಮಾವಧಿ ಎಂದು ಕರೆದಿರುವ ಅವರು, ತಮ್ಮ ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಕಟುವಾದ ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿದ್ದಾರೆ.

'ಸ್ವಪಕ್ಷದಲ್ಲೇ ಕಸದ ಬುಟ್ಟಿಗೆ ಬಿದ್ದಿರುವ ವ್ಯಕ್ತಿ':

ಪ್ರತಾಪ್ ಸಿಂಹ ಅವರನ್ನು 'ಪುಡಿ ರೌಡಿ' ಎಂದು ಜರೆದಿರುವ ಮಂಜುನಾಥ್, "ಕಾನೂನಿಗೆ ಗೌರವ ನೀಡುವುದನ್ನು ಮೊದಲು ಕಲಿಯಿರಿ. ಬಿಜೆಪಿಯವರೇ ನಿಮಗೆ ಬಾಗಿಲು ಮುಚ್ಚಿದ್ದಾರೆ. ಸ್ವಂತ ಪಕ್ಷದ ಕಚೇರಿಯ ಬಾಗಿಲು ತೆರೆಸಿ ಟಿಕೆಟ್ ಪಡೆಯಲು ಯೋಗ್ಯತೆ ಇಲ್ಲದವರು, ಈಗ ಪೊಲೀಸ್ ಠಾಣೆಗೆ ನುಗ್ಗುತ್ತೇನೆ ಎಂದು ಅಬ್ಬರಿಸುತ್ತಿರುವುದು ನಿಮ್ಮ ರಾಜಕೀಯ ಹತಾಶೆಯನ್ನು ತೋರಿಸುತ್ತದೆ. ಇಂತಹ ಪುಂಡಾಟಿಕೆಯ ಕಾರಣಕ್ಕಾಗಿಯೇ ಬಿಜೆಪಿಯವರು ನಿಮಗೆ ಲೋಕಸಭಾ ಟಿಕೆಟ್ ನೀಡದೆ ಕಸದ ಬುಟ್ಟಿಗೆ ಎಸೆದಿದ್ದಾರೆ" ಎಂದು ಕುಟುಕಿದ್ದಾರೆ.

ಸಂಸತ್ ಭದ್ರತಾ ಲೋಪ ಪ್ರಸ್ತಾಪಿಸಿ ಆಕ್ರೋಶ:

ಕಳೆದ ವರ್ಷ ಸಂಸತ್ ಭವನದೊಳಗೆ ನಡೆದ ಅನಿಲ ಸ್ಫೋಟಕ ಘಟನೆಯನ್ನು ಪ್ರಸ್ತಾಪಿಸಿದ ಅವರು, "ನಿಮ್ಮ ಶಿಫಾರಸು ಪತ್ರ ಪಡೆದ ಚೇಲಾಗಳಿಗೆ ಬಾಂಬ್ ಕೊಟ್ಟು ಸಂಸತ್ತಿನೊಳಗೆ ನುಗ್ಗಿಸಿದಷ್ಟು ಸುಲಭವಲ್ಲ ಪೊಲೀಸ್ ಠಾಣೆಗೆ ನುಗ್ಗುವುದು. ಠಾಣೆ ಮುಂದೆ ಪುಂಡಾಟಿಕೆ, ಶೌರ್ಯ ಪ್ರದರ್ಶನ ಮಾಡಿದರೆ ಬಿಜೆಪಿಯಲ್ಲಿ ಟಿಕೆಟ್ ಸಿಗುವುದಿಲ್ಲ; ತಾಕತ್ತಿದ್ದರೆ ಬಿ.ಎಸ್. ಯಡಿಯೂರಪ್ಪ ಅವರ ಮನೆ ಮುಂದೆ ಹೋಗಿ ಗದ್ದಲ ನಡೆಸಿ" ಎಂದು ಸವಾಲು ಹಾಕಿದ್ದಾರೆ.

ಅಯೋಧ್ಯೆ ಪ್ರಸ್ತಾಪಿಸಿ ಧರ್ಮದ್ರೋಹಿ ಎಂದು ಕಿಡಿ:

"ನಿಮಗೆ ಏಕಾಏಕಿ ಹಿಂದೂ ದೇವರ ಮೇಲೆ ಭಕ್ತಿ ಹುಟ್ಟಿಕೊಂಡಿದೆ. ಅಯೋಧ್ಯೆಯಲ್ಲಿ ನಿಮ್ಮದೇ ಪಕ್ಷದವರು ಹುಂಡಿ ಲೂಟಿ ಹೊಡೆದಾಗ ನಿಮ್ಮ ಪೌರುಷ ಎಲ್ಲಿ ಅಡ ಇಟ್ಟಿದ್ದಿರಿ? ಸ್ವಪಕ್ಷೀಯರೇ ಹುಂಡಿ ಕಳ್ಳತನ ಮಾಡಿದಾಗ ಧ್ವನಿ ಎತ್ತದ ನೀವು ಧರ್ಮದ್ರೋಹಿ. ನಿಮಗೆ ಹಿಂದೂ ಧರ್ಮ ಮತ್ತು ದೇವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಎಲ್ಲಾ ದೇವರ ಮೇಲೂ ಭಕ್ತಿ, ಗೌರವವಿದೆ. ಭಕ್ತರಿಗೆ ಸಕಲ ಸೌಲಭ್ಯ ಕಲ್ಪಿಸುತ್ತೇವೆ, ಆದರೆ ಕಾನೂನು ಕೈಗೆತ್ತಿಕೊಳ್ಳುವ ಪುಂಡಾಟಿಕೆಯನ್ನು ಸಹಿಸುವುದಿಲ್ಲ" ಎಂದು ಎಚ್ಚರಿಸಿದ್ದಾರೆ.

ಪೊಲೀಸ್ ಬ್ಯಾರಿಕೇಡ್‌ಗಳ ಮೇಲೆ ಕಾರು ಹರಿಸಿ ದರ್ಪ ತೋರುವುದನ್ನು ಬಿಟ್ಟು, ನಿಮ್ಮದೇ ಪಕ್ಷದಲ್ಲಿ ಧರ್ಮ, ವಿಭೂತಿ ಮತ್ತು ನಾಮದ ಬಗ್ಗೆ ವ್ಯಂಗ್ಯವಾಡುವ ನಾಯಕರಿಗೆ ಮೊದಲು ಮುತ್ತಿಗೆ ಹಾಕಿ. ಕೇವಲ ರಾಜಕೀಯ ಲಾಭಕ್ಕಾಗಿ ಧರ್ಮವನ್ನು ದುರ್ಬಳಕೆ ಮಾಡಿಕೊಂಡರೆ ನಾಡಿನ ಜನತೆಯಾಗಲಿ, ಆ ದೇವರಾಗಲಿ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಮಂಜುನಾಥ್ ಗೌಡ ಗುಡುಗಿದ್ದಾರೆ.

https://twitter.com/manjunathansui/status/2099053010085429511

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ